Asianet Suvarna News Asianet Suvarna News

Chanakya Neeti: ಹೊರಗಿನವರಿಗೆ ಈ ವಿಷಯಗಳ ಬಾಯಿ ಬಿಟ್ಟರೆ ಕೆಟ್ಟಂತೆ!

Chanakya Neeti Shastra: ಚಾಣಕ್ಯ ನೀತಿ ಶಾಸ್ತ್ರದ ಪ್ರಕಾರ ಗೃಹಸ್ಥರಾದವರು ಕೆಲವು ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಕೆಲವು ವಿಚಾರಗಳಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದರಿಂದ ಸಂಬಂಧಗಳು ಮತ್ತು ಜೀವನ ಸುಖ ಸಮೃದ್ಧಿಯಿಂದ ಕೂಡಿರುತ್ತದೆ. ಹಾಗಾದರೆ ಅವು ಯಾವ ವಿಚಾರಗಳು ಎಂಬುದನ್ನು ತಿಳಿಯೋಣ...

Chanakya Neeti Do not disclose these personnel matters with others!
Author
Bangalore, First Published Apr 8, 2022, 11:54 AM IST

ಮಹಾನ್ ವಿದ್ವಾನ್ ಮತ್ತು ಅರ್ಥಶಾಸ್ತ್ರಜ್ಞ ಆಚಾರ್ಯ ಚಾಣಕ್ಯರ (Economist Chanakya) ನೀತಿಶಾಸ್ತ್ರದಲ್ಲಿ ಮನುಷ್ಯನ ಜೀವನದಲ್ಲಿ (Life) ಪಾಲಿಸಬೇಕಾದ ಅನೇಕ ಅಂಶಗಳನ್ನು ಸರಳವಾಗಿ ಮತ್ತು ಸಾಮಾನ್ಯರಿಗೂ ಅರ್ಥವಾಗುವಂತೆ ರೀತಿಯಲ್ಲಿ ತಿಳಿಸಿಕೊಟ್ಟಿದ್ದಾರೆ. ಚಾಣಕ್ಯ ನೀತಿಯನ್ನು ಅನುಸರಿಸಿದರೆ ಜೀವನದ ಎಲ್ಲ ಪಾಠಗಳನ್ನು ಸುಲಭವಾಗಿ ಕಲಿತುಕೊಳ್ಳಬಹುದು. ಗೃಹಸ್ಥಾಶ್ರಮದಲ್ಲಿ ತಿಳಿದುಕೊಳ್ಳಲೇಬೇಕಾದ ಕೆಲವು ವಿಚಾರಗಳನ್ನು ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಹೇಳಿದ್ದಾರೆ. 

ಆಚಾರ್ಯ ಚಾಣಕ್ಯರು ಹೇಳುವ ಪ್ರಕಾರ ಪ್ರತಿ ವ್ಯಕ್ತಿಯ ಜೀವನದಲ್ಲೂ ಸಮಸ್ಯೆಗಳು (Personal Problems) ಎದುರಾಗುವುದು ಸಹಜ. ಚಾಣಕ್ಯ ನೀತಿಯ ಪ್ರಕಾರ ಜೀವನದ ಕೆಲವು ವಿಷಯಗಳನ್ನು ಯಾರ ಬಳಿಯೂ ಹೇಳಿಕೊಳ್ಳಬಾರದು. ಕೆಲವು ವಿಚಾರಗಳು ಗೌಪ್ಯವಾಗಿದ್ದರೇ ಒಳ್ಳೆಯದು. ಅದರಿಂದಲೇ ವ್ಯಕ್ತಿಯ ಗೌರವ ಹೆಚ್ಚುತ್ತದೆ. ಚಾಣಕ್ಯರು ವ್ಯಾವಹಾರಿಕವಾಗಿ ಮತ್ತು ಗೃಹಸ್ಥ ಜೀವನಕ್ಕೆ ಅನುಕೂಲವಾಗುವ ಕೆಲವು ವಿಚಾರಗಳನ್ನು ತಮ್ಮ ನೀತಿ ಶಾಸ್ತ್ರದಲ್ಲಿ ಹೇಳಿದ್ದಾರೆ. ವ್ಯಕ್ತಿಯು ತನ್ನ ಗೃಹಸ್ತ ಜೀವನದಲ್ಲಿ ಕೆಲವು ವಿಚಾರಗಳನ್ನು ಯಾರ ಬಳಿಯೂ ಹೇಳಿಕೊಳ್ಳಬಾರದು ಎಂಬುದನ್ನು ಚಾಣಕ್ಯರು ಹೇಳುತ್ತಾರೆ. ಹಾಗಾದರೆ ಅವು ಯಾವುವು ಎಂಬುದನ್ನು ತಿಳಿಯೋಣ...

