ದೇಹದ ವಿವಿಧ ಪ್ರಮುಖ ಕಾರ್ಯಗಳನ್ನು ನಿರ್ವಹಿಸಲು ಜಿಂಕ್ ಅತ್ಯಗತ್ಯ. ದೇಹವು ತಾನಾಗಿಯೇ ಜಿಂಕ್ ಉತ್ಪಾದಿಸಲು ಅಥವಾ ಶೇಖರಿಸಿಡಲು ಸಾಧ್ಯವಿಲ್ಲ. ಹಾಗಾಗಿ ಆಹಾರದ ಮೂಲಕ ಅದನ್ನು ಪಡೆಯುವುದು ಮುಖ್ಯ. ಜಿಂಕ್ ಹೊಂದಿರವ ಆಹಾರಗಳ ಪಟ್ಟಿ ಇಲ್ಲಿದೆ ನೋಡಿ..

ರೋಗನಿರೋಧಕ ಶಕ್ತಿ ಹೆಚ್ಚಿಸುವ 7 ಜಿಂಕ್-ಭರಿತ ಆಹಾರಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

ದೇಹದ ವಿವಿಧ ಪ್ರಮುಖ ಕಾರ್ಯಗಳನ್ನು ನಿರ್ವಹಿಸಲು ಜಿಂಕ್ ಅತ್ಯಗತ್ಯ. ದೇಹವು ತಾನಾಗಿಯೇ ಜಿಂಕ್ ಉತ್ಪಾದಿಸಲು ಅಥವಾ ಶೇಖರಿಸಿಡಲು ಸಾಧ್ಯವಿಲ್ಲ. ಹಾಗಾಗಿ ಆಹಾರದ ಮೂಲಕ ಅದನ್ನು ಪಡೆಯುವುದು ಮುಖ್ಯ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜಿಂಕ್-ಭರಿತ ಆಹಾರಗಳ ಮಾಹಿತಿ ಇಲ್ಲಿದೆ.

ಕಡಲೆಕಾಯಿ, ಗೋಡಂಬಿ, ಬಾದಾಮಿ ಜಿಂಕ್‌ನ ಅತ್ಯುತ್ತಮ ಮೂಲಗಳು

ದೇಹಕ್ಕೆ ಅಗತ್ಯವಾದ ಪೋಷಕಾಂಶಗಳ ಜೊತೆಗೆ ಜಿಂಕ್ ಹೇರಳವಾಗಿರುವ ಆಹಾರಗಳಲ್ಲಿ ನಟ್ಸ್ ಕೂಡ ಒಂದು. ಕಡಲೆಕಾಯಿ, ಗೋಡಂಬಿ ಮತ್ತು ಬಾದಾಮಿ ಜಿಂಕ್‌ನ ಅತ್ಯುತ್ತಮ ಮೂಲಗಳಾಗಿವೆ. ಇವುಗಳಲ್ಲಿ ಆರೋಗ್ಯಕರ ಕೊಬ್ಬು, ಜೀವಸತ್ವಗಳು, ನಾರು ಸೇರಿದಂತೆ ಹಲವು ಪೋಷಕಾಂಶಗಳಿವೆ. ವಿವಿಧ ನಟ್ಸ್‌ಗಳ ಪೈಕಿ ಗೋಡಂಬಿಯಲ್ಲಿ ಅತಿ ಹೆಚ್ಚು ಜಿಂಕ್ ಇರುತ್ತದೆ.

ಹಾಲು, ಚೀಸ್, ಮೊಸರು ಜಿಂಕ್-ಭರಿತ ಡೈರಿ ಉತ್ಪನ್ನಗಳು

ಹಾಲು, ಚೀಸ್, ಮತ್ತು ಮೊಸರು ಜಿಂಕ್ ಹೇರಳವಾಗಿರುವ ಆರೋಗ್ಯಕರ ಡೈರಿ ಉತ್ಪನ್ನಗಳಾಗಿವೆ. ಅಲ್ಲದೆ, ಡೈರಿ ಉತ್ಪನ್ನಗಳಲ್ಲಿರುವ ಜಿಂಕ್ ಅನ್ನು ದೇಹವು ಸುಲಭವಾಗಿ ಹೀರಿಕೊಳ್ಳುತ್ತದೆ. ಇದು ಜಿಂಕ್ ಹೀರಿಕೊಳ್ಳುವ ಪ್ರಕ್ರಿಯೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸುತ್ತದೆ.

