ಗಂಡ-ಹೆಂಡತಿ ಇಬ್ಬರೂ ದುಡಿಯುತ್ತಾರೆ. ಆದರೆ, ಅದ್ಯಾವ ಗ್ರಹಚಾರವೋ ಶನಿಯ ವಕ್ರದೃಷ್ಟಿಯೋ ಗೊತ್ತಿಲ್ಲ, ದುಡ್ಡು ಮಾತ್ರ ಕೈಯಲ್ಲಿ ನಿಲ್ಲುವುದಿಲ್ಲ ಎಂಬ ಬೇಸರ. ಇದಕ್ಕೆ ಹಲವಾರು ಕಾರಣಗಳು ಇರಬಹುದು. ಆದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪತಿಗೆ ಶನಿಕಾಟ ಹೊತ್ತಿಕೊಂಡಿದ್ದರೆ ಅದಕ್ಕೆ ಪತ್ನಿಯಿಂದಲೇ ಪರಿಹಾರ ಕಂಡುಕೊಳ್ಳಬಹುದು!!!

ಹೌದು. ಆಕೆಯ ಕೈಗಳಿಂದಲೇ ಅಂಟಿಕೊಂಡಿರುವ ದಾರಿದ್ರ್ಯವನ್ನು ದೂರ ಮಾಡಿ, ಲಕ್ಷ್ಮೀಪುತ್ರರಾಗಬಹುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಆದರೆ, ಇಲ್ಲಿ ನಾನೇಕೆ ಮಾಡಬೇಕು ಎಂಬುದು ಬಂದಾಗ ಮಾತ್ರ ಏನೂ ಸಾಧ್ಯವಾಗದು ಎನ್ನುತ್ತಾರೆ ಪಂಡಿತರು. ಇದಕ್ಕಾಗಿ ಪತ್ನಿಯು ಪತಿಯ ಕಾಲನ್ನು ಒತ್ತಬೇಕು. ಹೀಗೆ ಮಾಡಿದ್ದೇ ಆದಲ್ಲಿ ಮನೆಯಲ್ಲಿ ಕಾಂಚಾಣ ತಾಂಡವವಾಡುತ್ತದೆ ಎನ್ನಲಾಗಿದೆ. ಹಾಗಾದರೆ ಏನು ಮಾಡಬೇಕು ಎಂಬುದನ್ನು ನೋಡೋಣ.

ಇದನ್ನು ಓದಿ: ನೌಕರಿ ಖಾತರಿ-ಕಿರಿಕಿರಿ ಎಲ್ಲವಕ್ಕೂ ಇಲ್ಲಿ ಉತ್ತರ ಸಿಗುತ್ತೆ ಕಣ್ರೀ!

ಲಕ್ಷ್ಮೀದೇವಿಯೂ ಪತಿ ಕಾಲು ಒತ್ತಿದ್ದಾಳೆ
ಈಗ ಶ್ರೀಮನ್ನಾರಾಯಣ ಮತ್ತು ಲಕ್ಷ್ಮೀಯ ಭಾವಚಿತ್ರವನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತೇವೆ. ಅದರಲ್ಲಿ ಆದಿಶೇಷನ ಮೇಲೆ ಸುಖವಾಗಿ ಪವಡಿಸಿರುವ ಪತಿ ನಾರಾಯಣನ ಪಾದಗಳನ್ನು ಒತ್ತುತ್ತಾ ಕುಳಿತಿರುವ ಪತ್ನಿ ಲಕ್ಷ್ಮೀಯನ್ನು ಕಾಣಬಹುದು. ಇದು ಪುರಾಣದ ದೃಶ್ಯ. ಆದರೆ ಇದರ ಹಿಂದೆ ಒಂದು ಕಾರಣವಿದೆ. ಹೀಗೆ ಮಾಡುವುದರಿಂದ ಧನಲಾಭ ಉಂಟಾಗುತ್ತದೆ ಎಂದು ಹೇಳುತ್ತದೆ ಜ್ಯೋತಿಷ್ಯ ಶಾಸ್ತ್ರ.

ಪತಿಯ ಪಾದ ಒತ್ತಿದರೆ ಧನಲಾಭ
ಹಿಂದೆ ನಮ್ಮ ಹಿರಿಯರು ಸಂಬಂಧಗಳಲ್ಲಿ ತುಂಬಾ ಪ್ರೀತಿಯನ್ನು ಕಾಣುತ್ತಿದ್ದರು. ಪತಿ-ಪತ್ನಿಯರು ಅನ್ಯೋನ್ಯತೆಯಿಂದ ಜೀವನ ನಡೆಸುತ್ತಿದ್ದರು. ಒಬ್ಬರನ್ನೊಬ್ಬರು ಗೌರವದಿಂದ ನಡೆಸಿಕೊಳ್ಳುತ್ತಿದ್ದರು. ಪತ್ನಿಯು ಪತಿಯನ್ನು ದೇವರೆಂದು ಪೂಜಿಸಿ, ಸೇವೆ ಮಾಡುತ್ತಿದ್ದಳು. ಗೃಹಿಣಿಯು ಲಕ್ಷ್ಮೀ ಸ್ವರೂಪವೆಂದು ಆಕೆಗೂ ಅದೇ ಗೌರವ, ಪ್ರೀತಿ ದೊರಕುತ್ತಿತ್ತು. ಆದರೆ ಈಗಿನ ಕಾಲದಲ್ಲಿ ಪತಿ-ಪತ್ನಿಯರಲ್ಲಿ ಗೌರವ ಪ್ರೀತಿ ಆಗಿನಂತಿಲ್ಲ. ಪತಿ-ಪತ್ನಿಯರ ನಡುವೆ ಮಧುರವಾದ ಸಂಬಂಧವಿರಬೇಕಾದ್ದು ಅವಶ್ಯಕವೆಂದು ನಮ್ಮ ಪೂರ್ವಜರು ಹೇಳುತ್ತಾರೆ. ಪರಸ್ಪರ ಪೂರ್ಣ ವಿಶ್ವಾಸ ಮತ್ತು ಸದ್ಭಾವನೆ ಇರಬೇಕು. ಪರಸ್ಪರರ ಸೇವಾ ಮನೋಭಾವದ ಮಹತ್ವವನ್ನು ತೋರಿಸುತ್ತದೆ. ಅದೇ ಸಂಸ್ಕಾರ ಮಕ್ಕಳಿಂದ ಮೊಮ್ಮಕ್ಕಳಿಗೆ ಹೀಗೆ ಸಾಗುತ್ತಾ ಹೋಗುತ್ತದೆ. ಹಾಗಾಗಿ ನಮ್ಮ ಹಿರಿಯರ ಆಚರಣೆ ಎಂದೇ ಹೇಳಬಹುದಾದ, ಪತ್ನಿ ಪತಿಯ ಪಾದವನ್ನು ಅಥವಾ ಕಾಲನ್ನು ಒತ್ತುವುದರಿಂದ ಧನಲಾಭವಾಗುತ್ತದೆ ಎಂಬುದರ ರಹಸ್ಯವನ್ನು ತಿಳಿಯೋಣ.

ಇದನ್ನು ಓದಿ: ಜ್ಯೋತಿಷ್ಯ ಪ್ರಕಾರ ಹೀಗೆ ಮಾಡಿದ್ರೆ, ಸಂತಾನ ಪ್ರಾಪ್ತಿ ಗ್ಯಾರಂಟಿ!

ಲಕ್ಷ್ಮೀ ಶಾಶ್ವತವಾಗಿ ನೆಲೆಸುತ್ತಾಳೆ
ಶಾಸ್ತ್ರಗಳ ಪ್ರಕಾರ ಲಕ್ಷ್ಮೀದೇವಿ ನಾರಾಯಣನ ಪಾದವನ್ನು ಒತ್ತುತ್ತಾ, ಪಾದದ ಬಳಿಯಲ್ಲಿಯೇ ಕುಳಿತಿರುವ ಕಾರಣ, ಮಹಿಳೆಯರು ಧನಲಕ್ಷ್ಮೀಯ ಸ್ಥಾನವನ್ನು ಅಲಂಕರಿಸಿದರೆ ಒಳಿತಾಗುತ್ತದೆ. ಆದ್ದರಿಂದ ಪುರಾಣದ ಅನುಸಾರ ಯಾವ ಮಹಿಳೆಯು ತನ್ನ ಪತಿಯ ಕಾಲನ್ನು ಒತ್ತುತ್ತಾಳೋ ಅಂಥಹ ಮನೆಯಲ್ಲಿ ಲಕ್ಷ್ಮೀ ಶಾಶ್ವತವಾಗಿ ನೆಲೆಸುತ್ತಾಳೆ ಎಂದು ಹೇಳುತ್ತದೆ.

ಗ್ರಹಗಳ ಮಹತ್ವ
ಈ ರೀತಿ ಪತ್ನಿ ಪತಿಯ ಕಾಲನ್ನು ಒತ್ತುವುದರ ಹಿಂದೆ ಗ್ರಹಗಳ ವಿಶೇಷ ಮಹತ್ವವು ಇದೆ. ಪುರುಷನ ಮಂಡಿಯ ಭಾಗದಿಂದ ಪಾದದ ವರೆಗಿನ ಭಾಗವು ಶನಿದೇವನ ಸ್ಥಾನ, ಹಾಗೆಯೇ ಸ್ತ್ರೀಯ ಮಣಿಕಟ್ಟಿನಿಂದ ಬೆರಳುಗಳ ಭಾಗವು ಶುಕ್ರನ ಪ್ರಭಾವಕ್ಕೆ ಒಳಪಟ್ಟಿರುತ್ತದೆ. 

ಇದನ್ನು ಓದಿ: ಈ ವಸ್ತುಗಳು ಮನೆಯಲ್ಲಿದ್ದರೆ ಮನೆಗೆ ಒಳಿತಾಗುವುದಿಲ್ಲವಂತೆ!

ಜ್ಯೋತಿಷ್ಯ ಶಾಸ್ತ್ರದ ಅನುಸಾರ ಯಾವಾಗ ಶನಿಯ ಪ್ರಭಾವ ಶುಕ್ರನ ಬೀಳುತ್ತದೋ ಆಗ ಧನಲಾಭವಾಗುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಮಹಿಳೆ ತನ್ನ ಪತಿಯ ಕಾಲನ್ನು ಒತ್ತುವುದರಿಂದ ಧನಪ್ರಾಪ್ತಿ ಯೋಗ ಬರುತ್ತದೆ. ಮತ್ತು ಅಂತಹ ಮನೆಯಲ್ಲಿ ಹಣದ ಅಭಾವ ಎಂದೂ ಬರುವುದಿಲ್ಲ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.