ಯಾವ ರಾಶಿಯವರಿಗೆ ಯಾವ ಉದ್ಯೋಗ ಬೆಸ್ಟ್? ಇಲ್ಲಿದೆ ಲಿಸ್ಟ್
ರಾಶಿಗೆ ಅನುಗುಣವಾಗಿ ಕೆಲವು ಉದ್ಯೋಗಗಳು ಕೈ ಹಿಡಿಯುತ್ತವೆ. ಅಷ್ಟಕ್ಕೂ ಯಾವ ರಾಶಿಯವರ ಪವರ್ ಏನಿರುತ್ತೆ? ಯಾವ ಉದ್ಯೋಗ ಹೆಚ್ಚು ಸೂಕ್ತ. ಇಲ್ಲಿದೆ ಲಿಸ್ಟ್.
ಮೇಷ (Aries)
ಉತ್ಸಾಹಿಗಳಾಗಿರುವ ಇವರ ಗುಣವೇ ವೃತ್ತಿಜೀವನದಲ್ಲಿ ಕೈ ಹಿಡುತ್ತದೆ. ಒಂದೇ ನಿರ್ಧಾರದಲ್ಲಿ ತಮ್ಮ ತಂಡ ಹೇಗೆ ಒಂದು ಮಾಡೋದು ಮತ್ತು ಉತ್ತಮ ಫಲಿತಾಂಶಗಳನ್ನು ನೀಡುತ್ತೆ ಎನ್ನೋದು ಇವರೆಗ ಗೊತ್ತು. ಮಿಲಿಟರಿ, ಸರ್ಕಾರಿ ವಲಯ (Government Sector), ರಾಜಕೀಯ (Politics), ನಿರ್ವಹಣೆ ಮತ್ತು ಆ್ಯಡ್ ಕ್ಷೇತ್ರಗಳಲ್ಲಿ ಕೆಲಸ ಮಾಡುವುದು ಅವರಿಗೆ ಹೆಚ್ಚು ಯಶಸ್ಸು ತರುತ್ತೆ.
ವೃಷಭ (Taurus)
ತಮ್ಮ ಸ್ಕಿಲ್‌ನಿಂದಲೇ ಎಲ್ಲರನ್ನೂ ಆಕರ್ಷಿಸುವಲ್ಲಿ ಇವರು ಯಶಸ್ವಿಯಾಗುತ್ತಾರೆ. ಇವರು ಒಳ್ಳೆ ಚೆಫ್. ಆರ್ಟಿಸ್ಟ್ (Artiste), ಮಸಾಜ್ ಥೆರಪಿಸ್ಟ್, ಕ್ಯಾಲಿಗ್ರಾಫರ್‌ನಂಥ ಕ್ಷೇತ್ರಗಳು ಇವರಿಗೆ ಕೈ ಹಿಡಿಯುತ್ತದೆ. ಈ ಕ್ಷೇತ್ರಗಳಲ್ಲಿಯೇ ದುಡ್ಡು, ಹೆಸರೂ ಎರಡೂ ಸಂಪಾದಿಸುತ್ತಾರೆ.
ಮಿಥುನ (Gemini)
ಇಬ್ಬರು ಹೆಣ್ಣು ಮಕ್ಕಳಿಗೆ ಇರುವಷ್ಟು ಶಕ್ತಿ ಇರುತ್ತದೆ. ಎಲ್ಲರನ್ನೂ ತಮ್ಮೆಡೆಗೆ ಆಕರ್ಷಿಸುವ ಗುಣವಿರುತ್ತೆ. ಸದಾ ಕ್ರಿಯಾಶೀಲರು (Creative). ಕೆಲಸವಿಲ್ಲವೆಂದರೆ ಬಾಲ ಸುಟ್ಟ ಬೆಂಕಿನಂತಾಡುತ್ತಾರೆ. ತುಂಬಾ ಆ್ಯಕ್ಟಿವ್ ಆಗಿರುತ್ತಾರೆ. ಪ್ರಯಾಣ, ಮನರಂಜನೆಯಂಥ ಕ್ಷೇತ್ರಗಳಲ್ಲಿ ಕೆಲಸ ಮಾಡಿದರೆ ಬೆಸ್ಟ್. ತಂತ್ರಜ್ಞಾನ (Technology), ಬೋಧನೆ ಮತ್ತು ವಾಸ್ತುಶಿಲ್ಪ ಕ್ಷೇತ್ರದಲ್ಲಿ ಇವರಿಗೆ ವಿಫುಲ ಅವಕಾಶಗಳು ಸಿಗುತ್ತವೆ. ಅದರಲ್ಲಿ ಯಶಸ್ಸೂ ಸಿಗುತ್ತೆ.
