ಈ ಸಂಕೇತಗಳು ಸಿಕ್ಕಿದ್ರೆ ಶುಭದ ಸೂಚನೆ ಎಂದು ತಿಳಿಯಿರಿ!

ಪ್ರತಿಯೊಂದು ಸನ್ನಿವೇಶಕ್ಕೂ ಅದರದ್ದೇ ಆದ ಅರ್ಥ ಇರುತ್ತದೆ. ನಮಗೆ ಕಾಣಿಸಿಕೊಳ್ಳುವ ಕೆಲವು ಘಟನೆಗಳು ಇಲ್ಲವೇ ವಸ್ತುಗಳು ಕಂಡರೆ ಅವುಗಳು ಶುಭ ಸೂಚಕಗಳಾಗಿರುತ್ತವೆ. ಇಲ್ಲವೇ ಅಶುಭ ಸೂಚಕಗಳೂ ಆಗಿರಬಹುದು. ಹೀಗೆ ಯಾವ ಯಾವ ಘಟನೆಗಳು ಏನೇನು ಅರ್ಥಗಳನ್ನು ಕೊಡುತ್ತದೆ ಎಂಬುದರ ಬಗ್ಗೆ ನೋಡೋಣ...

These signs are good luck signs as per astrology

ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಮನುಷ್ಯನ ಜೀವನದಲ್ಲಿ ನಡೆಯುವ ಹಲವಾರು ವಿಷಯಗಳಿಗೆ ಸರಿಯಾದ ಅರ್ಥವನ್ನು ಕಂಡುಕೊಳ್ಳಬಹುದಾಗಿದೆ. ಇದರ ಮೂಲಕ ಮನಸ್ಸಿಗೆ (Mind) ಖುಷಿ (Happy) ಕೊಡುವ ಸಂಗತಿಗಳನ್ನು ನಾವು ಹೇಗೆ ಅರಿಯಬಹುದೋ ಹಾಗೇ ಮುಂದೆ ಸಂಭವಿಸಬಹುದಾದ ಅವಘಡಗಳನ್ನು (Accidents) ಮೊದಲೇ ತಿಳಿದುಕೊಳ್ಳುವ,  ಎಚ್ಚರಿಸುವ (Warning) ಸಂಕೇತಗಳನ್ನು (Sign) ಸಹ ತಿಳಿದುಕೊಳ್ಳಬಹುದಾಗಿದೆ. ಪ್ರತಿಯೊಬ್ಬರಿಗೂ ಒಳ್ಳೆಯದನ್ನೇ ಕೇಳುವ ಹಂಬಲ ಇರುತ್ತದೆ. ಭವಿಷ್ಯದಲ್ಲಿ (Future) ಒಳಿತಾದರೆ ಸಾಕು ಎನ್ನುವ ಮನೋಭಾವನೆ ಇದ್ದೇ ಇರುತ್ತದೆ. ಶಾಸ್ತ್ರ ಹೇಳುವ ಕೆಲವು ಸಂಕೇತಗಳು ಭವಿಷ್ಯದ ಒಳಿತನ್ನು ಸೂಚಿಸುತ್ತವೆ. 

ಹಾಗೆಯೇ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ಸಂಕೇತಗಳು ಭವಿಷ್ಯದ ಕೆಡುಕಿನ ಮುನ್ನೆಚ್ಚರಿಕೆಯೂ ಸಹ ಕೊಡುತ್ತಾ ಇರುತ್ತವೆ. ಈ ಕೆಲವು ವಿಚಾರಗಳನ್ನು ಜಾತಕ (Horoscope) ನೋಡಿ ಕೆಲವರು ತಿಳಿದುಕೊಂಡರೆ, ಇನ್ನು ಕೆಲವು ವಿಚಾರಗಳನ್ನು ಎದುರಾಗುವ ಘಟನೆ (Incident) ಮತ್ತು ಸಂಕೇತಗಳಿಂದ ತಿಳಿದುಕೊಳ್ಳ ಬೇಕಾಗುತ್ತದೆ. ನಮ್ಮ ನಡುವೆಯೇ ನಡೆಯುವ ಅಥವಾ ಕಾಣಿಸುವ ಹಲವಾರು ಸಂಕೇತಗಳು (Sign) ಭವಿಷ್ಯದ ಒಳಿತು ಮತ್ತು ಕೆಡುಕಿನ ಮುನ್ಸೂಚನೆ ಆಗಿರುತ್ತವೆ.

ಖುಷಿ ನೀಡುವ ಶುಭ (Good luck) ವನ್ನು ಸೂಚಿಸುವ ಕೆಲವು ಸಂಕೇತಗಳನ್ನು ತಿಳಿಯುವುದು ಉತ್ತಮ. ಈ ಕೆಲವು ಸಂಕೇತಗಳು ಮುಂದಿನ ದಿನಗಳಲ್ಲಿ ಶುಭ ಆಗುತ್ತದೆ ಎಂಬುದನ್ನು ಸೂಚಿಸುತ್ತವೆ. ಈಗ ಅವುಗಳ ಬಗ್ಗೆ ತಿಳಿಯೋಣ...