ಗೌಪ್ಯವಾಗಿಡಬೇಕು ಏಕೆ?
ಎಲ್ಲರ ಜೀವನದಲ್ಲಿ ಖಾಸಗಿ (Private) ವಿಚಾರಗಳು ಇದ್ದೇ ಇರುತ್ತದೆ. ಅವುಗಳನ್ನು ಇನ್ನೊಬ್ಬರ ಜೊತೆಗೆ ಹಂಚಿಕೊಳ್ಳುವುದು ಎಷ್ಟು ಸರಿ ಎಂಬುದು ಪ್ರಶ್ನೆಯಾಗಿದೆ. ಆದರೆ, ಇಂಥ ವಿಚಾರಗಳನ್ನು ಯಾರಲ್ಲಿಯೂ ಹೇಳಿಕೊಳ್ಳಬಾರದು. ಹಾಗೆ ಹೇಳಿಕೊಳ್ಳುವುದರಿಂದ ಇತರರಿಗೆ ನೋವಾಗಬಹುದು, ತಪ್ಪು (Wrong) ತಿಳಿದುಕೊಳ್ಳಬಹುದು ಅಥವಾ ಹಾಸ್ಯ ಮಾಡಬಹುದು, ಹೇಳಿಕೊಂಡ ವ್ಯಕ್ತಿಯನ್ನು ನೋಡುವ ದೃಷ್ಟಿಕೋನವೂ ಬದಲಾಗಬಹುದು ಎಂಬ ಕಾರಣಕ್ಕೆ ಕೆಲವು ವಿಚಾರಗಳು ಗೌಪ್ಯವಾಗಿರುವುದು ಉತ್ತಮ.

ಆರ್ಥಿಕ ಸ್ಥಿತಿ (Economic Status)
ಚಾಣಕ್ಯರು ಹೇಳುವ ಪ್ರಕಾರ ಯಾವುದೇ ವ್ಯಕ್ತಿಯು ತನ್ನ ಆರ್ಥಿಕ ನಷ್ಟದ (Financial loss) ಬಗ್ಗೆ ಹೊರಗಿನವರ ಬಳಿ ಹೇಳಿಕೊಳ್ಳಬಾರದು. ಹಣಕಾಸಿನ ನಷ್ಟದ ಸ್ಥಿತಿಯನ್ನು (Status) ಹೊರಗಿನವರ ಬಳಿ ಹೇಳಿಕೊಂಡರೆ ಅದಕ್ಕೆ ಸಹಾಯ (Help) ಸಿಗುವ ಬದಲಾಗಿ ನಿರಾಸೆ ಸಿಗಬಹುದು. ಅಷ್ಟೇ ಅಲ್ಲದೆ ಅಂತಹ ವ್ಯಕ್ತಿಗಳಿಂದ ಅಂತರವನ್ನು (Gap) ಕಾಯ್ದುಕೊಳ್ಳುತ್ತಾರೆ. ಹಾಗಾಗಿ ಆರ್ಥಿಕ ಸ್ಥಿತಿಯ ಬಗ್ಗೆ ಮನೆಯವರನ್ನು ಹೊರತುಪಡಿಸಿ ಇತರರೊಂದಿಗೆ ಹೇಳಿಕೊಳ್ಳುವುದು ಒಳ್ಳೆಯದಲ್ಲ.

ಇದನ್ನು ಓದಿ: ವೀಳ್ಯದೆಲೆ ಹೀಗೆ ಬಳಸಿದ್ರೆ ಹಣ ನಿಮ್ಮತ್ತ ಹರಿದು ಬರುತ್ತದೆ..

