Asianet Suvarna News Asianet Suvarna News

Astro Policy: ಆರ್ಥಿಕ ಸಮಸ್ಯೆ ನಿವಾರಣೆಗೆ ಈ ಸರಳ ಉಪಾಯ!

Astrology Tips: ಜ್ಯೋತಿಷ್ಯ ಶಾಸ್ತ್ರದಲ್ಲಿ ಆರ್ಥಿಕ ಸಮಸ್ಯೆಯಿಂದ ಮುಕ್ತಿ ಪಡೆಯಲು, ಲಕ್ಷ್ಮಿ ದೇವಿಯ ಕೃಪೆ ಮತ್ತು ಧನ ಸಮೃದ್ಧಿಯನ್ನು ಪಡೆಯಲು  ಅನೇಕ ವಿಚಾರಗಳನ್ನು ತಿಳಿಸಿದ್ದಾರೆ. ಕೆಲವು ಅತ್ಯಂತ ಸರಳ ಉಪಾಯ ಮತ್ತು ಸಲಹೆಗಳನ್ನು ಹೇಳಿದ್ದಾರೆ ಅವುಗಳ ಬಗ್ಗೆ ತಿಳಿಯೋಣ...

Follow these tips for financial difficulties...
Author
Bangalore, First Published Apr 8, 2022, 2:48 PM IST

ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ. ಹಾಗೆಯೇ ಆರ್ಥಿಕ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಲು ಲಕ್ಷ್ಮೀ ದೇವಿಯ ಕೃಪೆ ಪಡೆಯಲು ಕೆಲವು ಸರಳ ಸಲಹೆಗಳನ್ನು ಪಾಲಿಸಿದರೆ ಸಾಕು ಎಂದು ಶಾಸ್ತ್ರ ಹೇಳುತ್ತದೆ. ಆರ್ಥಿಕ ಮುಗ್ಗಟ್ಟು (Economic difficulties) ಯಾರಿಗೆ ತಾನೇ ಕಾಡುವುದಿಲ್ಲ ಹೇಳಿ? ಎಷ್ಟೇ ಹಣವಿದ್ದರೂ (Money) ಒಂದಲ್ಲ ಒಂದು  ಸಮಯದಲ್ಲಿ ಹಣಕ್ಕೆ ತೊಂದರೆಯನ್ನು ಅನುಭವಿಸಿರುತ್ತಾರೆ. ಆರ್ಥಿಕ ಸಮಸ್ಯೆ ಪರಿಹಾರವಾಗಬೇಕೆಂದರೆ ಲಕ್ಷ್ಮಿ ಕೃಪೆ (Blessings) ಸಹ ಇರಬೇಕು. ಹಾಗಾಗಿ ಲಕ್ಷ್ಮಿ ದೇವಿಯ (Goddess lakshmi) ಕೃಪೆ ಪಡೆಯಲು ಕೆಲವಷ್ಟು ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ. ಲಕ್ಷ್ಮಿಯ ಪೂಜೆ ಆರಾಧನೆ ಜತೆಗೆ ಶುಚಿತ್ವದ (Clean) ಕಡೆಗೆ ಗಮನ ಹರಿಸಬೇಕಾಗುತ್ತದೆ. ಸ್ವಚ್ಛತೆ ಇದ್ದಲ್ಲಿ ಲಕ್ಷ್ಮಿ ಇರುತ್ತಾಳೆ ಎಂಬ ಮಾತಿದೆ. ಹಾಗಾದರೆ ಆರ್ಥಿಕ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಲಕ್ಷ್ಮಿ ಕೃಪೆಯನ್ನು ಪಡೆಯಲು ಸರಳವಾಗಿ (Simple) ಏನು ಮಾಡಬೇಕು ಎಂಬುದನ್ನು ತಿಳಿಯೋಣ....

ಹಣ ಹೀಗೆ ಇಟ್ಟುಕೊಳ್ಳಬಾರದು
ಹಣವನ್ನು ಗೌರವದಿಂದ (Respect) ಕಾಣಬೇಕು. ಕೆಲವರು ನೋಟು (note) ಮತ್ತು ನಾಣ್ಯಗಳನ್ನು (Coin) ಬೇಕಾಬಿಟ್ಟಿ ಇಟ್ಟುಕೊಳ್ಳುತ್ತಾರೆ. ಹಣಕ್ಕೆ ಗೌರವ ಕೊಡದೆ ಹೇಗೆ ಬೇಕೋ ಹಾಗೆ ಎಲ್ಲೆಂದರಲ್ಲಿ ಇಟ್ಟುಕೊಂಡಿರುತ್ತಾರೆ. ಹಾಗಾಗಿ ಹಣದ ವಿಷಯದಲ್ಲಿ ಬೇಜವಾಬ್ದಾರಿತನ (Irresponsible) ತೋರಿಸಬಾರದು. ಪರ್ಸ್‌ನಲ್ಲಿ ಮತ್ತು ಚೀಲದಲ್ಲಿ ಅಥವಾ ಮನೆಯಲ್ಲಿ ನೋಟು ಮತ್ತು ನಾಣ್ಯಗಳನ್ನು ನೀಟಾಗಿ ಇಟ್ಟುಕೊಳ್ಳಬೇಕು. ಹೇಗೆ ಬೇಕೋ ಹಾಗೆ ಅವ್ಯವಸ್ಥಿತವಾಗಿ ಇಟ್ಟುಕೊಂಡರೆ ಲಕ್ಷ್ಮೀಯ ಕೋಪಕ್ಕೆ (Anger) ಪಾತ್ರರಾಗಬೇಕಾಗುತ್ತದೆ. ಹಾಗಾಗಿ ಹಣದ ಮೇಲಿರಲಿ ಗೌರವ.

ಇದನ್ನು ಓದಿ: ಈ ಸಂಕೇತಗಳು ಸಿಕ್ಕಿದ್ರೆ ಶುಭದ ಸೂಚನೆ ಎಂದು ತಿಳಿಯಿರಿ!

ಕುಬೇರ ಮೂರ್ತಿ (Kubera idol) ಸ್ಥಾಪಿಸಿ
ಮನೆಯಲ್ಲಿ ಕುಬೇರನ ವಿಗ್ರಹವನ್ನು ಇಟ್ಟುಕೊಂಡಿರುವುದು ಒಳ್ಳೆಯದು.  ಕುಬೇರ ದೇವರು ಹಣ ಮತ್ತು ಸಮೃದ್ಧಿಯ (Prosperity) ದೇವತೆಯಾಗಿದ್ದು, ಧನ ಸಮೃದ್ಧಿಗೆ ಕುಬೇರ ದೇವರ ಕೃಪೆ ಸಹ ಅವಶ್ಯಕವಾಗಿರುತ್ತದೆ. ಹಾಗಾಗಿ ಲಾಕರ್‌ನಲ್ಲಿ (Locker ) ಕುಬೇರ ದೇವರ ಮೂರ್ತಿಯನ್ನು ಇಟ್ಟುಕೊಳ್ಳುವುದು ಶುಭವೆಂದು (Luck) ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಇದಕ್ಕೆ ಹಣವನ್ನು ಆಕರ್ಷಿಸುವ (Attracting ) ಶಕ್ತಿಯೂ ಇದೆ ಎಂದು ಹೇಳಲಾಗುತ್ತದೆ. 

ನಿಮ್ಮ ಪರ್ಸ್ ಹೀಗಿರಲಿ (Purse) 
ಪರ್ಸ್‌ನಲ್ಲಿ ಎಲ್ಲ ವಸ್ತುಗಳನ್ನು ವ್ಯವಸ್ಥಿತವಾಗಿ (Systematically) ಇಟ್ಟುಕೊಳ್ಳಬೇಕು. ನೋಟುಗಳನ್ನು ನೀಟಾಗಿ ಇಟ್ಟಿರಬೇಕು. ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಪರ್ಸ್ ಕ್ಲೀನ್ ಮಾಡಿಕೊಳ್ಳಬೇಕು. ಅದರಲ್ಲಿರುವ ಅನವಶ್ಯಕ ವಸ್ತುಗಳನ್ನು ತೆಗೆದಿಡಬೇಕು. ಇದರಿಂದ ಹೆಚ್ಚು ಧನವನ್ನು ಆಕರ್ಷಿಸಲು ಸಹಾಯವಾಗುತ್ತದೆ. 

ಲಕ್ಷ್ಮೀ ದೇವಿಯ ಫೋಟೊ ಇಟ್ಟುಕೊಳ್ಳಿ (Photo)
ಪರ್ಸ್‌ನಲ್ಲಿ ಲಕ್ಷ್ಮಿ ದೇವಿಯ ಫೋಟೂ ಇಟ್ಟುಕೊಳ್ಳುವುದು ಶುಭ. ಈ ಹಣದ ದೇವತೆಯಾಗಿರುವ ಲಕ್ಷ್ಮಿ ದೇವಿಯ ಚಿಕ್ಕದಾದರೂ ಒಂದು ಫೋಟೋವನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದರಿಂದ ಅನೇಕ ರೀತಿಯಲ್ಲಿ ಆರ್ಥಿಕ ಲಾಭಗಳು ಉಂಟಾಗುತ್ತವೆ.

ಮಹಿಳೆಯರನ್ನು ಗೌರವಿಸಿ
ಸ್ತ್ರೀ (Women) ಸಹ ಲಕ್ಷ್ಮೀದೇವಿಯ ಸ್ವರೂಪವೆಂದು ಹೇಳಲಾಗುತ್ತದೆ. ಹಾಗಾಗಿ ಸ್ತ್ರೀಯರಿಗೆ ಗೌರವ ನೀಡಿದರೆ ಲಕ್ಷ್ಮಿ ಕೃಪೆ ತಾನಾಗಿಯೇ ಸಿಗುತ್ತದೆ. ಹೀಗೆ ಮಾಡುವುದರಿಂದ ಹಣಕ್ಕೆ ಎಂದೂ ಕೊರತೆಯಾಗುವುದಿಲ್ಲ. ಸ್ತ್ರೀಯರಿಗೆ ಗೌರವ ಕೊಡದಿದ್ದರೆ ಲಕ್ಷ್ಮಿಯ ಅವಕೃಪೆಗೆ ಪಾತ್ರರಾಗಬೇಕಾಗುತ್ತದೆ. ಆರ್ಥಿಕ ಸಮಸ್ಯೆಗಳು ಎದುರಾಗುತ್ತವೆ.

ಸ್ವಚ್ಚತೆ (Cleanliness)
ಸ್ವಚ್ಛತೆಯಿದ್ದಲ್ಲಿ ಲಕ್ಷ್ಮಿ ವಾಸವಾಗಿರುತ್ತಾಳೆ. ಹಾಗಾಗಿ ಮನೆಯನ್ನು (Home), ಲಾಕರ್ ಮತ್ತು ಪರ್ಸ್‌ಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು (Clean).  

ಇದನ್ನು ಓದಿ: Chanakya Neeti: ಹೊರಗಿನವರಿಗೆ ಈ ವಿಷಯಗಳ ಬಾಯಿ ಬಿಟ್ಟರೆ ಕೆಟ್ಟಂತೆ!

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios