Asianet Suvarna News Asianet Suvarna News

ಮೀನ ರಾಶಿಗೆ ಬುಧನ ಸಂಚಾರ, ನಿಮ್ಮ ರಾಶಿಗೆ ಕಂಟಕ ಇದೆಯಾ?

ಎಪ್ರಿಲ್‌ ತಿಂಗಳ ಆರಂಭದಲ್ಲೇ ಕೆಲವು ರಾಶಿಯ ಜನರಿಗೆ ಫೂಲ್‌ ಅರ್ಥಾತ್‌ ಮೂರ್ಖರಾಗುವ ಸನ್ನಿವೇಶ, ಇನ್ನೂ ಕೆಲವು ರಾಶಿಗೆ ಕಂಟಕ ಎದುರಾಗಲಿದೆ. ನಿಮ್ಮ ರಾಶಿ ಕತೆ ಹೇಗಿದೆ ಚೆಕ್ ಮಾಡ್ಕೊಳ್ಳಿ.

 

Budha transit to pisces zodiac, what to expect
Author
Bengaluru, First Published Apr 2, 2021, 3:32 PM IST

ಮೇಷ

ಸದಾ ಕೆಂಡದ ಮೇಲೆ ನಿಂತಿರುವ ಹಾಗೆ ನಿಮ್ಮ ಸ್ವಭಾವ. ಈಗ ಮೀನ ರಾಶಿಗೆ ಬುಧನ ಸಂಚಾರವಾದ ಮೇಲಿಂದ ನಿಮ್ಮ ಈ ಒತ್ತಡ ಇನ್ನೂ ಕೊಂಚ ಹೆಚ್ಚಾಗಬಹುದು. ಸುಮಾರು ಹದಿನೈದು ದಿನಗಳ ಕಾಲ ಬದುಕಿನಲ್ಲಿ ಏರಿಳಿತ ಹೆಚ್ಚಿರಬಹುದು. ಆದರೆ ಕೌಟುಂಬಿಕ ಬದುಕಿನಲ್ಲಿ ನಿಮ್ಮ ಅರಿವಿಗೆ ಬರದೇ ಮನಸ್ಸು ನೆಮ್ಮದಿಯಿಂದಿರುತ್ತದೆ. ಮನಸ್ಸಿಲ್ಲದ ಮನಸ್ಸಿಂದ ಕೌಟುಂಬಿಕ ಬದುಕನ್ನು ನೋಡುವ ನೀವು, ಸದ್ಯ ಆ ಬದುಕಿಗಾಗಿ ಹಾತೊರೆಯುವ ಸ್ಥಿತಿ ನಿರ್ಮಾಣವಾಗಬಹುದು. ಧನಲಾಭ ಇಲ್ಲ. ಆದರೆ ಗಂಡಾತರವೊಂದು ಎದುರಾಗಬಹುದು. ಅದೃಷ್ಟವಶಾತ್ ನೀವು ಅದರಿಂದ ಪಾರಾಗುವಿರಿ. 

ವೃಷಭ

ಬ್ಯಾಂಕಿಂಗ್, ಹೂಡಿಕೆ ಕ್ಷೇತ್ರಲ್ಲಿ ಅದೃಷ್ಟ ಖುಲಾಯಿಸಲಿದೆ. ವ್ಯಾಪಾರದಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಗತಿ. ಹೊಸ ಹೊಸ ಅವಕಾಶಗಳು ಅರಸಿಕೊಂಡು ಬರಬಹುದು. ನೀವು ಹೊಸ ಕಡೆಗಳಲ್ಲಿ ಹೂಡಿಕೆ ಮಾಡಲಿದ್ದೀರಿ. ಹಣದ ಹರಿವು ಹೆಚ್ಚಲಿದೆ. ಹೆಚ್ಚೆಚ್ಚು ಜನರ ಒಡನಾಟ ಸಿಗಬಹುದು. ಅವರಲ್ಲಿ ನೀವು ವಿಶ್ವಾಸ ಮೂಡಿಸುವಲ್ಲಿ ಯಶಸ್ವಿಯಾಗಬಹುದು. ಇದರಿಂದ ನಿಮ್ಮ ಭವಿಷ್ಯ, ವ್ಯವಹಾರಗಳಿಗೆ ಉತ್ತಮ ಫಲ ಸಿಗಲಿದೆ. ಸ್ನೇಹಿತರ ಜೊತೆಗೆ ಖುಷಿಯಿಂದ ಸಮಯ ಕಳೆಯುವಿರಿ. ಕುಟುಂಬದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಲಿದೆ. ಆದರೆ ಭಾವನಾತ್ಮಕವಾಗಿ ಕೆಲವೊಂದು ಸಂಕಷ್ಟಗಳಿಗೆ ಸಿಲುಕುವಿರಿ. 

ಎಲ್ ಅಕ್ಷರದಿಂದ ಶುರುವಾಗೋ ಹೆಸರಿನವರು ಬೆಸ್ಟ್ ಲವರ್ಸ್! ...

ಮಿಥುನ

ಹಿರಿಯರ ಆರೋಗ್ಯದಲ್ಲಿ ಕೊಂಚ ಏರುಪೇರಾಗಬಹುದು. ಹೆತ್ತವರ ಬಗ್ಗೆ ಕಾಳಜಿ ಮಾಡಿ. ನಿಮ್ಮ ಜೊತೆಗೆ ಕೆಲವರು ಬಹಳ ವಿಶ್ವಾಸದಿಂದ ಮಾತನಾಡಬಹುದು. ಅಂಥಾ ಮಾತುಗಳಿಗೆ ಮನಸೋತು ಸಾಲ ನೀಡುವುದು, ಯಾವುದೋ ರಹಸ್ಯ ಬಾಯ್ಬಿಡುವುದು ಇತ್ಯಾದಿ ಅಚಾತುರ್ಯ ಮಾಡಿದರೆ ಅದರಿಂದ ಹೊರಬರುವುದು ಕಷ್ಟವಿದೆ. ನಿಮಗೆ ಮಾತೇ ಬಂಡವಾಳವೇನೋ ನಿಜ. ಆದರೆ ಈ ಬಾರಿ ಮಾತೇ ಮಾರಕವಾಗುವ ಅಪಾಯವಿದೆ. ಉದ್ಯೋಗ ಬದಲಾವಣೆ ಸಾಧ್ಯತೆ. ಆದರೆ ಅದರಿಂದ ಹೆಚ್ಚಿನ ಪ್ರಯೋಜನವೇನೂ ಆಗದು. ಗುರುಹಿರಿಯರ ಆಶೀರ್ವಾದದಿಂದ ಕುಟುಂಬದಲ್ಲಿ ನೆಮ್ಮದಿ ಇದೆ. ಮನೆಯವರಿಂದ ಸಮಾಧಾನದ ಮಾತುಗಳನ್ನು ಕೇಳುವಿರಿ. 

ಕಟಕ

ನಿಮ್ಮ ಬದುಕಿನಲ್ಲಿ ಒಂದಿಷ್ಟು ಏರಿಳಿತಗಳಾಗಬಹುದು. ಉದ್ಯೋಗದ ಜಾಗದಲ್ಲಿ ಉತ್ತಮ ಪರಿಸ್ಥಿತಿ ಇದೆ. ಜನ ನಿಮ್ಮ ಬಗ್ಗೆ ಮೆಚ್ಚುಗೆಯಿಂದ ಮಾತನಾಡುವರು. ಆದರೆ ದೂರ ಪ್ರಯಾಣವನ್ನು ತಪ್ಪಿಸುವುದು ಒಳಿತು. ಚಾಲನೆಯಲ್ಲಿ ಹುಷಾರಾಗಿರಿ. ಮನೆಯಲ್ಲಿ ಉತ್ತಮ ವಾತಾವರಣವಿದೆ. ನಿಮ್ಮ ಪ್ರತಿಭೆಗೆ ಉತ್ತಮ ಬೆಲೆ ಸಿಗಬಹುದು. ಒಡಹುಟ್ಟಿದವರ ನಡುವೆ ವಾಗ್ವಾದಗಳೇಳುವ ಸಾಧ್ಯತೆ ಇದೆ. ಅದನ್ನು ಬುದ್ಧಿವಂತಿಕೆಯಿಂದ ಪರಿಹರಿಸುವ ಚಾತುರ್ಯ ನಿಮಗಿದೆ. ಜನರ ನಡುವೆ ಉತ್ತಮ ಒಡನಾಟ ಬೆಳೆಯಲಿದೆ. ವ್ಯವಹಾರಗಳಲ್ಲಿ ಎಚ್ಚರಿದ್ದಷ್ಟೂ ಉತ್ತಮ. ಭಾವುಕ ಸ್ವಭಾವದ ನೀವು ಕೆಲವು ಅನವಶ್ಯಕ ವಿಚಾರಗಳಿಗೆ ಮರುಗುವ ಸ್ಥಿತಿ ನಿರ್ಮಾಣವಾಗಬಹುದು. 

ಪ್ರತೀ ದೇವರ ಹಿಂದೆ ವಿಕಾರ ರಾಕ್ಷಸ ಮುಖವೇಕೆ ಇದೆ? ...

ಸಿಂಹ

ಒಂದು ಹಂತದವರೆಗೆ ಎಲ್ಲವನ್ನೂ ಸಹಿಸಿಕೊಂಡು ಇತರರನ್ನೂ ನಿರಾಳವಾಗಿಸುವ ನೀವು ಒಂದು ಹಂತದ ಬಳಿಕ ಉದ್ವಿಗ್ನರಾಗುತ್ತಾ ಹೋಗುವಿರಿ. ನಿಮ್ಮ ಈ ಸ್ವಭಾವದಿಂದ ಮೇಲಿನ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಬಹುದು. ಜೊತೆಗೆ ಆತ್ಮೀಯ ಮಿತ್ರರೊಂದಿಗೂ ವಿರಸ ಉಂಟಾಗಬಹುದು. ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ನೀವು ಅಂದುಕೊಂಡ ಕಾರ್ಯಗಳಲ್ಲಿ ತೃಪ್ತಿಕರವಾಗಿ ತೊಡಗಿಸಿಕೊಳ್ಳುವಿರಿ. ಮನೆಯವರ ಬಗ್ಗೆ ಹೆಚ್ಚೆಚ್ಚು ಕಾಳಜಿ ಮಾಡಬೇಕಾದ ಸನ್ನಿವೇಶ ನಿರ್ಮಾಣವಾಗಬಹುದು. ಉದರ ಸಂಬಂಧಿ ಸಮಸ್ಯಗಳು ಕಾಡಬಹುದು. ಪಿತ್ಥದಿಂದ ಆರೋಗ್ಯದಲ್ಲಿ ವ್ಯತ್ಯಯವಾಗಬಹುದು. ತುರಿಕೆ, ಅಲರ್ಜಿಯಂಥಾ ಚರ್ಮದ ಸಮಸ್ಯೆ ಬರಬಹುದು. 

ಸಂಗಾತಿಯೊಂದಿಗಿನ ಜಗಳ ನಿಭಾಯಿಸುವಲ್ಲಿ ಈ ರಾಶಿಯವರು ನಾಜೂಕು! ...

ಕನ್ಯಾ

ನಾನು ಹೇಳಿದ್ದೇ ನಡೆಯಬೇಕು, ಉಳಿದವರು ಹೇಗೆ ಬೇಕಾದರೂ ಇರಲಿ ಎಂದುಕೊಳ್ಳುವ ಮನಸ್ಥಿತಿಯಿಂದ ನೀವು ಎಲ್ಲರ ಅವಹೇಳನೆಗೆ ಗುರಿಯಾಗುವಿರಿ. ಆರ್ಥಿಕವಾಗಿ ನಿಮ್ಮ ಸರ್ವಾಧಿಕಾರ ಧೋರಣೆ ನಿಮಗೆ ಕಷ್ಟಕರವಾಗಿ ಪರಿಣಮಿಸಲಿದೆ. ಆದರೆ ಸಮಯಕ್ಕೆ ಸರಿಯಾಗಿ ನಿಮಗೆ ಹಲವು ನೆರವುಗಳು ದೊರೆಯಲಿವೆ. ನಿಮ್ಮನ್ನು ಕಷ್ಟದ ಸನ್ನಿವೇಶದಲ್ಲಿ ಕೈ ಹಿಡಿದು ನಡೆಸುವ ಬೇತಾಳನಂಥ ಶಕ್ತಿಗಳು ವಿಕ್ರಮಾದಿತ್ಯನಿಗೆ ಇದ್ದಂತೆ ನಿಮಗೂ ಇವೆ. ಹೀಗಾಗಿ ನೀವು ಮನದೊಳಗೇ ಕೊರಗುವ ಹವ್ಯಾಸವನ್ನು ಬಿಟ್ಟು ಬಿಡಬೇಕು. ಆಗುವುದೆಲ್ಲವೂ ಒಳ್ಳೆಯದಕ್ಕೇ ಎಂದುಕೊಂಡು ಮುನ್ನಡೆದರೆ ಕಷ್ಟದಲ್ಲೂ ನಗುವ ಸನ್ನಿವೇಶ ನಿಮ್ಮದಾಗುತ್ತದೆ.

Follow Us:
Download App:
  • android
  • ios