Zodiac Traits: ಈ ರಾಶಿಯವರು ಸ್ವಾರ್ಥಕ್ಕಾಗಿ ಸ್ನೇಹಿತರಿಗೆ ವಂಚಿಸಲೂ ಹೇಸೋರಲ್ಲ!

12 ರಾಶಿಗಳಲ್ಲಿ ಈ ಮೂರು ರಾಶಿಯ ಜನರು ಹೆಚ್ಚು ಸ್ವಾರ್ಥಿಗಳಾಗಿದ್ದಾರೆ. ಯಶಸ್ಸಿನ ಬೆನ್ನು ಬಿದ್ದಾಗ ಅವರಲ್ಲಿ ಮಹತ್ವಾಕಾಂಕ್ಷೆ ಹೆಚ್ಚಿ, ಯಾರಿಗಾದರೂ ವಂಚಿಸಬೇಕಾಗಿ ಬಂದರೂ ಹಿಂದೆ ಮುಂದೆ ನೋಡೋರಲ್ಲ. ಈ ಸಂದರ್ಭದಲ್ಲಿ ತಮ್ಮ ಆಪ್ತರಿಗೆ ಮೋಸವಾಗುತ್ತದೆ ಎಂದರೂ, ಅದಕ್ಕಿಂತ ತಮ್ಮ ಸ್ವಾರ್ಥವನ್ನೇ ಹೆಚ್ಚೆಂದು ಪರಿಗಣಿಸುವವರಿವರು. 

People of these 3 zodiac signs are the most mean can cheat anyone skr

ಜ್ಯೋತಿಷ್ಯದ ಪ್ರಕಾರ, ಪ್ರತಿಯೊಂದು ರಾಶಿಚಕ್ರವು ತನ್ನದೇ ಆದ ವಿಭಿನ್ನ ಸ್ವಭಾವವನ್ನು ಹೊಂದಿರುತ್ತದೆ. ಇದರ ಆಧಾರದ ಮೇಲೆ, ಯಾವುದೇ ವ್ಯಕ್ತಿಯ ಸ್ವಭಾವ ಮತ್ತು ವ್ಯಕ್ತಿತ್ವವನ್ನು ಕಂಡುಹಿಡಿಯಬಹುದು. 12 ರಾಶಿಚಕ್ರದ ಚಿಹ್ನೆಗಳಲ್ಲಿ, ಮೂರು ರಾಶಿಚಕ್ರ ಚಿಹ್ನೆಗಳ ಜನರನ್ನು ತುಂಬಾ ನೀಚ ಎಂದು ಪರಿಗಣಿಸಲಾಗುತ್ತದೆ. ಈ ರಾಶಿಚಕ್ರದ ಜನರು ಯಾರೊಬ್ಬರಿಂದ ಕೆಲಸವನ್ನು ಮಾಡಿಸಿಕೊಳ್ಳುವುದರಲ್ಲಿ ನಿಪುಣರು. ಅಷ್ಟೇ ಅಲ್ಲ, ತಾವು ಗೆಲುವಿನ ಏಣಿ ಹತ್ತಲು ಸ್ವಂತದವರನ್ನೇ ಏಣಿ ಮಾಡಿಕೊಳ್ಳಬೇಕೆಂದರೂ ಅವರನ್ನು ಕೆಳ ತಳ್ಳಿ ಅವರ ಮೇಲೇರುವಂಥ ಸ್ವಾರ್ಥತೆ ಇವರದು. ಹಾಗಾಗಿ, ತಮ್ಮ ಗೆಲುವಿಗಾಗಿ, ಆಪ್ತರು, ಸ್ನೇಹಿತರಿಗೆ ವಂಚಿಸಲೂ ಹಿಂಜರಿಯುವವರು ಇವರಲ್ಲ. ಹಾಗಂಥ ಇವರನ್ನು ಕೆಟ್ಟವರೆಂದು ಬೋರ್ಡ್ ಹಾಕಲಾಗದು. ಎಲ್ಲರಲ್ಲೂ ಸ್ವಾರ್ಥ ಇರುತ್ತದೆ. ಇವರಲ್ಲಿ ಕೊಂಚ ಜಾಸ್ತಿ ಇರುತ್ತದೆ ಅಷ್ಟೇ.. ಅಲ್ಲದೆ ಚಿಹ್ನೆಗಳನ್ನು ಹೊಂದಿರುವ ಪ್ರತಿಯೊಬ್ಬರೂ ಮೋಸ ಮಾಡುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಈ ಮೂರು ಚಿಹ್ನೆಗಳು ಕೇವಲ ಒಲವು-ಅಶಕ್ತಗೊಂಡಾಗ ಅಥವಾ ತಪ್ಪು ದಾರಿಯಲ್ಲಿ ನಡೆದಾಗ-ಸಾಮಾನ್ಯವಾಗಿ ವಿಶ್ವಾಸಾರ್ಹವಲ್ಲದ ನಡವಳಿಕೆಯನ್ನು ಪ್ರದರ್ಶಿಸುತ್ತವೆ ಅಷ್ಟೇ.

