ಕುಜ ದೋಷ ಇರುವ ಹೆಣ್ಣು ಮಕ್ಕಳನ್ನು ಮದುವೆಯಾಗಲು ಕೆಲವರು ಹಿಂದೇಟು ಹಾಕುವುದನ್ನು ನಾವು ಕಾಣಬಹುದು. ನಾವು ಮೊದಲೇ ಹೇಳಿಬಿಡುತ್ತೇವೆ- ಕುಜ ದೋಷದಿಂದ ಯಾರಿಗೂ ಯಾವ ಹಾನಿಯೂ ಇಲ್ಲ. ಗಂಡನಿಗಾಗಲೀ ಅತ್ತೆ ಮಾವಂದಿರಿಗಾಗಲೀ ಸಾವು ನೋವು ಬಾಧೆ ಯಾವುದೂ ಉಂಟಾಗುವುದಿಲ್ಲ. ಆದರೆ, ಇದರ ಕುರಿತು ನೀವು ತಿಳಿಯಬೇಕಾದ ಬೇರೆ ಕೆಲವು ಸಂಗತಿಗಳಿವೆ. 

ಕುಜ ಎಂದರೆ ಮಂಗಳ. ಮಂಗಳನು ವ್ಯಕ್ತಿಯ ಜಾತಕದ ಯಾವ ಮನೆಯಲ್ಲಿದ್ದಾನೆ ಎಂಬುದರ ಮೇಲೆ ದೋಷಾಪದೋಷಗಳು ನಿರ್ಧರಿಸಿರುತ್ತವೆ. ಒಳಿತು ಮತ್ತು ಕೆಡುಕುಗಳು ಮಂಗಳನ ಸ್ಥಾನವನ್ನು ಅವಲಂಬಿಸಿರುತ್ತದೆ. ಸರಳವಾಗಿ ಹೇಳುವುದಾದರೆ, ಕೆಲವು ಮನೆಗಳಲ್ಲಿ ಮಂಗಳನ ಸ್ಥಾನವು ಒಬ್ಬ ವ್ಯಕ್ತಿಯಲ್ಲಿ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ. ಕುಜ ದೋಷ ಇರುವ ವ್ಯಕ್ತಿಗಳು ಸಕ್ರಿಯರಾಗಿರುತ್ತಾರೆ. ಕೆಲವು ವಿಷಯಗಳ ಬಗ್ಗೆ ಉತ್ಸಾಹ ಹೊಂದಿರುತ್ತಾರೆ. ಭಾವೋದ್ರಿಕ್ತ ವ್ಯಕ್ತಿಯು ತಾನು ಏಕಾಂಗಿಯಾಗಿರಬೇಕೆಂದು ಬಯಸುತ್ತಾರೆ.

ಸ್ಯಾಂಡಲ್‌ವುಡ್ ನಟ ಚಿರಂಜೀವಿ ಸಾವಿಗೆ ಅಷ್ಟಮ ಕುಜ ದೋಷ ಕಾರಣವೇ?

ಮಂಗಳನು 1, 4, 7, 8 ಮತ್ತು 12 ನೇ ಮನೆಯಲ್ಲಿದ್ದಾಗ ವ್ಯಕ್ತಿಗೆ ಕುಜ ದೋಷ ಕಾಡುತ್ತದೆ. ಇದರಿಂದ ಅವರ ಮಾನಸಿಕ ವಿಷಯಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಕುಜ ದೋಷ ಇರುವ ಹುಡುಗಿಯು ಕುಜ ದೋಷ ಇರುವ ಹುಡುಗನನ್ನು ಮಾತ್ರ ಮದುವೆಯಾಗಬಹುದು ಎಂದು ಜನರು ಹೇಳುವುದನ್ನು ನೀವು ಕೇಳಿರಬಹುದು. ಆದರೆ, ಇದು ಸತ್ಯವಲ್ಲ. ಇತರರೂ ಮದುವೆಯಾಗಬಹುದು. ಆದರೆ ಕುಜ ದೋಷ ಇರುವ ವ್ಯಕ್ತಿಯ ಸಕ್ರಿಯತೆಯನ್ನು ಅಂಗೀಕರಿಸಬೇಕು. 