ಮುತ್ತು ಸಿಕ್ಕರೆ (Pearl) 
ಸಮುದ್ರದ (Sea) ತೀರದಲ್ಲಿ ಅಥವಾ ನದಿಯ (River) ತೀರದಲ್ಲಿ ಹೋಗುತ್ತಿರುವಾಗ ಅಕಸ್ಮಾತ್ತಾಗಿ ಮುತ್ತು ಅಥವಾ ಪರ್ಲ್ ಸಿಕ್ಕರೆ ಅದು ಶುಭವನ್ನು ತೋರಿಸುತ್ತದೆ. ಜೀವನದಲ್ಲಿ (Life) ಮುಂದೆ ಶುಭವಾದದ್ದು ಏನೋ ಆಗಲಿದೆ ಎಂಬುದನ್ನು ಇದು ಸೂಚಿಸುತ್ತದೆ. ಅಷ್ಟೇ ಅಲ್ಲದೆ ಎದುರಾಗಿರುವ ಹಲವು ಸಂಕಷ್ಟಗಳು (Difficulties) ದೂರವಾಗುತ್ತವೆ ಎಂಬುದರ ಸಂಕೇತ ಸಹ ಇದು ಆಗಿರುತ್ತದೆ. 

ಮದುಮಗಳು (Bride) 
ಕೆಲಸದ ನಿಮಿತ್ತ ದಾರಿಯಲ್ಲಿ ಹೋಗುತ್ತಿರುವಾಗ ಮದುಮಗಳು ಕಾಣಿಸಿಕೊಂಡರೆ ಅದು ಶುಭದ (Good) ಸಂಕೇತವೆಂದು ಹೇಳಲಾಗುತ್ತದೆ. ಶಾಸ್ತ್ರದ ಪ್ರಕಾರ ವಧು ಕಂಡರೆ ಅದು ಕೆಲಸದಲ್ಲಿ ಯಶಸ್ಸು (Success) ಸಿಗುತ್ತದೆ ಎಂಬುದನ್ನು ಸೂಚಿಸುತ್ತದೆ ಎಂಬುದಾಗಿದೆ. 

ಇದನ್ನು ಓದಿ: Astrology Prediction: ರಸ್ತೆಯಲ್ಲಿ ದುಡ್ಡು ಸಿಕ್ಕರೆ ಏನರ್ಥ?! ಇದರಿಂದ ಒಳ್ಳೇದಾಗತ್ತಾ ಅಥವಾ ಕೆಟ್ಟದ್ದಾ?

ತೆಂಗಿನ ಕಾಯಿ (Coconut)
ಬೆಳಗ್ಗೆ ಎದ್ದ ತಕ್ಷಣ ತೆಂಗಿನಕಾಯಿ ಕಂಡರೆ ಅದು ಶುಭದ ಸಂಕೇತವಾಗಿರುತ್ತದೆ. ಇಲ್ಲವೇ ಬೆಳ್ಳಂಬೆಳಗ್ಗೆ ಯಾರಾದರೂ ತೆಂಗಿನಕಾಯಿಯ ಪ್ರಸಾದ ಸಿಕ್ಕಿದರೆ ಅದು ಸಹ ಶುಭದ ಸಂಕೇತವಾಗಿರುತ್ತದೆ. ಇದು ಭವಿಷ್ಯದಲ್ಲಿ ಧನ (Money) ಲಾಭವಾಗುವ ಸಂಕೇತವನ್ನು ಸೂಚಿಸುತ್ತದೆ.

ನೀರು ತುಂಬಿದ ಬಿಂದಿಗೆ
ಶಾಸ್ತ್ರದ ಪ್ರಕಾರ ಮುಂಜಾನೆ (Morning ) ಕೆಲಸದ ನಿಮಿತ್ತ ಹೊರಗೆ ಹೋಗುವಾಗ ನೀರು (Water) ತುಂಬಿದ ಪಾತ್ರೆ ಬಿಂದಿಗೆ ಕಂಡರೆ ಅದು ಶುಭವನ್ನು ಸೂಚಿಸುತ್ತದೆ. ಕೆಲಸದಲ್ಲಿ (Work) ಬರುವ ಅಡೆತಡೆಗಳು ನಿವಾರಣೆ ಆಗುತ್ತದೆ ಎಂಬುದರ ಸಂಕೇತ ಮತ್ತು ಹೋಗುತ್ತಿರುವ ಕೆಲಸ ಸಲೀಸಾಗಿ (Easy) ಆಗುತ್ತದೆ ಎಂಬುದನ್ನು ಇದು ಸೂಚಿಸುತ್ತದೆ.

ಹಾಗಾಗಿ ಈ ಸಂಕೇತಗಳು ಮುಂದಿನ ದಿನಗಳಲ್ಲಿ ವ್ಯಕ್ತಿಯ ಜೀವನದಲ್ಲಿ (Life) ಶುಭವನ್ನು ಮತ್ತು ಸುಖ - ಸಂತೋಷವನ್ನು ತರುತ್ತದೆ ಎಂಬುದರ ಅರ್ಥವಾಗಿರುತ್ತದೆ. ಅಷ್ಟೇ ಅಲ್ಲದೆ ಈ ಸಂಕೇತಗಳನ್ನು ನಿರ್ಲಕ್ಷಿಸದೆ, ಇಂತಹ ಸಂಕೇತಗಳು ಎದುರಾದಾಗ ದೇವರಲ್ಲಿ ಪ್ರಾರ್ಥನೆ ಸಲ್ಲಿಸುವುದು ಸೇರಿದಂತೆ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕಾಗುತ್ತದೆ. ಆ ಮೂಲಕ ಮುಂದಿನ ದಿನಗಳಲ್ಲಿ ಒಳಿತನ್ನು ಕಂಡುಕೊಳ್ಳಬೇಕಾಗುತ್ತದೆ.

ಇದನ್ನು ಓದಿ: Astrology Tips: ಮನಶ್ಶಾಂತಿ ಬೇಕಿದ್ದರೆ ಜ್ಯೋತಿಷ್ಯದ ಈ ಸೂತ್ರ ಪಾಲಿಸಿ!

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios