Zodiac Signs: ಈ ರಾಶಿಗಳ ಜನ ಹಣವಿಲ್ಲದಿದ್ದಾಗ ತಲೆ ಕೆಟ್ಟವರಂತೆ ಆಡ್ತಾರೆ!

ಹಣವಿದ್ದರೆ ಅದೇನೋ ಒಂದು ರೀತಿಯ ಧೈರ್ಯ ಜತೆಯಾಗುವುದು ನಿಜ. ಆದರೆ, ಹಣವಿಲ್ಲದಿರುವಾಗಲೂ ಆತ್ಮಸ್ಥೈರ್ಯದಿಂದ ಇರುವುದು ನಿಜವಾದ ಸಾಮರ್ಥ್ಯವನ್ನು ತೋರುತ್ತದೆ. ಕೆಲವು ರಾಶಿಗಳ ಜನ ಹಣವಿಲ್ಲದ ಸನ್ನಿವೇಶಗಳಲ್ಲಿ ತೀರ ಕುಗ್ಗುತ್ತಾರೆ, ಅತೀವ ಅಭದ್ರತೆ ಹೊಂದುತ್ತಾರೆ.
 

These people feel insecure when they are in money shortage

ಮನುಷ್ಯನ ನಿಜವಾದ ಸಾಮರ್ಥ್ಯ ಕಷ್ಟದ ಸಮಯದಲ್ಲಿ ಆತ ಹೇಗೆ ವರ್ತಿಸುತ್ತಾನೆ ಎನ್ನುವುದರ ಮೇಲಿದೆ. ಕಷ್ಟವೆಂದರೆ, ಇಲ್ಲಿ ಆರ್ಥಿಕ ಸಂಕಷ್ಟ ಎಂದು ಅರ್ಥ ಮಾಡಿಕೊಳ್ಳಬಹುದು. ಹಣಕಾಸಿನ ಮುಗ್ಗಟ್ಟು ಎಲ್ಲರಿಗೂ ಒಂದಲ್ಲ ಒಂದು ಸಮಯದಲ್ಲಿ ಎದುರಾಗುತ್ತದೆ. ಸಾಮಾನ್ಯ ನೌಕರರಿಂದ ಹಿಡಿದು, ಶ್ರೀಮಂತ ಉದ್ಯಮಿಯವರೆಗೂ ಯಾವಾಗಲಾರದೊಮ್ಮೆ ಆರ್ಥಿಕ ಸಮಸ್ಯೆ ಎದುರಿಸುತ್ತಾರೆ. ನಾವೆಲ್ಲರೂ ನಮ್ಮ ತಿಂಗಳ ಬಜೆಟ್‌ ಬಗ್ಗೆ ಅಂದಾಜು ಹೊಂದಿರುತ್ತೇವೆ. ಇಷ್ಟು ವೆಚ್ಚವಾಗುತ್ತದೆ ಎನ್ನುವ ಲೆಕ್ಕಾಚಾರ ಇರುತ್ತದೆ. ಅನಿರೀಕ್ಷಿತ ಆಘಾತವಾದರೆ ಹಣಕಾಸು ಸಂಕಷ್ಟ ಎದುರಾಗುತ್ತದೆ. ಆದರೆ, ಇದೂ ಸಹ ಮುಂದೊಂದು ದಿನ ಸರಿ ಹೋಗುತ್ತದೆ. ಹಾಗೆಯೇ, ವ್ಯಾಪಾರದಲ್ಲಿ ನಷ್ಟ ಅನುಭವಿಸಿ, ತೀರ ಪಾತಾಳಕ್ಕಿಳಿದು ಹೋದವರು ಸಹ ಮುಂದೊಂದು ದಿನ ಆರ್ಥಿಕ ಸಬಲತೆ ಕಾಣಬಲ್ಲರು. ಆ ಸಮಯದಲ್ಲಿ ಜಾಣತನದಿಂದ ನಡೆದುಕೊಳ್ಳುವುದು, ಸಂಯಮ ಕಾಯ್ದುಕೊಳ್ಳುವುದು ಅತಿ ಮುಖ್ಯ. ಕೆಲವರಿಗೆ ಆ ತಾಳ್ಮೆ ಸಹಜವಾಗಿರುತ್ತದೆ. ಆದರೆ, ಕೆಲವು ರಾಶಿಯ ಜನರಿಗೆ ತಮ್ಮ ಬಳಿ ಸಾಕಷ್ಟು ಹಣವಿಲ್ಲದೆ ಹೋದಾಗ ಅತಿಯಾದ ಅಭದ್ರತೆ ಹೊಂದುತ್ತಾರೆ. ಹಣವಿಲ್ಲದ ಪರಿಸ್ಥಿತಿಗೆ ಹೊಂದಿಕೊಳ್ಳುವುದಿಲ್ಲ. ಹಣವಿದ್ದಾಗ ಭದ್ರತೆ ಅನುಭವಿಸುತ್ತಾರೆ. ಆದಾಯದಲ್ಲಿ ಚೂರೇ ಚೂರು ಕಡಿಮೆಯಾದರೂ ಅವರು ತೀವ್ರವಾದ ಬೇಗುದಿಗೆ ಬಿದ್ದುಬಿಡುತ್ತಾರೆ. ಅಂತಹ ಕೆಲವು ರಾಶಿಗಳು ಯಾವುವು ಎಂದು ನೋಡಿಕೊಳ್ಳಿ. 

•    ಮೇಷ (Aries)
ಹಣವಿದ್ದಾಗ (Money) ಬೇಕಾಬಿಟ್ಟಿ ಖರ್ಚು ಮಾಡುವುದರಲ್ಲಿ ಮೇಷ ರಾಶಿಯವರು ಎತ್ತಿದ ಕೈ. ದುಬಾರಿ (Expensive) ವಸ್ತುಗಳನ್ನು ಕೊಂಡುಕೊಳ್ಳುವುದು, ಅದ್ದೂರಿ (Lavish) ಎಂಬಂತೆ ವೆಚ್ಚ (Seend) ಮಾಡುವುದು ಇವರಿಗೆ ಇಷ್ಟ. ತಮ್ಮ ಬಳಿ ಹಣವಿದ್ದಾಗ ಇವರಿಗೆ ಎಲ್ಲವೂ ಬೇಕು ಎಂದೆನಿಸುತ್ತದೆ. ಅವಕಾಶ ಸಿಕ್ಕಾಗ ಎಷ್ಟೇ ವೆಚ್ಚವಾದರೂ ಚಿಂತೆ ಮಾಡದೆ ವಸ್ತುಗಳನ್ನು ಖರೀದಿ ಮಾಡುತ್ತಾರೆ. ಹಣವನ್ನು ಖರ್ಚು ಮಾಡುವುದು ಎಂದರೆ ಇವರಿಗೆ ಭಾರೀ ಇಷ್ಟ. ಹೀಗಾಗಿ, ಎಂದಾದರೊಮ್ಮೆ ಹಣದ ಕೊರತೆಯಿದ್ದಾಗ ಭಾರೀ ತಳಮಳಕ್ಕೀಡಾಗುತ್ತಾರೆ. ಇವರ ಮನಸ್ಥಿತಿ (Mood) ಅಲ್ಲೋಲಕಲ್ಲೋಲವಾಗುತ್ತದೆ. ಇದು ಕೇವಲ ಅವರ ಮೂಡಿನ ಮೇಲೆ ಮಾತ್ರವಲ್ಲ, ಇತರರ ಮೂಡನ್ನೂ ಹಾಳು ಮಾಡುವಷ್ಟಿರುತ್ತದೆ. ನೆಗೆಟಿವ್‌ (Negative) ಆಗಿ ವರ್ತಿಸಿ, ತಮ್ಮ ಸುತ್ತಲಿನವರ ಮೂಡನ್ನೂ ಹಾಳು ಮಾಡುತ್ತಾರೆ. ಒತ್ತಡಕ್ಕೀಡಾಗಿ (Stress) ಎಲ್ಲರಲ್ಲೂ ತಮ್ಮ ಆರ್ಥಿಕ ಸ್ಥಿತಿ (Financial) ಬಗ್ಗೆ ಹೇಳಿಕೊಳ್ಳುತ್ತಾರೆ. ಒಟ್ಟಿನಲ್ಲಿ ಹಣಕಾಸು ಕೊರತೆಯನ್ನು ಚೆನ್ನಾಗಿ ನಿಭಾಯಿಸುವುದಿಲ್ಲ. 

Zodiac Traits: ಈ ರಾಶಿಯವರು ಸ್ವಾರ್ಥಕ್ಕಾಗಿ ಸ್ನೇಹಿತರಿಗೆ ವಂಚಿಸಲೂ ಹೇಸೋರಲ್ಲ!

