ಅನಿರುದ್ಧ್-ಕಾವ್ಯಾ ಜೋಡಿಯ ಆರತಕ್ಷತೆ ಸಮಾರಂಭದಲ್ಲಿ ಸಿಎಂ ವಿಜಯ್ ಹಾಜರಾತಿಗಿಂತಲೂ ತ್ರಿಶಾ ಅನುಪಸ್ಥಿತಿಯೇ ಹೆಚ್ಚು ಸುದ್ದಿಯಾಗಿದೆ. ಫ್ಯಾನ್ಸ್ಗೆ ವಿಜಯ್ ಈ ಬಾರಿ ತ್ರಿಶಾ ಜೊತೆ ಕಾಣಿಸಿಕೊಳ್ಳಲಿಲ್ಲ ಎಂಬ ಖುಷಿ ಒಂದೆಡೆಯಾದರೆ, ವಿಜಯ್ ಮತ್ತು ಸಂಗೀತಾ ಮತ್ತೆ ಒಂದಾಗುತ್ತಾರಾ ಎಂಬ ಪ್ರಶ್ನೆ ಮೂಡಿದೆ!
ಅಭಿಮಾನಿಗಳಿಗಾಗಿ ಬದಲಾದ್ರಾ ದಳಪತಿ ವಿಜಯ್? ಸಿಎಂ ನಡೆಗೆ ಫ್ಯಾನ್ಸ್ ಫುಲ್ ಖುಷ್ ಹುವಾ ಕ್ಯಾ?!
ತಮಿಳುನಾಡಿನ ಮುಖ್ಯಮಂತ್ರಿ ಹಾಗೂ ನಟ ದಳಪತಿ ವಿಜಯ್ (CM Vijay Joseph) ಅವರ ಪ್ರತಿಯೊಂದು ನಡೆ ಕೂಡ ಈಗ ದೊಡ್ಡ ಸುದ್ದಿಯಾಗುತ್ತಿದೆ. ಸಿನಿಮಾ ಜಗತ್ತಿನಿಂದ ರಾಜಕೀಯಕ್ಕೆ ಬಂದ ಬಳಿಕ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಅಭಿಮಾನಿಗಳು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಅದರಲ್ಲೂ ನಟಿ ತ್ರಿಶಾ ಜೊತೆಗಿನ ಒಡನಾಟದ ವಿಚಾರವಂತೂ ಆಗಾಗ ಚರ್ಚೆಗೆ ಬರುತ್ತಲೇ ಇದೆ. ಇದೀಗ ಚೆನ್ನೈನಲ್ಲಿ ನಡೆದ ಅದ್ಧೂರಿ ಆರತಕ್ಷತೆ ಕಾರ್ಯಕ್ರಮವೊಂದರಲ್ಲಿ ವಿಜಯ್ ಕಾಣಿಸಿಕೊಂಡ ರೀತಿ ಅಭಿಮಾನಿಗಳಿಗೆ ಅಚ್ಚರಿ ಜೊತೆಗೆ ಖುಷಿಯನ್ನೂ ನೀಡಿದೆ. ಅಷ್ಟಕ್ಕೂ ಈ ಬಾರಿ ದಳಪತಿ ನಡೆ ಅಭಿಮಾನಿಗಳಿಗೆ ಇಷ್ಟವಾಗಿದ್ದೇಕೆ? ವಿಜಯ್ ನಿಜಕ್ಕೂ ಅಭಿಮಾನಿಗಳಿಗಾಗಿ ತಮ್ಮ ನಿರ್ಧಾರ ಬದಲಿಸಿಕೊಂಡರಾ?
ಇತ್ತೀಚೆಗೆ ಸನ್ ನೆಟ್ವರ್ಕ್ ಮುಖ್ಯಸ್ಥ ಕಲಾನಿಧಿ ಮಾರನ್ ಅವರ ಪುತ್ರಿ ಕಾವ್ಯಾ ಮಾರನ್ ಮತ್ತು ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರ ಮದುವೆ ಸಮಾರಂಭ ಅದ್ಧೂರಿಯಾಗಿ ನಡೆದಿದೆ. ಚಿತ್ರರಂಗ, ರಾಜಕೀಯ ಹಾಗೂ ಉದ್ಯಮ ಕ್ಷೇತ್ರದ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಮದುವೆಯ ವಿಚಾರ ಹೊರಬರುತ್ತಿದ್ದಂತೆ ವಿಜಯ್ ಅಭಿಮಾನಿಗಳಲ್ಲಿ ಮಾತ್ರ ಬೇರೆಯದೇ ಚರ್ಚೆ ಶುರುವಾಗಿತ್ತು. ಅದಕ್ಕೆ ಕಾರಣ ತ್ರಿಶಾ!
ವಿಜಯ್ ಮತ್ತು ತ್ರಿಶಾ ಒಂದೇ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಾಗಲೆಲ್ಲ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತವೆ. ಹೀಗಾಗಿ ಇಂತಹ ದೊಡ್ಡ ಸಮಾರಂಭಕ್ಕೆ ವಿಜಯ್ ತ್ರಿಶಾ (Trisha Krishnan) ಜೊತೆ ಬಂದರೆ ಹೇಗಿರಬಹುದು ಎಂಬ ಆತಂಕ ಅಭಿಮಾನಿಗಳಲ್ಲಿತ್ತು. ಅದರಲ್ಲೂ ರಾಜಕೀಯ ಕ್ಷೇತ್ರದ ಪ್ರಮುಖರು, ಸೂಪರ್ ಸ್ಟಾರ್ಗಳು ಮತ್ತು ಉದ್ಯಮಿಗಳು ಭಾಗವಹಿಸುವ ಕಾರ್ಯಕ್ರಮದಲ್ಲಿ ಇಬ್ಬರೂ ಜೋಡಿಯಾಗಿ ಕಾಣಿಸಿಕೊಳ್ಳಬಾರದು ಎಂಬುದು ಕೆಲವು ಅಭಿಮಾನಿಗಳ ಬಯಕೆಯಾಗಿತ್ತು.
ರಾಯಲ್ ಬ್ಲೂ ಸೂಟ್ನಲ್ಲಿ ಮಿಂಚಿದ ದಳಪತಿ!
ಅಭಿಮಾನಿಗಳ ಕುತೂಹಲಕ್ಕೆ ತೆರೆ ಎಳೆದಂತೆ ವಿಜಯ್ ಚೆನ್ನೈನಲ್ಲಿ ನಡೆದ ಅನಿರುದ್ಧ್ ಮತ್ತು ಕಾವ್ಯಾ ಅವರ ಆರತಕ್ಷತೆ ಕಾರ್ಯಕ್ರಮಕ್ಕೆ ಹಾಜರಾಗಿದ್ದಾರೆ. ರಾಯಲ್ ಬ್ಲೂ ಬಣ್ಣದ ಸೂಟ್ ಧರಿಸಿ ಬಂದಿದ್ದ ಅವರು ಎಲ್ಲರ ಗಮನ ಸೆಳೆದಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ನಟ ಕಮಲ್ ಹಾಸನ್, ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಕಲಾನಿಧಿ ಮಾರನ್ ಸೇರಿದಂತೆ ಹಲವು ಗಣ್ಯರ ಜೊತೆ ವಿಜಯ್ ಕಾಣಿಸಿಕೊಂಡಿದ್ದಾರೆ.
ಗಣ್ಯರೊಂದಿಗೆ ಗ್ರೂಪ್ ಫೋಟೋಗೆ ಪೋಸ್ ನೀಡಿದ ವಿಜಯ್ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗಿವೆ. ಆದರೆ ಈ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆದಿದ್ದು ವಿಜಯ್ ಅವರ ಜೊತೆ ತ್ರಿಶಾ ಕಾಣಿಸಿಕೊಳ್ಳದೇ ಇದ್ದದ್ದು!
