Asianet Suvarna News Asianet Suvarna News

ಜೂನ್ ತಿಂಗಳಿನಲ್ಲಿ ಜನಿಸಿದವರ ಸ್ವಭಾವ ಹೀಗಿರತ್ತೆ!

ಮನುಷ್ಯನಿಗೆ ತನ್ನ ಗುಣ ಏನು ಎಂಬುದು ಗೊತ್ತಿದ್ದರೂ, ಜ್ಯೋತಿಷ್ಯ ಶಾಸ್ತ್ರದಲ್ಲಿ ಏನು ಹೇಳುತ್ತದೆ ಎಂಬ ಕುತೂಹಲ ಇದ್ದೇ ಇರುತ್ತದೆ. ಇನ್ನು ಪ್ರಮುಖವಾಗಿ ಹುಟ್ಟಿದ ತಿಂಗಳಿನಿಂದ ಗುಣವನ್ನು ತಿಳಿದುಕೊಳ್ಳಬಹುದಾಗಿದೆ. ಇದು ಜೂನ್ ತಿಂಗಳು. ಈ ಮಾಸದಲ್ಲಿ ಜನಿಸಿದವರಿಗೆ ಸಹಜವಾಗಿ ತಮ್ಮ ಗುಣ ಏನು ಎಂಬುದನ್ನು ತಿಳಿಯುವ ಕುತೂಹಲ ಇರುತ್ತದೆ. ಹೀಗಾಗಿ ಏನೇನಿವೆ ನೋಡೋಣ ಬನ್ನಿ...
 

Personality facts about persons born in the month of jun
Author
Bangalore, First Published Jun 10, 2020, 5:57 PM IST

ಜ್ಯೋತಿಷ್ಯ ಶಾಸ್ತ್ರದಲ್ಲಿ ವ್ಯಕ್ತಿಯ ಹುಟ್ಟಿದ ದಿನಾಂಕ, ಸಮಯ, ವಾರ ಎಲ್ಲವನ್ನೂ ನೋಡಿ ಭವಿಷ್ಯದ ವಿಚಾರವನ್ನು ತಿಳಿಸಲಾಗುತ್ತದೆ. ಹಾಗೆಯೇ ಆಯಾ ತಿಂಗಳು ಮತ್ತು ವಾರದಲ್ಲಿ ಹುಟ್ಟಿದವರ ಗುಣ ಸ್ವಭಾವವನ್ನು ತಿಳಿಯಬಹುದಾಗಿದೆ. 

ಒಂದೇ ತಿಂಗಳಿನಲ್ಲಿ ಹಲವರು ಜನಿಸಿರುತ್ತಾರೆ. ಒಬ್ಬರಿಗಿಂತ ಒಬ್ಬರು ಗುಣ, ಸ್ವಭಾವಗಳಲ್ಲಿ ಭಿನ್ನರಾಗಿದ್ದರೂ, ಕೆಲವು ಅಂಶಗಳು ಒಂದೇ ಆಗಿರುತ್ತವೆ. ಅದು ಆ ತಿಂಗಳ ಮಹಿಮೆ ಆಗಿರುತ್ತದೆ. ಜೂನ್ ತಿಂಗಳಿನಲ್ಲಿ ಹುಟ್ಟಿದವರ ಗುಣ ಸ್ವಭಾವಗಳು, ಅವರಲ್ಲಿರುವ ಉತ್ತಮ ಅಂಶಗಳು ಹಾಗೆಯೇ ಅವರಲ್ಲಿರುವ ಆಸಕ್ತಿದಾಯಕ ವಿಷಯಗಳ ಬಗ್ಗೆ ತಿಳಿಯೋಣ.

ಚಿರಂಜೀವಿ ಸರ್ಜಾ ಸಾವಿಗೆ ಕಾರಣವಾಯ್ತೆ ಅಷ್ಟಮ ಕುಜ ದೋಷ?

ಬುಧನ ಪ್ರಭಾವ ಹೆಚ್ಚಿರುತ್ತೆ
ಜೂನ್ ತಿಂಗಳಿನಲ್ಲಿ ಜನಿಸಿದವರ ಜಾತಕದಲ್ಲಿ ಬುಧನ ಪ್ರಭಾವ ಹೆಚ್ಚಾಗಿರುತ್ತದೆ. ಸಾತ್ವಿಕ ಪ್ರಕೃತಿಯ ಬುಧಗ್ರಹ ನಮ್ಮ ಮಸ್ತಿಷ್ಕ, ಬುದ್ಧಿ,ಸ್ಮೃತಿಯ ಪ್ರತಿನಿಧಿಯಾಗಿರುತ್ತಾನೆ. ಈ ಗ್ರಹದ ಅಧಿಪತಿ ದೇವರು ಗಣಪತಿ. ಹಾಗಾಗಿ ಇವೆಲ್ಲದರ ಪ್ರಭಾವ ಜೂನ್ ತಿಂಗಳಿನಲ್ಲಿ ಹುಟ್ಟಿದವರ ಜಾತಕದ ಮೇಲೆ ಬೀಳುತ್ತದೆ. 

ಇದನ್ನು ಓದಿ: ನಿಮಗೂ ಸರ್ಕಾರಿ ಕೆಲಸ ಸಿಗುವ ಯೋಗವಿರಬಹುದು!

ಬುದ್ಧಿವಂತರು-ಸಾತ್ವಿಕರು
ಜೂನ್‌ನಲ್ಲಿ ಜನಿಸಿದವರು ಬುದ್ಧಿವಂತರು ಮತ್ತು ಸಾತ್ವಿಕ ಸ್ವಭಾವದವರಾಗಿರುತ್ತಾರೆ. ಹೆಚ್ಚು ಚಿಂತನಶೀಲರಾಗಿರುತ್ತಾರೆ. ಇವರಿಗೆ ಅವಸರ ಅವಸರವಾಗಿ ಕೆಲಸ ಮಾಡುವುದು ಆಗುವುದಿಲ್ಲ, ಎಲ್ಲ ಕೆಲಸವನ್ನು ತಮಗೆ ಬೇಕಾದಂತೆಯೇ ಮಾಡಲು ಇಚ್ಛಿಸುತ್ತಾರೆ. ಹಲವು ಬಾರಿ ಇವರ ಈ ಸ್ವಭಾವ ಇವರ ಸಫಲತೆಗೆ ದಾರಿ ಮಾಡಿಕೊಡುತ್ತದೆ.
Personality facts about persons born in the month of jun
ಕನಸು ಕಾಣುವವರು 
ದೊಡ್ಡ ದೊಡ್ಡ ಕನಸು ಕಾಣುತ್ತಾರೆ. ಕಲ್ಪನೆ ಮತ್ತು ಬುದ್ಧಿಯ ಸಹಾಯದಿಂದ ಮುಂದೆ ಬರುವಂಥ ಸ್ವಭಾವದವರಾಗಿರುತ್ತಾರೆ. ಪರಿಶ್ರಮದ ಮೇಲೆ ವಿಶ್ವಾಸವನ್ನಿಡುತ್ತಾರೆ. ಇವರ ಕಲ್ಪನೆಗಳನ್ನು, ಕನಸುಗಳನ್ನು ಬೇರೆಯವರ ಬಳಿ ಹೇಳಿ ಅವರಿಂದ ನಗೆಪಾಟಲಿಗೆ ಇಡಾಗುವ ಸಂದರ್ಭಗಳಿರುತ್ತವೆ. ಎಲ್ಲ ಕೆಲಸವನ್ನು ಪರ್ಫೆಕ್ಟ್ ಆಗಿ ಮಾಡಿ ಮುಗಿಸುವುದು ಇವರ ಸ್ವಭಾವ.

ಇದನ್ನು ಓದಿ: ಪತಿಗೆ ಅಂಟಿ ಕೊಂಡಿರುವ ದಾರಿದ್ರ್ಯ ದೂರ ಮಾಡುವ ಶಕ್ತಿಯಿದೆ ಪತ್ನಿಗೆ, ಹೇಗೆ?

ಸ್ವಭಾವ ಚಂಚಲವಾದರೂ ಸ್ವಾಭಿಮಾನಿಗಳು
ಜೂನ್ ತಿಂಗಳಲ್ಲಿ ಜನಿಸಿದವರು ಹೆಚ್ಚು ಸ್ವಾಭಿಮಾನಿಗಳಾಗಿರುತ್ತಾರೆ. ಹಕ್ಕು ಚಲಾಯಿಸುವವರ ಜೊತೆ ಇರಲು ಇವರು ಇಷ್ಟಪಡುವುದಿಲ್ಲ. ಉತ್ತಮ ಸ್ವಭಾವದ ವ್ಯಕ್ತಿತ್ವ ಇವರದ್ದಾಗಿರುತ್ತದೆ. ಯಾವುದಾದರೂ ಕೆಲಸವನ್ನು ಒಪ್ಪಿಕೊಂಡರೆ ಪ್ರಮಾಣಿಕತೆಯಿಂದ ಮಾಡಿ ಮುಗಿಸುವ ಸ್ವಭಾವ ಇವರದ್ದು. ಕೆಲವು ವಿಷಯಗಳಲ್ಲಿ ಹೆಚ್ಚು ಭಾವುಕರಾಗುತ್ತಾರೆ. ಕೆಲವೊಮ್ಮೆ ಕೋಪದ ಕಾರಣದಿಂದಾಗಿ ಉತ್ತಮ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ. 

ಧಾರ್ಮಿಕ ವಿಷಯಗಳಲ್ಲಿ ಆಸಕ್ತಿ ಮತ್ತು ನಂಬಿಕೆ
ಧಾರ್ಮಿಕ ವಿಷಯಗಳಿಗೆ ಹೆಚ್ಚು ಮಹತ್ವವನ್ನು ನೀಡುತ್ತಾರೆ. ಇವರ ಈ ಗುಣ ಮಾನಸಿಕ ಮತ್ತು ಆಧ್ಯಾತ್ಮಿಕ ಶಾಂತಿಗೆ ಕಾರಣವಾಗುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೊಂದಿರುವುದರೊಂದಿಗೆ, ಅಂಥ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಲ್ಲೂ ಇಷ್ಟ ಪಡುತ್ತಾರೆ.

ಆಲೋಚಿಸಿ ನಿರ್ಧಾರ
ಯಾರೆಲ್ಲ ಜೂನ್ 9ರಿಂದ 15ರ ಒಳಗೆ ಜನಿಸಿರುತ್ತಾರೋ ಅವರ ಸ್ವಭಾವದಲ್ಲಿ ಕರುಣೆಯ ಭಾವನೆ ಹೆಚ್ಚಾಗಿರುತ್ತದೆ. ಬಡವರಿಗೆ, ನಿರ್ಗತಿಕರಿಗೆ ಸಹಾಯ ಮಾಡುವುದು ಇವರ ಕೆಲಸಗಳಲ್ಲೊಂದಾಗುತ್ತದೆ. ಇವರು ಯೋಚಿಸದೆ ಯಾವ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಭಾವನಾಜೀವಿ ಇವರಾಗಿರುತ್ತಾರೆ.

ಇದನ್ನು ಓದಿ: ಈ ರಾಶಿಗಳ ಹುಡುಗಿಯರಿಗೆ ಇಂತಹ ಹುಡುಗರೇ ಬೇಕಂತೆ!

ಸಂಗಾತಿಗೆ ಸಿಗುತ್ತೆ ಹೆಚ್ಚಿನ ಮನ್ನಣೆ
ಜೂನ್ 23ರಿಂದ 30ರ ಮಧ್ಯದ ಅವಧಿಯಲ್ಲಿ ಜನಸಿದವರಿದ್ದರೆ ಅವರು ತಮ್ಮ ಸಂಗಾತಿಯನ್ನು ಅತ್ಯಂತ ಆಪ್ಯಾಯತೆಯಿಂದ ನೋಡಿಕೊಳ್ಳುತ್ತಾರೆ. ಈ ವಾರದಲ್ಲಿ ಜನಿಸಿದವರ ಜಾತಕದ ಪ್ರಕಾರ ಬಹಳ ಸಂವೇದನಾಶೀಲ ಗುಣವನ್ನು ಹೊಂದಿರುತ್ತಾರೆ.

ಉಳಿತಾಯ ಮಾಡ್ತಾರೆ, ಕಂಜೂಸ್ ನಂತೆ ಕಾಣ್ತಾರೆ
ಈ ಸಮಯದಲ್ಲಿ ಹುಟ್ಟಿದವರು ಉಳಿತಾಯ ಮಾಡುವುದನ್ನು ಬಹಳವಾಗಿ ಇಷ್ಟಪಡುತ್ತಾರೆ. ಯಾರಾದರೂ ಕಂಜೂಸ್ ಎಂದು ಹೇಳಿದರೂ ತಲೆಕೆಡಿಸಿಕೊಳ್ಳುವುದಿಲ್ಲ. ಖುಷಿಯಾಗಿರುವುದರ ಜೊತೆಗೆ ಬೇರೆಯವರ ಖುಷಿಯನ್ನು ಕಾಣುವುದೂ ಇವರಿಗೆ ತುಂಬಾ ಇಷ್ಟ.

Personality facts about persons born in the month of jun

Follow Us:
Download App:
  • android
  • ios