•    ವೃಷಭ (Taurus)
ವೃಷಭ ರಾಶಿಯ ಜನ ಕೂಡ ಹಣಕಾಸಿನ ಕೊರತೆ (Shortage of Money) ಆದಾಗ ಭಾರೀ ಕಸಿವಿಸಿ ಅನುಭವಿಸುತ್ತಾರೆ. ಈ ರಾಶಿಯ ಪುರುಷರು ತಮ್ಮ ಬಜೆಟ್‌ (Budget) ಬಿಗಿಯಾಗಿದ್ದಾಗ ನೆಮ್ಮದಿಯಿಂದ ಇರುವುದೇ ಇಲ್ಲ. ಆರ್ಥಿಕ ಸಮಸ್ಯೆಯಿಂದ ಕೆಟ್ಟ ಮೂಡಿನಲ್ಲಿದ್ದರೆ ಮನೆಯಲ್ಲಿ ಉಸಿರುಗಟ್ಟಿದ ವಾತಾವರಣ ನಿರ್ಮಿಸುತ್ತಾರೆ. ಇಡೀ ದಿನ ಅದೇ ಗುಂಗಿನಲ್ಲಿ ವರ್ತಿಸುತ್ತಾರೆ. ಯಾರಾದರೂ ಸಹಾಯ ಮಾಡಲು ಮುಂದೆ ಬಂದರೂ ಅದನ್ನು ಒಪ್ಪಿಕೊಳ್ಳುವುದು ಕಡಿಮೆ. ತಮ್ಮನ್ನು ತಾವು ಭಾರೀ ಮೇಲ್ದರ್ಜೆಯ ನಾಗರಿಕ ಎಂದು ಭಾವಿಸಿಕೊಳ್ಳುವುದರಿಂದ ಯಾರದ್ದೇ ಸಹಾಯ ಬೇಕಾಗಿಲ್ಲ ಎಂದುಕೊಳ್ಳುತ್ತಾರೆ. 

•    ಮಕರ (Capricorn)
ಭೂಮಿ (Earth) ತತ್ತ್ವದ ಮಕರ ರಾಶಿಯ ಜನ ತಮ್ಮ ವೃತ್ತಿ ಹಾಗೂ ಎಲ್ಲ ಕೆಲಸಗಳನ್ನೂ ಬಹಳ ಹೆಮ್ಮೆಯಿಂದ ಮಾಡುತ್ತಾರೆ. ಜವಾಬ್ದಾರಿಗಳನ್ನು ನಿಭಾಯಿಸಲು ಮುತುವರ್ಜಿ ತೋರುತ್ತಾರೆ. ಬ್ಯಾಂಕ್‌ ಬ್ಯಾಲೆನ್ಸ್‌ (Bank Balance) ಎಷ್ಟಿದೆ ಎನ್ನುವುದರ ಆಧಾರದ ಮೇಳೆ ತಮ್ಮನ್ನು ತಾವು ಸುರಕ್ಷಿತವೆಂದು ಭಾವಿಸಿಕೊಳ್ಳುತ್ತಾರೆ. ಇವರ ಆತ್ಮವಿಶ್ವಾಸದ (Self Esteem) ತಳಹದಿ ಇರುವುದೇ ಹಣದ ಆಧಾರದ ಮೇಲೆ. ತುಂಬ ಆಳವಾಗಿ ಇವರು ಹಣದೊಂದಿಗೆ ತಮ್ಮತನವನ್ನು ಗುರುತಿಸಿಕೊಳ್ಳುತ್ತಾರೆ. ಹೀಗಾಗಿ, ಹಣವಿಲ್ಲದಿರುವಾಗ ಅತೀವ ಅಭದ್ರತೆ (Insecurity) ಹೊಂದುತ್ತಾರೆ. ಉತ್ತಮ ಬ್ಯಾಂಕ್‌ ಬ್ಯಾಲೆನ್ಸ್‌ ಇಲ್ಲದಿದ್ದರೆ ತಮ್ಮನ್ನು ವೇಸ್ಟ್‌ ಬಾಡಿ ಎಂದುಕೊಂಡು ಕುಗ್ಗುತ್ತಾರೆ.

Zodiac Sign: ಅನಾರೋಗ್ಯವೂ ಈ ರಾಶಿ ಜನರಿಗೆ ಸಂಗಾತಿ ಗಮನ ಸೆಳೆಯೋ ಮಾರ್ಗ

Latest Videos
Follow Us:
Download App:
  • android
  • ios