ಐದು ಭಾರತೀಯ ಉಪಾಹಾರಗಳು ಆರೋಗ್ಯದ ದೃಷ್ಟಿಯಿಂದ  ಪ್ರಯೋಜನಕಾರಿಯಲ್ಲ ಎಂಬುದನ್ನು ಪೌಷ್ಟಿಕತಜ್ಞರು ತಿಳಿಸಿದ್ದಾರೆ. ಜೊತೆಗೆ ಸೇವಿಸುವ ವಿಧಾನವನ್ನು ಹೇಳಿದ್ದಾರೆ.

ಭಾರತೀಯ ಉಪಹಾರದಲ್ಲಿ ಅತ್ಯುತ್ತಮ ಆಹಾರಗಳೂ ಇವೆ. ಜೊತೆಗೆ ಎಣ್ಣೆಯುಕ್ತವಾಗಿರುವ, ಕಡಿಮೆ ಅಥವಾ ಯಾವುದೇ ಪ್ರಮಾಣದ ಪೋಷಕಾಂಶಗಳನ್ನು ಹೊಂದಿರುವಂತಹ ಖಾದ್ಯಗಳೂ ಇವೆ. ಆರೋಗ್ಯಕರ ಉಪಹಾರವೆಂದರೆ ಅದರಲ್ಲಿ ಫೈಬರ್ ಮತ್ತು ಪ್ರೋಟೀನ್‌ ಸಮೃದ್ಧವಾಗಿರುವ ಆಹಾರಗಳು ಸೇರಿವೆ. ಸಾಮಾನ್ಯವಾಗಿ ಈ ರೀತಿಯ ಉಪಹಾರಗಳು ದೀರ್ಘಕಾಲದವರೆಗೆ ಹೊಟ್ಟೆಯನ್ನು ತುಂಬಿರುವಂತೆ ಮಾಡುತ್ತದೆ ಮತ್ತು ದೇಹದಲ್ಲಿ ಶಕ್ತಿಯನ್ನು ಕಾಪಾಡಿಕೊಳ್ಳುತ್ತದೆ. ಹೆಚ್ಚಿನ ಜನರು ಭಾರತೀಯ ಉಪಾಹಾರವನ್ನು ಮನೆಯಲ್ಲಿಯೇ ತಯಾರಿಸಿದರೆ, ಅದು ಆರೋಗ್ಯಕರವಾಗಿರುತ್ತದೆ ಎಂದು ಭಾವಿಸುತ್ತಾರೆ. ಆದರೆ, ಕೆಲವು ಭಾರತೀಯ ಉಪಾಹಾರಗಳು ಆರೋಗ್ಯಕ್ಕೆ ಒಳ್ಳೆಯದಲ್ಲ ಮತ್ತು ಬೆಳಗ್ಗೆ ಅವುಗಳನ್ನು ಸೇವಿಸುವುದನ್ನು ತಪ್ಪಿಸಬೇಕು ಎಂದು ಪೌಷ್ಟಿಕತಜ್ಞೆ ಶೈನಿ ಸುರೇಂದ್ರನ್ ಹೇಳುತ್ತಾರೆ. ಹಾಗಾಗಿ ಈ ಉಪಾಹಾರ ಪದಾರ್ಥಗಳು ಯಾವುವು, ಇವುಗಳಲ್ಲಿ ನಿಮ್ಮ ನೆಚ್ಚಿನ ಆಹಾರಗಳು ಇವೆಯೇ ಎಂಬುದನ್ನು ಸಹ ನೀವು ತಿಳಿದುಕೊಳ್ಳಬೇಕು.

ಅವಲಕ್ಕಿ 
ಅವಲಕ್ಕಿ ಸರಳವಾದ ಒಂದು ಉಪಹಾರ. ನಮ್ಮ ಗೃಹಿಣಿಯರು ಗೆಸ್ಟ್ ಬಂದಾಗ, ತಕ್ಷಣಕ್ಕೆ ಮಾಡುವ ತಿಂಡಿಗಳಲ್ಲಿ ಇದೂ ಒಂದು. ಆದರೆ ಇದರಲ್ಲಿ ಕಾರ್ಬೋಹೈಡ್ರೇಟ್‌ಗಳು ಮಾತ್ರ ಇರುತ್ತವೆ. 