ದಿನವೂ ಮೊಟ್ಟೆ ತಿನ್ನುವುದರಿಂದ ದೈನಂದಿನ ಜಿಂಕ್ ಅಗತ್ಯ ಪೂರೈಸಬಹುದು

ಮೊಟ್ಟೆಯು ಜಿಂಕ್, ಪ್ರೋಟೀನ್, ವಿಟಮಿನ್, ಖನಿಜಗಳು, ಸೆಲೆನಿಯಮ್ ಮತ್ತು ಆರೋಗ್ಯಕರ ಕೊಬ್ಬಿನ ಅತ್ಯುತ್ತಮ ಮೂಲವಾಗಿದೆ. ಪ್ರತಿದಿನ ಮೊಟ್ಟೆ ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ಜಿಂಕ್ ಅನ್ನು ಪಡೆಯಬಹುದು.

ಡಾರ್ಕ್ ಚಾಕೊಲೇಟ್ ಮೆದುಳಿನ ಕಾರ್ಯಕ್ಷಮತೆ ಹೆಚ್ಚಿಸುತ್ತದೆ

ಡಾರ್ಕ್ ಚಾಕೊಲೇಟ್‌ನಲ್ಲಿ ಜಿಂಕ್ ಹೇರಳವಾಗಿದೆ. ಜೊತೆಗೆ ಇದು ಆಂಟಿಆಕ್ಸಿಡೆಂಟ್, ಕಬ್ಬಿಣ ಮತ್ತು ಮೆಗ್ನೀಸಿಯಮ್‌ನ ಅತ್ಯುತ್ತಮ ಮೂಲವಾಗಿದೆ. ಇದು ಮೆದುಳಿನ ಕಾರ್ಯವನ್ನು ಸುಧಾರಿಸಲು ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕಾಳುಗಳಲ್ಲಿ ಪ್ರೋಟೀನ್ ಮತ್ತು ಜಿಂಕ್ ಹೇರಳವಾಗಿದೆ

ಕಾಳುಗಳಲ್ಲಿ ಪ್ರೋಟೀನ್ ಮತ್ತು ಜಿಂಕ್ ಹೇರಳವಾಗಿವೆ. ಕಡಲೆ, ತೊಗರಿ ಮತ್ತು ವಿವಿಧ ರೀತಿಯ ಬೀನ್ಸ್ ಬಳಸಿ ವಿವಿಧ ಭಕ್ಷ್ಯಗಳನ್ನು ತಯಾರಿಸಬಹುದು.

ಹೆಚ್ಚಿನ ನಾರಿನಂಶ ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಭಾವನೆ ನೀಡುತ್ತದೆ

ಓಟ್ಸ್ ಜಿಂಕ್‌ನ ಅತ್ಯುತ್ತಮ ಮೂಲವಾಗಿದೆ. ಇದರಲ್ಲಿ ಇತರ ಹಲವು ಪೋಷಕಾಂಶಗಳೂ ಇವೆ. ಇದರಲ್ಲಿರುವ ಹೆಚ್ಚಿನ ನಾರಿನಂಶ ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಭಾವನೆ ಮೂಡಿಸುತ್ತದೆ. ಹೃದ್ರೋಗದ ಅಪಾಯ ಕಡಿಮೆ ಮಾಡುವುದು, ಆಂಟಿಆಕ್ಸಿಡೆಂಟ್ ಒದಗಿಸುವುದು, ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡುವುದು ಸೇರಿದಂತೆ ಓಟ್ಸ್ ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.

ಕೊನೆಗೋ ಮದುವೆಗೆ ಮನಸ್ಸು ಮಾಡಿದ ನಿತ್ಯಾ ಮೆನನ್; ಆದ್ರೆ 'ಕಂಡಿಷನ್ಸ್‌ ಅಪ್ಲೈ'.. ಅಂಥ ಹುಡುಗ ಬೇಕಂತೆ!