ದೇಹದಲ್ಲಿ ಎಲ್‌ಡಿಎಲ್ ಕೊಲೆಸ್ಟ್ರಾಲ್ ಹೆಚ್ಚಾಗುವುದು ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ, ಕೊಬ್ಬಿನಂಶ ಹೆಚ್ಚಿರುವ ಆಹಾರಗಳು, ವ್ಯಾಯಾಮದ ಕೊರತೆ, ಧೂಮಪಾನ, ಮತ್ತು ಅತಿಯಾದ ಮದ್ಯಪಾನವನ್ನು ತಪ್ಪಿಸುವ ಮೂಲಕ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಪ್ರಯತ್ನಿಸಿ.

ಗುಡ್ ಲಿಪಿಡ್ ಹಾಗೂ ಬ್ಯಾಡ್ ಲಿಪಿಡ್- ವ್ಯತ್ಯಾಸ ಹಾಗೂ ಆರೋಗ್ಯದಲ್ಲಿ ಇವುಗಳ ಪಾತ್ರದ ಬಗ್ಗೆ ತಿಳಿದುಕೊಳ್ಳಿ!

ನಮ್ಮ ದೇಹದ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ನಾವು ಸೇವಿಸುವ ಆಹಾರಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂಬುದನ್ನು ಯಾರಿಗೂ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಕೆಲವೊಂದು ಆಹಾರಗಳನ್ನು ನಾವು ಶಕ್ತಿಗಾಗಿ ಸೇವಿಸಿದ್ರೆ ಇನ್ನೂ ಕೆಲವುಗಳನ್ನು ನಾವು ದೇಹದ ವಿವಿಧ ಉಪಯೋಗಗಳನ್ನು ಗಮನದಲ್ಲಿಟ್ಟುಕೊಂಡು ತಿನ್ನಬೇಕಾಗುತ್ತದೆ. ದೇಹಕ್ಕೆ ಅಗತ್ಯವಾದ ಅಂಶಗಳಲ್ಲಿ ಕೊಬ್ಬು ಕೂಡ ಒಂದು. ಇದನ್ನೇ ವೈದ್ಯಕೀಯ ಭಾಷೆಗಳಲ್ಲಿ ಕೊಲೆಸ್ಟ್ರಾಲ್ ಎನ್ನುತ್ತಾರೆ.

ಈ ಕೊಲೆಸ್ಟ್ರಾಲ್ ಎರಡು ವಿಧಗಳಲ್ಲಿ ಇದೆ. ಒಂದು ದೇಹಕ್ಕೆ ಬೇಕಾದ ಒಳ್ಳೆಯ ಕೊಲೆಸ್ಟ್ರಾಲ್, ಇನ್ನೊಂದು ದೇಹಕ್ಕೆ ಅನಗತ್ಯವಾದ ಕೆಟ್ಟ ಕೊಲೆಸ್ಟ್ರಾಲ್. ಹಾಗಿದ್ರೆ ಯಾವ ಆಹಾರದಿಂದ ನಮ್ಮ ದೇಹಕ್ಕೆ ಅನುಕೂಲವಾಗುವ ಒಳ್ಳೆಯ ಕೊಬ್ಬು ಸಿಗುತ್ತದೆ ಎಂಬುದನ್ನು ಮುಂದೆ ನೋಡಿ.. ಕೆಲವೊಂದು ಆಹಾರಪದಾರ್ಥಗಳು ಉತ್ತಮ ಕೊಬ್ಬಾಗಿದ್ದು ದೇಹಕ್ಕೆ ಪೋಷಣೆ ನೀಡುತ್ತವೆ. ಆದರೆ, ಕೆಲವೊಂದು ಅಹಾರಗಳು ಕೆಟ್ಟ ಕೊಬ್ಬನ್ನು ನಿಯಂತ್ರಿಸಿ ನಮ್ಮ ದೇಹದ ಆರೋಗ್ಯವನ್ನು ಉತ್ತಮಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ದೇಹದಲ್ಲಿ ಎಲ್‌ಡಿಎಲ್ ಕೊಲೆಸ್ಟ್ರಾಲ್ (HDL Colestral) ಹೆಚ್ಚಾಗುವುದು ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ, ಕೊಬ್ಬಿನಂಶ ಹೆಚ್ಚಿರುವ ಆಹಾರಗಳು, ವ್ಯಾಯಾಮದ ಕೊರತೆ, ಧೂಮಪಾನ, ಮತ್ತು ಅತಿಯಾದ ಮದ್ಯಪಾನವನ್ನು ತಪ್ಪಿಸುವ ಮೂಲಕ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಪ್ರಯತ್ನಿಸಿ.

ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುವ ಆಹಾರಗಳನ್ನು ಪರಿಚಯಿಸಿಕೊಳ್ಳೋಣ.

1. ಸೇಬು

ನಾರಿನಂಶವಿರುವ ಸೇಬನ್ನು ನಿಯಮಿತವಾಗಿ ಸೇವಿಸುವುದು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

2. ದ್ವಿದಳ ಧಾನ್ಯಗಳು

ನಾರಿನಂಶ ಮತ್ತು ಪ್ರೋಟೀನ್ ಹೊಂದಿರುವ ದ್ವಿದಳ ಧಾನ್ಯಗಳು ಕೂಡ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತವೆ.

3. ಬೆಂಡೆಕಾಯಿ

ಫೈಬರ್ ಹೊಂದಿರುವ ಬೆಂಡೆಕಾಯಿ ಸೇವನೆಯು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

4. ಫ್ಯಾಟಿ ಫಿಶ್

ಒಮೆಗಾ-3 ಫ್ಯಾಟಿ ಆಸಿಡ್ ಹೊಂದಿರುವ ಫ್ಯಾಟಿ ಫಿಶ್ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

5. ಓಟ್ಸ್

ಓಟ್ಸ್ ಅನ್ನು ನಿಯಮಿತವಾಗಿ ಸೇವಿಸುವುದು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

6. ನುಗ್ಗೆಸೊಪ್ಪು

ವಿಟಮಿನ್ ಮತ್ತು ಖನಿಜಗಳನ್ನು ಒಳಗೊಂಡಿರುವ ನುಗ್ಗೆಸೊಪ್ಪನ್ನು ನಿಮ್ಮ ಆಹಾರದಲ್ಲಿ ಸೇರಿಸುವುದು ಕೂಡ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

7. ನಟ್ಸ್

ನಾರಿನಂಶ ಮತ್ತು ಆರೋಗ್ಯಕರ ಕೊಬ್ಬು ಹೊಂದಿರುವ ನಟ್ಸ್ ಗಳನ್ನು ನಿಯಮಿತವಾಗಿ ಸೇವಿಸುವುದು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

8. ಚಿಯಾ ಬೀಜ

ಫೈಬರ್, ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬನ್ನು ಹೊಂದಿರುವ ಚಿಯಾ ಬೀಜ ಸೇವನೆಯು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಗರಿಗರಿಯಾದ ರಾಗಿ-ಹೆಸರುಬೇಳೆ ದೋಸೆ ಹೀಗೆ ಮಾಡಿ.. ಹೋಟೆಲ್ ರುಚಿ ಏನೇನೂ ಅಲ್ಲ ಈ ದೋಸೆ ತಿಂದ್ರೆ!