ಇಂಥ ಸ್ವಾರ್ಥಿ ರಾಶಿಚಕ್ರಗಳು ಯಾವೆಲ್ಲ ನೋಡೋಣ. 

ಮಿಥುನ ರಾಶಿ(Gemini)
ಈ ರಾಶಿಯ ಜನರು ಮಾತನಾಡುವುದರಲ್ಲಿ ಬಹಳ ಪ್ರವೀಣರು. ಈ ಜನರು ತಮ್ಮ ಬಗ್ಗೆ ಯಾರಾದರೂ ಮಾತಾಡುತ್ತಿದ್ದರೆ ಮಾತ್ರ ಚೆನ್ನಾಗಿ ಕೇಳಲು ಇಷ್ಟಪಡುತ್ತಾರೆ. ವಾದಗಳಲ್ಲಿ, ಅವರು ಜನರ ಮೇಲೆ ಪ್ರಾಬಲ್ಯ ಸಾಧಿಸಲು ಬಯಸುತ್ತಾರೆ. ಅವರ ಮಾತನ್ನು ಕೇಳದಿದ್ದರೆ, ಈ ಜನರು ಸ್ನೇಹವನ್ನು ಮುರಿಯಲು ಸ್ವಲ್ಪವೂ ವಿಳಂಬ ಮಾಡುವುದಿಲ್ಲ. ಈ ಜನರಿಗೆ, ಆತ್ಮ ಗೌರವವು ಅತ್ಯಂತ ಮುಖ್ಯವಾದ ವಿಷಯವಾಗಿದೆ. ಇವರು ತಾವು ಹೇಳಿದ ಮಾತನ್ನು ಸಮರ್ಥನೆ ಮಾಡಲು ಸತ್ಯವನ್ನು ವಿರೂಪಗೊಳಿಸಲೂ ಹಿಂದು ಮುಂದು ನೋಡುವುದಿಲ್ಲ. ಅಲ್ಲದೆ, ಇವರು ಎರಡು ಮುಖವಾಡವಾಗಿರುವ ಸಾಧ್ಯತೆ ಹೆಚ್ಚು. ಒಬ್ಬರನ್ನು ಮತ್ತೊಬ್ಬರ ಮೇಲೆ ಎತ್ತಿ ಕಟ್ಟುವ ಪ್ರವೃತ್ತಿಯೂ ಇವರಲ್ಲಿ ಹೆಚ್ಚು. 

ಋಷಿ ಪಂಚಮಿಯಿಂದ ನವರಾತ್ರಿವರೆಗೆ.. ಸೆಪ್ಟೆಂಬರ್‌ನ ವ್ರತ, ಹಬ್ಬಹರಿದಿನಗಳು ಯಾವೆಲ್ಲ?

ವೃಶ್ಚಿಕ ರಾಶಿ(Scorpio)
ಈ ರಾಶಿಚಕ್ರದ ಜನರು ಯಾವಾಗಲೂ ಬಹಳ ಮಹತ್ವಾಕಾಂಕ್ಷೆಯವರಾಗಿದ್ದಾರೆ ಮತ್ತು ಮುಂದೆ ಬರಲು ಯಾರನ್ನಾದರೂ ಕೆಳಗಿಳಿಸಲೂ ಸಿದ್ಧರಾಗಿದ್ದಾರೆ. ಈ ಜನರು ಎಷ್ಟೇ ಒಳ್ಳೆಯ ಸ್ನೇಹಿತರಾಗಿದ್ದರೂ ಅವರ ಪ್ರಗತಿಯ ಹಾದಿಯಲ್ಲಿ ಯಾರೂ ಅಡ್ಡಿಯಾಗಲು ಬಿಡುವುದಿಲ್ಲ. ಈ ಜನರು ತಮ್ಮ ಮನಸ್ಸಿನೊಳಗಿರುವುದನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಹಾಗಾಗಿ, ಅವರೇನು ಕುಟಿಲ ತಂತ್ರ ಹೆಣೆಯುತ್ತಿದ್ದಾರೆಂಬುದು ಯಾರಿಗೂ ತಿಳಿಯುವುದಿಲ್ಲ. ಅಧಿಕಾರ ಅನುಭವಿಸುವುದು ಇವರಿಗೆ ಅತ್ಯಂತ ಖುಷಿ ನೀಡುತ್ತದೆ. ಅದಕ್ಕಾಗಿ ಬೇಕಾದಂತೆ ಛಾತಿ ಬೆಳೆಸಿಕೊಳ್ಳುತ್ತಾರೆ. ಮತ್ತು ಅಧಿಕಾರ ಪಡೆಯುವ ಉದ್ದೇಶದಿಂದ ವಂಚನೆ ಮಾಡಬೇಕಾಗಿ ಬಂದರೂ ಮುಂದುವರಿಯುತ್ತಾರೆ. 

ಕನ್ಯಾ ರಾಶಿ(Virgo)
ಈ ರಾಶಿಚಕ್ರದ ಜನರು ಹಣದ ವ್ಯವಹಾರದಲ್ಲಿ ತುಂಬಾ ನೀಚರು. ಅವರು ಹಣದ ವಿಷಯದಲ್ಲಿ ಯಾರಿಗೂ ಸಹಾಯ ಮಾಡುವುದಿಲ್ಲ. ಈ ಜನರು ಸ್ನೇಹಿತರಿಗೆ ಸಹ ಸಹಾಯ ಮಾಡುವುದರಿಂದ ದೂರ ಸರಿಯುತ್ತಾರೆ. ಯಾರಾದರೂ ತಮ್ಮ ಹೃದಯವನ್ನು ನೋಯಿಸಿದರೆ, ಕನ್ಯಾ ರಾಶಿಯವರು ಅವರನ್ನು ಸಾರ್ವಜನಿಕವಾಗಿ ನಿಂದಿಸುವ ಮೂಲಕ ಸೇಡು ತೀರಿಸಿಕೊಳ್ಳುತ್ತಾರೆ. ಈ ಜನರು ಹಣದ ವಿಷಯದಲ್ಲೂ ತುಂಬಾ ನೀಚರು. ಎಷ್ಟು ಸಾಧ್ಯವೋ ಅಷ್ಟನ್ನು ಎಲ್ಲೆಲ್ಲಿ ಸಿಗುತ್ತದೋ ಅಲ್ಲಿಂದ ಪೀಕಿಸಲು ನೋಡುತ್ತಾರೆ. 

ಬೆರಳು ಈ ರೀತಿ ಇದ್ದರೆ, ವ್ಯವಹಾರದಲ್ಲಿ ಭಾರಿ ನಷ್ಟ ಉಂಟಾಗುತ್ತಂತೆ !

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios