Asianet Suvarna News Asianet Suvarna News

ದೇಶಕ್ಕೆ ಆಹಾರ ಭದ್ರತೆ ನೀಡಿದ್ದ ಸ್ವಾಮಿನಾಥನ್‌ ಸಾಧನೆ ಒಂದೇ ಎರಡೇ...

ದೇಶಕ್ಕಾಗಿ ಹೆಚ್ಚು ಇಳುವರಿ ನೀಡುವ ಹೊಸ ಹೊಸ ಕೃಷಿ ತಳಿ ಅಭಿವೃದ್ಧಿಪಡಿಸುವ ಮೂಲಕ ಬರಗಾಲದ ಸಮಯದಲ್ಲೂ ದೇಶದ ಕೋಟ್ಯಂತರ ಜನರು ಹಸಿವಿನಿಂದ ಬಳಲದಂತೆ ನೋಡಿಕೊಂಡಿದ್ದು ಎಂ.ಎಸ್ ಸ್ವಾಮಿನಾಥನ್ ಸಾಧನೆ

High yield Paddy and wheat research. Fixation of minimum selling price for farmers' crops Father of Green revolution MS Swaminathans achievement akb
Author
First Published Sep 29, 2023, 7:07 AM IST

ಚೆನ್ನೈ: ಅನಾರೋಗ್ಯದಿಂದ ಇಹಲೋಹ ತ್ಯಜಿಸಿದ ತಳಿತಜ್ಞ ಎಂ.ಎಸ್‌.ಸ್ವಾಮಿನಾಥನ್‌, ಕೋಟ್ಯಂತರ ಜನರ ಹಸಿವನ್ನು ನೀಗಿಸಿದ ಅಪರೂಪದ ವಿಜ್ಞಾನಿ. ತಮ್ಮದೇ ಆದ ಬೃಹತ್‌ ತೋಟವಿದ್ದರೂ, ಅದರ ನಿರ್ವಹಣೆ ಬಿಟ್ಟು ದೇಶಕ್ಕಾಗಿ ಹೆಚ್ಚು ಇಳುವರಿ ನೀಡುವ ಹೊಸ ಹೊಸ ಕೃಷಿ ತಳಿ ಅಭಿವೃದ್ಧಿಪಡಿಸುವ ಮೂಲಕ ಬರಗಾಲದ ಸಮಯದಲ್ಲೂ ದೇಶದ ಕೋಟ್ಯಂತರ ಜನರು ಹಸಿವಿನಿಂದ ಬಳಲದಂತೆ ನೋಡಿಕೊಂಡಿದ್ದು ಇವರ ಸಾಧನೆ

1925ರಲ್ಲಿ ತಮಿಳುನಾಡಿನ (Tamil Nadu) ಕುಂಬಕೋಣಂನಲ್ಲಿ(Kumbakonam)  ಜನಿಸಿದ ಮೊನ್‌ಕೊಂಬು ಸಾಂಬಶಿವನ್‌ ಸ್ವಾಮಿನಾಥನ್‌, ರಾಜ್ಯದಲ್ಲಿ ಪ್ರಾಥಮಿಕ, ಕಾಲೇಜು ಅಧ್ಯಯನದ ಬಳಿಕ ಅಮೆರಿಕಕ್ಕೆ ತೆರಳಿ 1949ರಲ್ಲಿ ಆಲೂಗಡ್ಡೆ ವಿಷಯದಲ್ಲಿ ಸೈಟೋಜೆನೆಟಿಕ್‌ (cytogenetic research) ಸಂಶೋಧನೆ ನಡೆಸಿ ಬಳಿಕ ನೆದರ್ಲೆಂಡ್‌ ಮತ್ತು ಕೇಂಬ್ರಿಡ್ಜ್‌ ವಿವಿಯಲ್ಲಿ ತಳಿ ಸಂಶೋಧನೆಯಲ್ಲಿ ಪಿಎಚ್‌ಡಿ ಪದವಿ ಪಡೆದರು.

ಭಾರತದ ಹಸಿರು ಕ್ರಾಂತಿಯ ಜನಕ ಎಂ.ಎಸ್‌. ಸ್ವಾಮಿನಾಥನ್ ಇನ್ನಿಲ್ಲ

ಕಣ್ತೆರೆಸಿದ ಬರಗಾಲ:

