ಟಾಟಾ ಒಡೆತನದ ಮುಂಬೈನ ಐಷಾರಾಮಿ ತಾಜ್ ಹೊಟೆಲ್‌ನಲ್ಲಿ ಟೀ ಬೆಲೆ ಎಷ್ಟು?

ಟಾಟಾ ಮಾಲೀಕತ್ವದ ಐತಿಹಾಸಿಕ ಹಾಗೂ ಐಷಾರಾಮಿ ಮುಂಬೈ ತಾಜ್ ಹೊಟೆಲ್‌ನಲ್ಲಿ ಒಂದು ಕಪ್ ಚಹಾ ಬೆಲೆ ಎಷ್ಟು? ಒಂದು ಕಪ್ ಟೀ ಆರ್ಡರ್ ಮಾಡಿದರೆ ಇದರ ಜೊತೆಗೆ ಕಾಂಪ್ಲಿಮೆಂಟರಿಯಾಗಿ ಏನೆಲ್ಲಾ ಸಿಗುತ್ತೆ?

Cost detail for high bom tea at Luxury Mumbai Taj palace hotel ckm

ಮುಂಬೈ(ನ.21) ಮುಂಬೈಗೆ ತೆರಳಿದವರು ಇಂಡಿಯಾ ಗೇಟ್ ಬಳಿ ಇರುವ ಐಷಾರಾಮಿ ತಾಜ್ ಹೊಟೆಲ್ ಮುಂದೆ ಫೋಟೋ ಕ್ಲಿಕ್ಕಿಸದೆ ವಾಪಸ್ ಬರುವುದಿಲ್ಲ. ಮುಂಬೈನ ತಾಜ್ ಹೊಟೆಲ್ ಭಾರತದ ಮೊದಲ 5 ಸ್ಟಾರ್ ಹೊಟೆಲ್. ಟಾಟಾ ಮಾಲೀಕತ್ವದ ಈ ಹೊಟೆಲ್ ಐಷಾರಾಮಿ ತನಕ್ಕೆ ಹಿಡಿದ ಕನ್ನಡಿಯಾಗಿದೆ. ತಾಜ್ ಹೊಟೆಲ್‌ನಲ್ಲಿ ಉಳಿದುಕೊಳ್ಳುವುದು, ಟೀ, ಕಾಫಿ ಸೇರಿದಂತೆ ಆಹಾರ, ಖಾದ್ಯಗಳನ್ನು ಆನಂದಿಸಲು ಶ್ರೀಮಂತರಾಗಿರಬೇಕು. ಕಾರಣ ಇದು ಅತೀ ದುಬಾರಿ. ಸಾಮಾನ್ಯ ವರ್ಗ, ಮಧ್ಯಮ ವರ್ಗದ ಜನರಿಗೆ ಈ ಹೊಟೆಲ್‌ನಲ್ಲಿ ಒಂದು ಕಪ್ ಚಹಾ ಖರೀದಿಸಿ ಕುಡಿಯಲು ದೊಡ್ಡ ಸಾಹಸ ಮಾಡಬೇಕು.  ಆದರೆ ಇಲ್ಲೊಬ್ಬ ಸಾಮಾನ್ಯ ವರ್ಗದ ಯುವಕ, ಯೂಟ್ಯೂಬರ್ ತಾಜ್ ಹೊಟೆಲ್‌ನಲ್ಲಿ ಚಹಾ ಸವಿದಿದ್ದಾನೆ. ತನ್ನ ಬಹುದಿನಗಳ ಕನಸು ನನಸು ಮಾಡಿದ್ದಾರೆ. ಇಷ್ಟೇ ಅಲ್ಲ ಹಲವರು ತಾಜ್ ಹೊಟೆಲ್‌ನಲ್ಲಿ ಕನಿಷ್ಠ ಒಂದು ಟೀ ಆದರೂ ಕುಡಿಯಬೇಕು ಎಂದುಕೊಳ್ಳುವ ಮಂದಿಗೆ ಜೇಬಿನಲ್ಲಿ ಎಷ್ಟು ದುಡ್ಡಿರಬೇಕು ಅನ್ನೋದನ್ನು ಹೇಳಿದ್ದಾನೆ.

ಅದ್ನನ್ ಪಠಾನ್ ಅನ್ನೋ ಯೂಟ್ಯೂಬರ್ ಮಧ್ಯಮ ವರ್ಗದ ಯುವಕ. ಈತನ ಬಹುದಿನಗಳ ಆಸೆ ಐಷಾರಾಮಿ ತಾಜ್ ಹೊಟೆಲ್‌ನಲ್ಲಿ ಎಲ್ಲಾ ಶ್ರೀಮಂತರಂತೆ, ಸೆಲೆಬ್ರೆಟಿಗಳಂತೆ ಒಳಹೊಕ್ಕು ಕನಿಷ್ಠ ಟೀ ಕುಡಿಯಬೇಕು ಅನ್ನೋದು. ಇದನ್ನು ಈಡೇರಿಸಲು ಅದ್ನನ್ ಪಠಾಣ್ ಮುಂಬೈನ ತಾಜ್ ಹೊಟೆಲ್‌ಗೆ ತೆರಳಿ ಟೀ ಕುಡಿದಿದ್ದಾನೆ. ಎಲ್ಲದಕ್ಕೂ ಸಿದ್ದನಾಗಿಯೇ ತೆರಳಿದ್ದ ಅದ್ನನ್ ಪಠಾಣ‌ಗೆ ಬಿಲ್ ನೋಡಿ ತಲೆ ಸುತ್ತು ಬಂದಿಲ್ಲ. 

ತಾಜ್ ಹೊಟೆಲ್‌ನಲ್ಲಿ ಬೀದಿ ನಾಯಿಗೆ ರಾಜ ಮರ್ಯಾದೆ, ರತನ್ ಟಾಟಾ ಸೂಚನೆ ಭಾರಿ ಮೆಚ್ಚುಗೆ!

ಅದ್ನನ್ ಪಠಾನ್ ತನ್ನ ವಿಡಿಯೋ ಮೂಲಕ ಮಧ್ಯಮ ವರ್ಗದ ಜನರ ಕನಸಾಗಿರುವ ತಾಜ್ ಮಹಲ್ ಹೊಟೆಲ್‌ಗೆ ನಾನಿವತ್ತು ಹೋಗುತ್ತಿದ್ದೇನೆ. ತಾಜ್ ಮಹಲ್ ಹೊಟೆಲ್‌ ಪ್ರವೇಶಿಸಬೇಕು, ಏನಾದರು ಸವಿಯಬೇಕು ಅನ್ನೋದು ನನ್ನ ಆಸೆ. ಇದರಂತೆ ಬನ್ನಿ ಎಂದು ವಿಡಿಯೋ ಮೂಲಕ ತಾಜ್ ಹೊಟೆಲ್ ಒಳಭಾಗದ ಐಷಾರಾಮಿತನವನ್ನು ತೋರಿಸಿದ್ದಾನೆ. ತಾಜ್ ಹೊಟೆಲ್ ಒಳಾಂಗಣ, ರೆಡ್ ಕಾರ್ಪೆಟ್ ಸೇರಿದಂತೆ ಎಲ್ಲವೂ ಲಕ್ಷುರಿ. ಇದೇ ವಿಡಿಯೋದಲ್ಲಿ ಅದ್ನನ್ ಪಠಾಣ್, ತಾಜ್ ಒಳಭಾಗದಲ್ಲಿ ಅತ್ಯಂತ ಸುಂದರವಾಗಿದೆ. ನಾನು ಯಾವುದೇ ರಾಜ ಮಹಲ್‌ಗೆ ಬಂದಂತೆ ಅನಿಸುತ್ತಿದೆ ಎಂದಿದ್ದಾನೆ.

ಅದ್ನನ್ ತಾಜ್ ಹೊಟೆಲ್ ರೆಸ್ಟೋರೆಂಟ್‌ನಲ್ಲಿ ಕುಳಿತು ಬಾಮ್ ಹೈ ಟೀ ಆರ್ಡರ್ ಮಾಡಿದ್ದಾನೆ. ಈತ ಆರ್ಡರ್ ಮಾಡಿದ್ದು ಕೇವಲ ಹೈ ಟೀ ಮಾತ್ರ. ಇದರ ಜೊತೆಗೆ ವಡಾಪಾವ್, ಗ್ರಿಲ್ಡ್ ಸ್ಯಾಂಡ್‌ವಿಚ್, ಕಾಜು ಕಟ್ಲಿ, ಕರಿ ಫಪ್ ಹಾಗೂ ಬಟರ್‌ನ್ನು ಕಾಂಪ್ಲಿಮೆಂಟರಿಯಾಗಿ ನೀಡಿದ್ದಾರೆ. ಇನ್ನು ಚಹಾ ಟೇಸ್ಟ್ ಸರಾಸರಿ ಎಂದಿದ್ದಾನೆ. 10 ಅಂಕದಲ್ಲಿ 5 ಅಂಕ ಕೊಡಬಹುದು ಎಂದು ಅದ್ನನ್ ಪಠಾಣ್ ಹೇಳಿದ್ದಾನೆ. ಇದೇ ವೇಳೆ ಗಾಜಿನ ಬಾಟಲಿಯಲ್ಲಿದ್ದ ಸೀಲ್ಡ್ ಆಗಿದ್ದ ನೀರನ್ನು ತೆಗೆದುಕೊಂಡಿದ್ದಾನೆ. ಇದಕ್ಕೆ ಹೆಚ್ಚುವರಿ ಹಣ ನೀಡಬೇಕಾ ಎಂದು ಕೇಳಿದ್ದಾನೆ. ಇದು ಕಾಂಪ್ಲಿಮೆಂಟರಿ ಎಂದಿದ್ದಾರೆ. 

 

 
 
 
 
 
 
 
 
 
 
 
 
 
 
 

A post shared by Adnan Pathan (@adnaan.08)

 

ಎಲ್ಲಾ ಮುಗೀತು, ಬಿಲ್ ಬಂದಿದೆ. ಬಾಮ್ ಹೈ ಟೀ ಬೆಲೆ 1800 ರೂಪಾಯಿ. ಇನ್ನು ಜಿಎಸ್‌ಟಿ ಸೇರಿಸಿ ಒಟ್ಟು 2,124 ರೂಪಾಯಿ. ಮುಂಬೈಗೆ ತೆರಳಿದಾಗ ತಾಜ್ ಹೊಟೆಲ್‌ನಲ್ಲಿ ಟೀ ಕುಡಿಯಬೇಕು ಏನಿಸಿದರೆ ಜೇಬಿನಲ್ಲಿ ಕನಿಷ್ಠ 2124ರೂಪಾಯಿ ಇಟ್ಟುಕೊಳ್ಳಿ. ಹಾಗಂತೆ ವರ್ಷ ಬಿಟ್ಟು ತೆರಳಿದರೆ ಈ ಬೆಲೆ 3,000 ರೂಪಾಯಿ ದಾಟಿರುತ್ತದೆ. 

ಅದ್ನನ್ ಪಠಾಣ್ ಈ ವಿಡಿಯೋಗೆ ಭಾರಿ ಕಮೆಂಟ್ ವ್ಯಕ್ತವಾಗಿದೆ. ಸಾಮಾನ್ಯ ವರ್ಗದ ಅದ್ನನ್ ತಾಜ್ ಹೊಟೆಲ್ ಚಹಾಗೆ 5 ರೇಟಿಂಗ್ ನೀಡಿದ್ದಾರೆ. ಹೀಗಾಗಿ ಇದು ಪಕ್ಕಾ ರೇಟಿಂಗ್. 5 ಸ್ಟಾರ್ ಹೊಟೆಲ್‌ಗೆ ತೆರಳಿ 2,000 ರೂಪಾಯಿ ಖರ್ಚು ಮಾಡಿ 5 ರೇಟಿಂಗ್ ಇರುವ ಚಹಾ ಯಾಕೆ ಕುಡಿಯಬೇಕು, 25 ರೂಪಾಯಿಗೆ ಒಳ್ಳೆ ಚಹಾ ಸಿಗುತ್ತೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ನಮಗೆ 10 ರೂಪಾಯಿ ಚಹಾ ಸಾಕು. ತೃಪ್ತಿ ಇದೆ ಎಂದಿದ್ದಾರೆ. 


 

Latest Videos
Follow Us:
Download App:
  • android
  • ios