ಥ್ರೊಟಲ್ ಮೇಲೆ ಬ್ಯಾಗ್ ಇಟ್ಟು ವಿಡಿಯೋ ಕಾಲ್‌ನಲ್ಲಿದ್ದ ಸಿಬ್ಬಂದಿ: ಹಳಿ ತಪ್ಪಿ ಪ್ಲಾಟ್‌ಫಾರ್ಮ್ ಏರಿದ ರೈಲು: ವೀಡಿಯೋ
ಉತ್ತರಪ್ರದೇಶದ ಮಥುರಾದಲ್ಲಿ ನಡೆದ ರೈಲು ಅಪಘಾತಕ್ಕೆ ಕಾರಣ ತಿಳಿದು ಬಂದಿದ್ದು, ರೈಲು ಸಿಬ್ಬಂದಿಯ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ.

ನವದೆಹಲಿ: ಉತ್ತರಪ್ರದೇಶದ ಮಥುರಾದಲ್ಲಿ ನಡೆದ ರೈಲು ಅಪಘಾತಕ್ಕೆ ಕಾರಣ ತಿಳಿದು ಬಂದಿದ್ದು, ರೈಲು ಸಿಬ್ಬಂದಿಯ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ. ರೈಲಿನ ಕಂಟ್ರೋಲ್ ರೂಮ್‌ನಲ್ಲಿದ್ದ ಸಿಬ್ಬಂದಿ ರೈಲಿನ ಥ್ರೊಟಲ್ (Throttle) ಮೇಲೆ ಬ್ಯಾಗ್ ಇಟ್ಟು ವೀಡಿಯೋ ಕಾಲ್‌ನಲ್ಲಿ ಮಗ್ನನಾಗಿದ್ದ ದೃಶ್ಯ ರೈಲಿನ ಕಂಟ್ರೋಲ್ ರೂಮ್‌ನಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಈ ಹಿನ್ನೆಲೆಯಲ್ಲಿ ಇದು ಪ್ರಕರಣದ ಉನ್ನತ ತನಿಖೆಗೆ ಪ್ರರೇಪಿಸುತ್ತಿದೆ.
ಮಂಗಳವಾರ ರಾತ್ರಿ ಮಥುರಾ ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ (Mathura Junction Railway Station) ರೈಲೊಂದು ಹಳಿ ತಪ್ಪಿ ಪ್ಲಾಟ್‌ಫಾರ್ಮ್ ಮೇಲೇರಿತ್ತು. ಇದರಿಂದ ಪ್ಲಾಟ್‌ಫಾರ್ಮ್‌ನಲ್ಲಿದ್ದ ಮಹಿಳೆಯೊಬ್ಬರು ಗಾಯಗೊಂಡಿದ್ದರು. ಈ ದೃಶ್ಯ ರೈಲಿನ ಸೆಕ್ಯೂರಿಟಿ ಕ್ಯಾಮರಾದಲ್ಲಿ ಸೆರೆ ಆಗಿತ್ತು. ರೈಲಿನಲ್ಲಿ ಪ್ರಯಾಣಿಕರಿಲ್ಲದ ಕಾರಣ ದೊಡ್ಡ ಅನಾಹುತವೊಂದು ತಪ್ಪಿತ್ತು.
ಅಯ್ಯೋ ದೇವ್ರೆ... ಬುಗುರಿಯಂತೆ ತಿರುಗುವ ತುಂಬು ಗರ್ಭಿಣಿ: ವಿಡಿಯೋ ಸಖತ ...
