ಸರ್ಕಾರಿ ಕೆಲಸವೆಂದರೆ ದೇವರ ಕೆಲಸ ಎಂಬ ಮಾತಿದೆ. ಸರ್ಕಾರಿ ಕೆಲಸ ಸಿಗುವುದು ತುಂಬಾ ಕಷ್ಟ, ಎಷ್ಟೇ ಚೆನ್ನಾಗಿ ಓದಿದರೂ, ಅಂಕಗಳನ್ನು ಪಡೆದರೂ ಸರ್ಕಾರಿ ಹುದ್ದೆ ಗಿಟ್ಟಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೆಚ್ಚು ಪ್ರಯತ್ನ ಪಡದೆ ಇದ್ದರೂ ಕೆಲವರು ಆರಾಮವಾಗಿ ಸರ್ಕಾರಿ ನೌಕರಿ ಪಡೆದಿದ್ದನ್ನು ಕಂಡಿರಬಹುದು. ಕೆಲವರು ಹಗಲು ರಾತ್ರಿ ಸರ್ಕಾರಿ ಕೆಲಸಕ್ಕಾಗಿ ಶ್ರಮ ಪಟ್ಟರೂ ಕೊನೆಗೂ ಸಿಗುವುದಿಲ್ಲ. ಇದಕ್ಕೆ ಜಾತಕದ ಯೋಗವೂ ಕಾರಣವಾಗಿರಬಹುದು.

ಜ್ಯೋತಿಷ್ಯ ಶಾಸ್ತ್ರದಲ್ಲಿ ಜಾತಕವನ್ನು ನೋಡಿ ಯೋಗಗಳನ್ನು ತಿಳಿಯಬಹುದು. ಜಾತಕದಲ್ಲಿನ ಗ್ರಹಗಳ ಸ್ಥಾನ ಮತ್ತು ಸ್ಥಿತಿಯನ್ನು ನೋಡಿ ಸರ್ಕಾರಿ ಕೆಲಸ ಸಿಗಬಹುದೋ ಇಲ್ಲವೋ ಎಂದು ಹೇಳುತ್ತಾರೆ. ಕೆಲವೊಮ್ಮೆ ಗ್ರಹಗಳಿಗೆ ಬಲ ಬರುವುದಕ್ಕೆ ಮತ್ತು ಶುಭಫಲ ನೀಡಲು ಕೆಲವು ಪರಿಹಾರಗಳನ್ನು ಮಾಡಿಕೊಂಡರೆ ಸರ್ಕಾರಿ ಕೆಲಸ ಸಿಗುವ ಯೋಗ ಒದಗಿ ಬರುವ ಸಾಧ್ಯತೆಯೂ ಇರುತ್ತದೆ. ನಿಮ್ಮ ರಾಶಿಯಲ್ಲಿ ಈ ಕೆಲಸ ಸಿಗುವ ಯೋಗವಿದ್ದರೆ ಖಂಡಿತ ಸಿಗುತ್ತದೆ. 

ಇದನ್ನು ಓದಿ: ಪತಿಗೆ ಅಂಟಿ ಕೊಂಡಿರುವ ದಾರಿದ್ರ್ಯ ದೂರ ಮಾಡುವ ಶಕ್ತಿಯಿದೆ ಪತ್ನಿಗೆ, ಹೇಗೆ? 

ಅಗ್ನಿ ಮತ್ತು ಪೃಥ್ವಿ ರಾಶಿಯ ಪಾತ್ರ ಮಹತ್ವದ್ದು
ಸರ್ಕಾರಿ ಕೆಲಸ ಪಡೆಯಲು ಪರಿಶ್ರಮದ ಜೊತೆಗೆ ಭಾಗ್ಯವು ಇದ್ದರೆ ಮಾರ್ಗ ಸರಳವಾಗುತ್ತದೆ. ಕೆಲಸಕ್ಕೆ ಮುಖ್ಯ ಕಾರಕ ಶನಿದೇವ, ಜೊತೆಗೆ ಬೇರೆ ಪಾಪಗ್ರಹಗಳ ಪಾತ್ರವೂ ಇದರಲ್ಲಿರುತ್ತದೆ. ಜಾತಕದ ಆರನೇ ಮತ್ತು ಹನ್ನೊಂದನೇ ಮನೆ ಮತ್ತು ಅದರ ಅಧಿಪತಿ ಗ್ರಹವು ಉದ್ಯೋಗಕ್ಕೆ ಸಂಬಂಧಿಸಿದ್ದಾಗಿರುತ್ತದೆ. ಜಾತಕದಲ್ಲಿ ಅಗ್ನಿ ಮತ್ತು ಪೃಥ್ವಿ ರಾಶಿಯು ಉದ್ಯೋಗ ಪಡೆಯುವಲ್ಲಿ ಹೆಚ್ಚು ಸಹಾಯಕವಾಗಿರುತ್ತವೆ.

ಇದನ್ನು ಓದಿ: ಈ ರಾಶಿಗಳ ಹುಡುಗಿಯರಿಗೆ ಇಂತಹ ಹುಡುಗರೇ ಬೇಕಂತೆ!

ಸರ್ಕಾರಿ ಕೆಲಸ ಸಿಗುವ ಸಂಭವ
ಜಾತಕದಲ್ಲಿ ಸೂರ್ಯ ಅಥವಾ ಚಂದ್ರ ಯಾವುದಾದರೊಂದು ಗ್ರಹ ಉಚ್ಛವಾಗಿದ್ದಾಗ, ಪಂಚಮಹಾಪುರುಷ ಯೋಗದಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಯೋಗವಿದ್ದರೆ, ಶನಿಯ ಸ್ಥಿತಿ ಉಚ್ಛ್ರಾಯವಾಗಿದ್ದರೆ ಅಥವಾ ಸಾಡೇ ಸಾಥ್ ಇಲ್ಲವೇ ಅರ್ಧಾಷ್ಟಮ ನಡೆಯುತ್ತಿದ್ದರೆ, ಕೈಯಲ್ಲಿ ಸೂರ್ಯನ ಉಭಯ ರೇಖೆ ಇದ್ದರೆ, ಕೈಯಲ್ಲಿ ಬೃಹಸ್ಪತಿ ಪರ್ವತ ಇರುವ ಜಾಗದಲ್ಲಿ ಡೊಂಕಾಗಿದ್ದರೆ ಸರ್ಕಾರಿ ನೌಕರಿ ಸಿಗುವ ಸಾಧ್ಯತೆ ಹೆಚ್ಚು. ಸರ್ಕಾರಿ ನೌಕರಿ ಪಡೆಯಲು ಅಡ್ಡಿಯಾಗುವುದು ಯಾವಾಗ?

ಜಾತಕದಲ್ಲಿ ಗುರುಗ್ರಹದ ಸ್ಥಿತಿಯು ಹೆಚ್ಚು ಉಚ್ಛವಾಗಿದ್ದಾಗ. ಗ್ರಹಣ ಯೋಗವಿದ್ದಾಗ ಅಥವಾ ಗುರು ಚಾಂಡಾಲ ಯೋಗವಿದ್ದಾಗ ಸರ್ಕಾರಿ ನೌಕರಿ ಸಿಗುವುದು ಕಷ್ಟವಾಗುತ್ತದೆ. ಜಾತಕದಲ್ಲಿ ಶನಿಯ ಸಂಬಂಧವು ಸಂಪತ್ತಿನ ಸ್ಥಾನದ ಗ್ರಹದೊಂದಿಗಿದ್ದಾಗ, ಹಸ್ತದ ಬಣ್ಣ ಕಪ್ಪಾಗಿದ್ದು ಅದರ ಮಧ್ಯದಲ್ಲಿ ಮಚ್ಚೆ ಇದ್ದರೂ ಸರ್ಕಾರಿ ಕೆಲಸಕ್ಕೆ ತೊಂದರೆಯಾಗುತ್ತದೆ. ಕೈಯಲ್ಲಿ ಸೂರ್ಯ ವೃತ್ತವಿದ್ದರೆ ಅಥವಾ ಭಾಗ್ಯ ರೇಖೆಯು ತುಂಡಾಗಿದ್ದರೆ ಸರ್ಕಾರಿ ಉದ್ಯೋಗ ಲಭಿಸುವುದು ಕಷ್ಟಸಾಧ್ಯವಾಗುತ್ತದೆ.

ಇದನ್ನು ಓದಿ: ಕನಸಿನಲ್ಲಿ ಕಾಮನಬಿಲ್ಲು ಕಾಣುವುದು ಯಾವುದರ ಸಂಕೇತ! 

ಸರ್ಕಾರಿ ಕೆಲಸ ಪಡೆಯಲು ಹೀಗೆ ಮಾಡಿ
ಸರ್ಕಾರಿ ಕೆಲಸ ಪಡೆಯಲು, ಜಾತಕದ ದೋಷಗಳಿಗೆ ಕೆಲವೊಂದು ಪರಿಹಾರಗಳನ್ನು ಮಾಡಿಕೊಂಡರೆ. ಕಾರಕ ಗ್ರಹಗಳಿಗೆ ಬಲ ಬಂದು ಕೆಲಸ ಸಿಗುವ ಸಂಭವವಿರುತ್ತದೆ. ಹಾಗಾಗಿ ಕೆಲವು ಮಂತ್ರ ಅನುಷ್ಟಾನಗಳನ್ನು, ಪರಿಹಾರೋಪಾಯಗಳನ್ನು ಇಲ್ಲಿ ತಿಳಿಸಲಾಗಿದೆ.- ಪ್ರತಿದಿನ ಪ್ರಾತಃಕಾಲದಲ್ಲಿ ತಂದೆ-ತಾಯಿಯ ಪಾದಗಳಿಗೆ ನಮಸ್ಕರಿಸಬೇಕು.
- ಉದಯಿಸುವ ಸೂರ್ಯನಿಗೆ ಜಲವನ್ನು ಅರ್ಪಿಸಬೇಕು.
- ಪ್ರಾತಃಕಾಲ ಮತ್ತು ಸಂಧ್ಯಾ ಸಮಯದಲ್ಲಿ 108 ಗಾಯತ್ರಿ ಮಂತ್ರವನ್ನು ಜಪಿಸಬೇಕು.
- ಜ್ಯೋತಿಷಿಗಳ ಸಲಹೆಯನ್ನು ಪಡೆದು ರತ್ನ ಧಾರಣೆ ಮಾಡಬೇಕು.
- ದೇವರ ಧ್ಯಾನ, ಅನುಷ್ಠಾನಗಳನ್ನು ತಪ್ಪದೇ ಮಾಡಬೇಕು.
- ಆಂಜನೇಯ ಮತ್ತು ಭೈರವನ ಆರಾಧನೆ ಮಾಡಬೇಕು
- ಹನುಮಾನ್ ಚಾಲೀಸ ಮತ್ತು ಶನಿ ಸ್ತೋತ್ರವನ್ನು ಪ್ರತಿದಿನ ಪಠಿಸಬೇಕು.
- ಶಾಂತಿ ಮಂತ್ರವನ್ನು 40 ದಿನಗಳ ಅವಧಿಯಲ್ಲಿ 19000 ಬಾರಿ ಪಠಿಸಬೇಕು.
- ಶನಿವಾರ ಉಪವಾಸ ಮತ್ತು ಎಳ್ಳುದಾನ ಮಾಡಬೇಕು.
- ಕಪ್ಪು ಎಮ್ಮೆಯನ್ನು ದಾನ ಮಾಡಬೇಕು.
- ಹದಿನಾಲ್ಕು ಮುಖಿ ರುದ್ರಾಕ್ಷಿಯನ್ನು ಧರಿಸಬೇಕು.
- ನೀಲಮಣಿಯನ್ನು ಧರಿಸುವದರಿಂದ ಸರ್ಕಾರಿ ಕೆಲಸಕ್ಕೆ ತೊಡಕುಗಳಿದ್ದರೆ ನಿವಾರಣೆಯಾಗುತ್ತದೆ.