Zodiac Signs: ಈ ರಾಶಿಗಳ ಜನ ಹಣವಿಲ್ಲದಿದ್ದಾಗ ತಲೆ ಕೆಟ್ಟವರಂತೆ ಆಡ್ತಾರೆ!
ಕಟಕ (Cancer)
ಈ ರಾಶಿಯವರು ಜರ್ನಲಿಸ್ಟ್ ಆಗಲು ಬೆಸ್ಟ್. ದಾದಿ, ಸ್ವೀಪರ್ಸ್, ತೋಟದ ಮಾಲಿಗಳು, ರಾಜಕಾರಣಿಗಳಾಗಬಹುದು. ಕೈ ತುಂಬಾ ಸಂಪಾದಿಸುತ್ತಾರೆ ಇವರು. ಆದರೆ. ಖರ್ಚೂ ವಿಪರೀತ ಮಾಡುತ್ತಾರೆ. ಹಣ ಉಳಿಸೋದು ಅಲರ್ಜಿ. ಮನಿ ಮ್ಯಾನೇಜ್‌ಮೆಂಟ್ (Money Management) ಗೊತ್ತಾದರೆ ಎಲ್ಲದರಲ್ಲಿಯೂ ಯಶಸ್ಸು ಸಿಗೋದು ಗ್ಯಾರಂಟಿ.
ಸಿಂಹ ರಾಶಿ (Leo)
ಇವರು ಕಮ್ಯೂನಿಕೇಷನ್ ಸ್ಕಿಲ್ ಸೂಪರ್ಬ್. ಆಂಗಿಕ ಭಾಷೆಯಿಂದಲೇ (Body Language) ಎಲ್ಲರನ್ನೂ ತಮ್ಮೆಡೆಗೆ ಸೆಳೆದು ಕೊಳ್ಳುತ್ತಾರೆ. ಆ್ಯಕ್ಟಿಂಗ್, ಡೈರೆಕ್ಷನ್, ಡ್ಯಾನ್ಸ್, ಈವೆಂಟ್ ಮ್ಯಾನೇಜ್‌ಮೆಂಟ್, ಮಾಧ್ಯಮ, ಸಾರ್ವಜನಿಕ ಸಂಪರ್ಕ ಇತ್ಯಾದಿ ಕ್ಷೇತ್ರಗಳಲ್ಲಿ ಗೆಲವು ಸಾಧಿಸುತ್ತಾರೆ. ಅನಿಮೇಷನ್, ಚಿತ್ರಕಲೆ, ಮಾಡೆಲಿಂಗ್ ಇತ್ಯಾದಿ ಕ್ಷೇತ್ರಗಳಲ್ಲಿಯೂ ಅವರು ಚೆನ್ನಾಗಿ ಸಾಧಿಸುತ್ತಾರೆ. ಅವರ ಉಪಸ್ಥಿತಿಯನ್ನು ಜನರು ಅದೃಷ್ಟವೆಂದೇ ಪರಿಗಣಿಸುತ್ತಾರೆ. , ಅದಕ್ಕಾಗಿಯೇ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ವೃತ್ತಿಜೀವನ ನಡೆಸುತ್ತಾರೆ.
ಕನ್ಯಾ (Virgo)
ವಿಶ್ಲೇಷಣಾತ್ಮಕ ಮನಸ್ಥಿತಿಗೆ ಇವರು ಹೆಸರುವಾಸಿ. ವೃತ್ತಿ ಜೀವನದ (Career) ಎತ್ತರವನ್ನು ತಲುಪುವ ಸಾಮರ್ಥ್ಯವಿರುತ್ತೆ ಇವರಿಗೆ. ಬೆಳವಣಿಗೆ, ಆದಾಯ ಮತ್ತು ಅವಕಾಶಗಳನ್ನು ನೀಡುವ ವ್ಯವಹಾರಗಳನ್ನೇ ಇವರು ಆಯ್ಕೆ ಮಾಡುತ್ತಾರೆ. ಆದ್ದರಿಂದ ಅವರು ಭೌತಶಾಸ್ತ್ರ, ಗಣಿತ, ಹಣಕಾಸು, ಎಂಜಿನಿಯರಿಂಗ್, ಸಂಶೋಧನೆ, ಔಷಧ, ವಾಸ್ತುಶಿಲ್ಪ, ಹೂಡಿಕೆ (Investment) ಮತ್ತು ಷೇರು ಮಾರುಕಟ್ಟೆ ಇವರಿಗೆ ಲಕ್ (Luck) ತರುತ್ತೆ. ಹಣ ಖರ್ಚು ಮಾಡುವ ಮುನ್ನ ಈ ರಾಶಿಯವರು ಸಾವಿರ ಸಲ ಯೋಚಿಸುತ್ತಾರೆ!
Zodiac Traits: ಈ ರಾಶಿಯವರು ಸ್ವಾರ್ಥಕ್ಕಾಗಿ ಸ್ನೇಹಿತರಿಗೆ ವಂಚಿಸಲೂ ಹೇಸೋರಲ್ಲ!
ತುಲಾ (Libra)
ಸಾಂಸ್ಥಿಕ ಕೌಶಲ್ಯ ಮತ್ತು ನಾಯಕತ್ವ ಗುಣ ಹೊಂದಿದ್ದಾರೆ. ಯಾವಾಗಲೂ ತಾಳ್ಮೆ (Patience), ಶಾಂತ, ಅತ್ಯಾಧುನಿಕ, ಸಮತೋಲಿತ ಮತ್ತು ಸಾಮರಸ್ಯ ಇರುತ್ತೆ ಇವರಿಗೆ. ತುಲಾ ರಾಶಿಯವರು ನೈಸರ್ಗಿಕ, ಕಲಾತ್ಮಕ ಮತ್ತು ಸೌಂದರ್ಯದ ಪರಿಣತಿ ಇರುತ್ತದೆ. ಇವರು ಸಾಮಾಜಿಕ ಸಂವಹನ (Social Communication) ಮತ್ತು ಸಂಪರ್ಕ ಸಾಧಿಸುವ ಕ್ಷೇತ್ರಗಳಲ್ಲಿ ಕೆಲಸ ಮಾಡಬೇಕು. ಸಂಘಗಳಿಗೆ ಸಲಹೆ, ಮಾರ್ಗದರ್ಶನ ನೀಡಬೇಕು. ಯಶಸ್ವಿ ರಾಜತಾಂತ್ರಿಕ (Political Strategist), ನ್ಯಾಯಾಧೀಶರು, ಸಾರ್ವಜನಿಕ ಸಂಪರ್ಕ ಸಲಹೆಗಾರ, ಸಲಹೆಗಾರ, ಮನಃಶ್ಶಾಸ್ತ್ರಜ್ಞ (Psychologist) ಮತ್ತು ಕಲಾವಿದರಾಗುತ್ತಾರೆ ಈ ರಾಶಿಯವರು. .
ವೃಶ್ಚಿಕ (Scorpio)
ತಮ್ಮ ಶಿಸ್ತಿನ ಸ್ವರೂಪ ಮತ್ತು ವ್ಯವಸ್ಥಾಪಕ ಕೌಶಲ್ಯಗಳಿಗಾಗಿ ಯಾವಾಗಲೂ ಹೊಗಳಿಸಿಕೊಳ್ಳುತ್ತಾರೆ. ಪ್ರಶ್ನಿಸುವ ಚಟುವಟಿಕೆ ಮತ್ತು ಬೇಹುಗಾರಿಕೆ ಬಗ್ಗೆ ಇವರಿಗೆ ಒಲವು ಹೆಚ್ಚು. ವೈದ್ಯಕೀಯ ಸಂಶೋಧನೆ (Medical Research), ಮನೋವಿಜ್ಞಾನ, ಪತ್ರಿಕೋದ್ಯಮ (Journalism), ವಿಶೇಷ ತನಿಖಾ ಪತ್ರಿಕೋದ್ಯಮ, ಗಣಿಗಾರಿಕೆ, ತೈಲ ಮತ್ತು ಪುರಾತತ್ವ ಕ್ಷೇತ್ರಗಳಲ್ಲಿ ಯಶಸ್ಸು ಇವರದ್ದಾಗುತ್ತದೆ. ಇದರೊಂದಿಗೆ ವೈದ್ಯರು, ಪರಿಸರ ತಜ್ಞರು, ಎಂಜಿನಿಯರ್ಸ್, ನಾವಿಕರು, ಮಾರುಕಟ್ಟೆ ವಿಶ್ಲೇಷಕರು, ರೋಗ ಶಾಸ್ತ್ರಜ್ಞರು, ಸೈನಿಕರು ಮುಂತಾದ ಅಸಾಧಾರಣ ಕ್ಷೇತ್ರಗಳಲ್ಲಿ ಮೈಲುಗಲ್ಲು (Milestone) ನಿರ್ಮಿಸುತ್ತಾರೆ.
ಧನು (Sagittarius )
ಮಧ್ಯಮ ಮತ್ತು ಆಧ್ಯಾತ್ಮಿಕದೆಡೆಗೆ (Spirituality) ಇವರಿಗೆ ಒಲವಿದೆ. ಧನು ರಾಶಿ ಚಿಹ್ನೆಯ ಹೆಚ್ಚಿನ ಜನರು ಸರ್ಕಾರಿ ಸೇವೆಗಳಲ್ಲಿ ಯಶಸ್ಸನ್ನು ಸಾಧಿಸುತ್ತಾರೆ ಮತ್ತು ನ್ಯಾಯಾಧೀಶರು, ವಕೀಲರು, ಶಿಕ್ಷಕರು, ಜ್ಯೋತಿಷಿ, ಶಿಕ್ಷಣ ತಜ್ಞರು, ಬರಹಗಾರ, ರಾಜಕಾರಣಿ, ಭಾಷಣಕಾರರು, ಧಾರ್ಮಿಕ ಶಿಕ್ಷಕರು, ಬೋಧಕರು ಇತ್ಯಾದಿ ಉದ್ಯೋಗ ಆರಿಸಿಕೊಳ್ಳುತ್ತಾರೆ.
ಈ ರಾಶಿಗಳು ಯಾವಾಗಲೂ Panic Modeನಲ್ಲೇ ಇರುತ್ತವೆ!
ಮಕರ (Capricorn)
ತುಂಬಾ ಶ್ರದ್ಧೆಯಿಂದ ಉದ್ಯೋಗ ಮಾಡುತ್ತಾರೆ ಈ ರಾಶಿಯವರು. ತಮ್ಮ ಸಂಬಂಧಗಳನ್ನು ಮತ್ತು ವೈಯಕ್ತಿಕ ಜೀವನವನ್ನು ಸ್ವಲ್ಪ ಇಗ್ನೋರ್ ಮಾಡುತ್ತಾರೆ. ಸಮಯ ಮತ್ತು ಹಣವನ್ನು ಹೇಗೆ ಚೆನ್ನಾಗಿ ಬಳಸಬೇಕೆಂದು ಇವರಿಗೆ ಗೊತ್ತು. ಆದ್ದರಿಂದ ಕಾನೂನು ಹಣಕಾಸು, ಬ್ಯಾಂಕಿಂಗ್ (Banking), ನಿರ್ವಹಣೆ, ಬರವಣಿಗೆ, ಮತ್ತು ಆಡಳಿತವು ಅವರ ವಿಶ್ಲೇಷಣಾತ್ಮಕ ಮತ್ತು ಜಿಜ್ಞಾಸೆಯ ಮನಸ್ಸು ಮತ್ತು ನಿರ್ವಹಣಾ ಕೌಶಲ್ಯದಿಂದ (Management Skill) ಅವರಿಗೆ ಉತ್ತಮ ವೃತ್ತಿ ಆಯ್ಕೆಗಳಾಗಿವೆ. ಅವರು ವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಉಜ್ವಲ ವೃತ್ತಿಜೀವನ ನಡೆಸಬಹುದು. ಮಾಧ್ಯಮ, ಜಾಹೀರಾತು, ಕಲೆ ಇತ್ಯಾದಿ ಸೃಜನಶೀಲ ಕ್ಷೇತ್ರಗಳಲ್ಲಿಯೂ ಸಹ ಇವರಿಗೆ ಲಕ್ ತರುತ್ತೆ.
ಕುಂಭ (Aquarius)
ವ್ಯಾಪಾರ ಉದ್ದೇಶಗಳಿಗಾಗಿ ತಮ್ಮ ಕಾಲ್ಪನಿಕ ಕೌಶಲ್ಯಗಳನ್ನು ಬಳಸುವ ಇವರು ಉತ್ಸಾಹದಿಂದ ಕೆಲಸ ಮಾಡುತ್ತಾರೆ. ಆ್ಯಕ್ಟಿಂಗ್, ವ್ರೈಟಿಂಗ್, ಟೀಚಿಂಗ್, ಛಾಯಾಗ್ರಹಣ (Photography) ಅಥವಾ ವಿಮಾನ ನಿರ್ವಾಹಕರಾಗಿ ಕೆಲಸ ಮಾಡಿದರೆ ಇವರಿಗೆ ಶುಭ. ಯಾವುದೇ ಕಠಿಣ ಮಾರ್ಗಸೂಚಿಗಳಿಲ್ಲದೆ ತಮ್ಮ ಯೋಚನೆಗಳನ್ನು ವ್ಯಕ್ತಪಡಿಸಲು ಮತ್ತು ಅನುಮಾನಗಳನ್ನು ಮುಕ್ತವಾಗಿ ಪರಿಹರಿಸುತ್ತಾರೆ. ತಮ್ಮ ಪ್ರತಿಭೆ (Talent) ವ್ಯಕ್ತಪಡಿಸಲು ಅವಕಾಶ ನೀಡಿದರೆ, ಅವರು ಗಮನಾರ್ಹ ಯಶಸ್ಸನ್ನು ಸಾಧಿಸಬಹುದು.
ಮೀನ (Pisces)
ಪರಿಪೂರ್ಣತೆಯಿಂದ ತಮಗೆ ಕೊಟ್ಟ ಹೊಣೆ ಮುಗಿಸುತ್ತಾರೆ. ಅವರ ಬಹುಮುಖತೆಯನ್ನು ಪ್ರದರ್ಶಿಸುವ ಅವಕಾಶ ಪಡೆಯುತ್ತಾರೆ. ಈ ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡಲು ನಿರಂತರವಾಗಿ ಯತ್ನಿಸುತ್ತಾರೆ. ದತ್ತಿ ಕಾರ್ಯಗಳು (Charity Works) ಮತ್ತು ಲೋಕೋಪಕಾರಿ ಚಟುವಟಿಕೆಗಳತ್ತ ಒಲವು ಹೆಚ್ಚು. ಸಂಗೀತಗಾರರಾಗಿ ಮನೋರಂಜನಾ ಕ್ಷೇತ್ರದಲ್ಲಿ (Entertainment Sector) ಉತ್ತಮ ಪ್ರದರ್ಶನ ನೀಡುತ್ತಾರೆ. ಅದರಿಂದಾನೇ ಹೊಗಳಿಸಿಕೊಳ್ಳುತ್ತಾರೆ.