1943-44ರಲ್ಲಿ ಭಾರತದಲ್ಲಿ ಕಾಣಿಸಿಕೊಂಡ ಬಂಗಾಳದ ಬರಗಾಲ (Bengal Drought) ಲಕ್ಷಾಂತರ ಜನರನ್ನು ಬಲಿಪಡೆಯಿತು. ಇದು ಸರ್ಕಾರ ಕೃಷಿ ವಲಯದ ಕಡೆಗೆ ಹೊಸ ದೃಷ್ಟಿ ಇಡಲು ಕಾರಣವಾದ ಜೊತೆಗೆ, ಸ್ವಾಮಿನಾಥನ್‌ ಅವರಿಗೂ ಹೊಸ ಸಾಧನೆ ಮಾಡಲು ಪ್ರೇರೇಪಿಸಿತು. ಎಂಎಸ್ ಸಾಧನೆ ನೋಡಿದ್ದ ಭಾರತ ಸರ್ಕಾರ ಇವರನ್ನು ಕಟಕ್‌ನಲ್ಲಿರುವ ಕೇಂದ್ರೀಯ ಅಕ್ಕಿ ಸಂಶೋಧನಾ ಸಂಸ್ಥೆಗೆ (Central Rice Research Institute in Cuttack) ನೇಮಿಸಿತು. ಅಲ್ಲಿ ಅವರಿಗೆ ಇಂಡಿಕಾ-ಜಪೋನಿಕಾ ತಳಿಯನ್ನು ಹೈಬ್ರಿಡ್‌ ಮಾಡುವ ಕೆಲಸ ವಹಿಸಲಾಯಿತು. ರಸಗೊಬ್ಬರಕ್ಕೆ ಸ್ಪಂದಿಸಿ ಉತ್ತಮ ತಳಿ ಅಭಿವೃದ್ಧಿಯ ಉದ್ದೇಶ ಸರ್ಕಾರದ್ದಾಗಿತ್ತು. ಈ ಯೋಜನೆ ಫಲ ಕೊಟ್ಟು ದೇಶದಲ್ಲಿ ಹೆಚ್ಚಿನ ಪ್ರಮಾಣದ ಭತ್ತ ಉತ್ಪಾದನೆಗೆ ಕಾರಣವಾಯಿತು. ಇವರ ಸಾಧನೆಯ ಫಲವಾಗಿಯೇ 1.2 ಕೋಟಿ ಟನ್‌ ಭತ್ತ ಬೆಳೆದ ಗರಿಷ್ಠ ದಾಖಲೆ ಹೊಂದಿದ್ದ ಭಾರತೀಯ ರೈತರು ಮೊದಲ ಬಾರಿಗೆ ದಾಖಲೆಯ 1.7 ಕೋಟಿ ಟನ್‌ ಭತ್ತ ಬೆಳೆದರು.

ಥ್ರೊಟಲ್ ಮೇಲೆ ಬ್ಯಾಗ್ ಇಟ್ಟು ವಿಡಿಯೋ ಕಾಲ್‌ನಲ್ಲಿದ್ದ ಸಿಬ್ಬಂದಿ: ಹಳಿ ತಪ್ಪಿ ಪ್ಲಾಟ್‌ಫಾರ್ಮ್ ಏರಿದ ರೈಲು: ವೀಡಿಯೋ

ಗೋಧಿ ಕ್ರಾಂತಿ:

ನೊಬೆಲ್‌ ಪುರಸ್ಕೃತ ವಿಜ್ಞಾನಿ ಡಾ. ನೋರ್ಮನ್‌ ಬೋರ್ಲೋಗ್‌ ಅಭಿವೃದ್ಧಿಪಡಿಸಿದ್ದ ಮೆಕ್ಸಿಕನ್‌ ಕುಬ್ಜ ಗೋಧಿ ತಳಿಯಿಂದ ಪ್ರಭಾವಿತರಾದ ಸ್ವಾಮಿನಾಥನ್‌, ನೋರ್ಮನ್‌ ಅವರನ್ನು ಭಾರತಕ್ಕೆ ಕರೆಸಿ ಅವರ ಜೊತೆಗೂಡಿ ಹೊಸ ಗೋಧಿ ತಳಿ ಅಭಿವೃದ್ಧಿಪಡಿಸಿದರು. ಪರಿಣಾಮ ಗೋಧಿಗೆ ಪೂರ್ಣ ಅಮೆರಿಕದ ಮೇಲೆ ಅವಲಂಬಿತರಾಗಿದ್ದ ಭಾರತ 70ರ ದಶಕದಲ್ಲಿ ಪೂರ್ಣ ಸ್ವಾವಲಂಬಿಯಾಗುವಂತೆ ಆಯಿತು.

ಅಯ್ಯೋ ದೇವ್ರೆ... ಬುಗುರಿಯಂತೆ ತಿರುಗುವ ತುಂಬು ಗರ್ಭಿಣಿ: ವಿಡಿಯೋ ಸಖತ್ ವೈರಲ್

ಸ್ವಾವಲಂಬಿ:

ಸುಸ್ಥಿರ ಕೃಷಿ ಪದ್ಧತಿಗಾಗಿ ಹಾಗೂ ಸಿರಿಧಾನ್ಯದ ಪ್ರಚಾರಕರಾಗಿ ಅವರು ಪಟ್ಟ ಶ್ರಮವು ಅವರನ್ನು ಸುಸ್ಥಿರ ಆಹಾರ ಭದ್ರತೆಯ ಕ್ಷೇತ್ರದಲ್ಲಿ ವಿಶ್ವ ನಾಯಕನನ್ನಾಗಿ ಮಾಡಿತು.

ಕನಿಷ್ಠ ಮಾರಾಟ ಬೆಲೆಯ ಹರಿಕಾರ:

2004 ರಲ್ಲಿ ರೈತರ ಆತ್ಮಹತ್ಯೆಗಳು ಹೆಚ್ಚಾದಾಗ ಅವರ ಸಂಕಷ್ಟ ಪರಿಹರಿಸಲು ಸ್ವಾಮಿನಾಥನ್ ಅವರನ್ನು ರೈತರ ಮೇಲಿನ ರಾಷ್ಟ್ರೀಯ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಈ ಆಯೋಗವು 2006 ರಲ್ಲಿ ತನ್ನ ವರದಿಯನ್ನು ಸಲ್ಲಿಸಿತು. ‘ರೈತರು ಬೆಳೆದ ಒಟ್ಟು ಬೆಳೆಯನ್ನು ತೂಕಕ್ಕೆ ಹಾಕಿದಾಗ ಅದರ ಒಟ್ಟಾರೆ ಖರ್ಚುವೆಚ್ಚದ ಸರಾಸರಿಯನ್ನು ತೆಗೆಯಬೇಕು. ಕನಿಷ್ಠ ಮಾರಾಟ ಬೆಲೆಯು ಈ ಖರ್ಚುವೆಚ್ಚಕ್ಕಿಂತ ಶೇ.50ರಷ್ಟು ಹೆಚ್ಚಿರಬೇಕು’ ಎಂದು ಅವರು ಶಿಫಾರಸು ಮಾಡಿದರು. ಇದು ರೈತರ ಬೆಳೆಗಳಿಗೆ ಯೋಗ್ಯ ಬೆಲೆ ಸಿಗುವಂತೆ ಮಾಡಿದರು.ಆಗ ರೈತರ ಉತ್ಪನ್ನಗಳ ಕನಿಷ್ಠ ಮಾರಾಟ ಬೆಲೆಯ (ಎಂಎಸ್‌ಪಿ) ಹರಿಕಾರ ಎಂಬ ಕೀರ್ತಿಗೆ ಅವರು ಪಾತ್ರರಾದರು.

ಅನೇಕ ಹುದ್ದೆಗಳು:

1972 ಮತ್ತು 1979ರ ನಡುವೆ, ಡಾ ಸ್ವಾಮಿನಾಥನ್ ಅವರು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಮಹಾನಿರ್ದೇಶಕರಾಗಿ ಮತ್ತು ಭಾರತ ಸರ್ಕಾರದ ಕಾರ್ಯದರ್ಶಿಯಾಗಿ, ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆಗೆ ಸೇವೆ ಸಲ್ಲಿಸಿದ್ದರು.

ಅವರ ಗಮನಾರ್ಹ ಕೊಡುಗೆಗಳು ಅವರಿಗೆ 1971ರಲ್ಲಿ ಸಮುದಾಯ ನಾಯಕತ್ವಕ್ಕಾಗಿ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ (Ramon Magsaysay Award) ಮತ್ತು 1987ರಲ್ಲಿ ಮೊತ್ತಮೊದಲ ವಿಶ್ವ ಆಹಾರ ಪ್ರಶಸ್ತಿ, ಭಾರತ ಸರ್ಕಾರ ಕೊಡಮಾಡುವ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಸೇರಿದಂತೆ ಹಲವಾರು ಪ್ರಶಸ್ತಿ ಸಂದವು. ಜೊತೆಗೆ ಪ್ರಪಂಚದಾದ್ಯಂತದ ವಿಶ್ವವಿದ್ಯಾಲಯಗಳಿಂದ 84 ಗೌರವ ಡಾಕ್ಟರೇಟ್ ಪದವಿ ಪಡೆದಿದ್ದರು. ರಾಯಲ್ ಸೊಸೈಟಿ ಆಫ್ ಲಂಡನ್ ಮತ್ತು ಅಮೆರಿಕ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ಸೇರಿದಂತೆ ಹಲವು ಪ್ರಮುಖ ವೈಜ್ಞಾನಿಕ ಅಕಾಡೆಮಿಗಳ ಫೆಲೋ ಆಗಿದ್ದರು.

ಎಂ.ಎಸ್‌. ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್ ಅನ್ನು ಸ್ಥಾಪಿಸಿದ್ದ ಸ್ವಾಮಿನಾಥನ್ ಅವರನ್ನು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮವು ‘ಆರ್ಥಿಕ ಪರಿಸರ ವಿಜ್ಞಾನದ ಪಿತಾಮಹ’ ಎಂದು ಬಣ್ಣಿಸಿತ್ತು. ಇದು ಹಸಿರು ಕ್ರಾಂತಿಯ ಚಳುವಳಿಯ ಅವರ ನಾಯಕತ್ವವನ್ನು ಗುರುತಿಸುತ್ತದೆ.

2007ರಿಂದ 2013ರ ನಡುವೆ ಅವರು ರಾಜ್ಯಸಭೆ ಸದಸ್ಯರೂ ಆಗಿದ್ದರು.

Follow Us:
Download App:
  • android
  • ios