ಏನು ಮಾಡಬಹುದು? 
ಅವಲಕ್ಕಿ ತಯಾರಿಸಲು, ಸರಳ ಅಕ್ಕಿ ಚಕ್ಕೆಗಳ ಬದಲಿಗೆ ಅಂದರೆ ಚಿವ್ಡಾ, ಕೆಂಪು ಅವಲಕ್ಕಿ ಅಥವಾ ರಾಗಿ ಅವಲಕ್ಕಿ ಬಳಸಿ. ಇದರಲ್ಲಿ 50 ರಿಂದ 70 ಪ್ರತಿಶತ ತರಕಾರಿಗಳನ್ನು ಸೇರಿಸಿ. ನೀವು ಬಯಸಿದರೆ, ಅದರಲ್ಲಿ 1 ಅಥವಾ 2 ಮೊಟ್ಟೆಗಳು ಅಥವಾ ತೋಫುವನ್ನು ಕೂಡ ಸೇರಿಸಬಹುದು, ಇದರಿಂದ ಅದರಲ್ಲಿರುವ ಪ್ರೋಟೀನ್ ಪ್ರಮಾಣ ಹೆಚ್ಚಾಗುತ್ತದೆ. 

ಉಪ್ಮಾ/ಉಪ್ಪಿಟ್ಟು
ರವೆ ಉಪ್ಪಿಟ್ಟು ಕಾರ್ಬೋಹೈಡ್ರೇಟ್‌ಗಳಿಂದ ಸಮೃದ್ಧವಾಗಿದೆ. ಇದನ್ನು ವರ್ಮಿಸೆಲ್ಲಿ(ಶಾವಿಗೆ) ಯಿಂದ ಕೂಡ ತಯಾರಿಸಲಾಗುತ್ತದೆ. ಇದರಲ್ಲಿ ಫೈಬರ್ ಮತ್ತು ಪ್ರೋಟೀನ್ ಇರುವುದಿಲ್ಲ. ಕೇವಲ ಮಸಾಲೆ ಸೇರಿಸಿ ಉಪ್ಮಾ ತಯಾರಿಸಿದರೆ, ದೇಹಕ್ಕೆ ಹೆಚ್ಚಿನ ಪೋಷಣೆ ಸಿಗುವುದಿಲ್ಲ ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. 

ಏನು ಮಾಡಬಹುದು? 
ಉಪ್ಪಿಟ್ಟು ಆರೋಗ್ಯಕರವಾಗಿಸಲು, ರವೆ ಬದಲಿಗೆ ರಾಗಿಯಿಂದ ಉಪ್ಪಿಟ್ಟು ತಯಾರಿಸಿ ಅಥವಾ ರಾಗಿ ಅಥವಾ ಮತ್ತಾ ಅನ್ನವನ್ನು ತೆಗೆದುಕೊಂಡು 50 ರಿಂದ 70 ಪ್ರತಿಶತ ತರಕಾರಿಗಳನ್ನು ಸೇರಿಸಿ, ಇದು ಅದರಲ್ಲಿ ಫೈಬರ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದು ನಿಮ್ಮ ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿರುವಂತೆ ಮಾಡುತ್ತದೆ. ಪ್ರೋಟೀನ್ ಹೆಚ್ಚಿಸಲು ಒಂದು ಹಿಡಿ ಬಟಾಣಿಯನ್ನು ಇದಕ್ಕೆ ಸೇರಿಸಬಹುದು. 

ಕೋಳಿ ಮಾಂಸ ತಿಂದ್ರೆ ಕ್ಯಾನ್ಸರ್ ಬರುತ್ತಾ?

