ಸಂಗಾತಿಯು ಹೇಗಿರಬೇಕು ಎಂದು ಹಲವರು ಕಲ್ಪಿಸಿಕೊಂಡರೆ, ಹೀಗೆಯೇ ಇರಬೇಕು ಎಂದು ಕೆಲವರು ಕಲ್ಪಿಸಿಕೊಂಡಿರುತ್ತಾರೆ. ನನ್ನನ್ನು ಅರ್ಥಮಾಡಿಕೊಳ್ಳಬೇಕು, ಹೆಚ್ಚು ಪ್ರೀತಿಸಬೇಕು, ಬೇಕು-ಬೇಡಗಳ ಬಗ್ಗೆ ಅರಿತಿರಬೇಕು ಹೀಗೆ ಹತ್ತು ಹಲವು ಯೋಚನೆಗಳು ಬಂದು ಹೋಗುತ್ತವೆ. ಹುಡುಗಿಯರ ಮನಸ್ಸಿನಲ್ಲಿ  ಪ್ರೀತಿಗೆ ಯಾವ ರೀತಿಯ ಮಹತ್ವವಿದೆ ಎಂಬುದನ್ನು ತಿಳಿದುಕೊಂಡರೆ ಪ್ರೀತಿಸಿ ಮದುವೆಯಾಗಲು ಅನುಕೂಲವಾಗುತ್ತದೆ. ರಾಶಿಗೆ ಅನುಗುಣವಾಗಿ ಪ್ರೀತಿಯ ಬಗ್ಗೆ ಹುಡುಗಿಯರ ಆಲೋಚನೆ ಹೇಗಿರುತ್ತದೆ ಎಂದು ಹೇಳಲಾಗಿದೆ. ಅದನ್ನು ಗಮನಿಸಿಕೊಂಡರೆ ನೀವು ಬಯಸುವ ಸಂಗಾತಿಯ ಆಯ್ಕೆ ಮತ್ತಷ್ಟು ಸುಲಭವಾಗುತ್ತದೆ.

ಪ್ರೀತಿ ಅಥವಾ ಸಂಗಾತಿ ಆಯ್ಕೆಯ ವಿಷಯದಲ್ಲಿ ಹುಡುಗಿಯರ ಕಲ್ಪನೆ ಬೇರೆಯದ್ದೇ ಆಗಿರುತ್ತದೆ. ಹುಡುಗ ಹೇಗಿರಬೇಕು? ಎಷ್ಟು ಪ್ರೀತಿಸಬೇಕು? ಹೇಗೆ ಪ್ರೀತಿಸಬೇಕು? ಹೇಗೆ ನೋಡಿಕೊಳ್ಳಬೇಕು? ಎಂದೆಲ್ಲ ಸಾವಿರಾರು ಕನಸು ಕಂಡಿರುತ್ತಾರೆ. ಅವರ ಕನಸಿನಂತೆ ಅವರವರ ರಾಶಿಗೆ ಅನುಸಾರವಾಗಿ ಪ್ರೀತಿ ವಿಷಯದಲ್ಲಿ ಅವರ ಬಯಕೆ ಏನಿರುತ್ತದೆ ಎನ್ನುವುದನ್ನು ತಿಳಿಯೋಣ.ಮೇಷ ರಾಶಿ
ಹುಡುಗ ತನ್ನನ್ನು ಬಿಟ್ಟು ಬೇರೆ ಹುಡುಗಿಯರ ನೋಡುವುದನ್ನು ಮೇಷ ರಾಶಿಯ ಹುಡುಗಿಯರು ಸಹಿಸುವುದಿಲ್ಲ. ಜೀವನದಲ್ಲಿ ಅವಳೇ ಅವನ ಸರ್ವಸ್ವ ಎಂಬ ವಿಶ್ವಾಸವನ್ನು ಮೂಡಿಸಿದ ಮೇಲಷ್ಟೇ ಈ ರಾಶಿ ಹುಡುಗಿಯರು ಹುಡುಗನನ್ನು ಒಪ್ಪುವುದು, ಪ್ರೀತಿಸುವುದು. 

ಇದನ್ನು ಓದಿ: ನೌಕರಿ ಖಾತರಿ-ಕಿರಿಕಿರಿ ಎಲ್ಲವಕ್ಕೂ ಇಲ್ಲಿ ಉತ್ತರ ಸಿಗುತ್ತೆ ಕಣ್ರೀ!

ವೃಷಭ ರಾಶಿ
ರಾಶಿ ಹುಡುಗಿಯರು ಕೋಪಕ್ಕೆ ಹೆಸರುವಾಸಿ. ಇವರಿಗೆ ಕೋಪ ಬಂದರೆ ಎದುರಿಗಿದ್ದವರಿಗೆ ಇವರ ಕೋಪ ತಣಿಸಿ ಸಂಭಾಳಿಸುವುಷ್ಟರಲ್ಲಿ ಸುಸ್ತಾಗಿ ಹೋಗುತ್ತಾರೆ. ಆದರೆ, ಪ್ರೀತಿ ವಿಷಯದಲ್ಲಿ ತುಂಬಾ ಮೃದು. ಇವರು ಪ್ರೀತಿ ಮಾಡಿದರೆ ಅದನ್ನು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ನಿಭಾಯಿಸುತ್ತಾರೆ.

ಮಿಥುನ ರಾಶಿ
ಈ ರಾಶಿ ಹುಡುಗಿಯರು ತುಂಬಾ ರೊಮ್ಯಾಂಟಿಕ್ ಇರ್ತಾರಂತೆ. ಆದರೆ ಇವರದು ಚಂಚಲ ಸ್ವಭಾವ. ಇವರು ಇಷ್ಟಪಟ್ಟಂತೆ ಇರಲು ಹುಡುಗರು ತುಂಬಾ ಕಷ್ಟ ಪಡಬೇಕು. ಈ ರಾಶಿಯವರು ತುಂಬಾ ಕಷ್ಟಪಟ್ಟರೆ ನಿಜವಾದ ಪ್ರೀತಿ ಇವರಿಗೆ ಸಿಗುತ್ತದೆ.  

ಕಟಕ ರಾಶಿ
ಈ ರಾಶಿಯ ಹುಡುಗಿಯರು ಯಾರನ್ನು ಬೇಗ ನಂಬುವುದಿಲ್ಲ. ಹೆಚ್ಚು ಸಮಯ ತೆಗೆದುಕೊಂಡು, ವಿಶ್ವಾಸಕ್ಕೆ ಅರ್ಹರು ಎನಿಸಿದರಷ್ಟೇ ಇವರು ಮುಂದುವರಿಯುವುದು. ಪ್ರೀತಿಯ ವಿಷಯದಲ್ಲಿ ಇವರು ತುಂಬಾ ನಿಧಾನ. ಆದರೆ ಪ್ರೀತಿಸಿದ ಮೇಲೆ ರಕ್ಷಣಾ ಸ್ವಭಾವದ ಹಾಗೂ ಸಮರ್ಪಣಾಭಾವದ ಪ್ರೇಮಿ ಇವರಾಗಿರುತ್ತಾರೆ.ಸಿಂಹ ರಾಶಿ
ಈ ರಾಶಿ ಹುಡುಗಿಯರು ಬೇಗ ಪ್ರೀತಿಯಲ್ಲಿ ಬೀಳುತ್ತಾರೆ. ಆದರೆ ಇವರ ಕಲ್ಪನೆಗೆ ತಕ್ಕ ಹುಡುಗ ಸಿಕ್ಕಾಗ ಮಾತ್ರ. ಪ್ರೀತಿ ವಿಚಾರದಲ್ಲಿ ತುಂಬಾ ಗಂಭೀರರಾಗಿರುತ್ತಾರೆ.

ಕನ್ಯಾ ರಾಶಿ
ಈ ರಾಶಿಯ ಹುಡುಗಿಯರು ಹೆಚ್ಚು ಭಾವುಕ ಮತ್ತು ಉದ್ವೇಗ ಸ್ವಭಾವದವರಾಗಿರುತ್ತಾರೆ. ಇವರು ತಮ್ಮ ಸಂಗಾತಿಯಲ್ಲಿ ಯಾವುದೇ ದುರ್ಬಲತೆಯನ್ನು ಸಹಿಸುವುದಿಲ್ಲ. ಹೀಗಾಗಿ ಸಂಬಂಧಗಳನ್ನು ನಿಭಾಯಿಸುವಲ್ಲಿ ಈ ರಾಶಿಯ ಹುಡುಗಿಯರು ಕಷ್ಟ ಪಡುತ್ತಾರೆ.

ಇದನ್ನು ಓದಿ: ಅನ್ನಪೂರ್ಣೆ ಮುನಿಸಿಗೆ ಕಾರಣವಾಗುವ ಈ ವಸ್ತುಗಳನ್ನು ಅಡುಗೆ ಮನೆಯಲ್ಲಿ ಇಡಬೇಡಿ!

ತುಲಾ ರಾಶಿ
ಈ ರಾಶಿಯ ಹುಡುಗಿಯರು ತುಲನಾತ್ಮಕವಾಗಿ ಯೋಚಿಸುತ್ತಾರೆ. ಇವರ ಸಂಗಾತಿಯ ಬಗ್ಗೆ ಸರಿಯಾಗಿ ಯೋಚಿಸಿ ವ್ಯವಹರಿಸುತ್ತಾರೆ. ಎಲ್ಲದರಲ್ಲೂ ಸರಿ ಸಮವಾದ ಪಾಲನ್ನು ಬಯಸುತ್ತಾರೆ. ಇವರ ಸಂಗಾತಿ ಇವರನ್ನು ಸರ್ವಸ್ವವೆಂದು ಭಾವಿಸಬೇಕೆಂದು ಬಯಸುತ್ತಾರೆ.

ವೃಶ್ಚಿಕ ರಾಶಿ
ಈ ರಾಶಿಯ ಹುಡುಗಿಯನ್ನು ಪ್ರೀತಿಸುವವರಿಗೆ ಈ ಹುಡುಗಿಯರು ಒಂದು ಒಗಟಾಗಿ ಕಾಣುತ್ತಾರೆ. ಇವರು ಬಯಸುವುದು ಒಂದು ಎಂದೆನಿಸಿದರೂ ಇದರ ಹಿಂದಿನ ಉದ್ದೇಶ ಇನ್ನೊಂದು ಆಗಿರುತ್ತದೆ. ಈ ಸ್ವಭಾವವು ಸಂಗಾತಿಯಲ್ಲಿ ಗೊಂದಲವನ್ನುಂಟು ಮಾಡುತ್ತದೆ.

ಧನು ರಾಶಿ
ಈ ರಾಶಿಯ ಹುಡುಗಿಯರ ಆಸಕ್ತಿ ಮತ್ತೊಂದು ರೀತಿ. ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಹುಡುಗ ತನಗೆ ಸರಿಸಮನಾಗಿರಬೇಕೆಂದು ಬಯಸುತ್ತಾರೆ. ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ಪ್ರೀತಿಸುವವನ ಹುಡುಕಾಟದಲ್ಲಿರುತ್ತಾರೆ ಧನು ರಾಶಿ ಹುಡುಗಿಯರು.

ಮಕರ ರಾಶಿ
ಈ ರಾಶಿಯ ಹುಡುಗಿಯರ ಆಲೋಚನೆಗಳೇ ಭಿನ್ನವಾಗಿರುತ್ತದೆ.ಈ ಹುಡುಗಿಯರು ಮೊದಲ ನೋಟಕ್ಕೆ ಪ್ರೀತಿಗೆ ಬೀಳುವವರಲ್ಲ. ಪ್ರೀತಿಯ ವಿಷಯದಲ್ಲಿ ಸಮಯ ಹಾಳು ಮಾಡಿಕೊಳ್ಳುವ ವ್ಯಕ್ತಿತ್ವ ಇವರದಲ್ಲ. ಆದರೆ ಪ್ರೀತಿಯಲ್ಲಿ ವಿಶ್ವಾಸವಿಡುತ್ತಾರೆ, ಹಣೆಬರಹದ ಬಗ್ಗೆ ಚಿಂತಿಸುವುದಿಲ್ಲ.

ಇದನ್ನು ಓದಿ: ಕನಸಿನಲ್ಲಿ ಕಾಮನಬಿಲ್ಲು ಕಾಣುವುದು ಯಾವುದರ ಸಂಕೇತ!

ಕುಂಭ ರಾಶಿ
ಈ ರಾಶಿಯ ಹುಡುಗಿಯರು ದೃಢವಿಶ್ವಾಸಿಗರು. ಪ್ರೀತಿಸಲು ಮತ್ತು ಪ್ರೀತಿಯನ್ನು ಅರ್ಥಮಾಡಿಕೊಳ್ಳಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತಾರೆ. ಹಾಗಾಗಿ ಹೊಸ ಸಂಬಂಧಕ್ಕೆ ಬೇಗ ಹೊಂದಿಕೊಳ್ಳುವುದು ಇವರಿಗೆ ಕಷ್ಟವಾಗುತ್ತದೆ.

ಮೀನ ರಾಶಿ
ಈ ರಾಶಿಯ ಹುಡುಗಿಯರು ಪ್ರೀತಿಯಲ್ಲಿ ಬಿದ್ದರೆ, ಅದರದೇ ಕಲ್ಪನಾಲೋಕದಲ್ಲಿ ವಿಹರಿಸಲು ಇಚ್ಛಿಸುತ್ತಾರೆ. ಒಮ್ಮೆ ಪ್ರೀತಿಸಿದ ಮೇಲೆ ಅದನ್ನೇ ನೆನೆದು ಖುಷಿ ಪಡುವ ಮನಃಸ್ಥಿತಿ ಹೊಂದಿರುತ್ತಾರೆ. ರಾತ್ರಿ-ಹಗಲು ಪ್ರೀತಿಯ ಧ್ಯಾನದಲ್ಲಿ ತಲ್ಲೀನರಾಗಿರುತ್ತಾರೆ.