Asianet Suvarna News Asianet Suvarna News

ಅಯ್ಯೋ ದೇವ್ರೆ... ಬುಗುರಿಯಂತೆ ತಿರುಗುವ ತುಂಬು ಗರ್ಭಿಣಿ: ವಿಡಿಯೋ ಸಖತ್ ವೈರಲ್

ಇಲ್ಲೊಬ್ಬಳು ಮಹಿಳೆ ಮೂಲತಃ ನೃತ್ಯಗಾರ್ತಿಯಿರಬೇಕು, ತುಂಬು ಬಸುರಿಯಾಗಿರುವ ಈಕೆ ನೃತ್ಯಶಾಲೆಯಲ್ಲಿ ತನ್ನ ಗುರುವಿನ ಸಹಾಯದಿಂದ ಬುಗುರಿಯಂತೆ ಸುತ್ತಲೂ ಸುತ್ತುತ್ತಿದ್ದಾಳೆ. ಈ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದ್ದು, ಭಾರಿ ವೈರಲ್ ಆಗಿದೆ.

A pragnent woman video goes viral in which she is Circling like a spinning tops netizens reaction is too funny akb
Author
First Published Sep 28, 2023, 3:02 PM IST

ಮನೆಯಲ್ಲೊಬ್ಬರು ಗರ್ಭಿಣಿ ಇದ್ದಾರೆಂದರೆ ಇಡೀ ಕುಟುಂಬವೇ  ಆಕೆಯ ಬಗ್ಗೆ ಬಹಳ ಕಾಳಜಿ ತೋರುತ್ತಾರೆ. ಪ್ರತಿ ಹೆಜ್ಜೆ ಇಡುವಾಗಲೂ ನಿಧಾನಿಸುವಂತೆ ಜೋಪಾನವಾಗಿ ನಡೆಯುವಂತೆ ಸಲಹೆ ನೀಡುತ್ತಾರೆ. ಭಾರ ಎತ್ತುವ ಕೆಲಸವೂ ಸೇರಿದಂತೆ ಯಾವುದನ್ನೂ ಮಾಡದಂತೆ ಸಲಹೆ ನೀಡುತ್ತಾರೆ. ತಿನ್ನುವ ಆಹಾರದಿಂದ ಹಿಡಿದು ಪ್ರತಿಯೊಂದನ್ನು ಬಹಳ ಜತನದಿಂದ ಮಾಡುವಂತೆ ಹಿರಿಯರು ಸಲಹೆ ನೀಡುತ್ತಾರೆ. ಆದರೆ ಇಲ್ಲೊಬ್ಬಳು ಮಹಿಳೆ ಮೂಲತಃ ನೃತ್ಯಗಾರ್ತಿಯಿರಬೇಕು, ತುಂಬು ಬಸಿರಿಯಾಗಿರುವ ಈಕೆ ನೃತ್ಯಶಾಲೆಯಲ್ಲಿ ತನ್ನ ಗುರುವಿನ ಸಹಾಯದಿಂದ ಬುಗುರಿಯಂತೆ ಸುತ್ತಲೂ ಸುತ್ತುತ್ತಿದ್ದಾಳೆ. ಈ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದ್ದು, ಭಾರಿ ವೈರಲ್ ಆಗಿದೆ. 

ವೀಡಿಯೋ ನೋಡಿದ ಅನೇಕರು ತರಹೇವಾರಿ ಕಾಮೆಂಟ್ ಮಾಡಿದ್ದು, ಕೆಲವರು ಮಾಡಿರುವ ಕಾಮೆಂಟ್‌ಗಳು ನಗ್ಗು ಉಕ್ಕಿಸುತ್ತಿದೆ. ಮೂಲತಃ ಈ ವಿಡಿಯೋವನ್ನು @videospvcagado ಎಂಬ ಟ್ವಿಟ್ಟರ್ ಪೇಜ್‌ನಿಂದ ಪೋಸ್ಟ್ ಮಾಡಲಾಗಿದ್ದು, ನಿನ್ನೆ ಪೋಸ್ಟ್ ಆದ ಈ ವೀಡಿಯೋವನ್ನು ಈಗಾಗಲೇ ಮೂರು ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. 

ವೀಡಿಯೋದಲ್ಲೇನಿದೆ?
ನೃತ್ಯ ತರಬೇತಿ ಶಾಲೆಯ ವೀಡಿಯೋ ಇದಾಗಿದ್ದು, ತುಂಬು ಗರ್ಭಿಣಿಯೊಬ್ಬಳು ತನ್ನ ಗುರುವಿನ ಸಹಾಯದಿಂದ ಒಂದು ಕಾಲನ್ನು ಮಡಚಿ ಕೈನಲ್ಲಿ ಹಿಡಿದುಕೊಂಡಿದ್ದಾಳೆ, ಆಕೆಯ ಮತ್ತೊಂದು ಕೈಯನ್ನು ನೃತ್ಯ ತರಬೇತುದಾರ ಹಿಡಿದುಕೊಂಡು ಸುತ್ತಲು ತಿರುಗಿಸುತ್ತಿದ್ದರೆ, ಈಕೆ ಬರೀ ಒಂದು ಕಾಲಿನಲ್ಲಿ ವೇಗವಾಗಿ ಗಿರಿಗಿಟ್ಲೆಯಂತೆ ತಿರುಗುತ್ತಿದ್ದು, ನೋಡುಗರ ಕಣ್ಣು ಮಂಜಾಗುತ್ತಿದೆ. ಈ ವೀಡಿಯೋದ ಜೊತೆಯಲ್ಲೇ,  ಅಮ್ಮ ಹೀಗೆ ಬುಗುರಿಯಂತೆ ತಿರುಗಿದರೆ ಹೊಟ್ಟೆಯೊಳಗೆ ಮಗು ಹೇಗಿರಬಹುದು ಎಂಬುದನ್ನು ಈ ವೀಡಿಯೋದಲ್ಲೇ ತೋರಿಸುವ ದೃಶ್ಯವೂ ಇದ್ದು ಸಖತ್ ವೈರಲ್ ಆಗಿದೆ.

ನಕ್ಕು ನಗಿಸುವ ನೆಟ್ಟಿಗರ ಕಾಮೆಂಟ್

ಈ ವೀಡಿಯೋ ನೋಡಿದವರೊಬ್ಬರ ಕೆಲ ತಿಂಗಳ ನಂತರ ಎಂದು ಬರೆದು ಮಗುವೊಂದು ಸುತ್ತಲೂ ತಿರುಗುವ ವೀಡಿಯೋವನ್ನು ಕಾಮೆಂಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಈ ವೀಡಿಯೋದ ಕೊನೆ ಹೀಗಿರಬಹುದೆಂದು ನಾನು ನಿರೀಕ್ಷೆ ಮಾಡಿರಲಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮಗು ಹೊರಗೆ ಬರದೇ ಇದ್ದದು ವಿಶೇಷ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಮಹಿಳೆಯ ಈ ತಾಕತ್ತನ್ನು ಶ್ಲಾಘನೆ ಮಾಡಿದ್ದಾರೆ. ಹುಟ್ಟುವುದಕ್ಕೂ ಮೊದಲೇ ಮಗುವಿಗೆ ರೋಲರ್ ಕೋಸ್ಟರ್‌ನ ಅನುಭವ ನೀಡುತ್ತಿದ್ದಾಳೆ ಈ ತಾಯಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಮಗುವೂ ಪಕ್ಕ ಡಾನ್ಸರ್ ಆಗಿರಲಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ನಗು ಮೂಡಿಸುತ್ತಿದ್ದರೂ ಈ ಸಾಹಸ ಮಾಡಿರುವ ತುಂಬು ಗರ್ಭಿಣಿಗೆ ಹ್ಯಾಟ್ಸಪ್ ಹೇಳಲೇಬೇಕು. 

ಭಾರತದ ಹಸಿರು ಕ್ರಾಂತಿಯ ಜನಕ ಎಂ.ಎಸ್‌. ಸ್ವಾಮಿನಾಥನ್ ಇನ್ನಿಲ್ಲ


 

Follow Us:
Download App:
  • android
  • ios