ಸ್ಮೂಥಿ 
ಸ್ಮೂಥಿ ಆರೋಗ್ಯಕರವೆನಿಸಬಹುದು. ಆದರೆ ಇದರಲ್ಲಿ ಹಣ್ಣುಗಳು ಮತ್ತು ಒಣ ಹಣ್ಣುಗಳಿಂದ ತಯಾರಿಸಿದ ಸರಳ ಸಕ್ಕರೆಯಿಂದ ಕೂಡಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟ ಏರಿಕೆಗೆ ಕಾರಣವಾಗಬಹುದು. 

ಏನು ಮಾಡಬಹುದು? 
ನೀವು ಸ್ಮೂಥಿ ಬಯಸಿದರೆ ಸಕ್ಕರೆ ಏರಿಕೆಯನ್ನು ತಪ್ಪಿಸಲು ಇದರೊಂದಿಗೆ ಮೊಟ್ಟೆಗಳನ್ನು ಸೇವಿಸಿ. 

ಪುರಿ ಮತ್ತು ಆಲೂಗಡ್ಡೆ 
ಪೌಷ್ಟಿಕತಜ್ಞರು ಹೇಳುವಂತೆ ಬೆಳಗ್ಗೆ ಡೀಪ್ ಫ್ರೈ ಆಹಾರವು ಉತ್ತಮ ಆಯ್ಕೆಯಲ್ಲ. ಇದರಲ್ಲಿರುವ ಎಣ್ಣೆ ಮತ್ತು ಕ್ಯಾಲೊರಿಗಳು ತೂಕವನ್ನು ಹೆಚ್ಚಿಸಬಹುದು ಮತ್ತು ರಕ್ತದಲ್ಲಿನ ಸಕ್ಕರೆಯ ಏರಿಕೆಗೆ ಕಾರಣವಾಗಬಹುದು. 

ಏನು ಮಾಡಬಹುದು? 
ಡೀಪ್ ಫ್ರೈ ಬದಲು ಶ್ಯಾಲೋ ಫ್ರೈ ಮಾಡಿರುವ ಆಹಾರ ಸೇವಿಸಿ. 

ಬ್ರೆಡ್ ಟೋಸ್ಟ್ 
ಸಂಸ್ಕರಿಸಿದ ಹಿಟ್ಟಿನಿಂದ ಮಾಡಿದ ಬ್ರೆಡ್, ವಿಶೇಷವಾಗಿ ಸಕ್ಕರೆ ಚಹಾದೊಂದಿಗೆ ಸೇವಿಸಿದಾಗ, ತಕ್ಷಣವೇ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗುತ್ತದೆ. 

ಮನೆಯಲ್ಲಿಯೇ ಮಾಡಿ ವೆನಿಲ್ಲಾ ಸ್ಪಾಂಜ್ ಕೇಕ್..ಸಖತ್ ಟೇಸ್ಟಿ, ಸಿಂಪಲ್ ರೆಸಿಪಿ

ಏನು ಮಾಡಬಹುದು?
ನೀವು ಬ್ರೆಡ್ ಪ್ರಿಯರಾಗಿದ್ದರೆ ಸಾದಾ ಬ್ರೆಡ್ ತಿನ್ನುವ ಬದಲು ವೆಜಿಟೇಬಲ್ ಸ್ಯಾಂಡ್‌ವಿಚ್ ಅಥವಾ ಮೊಟ್ಟೆ ಮತ್ತು ಹಸಿರು ಚಟ್ನಿಯ ಸ್ಯಾಂಡ್‌ವಿಚ್ ಮಾಡಿ ತಿನ್ನಿರಿ. ಇದು ದೇಹಕ್ಕೆ ಪ್ರೋಟೀನ್ ಮತ್ತು ಫೈಬರ್ ಅನ್ನು ಒದಗಿಸುತ್ತದೆ. ಸಂಸ್ಕರಿಸಿದ ಹಿಟ್ಟಿನ ಬ್ರೆಡ್ ಬದಲಿಗೆ ನೀವು ಪೋಷಕಾಂಶಯುಕ್ತ ಬ್ರೆಡ್ ತಿನ್ನಬಹುದು.

View post on Instagram