ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ ರಾಮಾಯಣ ಸಿನಿಮಾದ ಸೀತೆ ಪಾತ್ರದ ಬಗ್ಗೆ ಭಾರೀ ಸುದ್ದಿಯಲ್ಲಿದ್ದಾರೆ. ಇದರ ಜೊತೆಗೆ ಸಂದರ್ಶನವೊಂದರಲ್ಲಿ ಅವರು 7 ಇಡ್ಲಿ, 4 ವಡೆ, 8 ಮೈಸೂರು ಪಾಕ್, ತಿನ್ನುವುದಾಗಿ ತಮ್ಮ ಅಚ್ಚರಿಯ ಡಯೆಟ್ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.
ಕೆಜಿಎಫ್ ಬ್ಯೂಟಿ ಶ್ರೀನಿಧಿ ಶೆಟ್ಟಿ, ಸದ್ಯ ಸದ್ದು ಮಾಡುತ್ತಿರುವ ಕಾರಣ, ರಾಮಾಯಣ ಸಿನಿಮಾ (Ramayana Movie)ಯಲ್ಲಿ ಸೀತೆಯ ಪಾತ್ರಕ್ಕೆ ಈಕೆಯನ್ನು ಆಯ್ಕೆ ಮಾಡಿ ಕೊನೆಗೆ ಕೈಬಿಟ್ಟಿದ್ದರು ಎನ್ನುವ ಗಾಳಿ ಸುದ್ದಿ ಹರಡಿರುವ ಕಾರಣದಿಂದ, ಅಷ್ಟಕ್ಕೂ, ರಾಮಾಯಣ ಸಿನಿಮಾ ಘೋಷಣೆಯಾದಾಗಿನಿಂದಲೂ ನಟ-ನಟಿಯರ ಆಯ್ಕೆ ವಿಚಾರವಾಗಿ ಹಲವು ಸುದ್ದಿಗಳು ಪ್ರಚಾರಕ್ಕೆ ಬಂದಿದ್ದವು. ಅದರಲ್ಲೂ ಸಾಯಿ ಪಲ್ಲವಿಯನ್ನು ಸೀತೆ ಪಾತ್ರಕ್ಕೆ ಆಯ್ಕೆ ಮಾಡಿದ ಮೇಲೆ, ಸಹಜ ಸುಂದರಿ ಎಂದೆಲ್ಲಾ ಅಲ್ಲಿಯವರೆಗೆ ಹೊಗಳುತ್ತಿದ್ದವರೇ ಸೀತೆಯ ಪಾತ್ರಕ್ಕೆ ಆಕೆ ಸ್ಯೂಟ್ ಆಗಲ್ಲ ಎಂದು ಮೂಗು ಮುರಿದಿದ್ದರು. ಸಿನಿಮಾ ನೋಡಿದ ಮೇಲೆ ಹಲವರು ಸೀತೆಗೆ ಸಾಯಿ ಪಲ್ಲವಿನೇ ಬೆಸ್ಟ್ ಎಂದು ಹೇಳುತ್ತಿದ್ದರೆ, ಈಗಲೂ ಕೆಲವರು ಆ ನಟಿ ಬೇಕಿತ್ತು, ಈ ನಟಿ ಬೇಕಿತ್ತು ಎಂದೆಲ್ಲಾ ಗೊಣಗುತ್ತಲೇ ಇದ್ದಾರೆ. ಆದ್ದರಿಂದ ಮೊದಲಿಗೆ ಈ ಪಾತ್ರಕ್ಕೆ ಶ್ರೀನಿಧಿ ಶೆಟ್ಟಿ ಆಯ್ಕೆಯಾಗಿದ್ದರು ಎನ್ನುವ ಗುಸುಗುಸು ಹರಿದಾಡುತ್ತಿದೆ.
