ಸೆಪ್ಟೆಂಬರ್ 4 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀಕೃಷ್ಣ ದೇವಸ್ಥಾನಕ್ಕೆ ಬೇಟಿ ನೀಡಲು ಬಯಸಿದ್ದೀರಾ? ಹಾಗಾದರೆ ಶ್ರೀ ಕೃಷ್ಣನ ಜನ್ಮಸ್ಥಳದ ಮುಥುರಾ ದೇವಸ್ಥಾನ ಸೇರಿದಂತೆ ಪ್ರಮುಖ ಐದು ದೇವಸ್ಥಾನಗಳ ವಿವರ ಇಲ್ಲಿದೆ.

ಶ್ರೀಕೃಷ್ಣ ಜನ್ಮಾಷ್ಟಮಿಗೆ ಭಾರತ ಸಜ್ಜಾಗಿದೆ. ಸೆಪ್ಟೆಂಬರ್ 4 ರಂದು ಶ್ರೀಕೃಷ್ಣ ಜನ್ಮದಿನವನ್ನು ಜನ್ಮಾಷ್ಟಮಿಯಾಗಿ ಆಚರಿಸಲಾಗುತ್ತದೆ. ಕೃಷ್ಣ ಜನ್ಮಾಷ್ಟಮಿಗೆ ಕೃಷ್ಣನ ಕೃಪೆಗೆ ಪಾತ್ರರಾಗಲು ಶ್ರೀಕೃಷ್ಣ ದೇವಸ್ಥಾನಗಳಿಗೆ ಬೇಟಿ ನೀಡುವುದು ಸಾಮಾನ್ಯ. ಶ್ರೀಕೃಷ್ಣನ ಜನ್ಮಸ್ಥಳದಲ್ಲಿರುವ ಮಥುರಾ ದೇವಸ್ಥಾನ ಸೇರಿದಂತೆ ಪ್ರಮುಖ ಐದು ಕೃಷ್ಣ ದೇವಸ್ಥಾನಗಳು ಅತ್ಯಂತ ಪ್ರಸಿದ್ಧವಾಗಿದೆ. ಶ್ರೀಕೃಷ್ಣ ಜನ್ಮಾನಷ್ಟಮಿ ದಿನ ಕೃಷ್ಣ ದೇವಸ್ಥಾನಗಳ ಬೇಟಿಗೆ ಬಯಸಿದ್ದರೆ ಇಲ್ಲಿ ಐದು ದೇವಸ್ಥಾನಗಳ ಸಂಪೂರ್ಣ ವಿವರ ನೀಡಲಾಗಿದೆ.

ಶ್ರೀಕೃಷ್ಣ ಜನ್ಮಭೂಮಿ, ಮಥುರಾ

ಶ್ರೀಕೃಷ್ಣ ಜನ್ಮಸ್ಥಳ ಮಥುರಾದಲ್ಲಿ ಪವಿತ್ರ ಕೃಷ್ಣದೇವಸ್ಥಾನವಿದೆ. ಈಗಾಗಲೇ ಮಥುರಾದಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿದೆ. ಮಥುರಾ ಶ್ರೀಷ್ಣ ಜನ್ಮಭೂಮಿಯ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆಯಲಿದೆ. ಭಕ್ತಿ ಸಂಗೀತ, ಅಲಂಕರಾ, ಮಧ್ಯರಾತ್ರಿ ಪೂಜೆಗಳು ನಡೆಯಲಿದೆ. ಮಥುರಾದ ರಸ್ತೆಗಳು ಈಗಾಗಲೇ ಅಲಂಕೃತಗೊಂಡಿದೆ. ಹಬ್ಬದ ವಾತಾವರಣ ನಿರ್ಮಾಣಗೊಂಡಿದೆ.

ಬಾಂಕೆ ಬಿಹಾರಿ ದೇವಸ್ಥಾನ, ವೃಂದಾವನ

ಶ್ರೀ ಕೃಷ್ಣನ ಬಾಲ್ಯದ ದಿನಗಳಲ್ಲಿ ವಂದಾನವ ಅತ್ಯಂತ ಪ್ರಮುಖ ಸ್ಥಾನ ಪಡೆದಿದೆ. ವೃಂದಾವನದಲ್ಲಿರುವ ಬಾಂಕೆ ಬಿಹಾರಿ ದೇವಸ್ಥಾನ ಅತ್ಯಂತ ಪ್ರಸಿದ್ದವಾಗಿದೆ. ಜನ್ಮಾಷ್ಟಮಿಯ ಸಮಯದಲ್ಲಿ ದರ್ಶನ, ಭಕ್ತಿ ಗಾಯನ ಮತ್ತು ಪೂಜೆಗಳು ನಡೆಯುತ್ತವೆ, ಆದರೆ ಹಬ್ಬದ ಆಚರಣೆಯು ಕೇವಲ ದೇವಸ್ಥಾನಕ್ಕೆ ಸೀಮಿತವಾಗಿಲ್ಲ. ದೇವಸ್ಥಾನದ ಸುತ್ತಲಿನ ರಸ್ತೆಗಳು ಯಾತ್ರಿಕರಿಂದ ತುಂಬಿರುತ್ತವೆ

ದ್ವಾರಕಾಧೀಶ ದೇವಸ್ಥಾನ,ದ್ವಾರಕ ಗುಜರಾತ್

ಶ್ರೀಕೃಷ್ಣನ ಅರಮನೆ ಇದ್ದ ನಗರ ದ್ವಾರಕ. ಈ ನಗರದಲ್ಲಿ ದ್ವಾರಕಾಧೀಶ ದೇವಸ್ಥಾನಕ್ಕೆ ಪ್ರತಿ ದಿನ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ದ್ವಾರಕದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ವಿಶೇಷ ಪೂಜೆ ಹಾಗೂ ಭಕ್ತಿ ಪರಂಪರೆ ಕಾರ್ಯಕ್ರಮಗಳು ನಡೆಯಲಿದೆ. ದ್ವಾರಕವು ಕೃಷ್ಣನಿಗೆ ಸಂಬಂಧಿಸಿದ ನಗರಕ್ಕೆ ಭೇಟಿ ನೀಡುವುದರ ಜೊತೆಗೆ ತೀರ್ಥಯಾತ್ರೆಯನ್ನು ನಿರ್ವಹಿಸಲು ಬಯಸುವ ಯಾತ್ರಿಕರಿಗೆ ವಿಶೇಷ ತಾಣವಾಗಿದೆ.

ಪ್ರೇಮ ಮಂದಿರ, ವೃಂದಾವನ

ಪ್ರೇಮ ಮಂದಿರ ಶ್ರೀಕೃಷ್ಣನ ಜೀವನಕ್ಕೆ ಪ್ರಮುಖ ಸಂಬಂಧ ಹೊಂದಿದೆ. ಬಿಳಿ ಅಮೃತಶಿಲೆಯಿಂದ ನಿರ್ಮಿತವಾದ ಈ ದೇವಸ್ಥಾನ ಶ್ರೀಕೃಷ್ಣನ ಜೀವನ ಕತೆ ಚಿತ್ರಿಸುವ ಚಿತ್ರಗಳನ್ನು ಹೊಂದಿದೆ. ಜನ್ಮಾಷ್ಟಮಿಯ ಸಮಯದಲ್ಲಿ, ವಿಶೇಷ ಶೃಂಗಾರ, ಭಜನ, ಭಕ್ತಿ ಕಾರ್ಯಕ್ರಮಗಳು ಮತ್ತು ಅಲಂಕಾರಗಳು ಹಬ್ಬವನ್ನು ಸುಂದರಗೊಳಿಸುತ್ತವೆ.

ಶ್ರೀ ರುಕ್ಮಿಣಿ ದ್ವಾರಕಾಧೀಶ ದೇವಸ್ಥಾನ, ದೆಹಲಿ

ದೆಹಲಿಯಲ್ಲಿರುವ ಇಸ್ಕಾನ್ ಶ್ರೀ ರುಕ್ಮಿಣಿ ದ್ವಾರಕಾಧೀಶ ದೇವಸ್ಥಾನ ಶ್ರೀ ಶ್ರೀ ರುಕ್ಮಿಣಿ ದ್ವಾರಕಾಧೀಶ ಮತ್ತು ಶ್ರೀ ಶ್ರೀ ಜಗನ್ನಾಥ ಬಲದೇವ ಸುಭದ್ರಾ ಮಹಾರಾಣಿಗೆ ಅರ್ಪಿತವಾದ ದೇವಸ್ಥಾನ. ಸೆಪ್ಟೆಂಬರ್ 3 ರಿಂದಲೇ ಈ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆಯಲಿದೆ. ಸೆಪ್ಟೆಂಬರ್ 4ರಂದು ಮಂಗಳ ಆರತಿ, ವಿಶೇಷ ದರ್ಶನ ಮತ್ತು ಕಲಶ ಅಭಿಷೇಕ ನಡೆಯಲಿದೆ.