ಹೌದು, ಈ ಬಾರಿ ವಿಜಯ್ ಜೊತೆ ತ್ರಿಶಾ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಮತ್ತೊಂದೆಡೆ ವಿಜಯ್ ಪತ್ನಿ ಸಂಗೀತಾ ಸ್ವರ್ಣಲಿಂಗಂ ಕೂಡ ಆರತಕ್ಷತೆಗೆ ಹಾಜರಾಗಿದ್ದರು ಎನ್ನಲಾಗಿದೆ. ಆದರೆ ಅವರು ವಿಜಯ್ ಜೊತೆ ಆಗಮಿಸಿರಲಿಲ್ಲ. ಈ ಬೆಳವಣಿಗೆಯೇ ಅಭಿಮಾನಿಗಳ ಚರ್ಚೆಗೆ ಹೊಸ ವಿಷಯವಾಗಿದೆ.
ಅಭಿಮಾನಿಗಳ ಆತಂಕ ದೂರ ಮಾಡಿದ್ರಾ ವಿಜಯ್?
ಈ ಹಿಂದೆ ವಿಜಯ್ ಮತ್ತು ತ್ರಿಶಾ ಒಟ್ಟಿಗೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಾಗಲೆಲ್ಲ ಅಭಿಮಾನಿಗಳ ನಡುವೆ ಪರ-ವಿರೋಧದ ಚರ್ಚೆಗಳು ನಡೆದಿದ್ದವು. ಅದರಲ್ಲೂ ವಿಜಯ್ ಅವರ ವೈವಾಹಿಕ ಜೀವನದ ಬಗ್ಗೆ ಹಲವು ಊಹಾಪೋಹಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ, ಈ ಬಾರಿಯ ಆರತಕ್ಷತೆಯಲ್ಲಿ ತ್ರಿಶಾ ಜೊತೆ ಕಾಣಿಸಿಕೊಳ್ಳದಿರುವುದು ಅಭಿಮಾನಿಗಳಿಗೆ ಸಮಾಧಾನ ತಂದಿದೆ.
ಇದೀಗ ಸೋಷಿಯಲ್ ಮೀಡಿಯಾದಲ್ಲಿ ವಿಜಯ್ ಅಭಿಮಾನಿಗಳು ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದಾರೆ. ವಿಜಯ್ ಮತ್ತು ಸಂಗೀತಾ ಮತ್ತೆ ಒಂದಾಗಬೇಕು ಎಂಬ ಆಶಯವನ್ನೂ ಹಲವರು ಕಾಮೆಂಟ್ಗಳ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಅಭಿಮಾನಿಗಳ ಭಾವನೆಗಳಿಗೆ ಬೆಲೆ ಕೊಟ್ಟು ವಿಜಯ್ ತಮ್ಮ ನಡವಳಿಕೆಯಲ್ಲಿ ಬದಲಾವಣೆ ಮಾಡಿಕೊಂಡಿರಬಹುದೇ ಎಂದು ಪ್ರಶ್ನಿಸುತ್ತಿದ್ದಾರೆ.
ತ್ರಿಶಾಗೆ ಆಹ್ವಾನವೇ ಇರಲಿಲ್ಲವೇ?
ಆದರೆ ಈ ವಿಚಾರದಲ್ಲಿ ಮತ್ತೊಂದು ವಾದವೂ ಕೇಳಿಬರುತ್ತಿದೆ. ಕಾವ್ಯಾ ಮಾರನ್ ಮತ್ತು ಅನಿರುದ್ಧ್ ಅವರ ವಿವಾಹ ಸಮಾರಂಭಕ್ಕೆ ಆಯ್ದ ಗಣ್ಯರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ತ್ರಿಶಾ ಸೇರಿದಂತೆ ಹಲವು ಸೆಲೆಬ್ರಿಟಿಗಳಿಗೆ ಆಹ್ವಾನ ಇರಲಿಲ್ಲ ಎಂಬ ಮಾತುಗಳೂ ಹರಿದಾಡುತ್ತಿವೆ. ಹೀಗಿರುವಾಗ ವಿಜಯ್ ಉದ್ದೇಶಪೂರ್ವಕವಾಗಿ ತ್ರಿಶಾ ಅವರನ್ನು ದೂರವಿಟ್ಟರು ಎಂದು ಹೇಳುವುದು ಸರಿಯಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
'ಭಿನ್ನಾಭಿಪ್ರಾಯ ಇದ್ದಿದ್ದು ನಿಜ, ಆದ್ರೆ ಈಗ ಹೊಸದು ಶುರುವಾಗುವ ಕ್ಷಣ'.. ಅಚ್ಚರಿ ಮೂಡಿಸಿದ ರಾಗಿಣಿ ಸೋನಾ ಮಾತು!
ಇನ್ನು ಸಂಗೀತಾ ಸ್ವರ್ಣಲಿಂಗಂ ಉದ್ಯಮಿ ಕುಟುಂಬದ ಹಿನ್ನೆಲೆ ಹೊಂದಿದ್ದು, ಈ ಅದ್ಧೂರಿ ಕಾರ್ಯಕ್ರಮಕ್ಕೆ ಅವರು ಆಗಮಿಸಿರುವುದು ಕೂಡ ಚರ್ಚೆಯಾಗಿದೆ. ಅವರು ಭಾರತಕ್ಕೆ ಅಪರೂಪವಾಗಿ ಬರುತ್ತಾರೆ, ಈ ಸಮಾರಂಭಕ್ಕಾಗಿ ವಿಶೇಷವಾಗಿ ಆಗಮಿಸಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಒಟ್ಟಿನಲ್ಲಿ, ಅನಿರುದ್ಧ್ ಮತ್ತು ಕಾವ್ಯಾ ಅವರ ಆರತಕ್ಷತೆ ಸಮಾರಂಭದಲ್ಲಿ ವಿಜಯ್ ಅವರ ಹಾಜರಾತಿಗಿಂತಲೂ ತ್ರಿಶಾ ಅವರ ಅನುಪಸ್ಥಿತಿಯೇ ಹೆಚ್ಚು ಸುದ್ದಿಯಾಗಿದೆ. ಅಭಿಮಾನಿಗಳ ಆಸೆಯಂತೆ ವಿಜಯ್ ಈ ಬಾರಿ ತ್ರಿಶಾ ಜೊತೆ ಕಾಣಿಸಿಕೊಳ್ಳಲಿಲ್ಲ ಎಂಬ ಖುಷಿ ಒಂದೆಡೆಯಾದರೆ, ವಿಜಯ್ ಮತ್ತು ಸಂಗೀತಾ ಮತ್ತೆ ಒಂದಾಗುತ್ತಾರಾ ಎಂಬ ನಿರೀಕ್ಷೆ ಮತ್ತೊಂದೆಡೆ ಹೆಚ್ಚಾಗಿದೆ. ಆದರೆ ಈ ಬೆಳವಣಿಗೆಗಳ ಹಿಂದಿನ ನಿಜವಾದ ಕಾರಣ ಏನು ಎಂಬುದನ್ನು ವಿಜಯ್ ಅವರೇ ಸ್ಪಷ್ಟಪಡಿಸಬೇಕಿದೆ. ಅಲ್ಲಿಯವರೆಗೆ ಅಭಿಮಾನಿಗಳ ಊಹಾಪೋಹ ಮತ್ತು ಸೋಷಿಯಲ್ ಮೀಡಿಯಾ ಚರ್ಚೆ ಮಾತ್ರ ಮುಂದುವರಿಯಲಿದೆ!
