ಅದೇನೇ ಇದ್ದರೂ, ಕೆಜಿಎಫ್ ಬ್ಯೂಟಿ ಈಗ ಸೋಷಿಯಲ್ ಮೀಡಿಯಾದಲ್ಲಿ ಇನ್ನಷ್ಟು ಸದ್ದು ಮಾಡುತ್ತಿರಲು ಕಾರಣ, ಅವರ ಡಯೆಟ್ ಕುರಿತು. ತೆಳ್ಳಗೆ, ಬೆಳ್ಳಗೆ ಇರುವ ನಟಿ, ಆಹಾರದ ವಿಷಯದಲ್ಲಿ ಸಿಕ್ಕಾಪಟ್ಟೆ ಸ್ಟ್ರಿಕ್ಟ್ ರೂಲ್ಸ್ ಫಾಲೋ ಮಾಡುತ್ತಿರುತ್ತಾರೆ ಎಂದು ಅಭಿಮಾನಿಗಳು ಅಂದುಕೊಳ್ಳುತ್ತಿರುತ್ತಾರೆ. ಸಹಜವಾಗಿ ನಟಿಯರು ಎಂದರೆ ಹೀಗೇನೇ ಇರಬೇಕು ಎಂದು ಅಭಿಮಾನಿಗಳು ಬಯಸುವ ಕಾರಣದಿಂದ, ಹೊಟ್ಟೆ ಬಟ್ಟೆಗೆ ಕಟ್ಟಿಯಾದರೂ, ತಮ್ಮ ಇಷ್ಟದ ತಿನಿಸುಗಳನ್ನು ಒಲ್ಲೆ ಎನ್ನುತ್ತಲೇ ಗ್ಲಾಮಸರ್ ಆಗಿ ಕಾಣಿಸಿಕೊಳ್ಳಲು ಬಯಸುವವರೇ ಹಲವು ಬೆಡಗಿಯರು.
7 ಇಡ್ಲಿ, 4 ವಡೆ...
ಆದರೆ ಇದಕ್ಕೆ ವ್ಯತಿರಿಕ್ತ ಎನ್ನುವಂಥ ಹೇಳಿಕೆಯನ್ನು ಶ್ರೀನಿಧಿ ಶೆಟ್ಟಿ (Srinidhi Shetty) ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಅವರು ರಿವೀಲ್ ಮಾಡಿರುವ ವಿಷಯವನ್ನು ಶ್ರೀನಿಧಿಶೆಟ್ಟು ತುಳುನಾಡು ಫ್ಯಾನ್ಸ್ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಲಾಗಿದೆ. ಇದರಲ್ಲಿ ಆ್ಯಂಕರ್ ನಿಮ್ಮ ಸೌಂದರ್ಯದ ಗುಟ್ಟೇನು, ನಿಮ್ಮ ಡಯೆಟ್ ಏನು ಎಂದು ಕೇಳಿದಾಗ, ನಟಿ, ಅದು ಸಿಂಪಲ್. ನಾನು ಫಿಟ್ ಆಗಿರಲಿ, 7 ಇಡ್ಲಿ, 4 ವಡೆ, 8 ಮೈಸೂರು ಪಾಕ್ ತಿನ್ನುತ್ತೇನೆ ಎಂದು ಹೇಳಿದ್ದಾರೆ! ಇದು ಅವರು ತಮಾಷೆಗೆ ಹೇಳಿಲ್ಲ ಎನ್ನುವುದಕ್ಕೆ ಅವರ ಪಕ್ಕದಲ್ಲಿಯೇ ಇರುವ ನಟನೂ ಸಾಕ್ಷಿಯಾಗಿದ್ದಾರೆ. ಹೌದು. ಅವರು ಇಷ್ಟೇ ತಿನ್ನುವುದು ಎಂದು ಅವರು ಹೇಳಿದ್ದಾರೆ. ಇದನ್ನು ಕೇಳಿದ ಆ್ಯಂಕರ್ ಸುಸ್ತಾಗಿದ್ದಾರೆ.
ಇನ್ನು ನಟಿ ಶ್ರೀನಿಧಿ ಶೆಟ್ಟಿ ಕುರಿತು ಹೇಳುವುದಾದರೆ, ಮಂಗಳೂರಿನಲ್ಲಿ ಜನಿಸಿದ ಅವರು, ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. 2016ರಲ್ಲಿ 'ಮಿಸ್ ಸೂಪರ್ ನ್ಯಾಷನಲ್' ಕಿರೀಟ ಮುಡಿಗೇರಿಸಿಕೊಂಡರು.. ಕೆ.ಜಿ.ಎಫ್ ನಂತರ ತಮಿಳಿನ 'ಕೋಬ್ರಾ' (2022) ಮತ್ತು ತೆಲುಗಿನ 'HIT: ದಿ ಥರ್ಡ್ ಕೇಸ್' (2025) ಸೇರಿದಂತೆ ವಿವಿಧ ಚಿತ್ರಗಳಲ್ಲಿ ನಟಿಸಿದ್ದಾರೆ.
