ವೈವಾಹಿಕ ಕಲಹ (Marital discord)
ಗೃಹಸ್ಥ ಜೀವನದಲ್ಲಿ ವ್ಯಕ್ತಿ ಸಂಗಾತಿಗೆ ಸಂಬಂಧಿಸಿದ ವಿಷಯಗಳನ್ನು ಇತರರೊಂದಿಗೆ ಹೇಳಿಕೊಳ್ಳಬಾರದು. ಅವುಗಳನ್ನು ಗೌಪ್ಯವಾಗಿಯೇ (Privacy) ಇಟ್ಟುಕೊಂಡಿರಬೇಕು. ಪತಿ ಅಥವಾ ಪತ್ನಿ (Husband or wife) ತಮ್ಮ ನಡುವೆ ನಡೆದ ಜಗಳ ಅಥವಾ ವಿವಾದಗಳನ್ನು (Dispute) ಅಥವಾ ಕೊರತೆಯನ್ನು ಇನ್ನೊಬ್ಬರೊಂದಿಗೆ ಹೇಳಿಕೊಂಡರೆ, ಆ ವಿಷಯವನ್ನು ಹೊರಗಿನವರು ಹಾಸ್ಯ (Comedy) ಮಾಡುತ್ತಾರೆ. ಅಷ್ಟೇ ಅಲ್ಲದೆ ಮುಂದುವರಿದು ಇಬ್ಬರ ಸಂಬಂಧದಲ್ಲಿ ಬಿರುಕು ಮೂಡುವ ಸಾಧ್ಯತೆಗಳು ಹೆಚ್ಚಿರುತ್ತವೆ. ಹಾಗಾಗಿ ಪತಿ - ಪತ್ನಿಯರು ತಮ್ಮ ನಡುವಿನ ವಿಚಾರಗಳನ್ನು ಹೊರಗಿನವರೊಂದಿಗೆ ಹೇಳಿಕೊಳ್ಳಬಾರದು.

ಅವಮಾನದ ಬಗ್ಗೆ 
ಚಾಣಕ್ಯರ ಹೇಳುವ ಪ್ರಕಾರ ಒಬ್ಬ ವ್ಯಕ್ತಿಯಿಂದ ಆದ ಅವಮಾನದ ಬಗ್ಗೆ ಹೊರಗಿನವರೊಂದಿಗೆ ಹೇಳಿಕೊಳ್ಳಬಾರದು. ಅಂತಹ ಘಟನೆಗಳನ್ನು ಇತರರೊಂದಿಗೆ ಹೇಳಿಕೊಳ್ಳುವುದರಿಂದ ಆ ವ್ಯಕ್ತಿಯ ಮೇಲಿರುವ ಗೌರವ ಕಡಿಮೆಯಾಗುತ್ತದೆ.  

ಇದನ್ನು ಓದಿ: ಈ ಸಂಕೇತಗಳು ಸಿಕ್ಕಿದ್ರೆ ಶುಭದ ಸೂಚನೆ ಎಂದು ತಿಳಿಯಿರಿ!

ಸಮಸ್ಯೆಗಳ ಹೇಳಿಕೊಳ್ಳದಿರಿ
ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಹೇಳುವ ಪ್ರಕಾರ, ನಮ್ಮ ಸಮಸ್ಯೆಗಳನ್ನು ನಮ್ಮಲ್ಲಿಯೇ ಇಟ್ಟುಕೊಳ್ಳಬೇಕು. ಅದನ್ನು ಇತರರೊಂದಿಗೆ ಹಂಚಿಕೊಳ್ಳಬಾರದು. ಯಾಕಂದರೆ ಹೊರಗಿನವರು ಸದಾ ಎದುರಿಗೆ ಒಳ್ಳೆಯವರಂತೆ ನಟಿಸುತ್ತಾರೆ. ನಾವು ಅದೇ ಭ್ರಮೆಯಲ್ಲಿ ನಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಬಿಡುತ್ತೇವೆ. ಅದನ್ನು ಅವರು ಬೇರೆಯವರೊಂದಿಗೆ ಹೇಳಿಕೊಂಡು ಹಾಸ್ಯ ಮಾಡುತ್ತಾರೆ. ಹಾಗಾಗಿ ಸಮಸ್ಯೆಗಳನ್ನು ಇತರರೊಂದಿಗೆ ಹಂಚಿಕೊಳ್ಳಬಾರದು. ಇತರರ ಸಮಸ್ಯೆಗಳು ವ್ಯಕ್ತಿಗಳ ಮೇಲೆ ಯಾವುದೇ ಪ್ರಭಾವವನ್ನು ಬೀರುವುದಿಲ್ಲ. ಹಾಗಾಗಿ ನಮ್ಮ ಸಮಸ್ಯೆಗಳನ್ನು ನಾವೇ ಪರಿಹರಿಸಿಕೊಳ್ಳುವುದು ಉತ್ತಮ ಎಂಬ ಕಿವಿಮಾತನ್ನು ಚಾಣಕ್ಯ ಹೇಳಿದ್ದಾರೆ.

Follow Us:
Download App:
  • android
  • ios