ವಿಡಿಯೋದಲ್ಲಿ ಕಾಣಿಸುವಂತೆ ಪ್ರಯಾಣಿಕರೆಲ್ಲಾ ಇಳಿದ ಮೇಲೆ ರೈಲಿನ ಇಂಜಿನ್ ಇರುವ ಕ್ಯಾಬಿನ್ ಪ್ರವೇಶಿಸಿದ್ದ ರೈಲ್ವೆ ಉದ್ಯೋಗಿ ಸಚಿನ್ ಎಂಬಾತ ವಿಡಿಯೋ ಕಾಲ್‌ನಲ್ಲಿ ಯಾರೊಂದಿಗೋ ಮಾತನಾಡುತ್ತಾ ತನ್ನ ಬ್ಯಾಗನ್ನು ರೈಲಿನ ಎಂಜಿನ್‌ನ ಥ್ರೊಟಲ್ ಮೇಲೆ ಇಟ್ಟಿದ್ದು, ನಂತರ ತನ್ನ ಫೋನ್‌ನಲ್ಲಿ ಬ್ಯುಸಿಯಾಗಿದ್ದ. ಬ್ಯಾಗ್‌ನ ಭಾರದಿಂದ ಎಂಜಿನ್‌ನ ಥ್ರೋಟಲ್ ಮೇಲೆ ಒತ್ತಡ ಬಿದ್ದಿದ್ದು, ಥ್ರೊಟಲ್ ಮುಂದಕ್ಕೆ ಚಲಿಸಿ ರೈಲು ಪ್ಲಾಟ್‌ಫಾರ್ಮ್‌ನತ್ತ ನುಗ್ಗಿದೆ. ಅಲ್ಲದೇ ಮುಂದಕ್ಕೆ ಚಲಿಸಲಾರಂಭಿಸಿದ ಪರಿಣಾಮ ರೈಲಿನ ಪ್ಲಾಟ್‌ಫಾರ್ಮ್‌ನ ಡೆಡ್‌ಎಂಡ್ ಒಡೆದು ಪ್ಲಾಟ್‌ಫಾರ್ಮ್ ಮೇಲೇರಿದೆ.
ದಾರಿಮಧ್ಯೆ ಸಂಕಷ್ಟಕ್ಕೊಳಗಾದ ಒಡತಿಯ ಸುರಕ್ಷಿತವಾಗಿ ಕರೆತಂದ ಶ್ವಾನ: ಕ್ ...
ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲ್ವೆ ಸಿಬ್ಬಂದಿ (Railways employee) ಸಚಿನ್ ಸೇರಿದಂತೆ ಒಟ್ಟು ಐವರನ್ನು ಸೇವೆಯಿಂದ ಅಮಾನತು ಮಾಡಲಾಗಿದ್ದು, ಘಟನೆಯ ಬಗ್ಗೆ ಸರಿಯಾದ ಕಾರಣ ತಿಳಿಯಲು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ವಿಭಾಗೀಯ ರೈಲ್ವೆ ಮ್ಯಾನೇಜರ್ ತೇಜ್ ಪ್ರಕಾಶ್ ಅಗರ್ವಾಲ್ (Tej Prakash Agrawal) ಹೇಳಿದ್ದಾರೆ. ಅಲ್ಲದೇ ರೈಲಿನ ಒಳಗೆ ಮೊಬೈಲ್‌ನಲ್ಲಿ ಮಗ್ನರಾಗಿದ್ದ ಸಚಿನ್ ಆ ಸಮಯದಲ್ಲಿ ಪಾನಮತ್ತರಾಗಿದ್ದರೆ ಎಂಬ ಬಗ್ಗೆಯೂ ತನಿಖೆ ಮಾಡಲಾಗವುದು ಎಂದು ಅಗರ್ವಾಲ್ ಹೇಳಿದ್ದಾರೆ. ಸಚಿನ್ ವೈದ್ಯಕೀಯ ತಪಾಸಣೆ ಮಾಡಲಾಗಿದ್ದು, ಆತ ಪಾನಮತ್ತನಾಗಿದ್ದಾನೆ ಎಂದು ತಿಳಿಯಲು ರಕ್ತದ ಸ್ಯಾಂಪಲ್‌ನ್ನು ಕೂಡ ಪಡೆಯಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.