ಮೊದಲೇ ಹೇಳಿದಂತೆ ಕುಜ ದೋಷ ಇರುವವರು ಹೆಚ್ಚುವರಿ ಶಕ್ತಿಯನ್ನು ಹೊಂದಿರುತ್ತಾರೆ. ಅವರು ಕುಜ ದೋಷಿಗಳನ್ನೇ ಮದುವೆಯಾದರೆ ಶಕ್ತಿಗಳು ಒಕ್ಕೂಟವಾಗುತ್ತದೆ. ಆಗ ಇಬ್ಬರು ವ್ಯಕ್ತಿಗಳು ವಿಭಿನ್ನ ಶಕ್ತಿಯನ್ನು ಹೊಂದಿರುವುದರಿಂದ ಸಮಸ್ಯೆಗಳು ಹುದುಗಿಹೋಗುತ್ತವೆ. ಹುಡುಗಿ ಹೊರಗೆ ಸುತ್ತಾಡುವುದರಲ್ಲಿ ಸಕ್ರಿಯವಾಗದೆ ಮನೆಯಲ್ಲಿ ಇರಲು ಬಯಸಿದರೆ, ಹುಡುಗ ಹೊರಗೆ ಹೋಗಲು ಸಕ್ರಿಯವಾಗಿದ್ದರೆ ನಿಸ್ಸಂಶಯವಾಗಿ ದಂಪತಿಗಳು ಕಿತ್ತಾಡುತ್ತಾರೆ. 

ಎಲ್ ಅಕ್ಷರದಿಂದ ಶುರುವಾಗೋ ಹೆಸರಿನವರು ಬೆಸ್ಟ್ ಲವರ್ಸ್! ...

ಆದ್ದರಿಂದ ನೀವು ಕುಜ ದೋಷ ಹೊಂದಿರುವ ವ್ಯಕ್ತಿಯನ್ನು ಪ್ರೀತಿಸುತ್ತಿದ್ದರೆ ಚಿಂತಿಸಬೇಡಿ, ನಿಮ್ಮ ಜೀವನವು ಸುರಕ್ಷಿತ. ಆದರೂ, ಹುಡುಗಿ ಯಾವುದರ ಬಗ್ಗೆ ಆಸಕ್ತಿ ಹೊಂದಿದ್ದಾಳೆ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸಿ. ಆಕೆಯ ಆಸೆಗಳನ್ನು ಈಡೇರಿಸಲು ನೀವು ಶುರು ಮಾಡಿದರೆ ಪ್ರೀತಿಯು ತಂತಾನೆ ಹುಟ್ಟುತ್ತದೆ. ಆಗ ಜಗಳ ಮನಸ್ತಾಪ ಇರುವುದಿಲ್ಲ. 
 


7 ನೇ ಮನೆಯಲ್ಲಿ ಮಂಗಳನ ಉಪಸ್ಥಿತಿ ಇರುವ ಹುಡುಗಿ ಲೈಂಗಿಕತೆಯ ಬಗ್ಗೆ ತುಂಬಾ ಒಲವು ಹೊಂದಿರುತ್ತಾಳೆ. ನೀವು ಲೈಂಗಿಕ ವಿಷಯದಲ್ಲಿ ಹೆಚ್ಚು ಆಸಕ್ತಿ ಇಲ್ಲದಿದ್ದರೆ ಆಕೆ ಅತೃಪ್ತಳಾಗಬಹುದು. ಇದರಿಂದ ಸಂಬಂಧಗಳು ಗಟ್ಟಿಯಾಗಿ ಉಳಿಯುವುದು ಕಷ್ಟ. ಇದನ್ನು ಹುಡುಗ ಅರಿತುಕೊಂಡು ನಡೆಯಬೇಕು. ಮದುವೆಯಾಗುವ ಹುಡುಗರಾಗಲೀ ಹುಡುಗಿಯರಾಗಲೀ ಜಾತಕದ ಬಗ್ಗೆ ಸ್ವಲ್ಪವಾದರೂ ಅರಿತಿರಬೇಕು ಎಂದು ಹೇಳುವುದು ಇದಕ್ಕೇ. ಜಾತಕದ ಬಗ್ಗೆ ತಿಳಿದಿರದಿದ್ದರೂ ತೊಂದರೆಯಿಲ್ಲ, ಇನ್ನೊಬ್ಬರ ವರ್ತನೆಗಳನ್ನು ನೋಡಿ ಅರ್ಥಮಾಡಿಕೊಳ್ಳುವ ಸೂಕ್ಷ್ಮತೆ ಹೊಂದಿದ್ದರೆ ಸಾಕು. 

ಜೆ ಅಕ್ಷರದಿಂದ ಶುರುವಾಗೋ ಹೆಸರಿನವರು ಗುಪ್ತ್‌ ಗುಪ್ತ್‌! ...

1ನೇ ಮನೆಯಲ್ಲಿ ಕುಜನನ್ನು ಹೊಂದಿರುವವರು ಸಕ್ರಿಯ ದುಡಿಮೆಗಾರರಾಗಿರುತ್ತಾರೆ. ಅವರನ್ನು ದುಡಿಮೆಯಲ್ಲಿ ನೀವು ಮೀರಿಸಲಾಗದು, ವಂಚಿಸಲಾಗದು. ಪತಿ ಹೆಚ್ಚು ಕೆಲಸಗಾರನಾಗಿದ್ದು ಪತ್ನಿಯು ನಿಷ್ಕ್ರಿಯಳಾಗಿದ್ದರೆ ಅಲ್ಲಿ ಕಿತ್ತಾಟ ಬರುವುದು ಸಹಜ. ಹಾಗೇ 4ನೇ ಮನೆಯಲ್ಲಿ ಕುಜನನ್ನು ಹೊಂದಿರುವವರು ಸ್ವಲ್ಪ ಮಟ್ಟಿಗೆ ಮಾನಸಿಕ ಕಿರಿಕಿರಿ ಉಂಟು ಮಾಡುವವರಾಗಿರುತ್ತಾರೆ. ಇವರು ತಮ್ಮ ಸುತ್ತಮುತ್ತ ಇರುವವರನ್ನು ಕೆಂಡದ ಮೇಲೆ ನಿಲ್ಲಿಸಿದಂತೆ ನಿಲ್ಲಿಸುತ್ತಾರೆ. ಇವರನ್ನು ಮಣಿಸಲು ಶಾಂತ ಸ್ವಭಾವದವರೇ ಆಗಿರಬೇಕು. 

ಹಾಗೇ 8ನೇ ಮನೆಯಲ್ಲಿ ಕುಜನನ್ನು ಹೊಂದಿದವರು ಕೌಟುಂಬಿಕ ವಿಚಾರಗಳಲ್ಲಿ ತುಂಬಾ ಶಿಸ್ತು ಹಾಗೂ ಎಚ್ಚರ ಮತ್ತು ಚಟುವಟಿಕೆ ಹೊಂದಿರುತ್ತಾರೆ. ತಮ್ಮ ಮಕ್ಕಳು ಒಂದಿಷ್ಟೂ ದಾರಿ ತಪ್ಪದಂತೆ ಹದ್ದಿನ ಕಣ್ಣಿನಿಂದ ಕಾಯುತ್ತಾರೆ. ಹಾಗೇ 12ನೇ ಮನೆಯಲ್ಲಿ ಮಂಗಳನನ್ನು ಹೊಂದಿದವರು ತಮ್ಮ ಹೆಸರಿನ ಬಗ್ಗೆ ತುಂಬಾ ಪ್ರತಿಷ್ಠೆಯನ್ನು ಹೊಂದಿದವರು. ಇವರು ಎಲ್ಲಿ ಹೋದರೂ ತಮ್ಮ ಹೆಸರನ್ನು ಕೆತ್ತಿ ಬರುವ ಸ್ವಭಾವದವರು. ತಮ್ಮ ಸಂಗಾತಿ ಕೂಡ ಅದನ್ನು ಗುರುತಿಸದಿದ್ದರೆ ಇವರಿಗೆ ಸಿಟ್ಟು ಬಂದು ಕೋಲಾಹಲವಾಗುತ್ತದೆ. 

ಮೀನ ರಾಶಿಗೆ ಬುಧನ ಸಂಚಾರ, ನಿಮ್ಮ ರಾಶಿಗೆ ಕಂಟಕ ಇದೆಯಾ? ...