ಸಾಮಾನ್ಯವಾಗಿ ಜೆ ಅಕ್ಷರದಿಂದ ಶುರುವಾಗುವ ಹೆಸರಿನವರು ಯಾವ ಜನರೊಂದಿಗೂ ಬೆರೆಯುವುದಿಲ್ಲ. ಯಾವುದೇ ಕೆಲಸವನ್ನು ಮಾಡಿದರೂ ರಹಸ್ಯವಾಗಿ ಮಾಡಿ ಮುಗಿಸುತ್ತಾರೆ. ಯಾರಿಗೂ ತಿಳಿಯದ ಹಾಗೆ ತಮ್ಮ ಕೆಲಸ ಕಾರ್ಯಗಳನ್ನು ಮಾಡುತ್ತಾರೆ. ಯಾವುದನ್ನೇ ಆದರೂ ಸಾಧಿಸುವ ಛಲ ಇವರಲ್ಲಿ ಹೆಚ್ಚಾಗಿ ಇರುತ್ತದೆ. ಅಲ್ಲದೆ ಕೈಗೊಂಡ ಪ್ರತಿಯೊಂದು ಕೆಲಸವನ್ನು ಅರ್ಧದಲ್ಲಿ ನಿಲ್ಲಿಸದೆ ಧೈರ್ಯದಿಂದ ಮಾಡಿ ಮುಗಿಸುತ್ತಾರೆ. ಇವರ ವ್ಯಕ್ತಿತ್ವ ಚೆನ್ನಾಗಿರುತ್ತದೆ. ‌‌ಇವರು ಬಹಳ ವಿಭಿನ್ನವಾಗಿ ಇರುತ್ತಾರೆ. ಎಲ್ಲಾ ಕ್ಷೇತ್ರಗಳಲ್ಲಿ ತಮ್ಮದೇ ಆದ ಪ್ರಭಾವವನ್ನು ಹೊಂದಿರುತ್ತಾರೆ. ಉದ್ಯೋಗದಲ್ಲಿ ವೃತ್ತಿ ಜೀವನದಲ್ಲಿ ವೈವಾಹಿಕ ಜೀವನದಲ್ಲಿ ಕೌಟುಂಬಿಕ ಧಾರ್ಮಿಕ ಹಾಗೂ ಸಾಮಾಜಿಕ ಜೀವನದಲ್ಲಿ ವಿಭಿನ್ನವಾದ ರೀತಿ ಗುಣ ಹೊಂದಿರುತ್ತಾರೆ. ಆದ್ದರಿಂದ ಇವರು ಎಲ್ಲರನ್ನೂ ಆಕರ್ಷಿಸುತ್ತಾರೆ. ಹೆಚ್ಚು ಜನರು ಪ್ರಭಾವಿತರಾಗಿ ಇವರೊಂದಿಗೆ ಸ್ನೇಹಕ್ಕಾಗಿ ಹಾತೊರೆಯುತ್ತಾರೆ. ಇವರ ಮಾತಿನ ಶೈಲಿ ಕೂಡ ವಿಭಿನ್ನವಾಗಿರುತ್ತದೆ.

ಇವರು ಆಕರ್ಷಣೀಯರು. ಎಲ್ಲರಂತೆ ಇವರು ಮಾತನಾಡುವುದಿಲ್ಲ. ಬಾಯಿಗೆ ಬಂದ ಹಾಗೆ ಮಾತನಾಡುವ ಜಾಯಮಾನ ಇವರದ್ದು ಅಲ್ಲ. ವಿಶೇಷವಾದ ಮಾತಿನ ಶೈಲಿಯನ್ನು ಹೊಂದಿರುತ್ತಾರೆ. ವಿಶೇಷವಾದ ಮತ್ತು ವಿಭಿನ್ನವಾದ ಮಾತಿನ ಶೈಲಿಯಿಂದ ಹಲವರು ಇವರಿಗೆ ಮರುಳಾಗುತ್ತಾರೆ. ಯಾವುದು ಇವರಿಗೆ ಸರಿ ಅನಿಸುತ್ತದೆ ಆ ಕೆಲಸವನ್ನು ಮಾಡಿಯೇ ಮಾಡುತ್ತಾರೆ. ಬೇರೆಯವರಿಗೆ ಕೆಟ್ಟದ್ದು ಅನಿಸಲಿ ಅಥವಾ ಒಳ್ಳೆಯದು ಅನಿಸಲಿ ಅದನ್ನು ಇವರು ನೋಡುವುದಿಲ್ಲ.

ಬಹಳ ಧೈರ್ಯವಂತರು. ನಾಯಕತ್ವದ ಗುಣಗಳು ಇವರಲ್ಲಿ ಅಡಗಿರುತ್ತವೆ ಇಗಾಗಿ ಸ್ನೇಹಿತರಿಗಾಗಿ ತಮ್ಮ ಜೀವವನ್ನು ಕೊಡಲು ಮುಂದಾಗುತ್ತಾರೆ. ಆದರೆ ಶತ್ರುಗಳಿಗೆ ಮಾತ್ರ ಯಾವತ್ತೂ ಕ್ಷಮೆಯನ್ನು ನೀಡುವುದಿಲ್ಲ. ಅಲ್ಲದೆ ಬಹಳ ಭಾವನಾತ್ಮಕ ವ್ಯಕ್ತಿಗಳು. ಚಿಕ್ಕ ಪುಟ್ಟ ವಿಷಯಗಳಿಗೂ ಬಹಳ ಭಾವನಾತ್ಮಕರಾಗುತ್ತಾರೆ. ಸತ್ಯಕ್ಕಾಗಿ ಬಹಳ ಹಾತೊರೆಯುತ್ತಾರೆ. ಸತ್ಯವನ್ನು ಮರೆಮಾಚಲು ಇವರು ಬಿಡುವುದಿಲ್ಲ. ಹಾಗಾಗಿ ಇವರೊಂದಿಗೆ ಇರುವ ಬಹಳಷ್ಟು ವ್ಯಕ್ತಿಗಳು ಕೆಟ್ಟ ಕೆಲಸಗಳನ್ಮು ಮಾಡಲು ಹಿಂಜರಿಯುತ್ತಾರೆ. ಇವರು ಒಬ್ಬಂಟಿಯಾಗಿ ಸ್ವತಂತ್ರವಾಗಿ ಬದುಕಲು ಇಷ್ಟ ಪಡುತ್ತಾರೆ. ಯಾರೊಂದಿಗೂ ತಮ್ಮ ಅನುಭವಗಳನ್ನು ಹಂಚಿಕೊಳ್ಳುವುದಿಲ್ಲ. ಬಹಳ ರಹಸ್ಯವಾದ ವ್ಯಕ್ತಿಗಳು. ಶೋಧನೆ ಮಾಡುವ ಕೆಲಸ ಕಾರ್ಯಗಳಲ್ಲಿ ಬಹಳ ನಿರತರಾಗಿರುತ್ತಾರೆ. ಪತ್ತೇದಾರರು ಆಗಬಹುದು.

ಪ್ರತೀ ದೇವರ ಹಿಂದೆ ವಿಕಾರ ರಾಕ್ಷಸ ಮುಖವೇಕೆ ಇದೆ? ...

ಒಂದು ವೇಳೆ ಇವರ ಅನುಭವಗಳನ್ನ ಯಾರದಾದರೂ ಮುಂದೆ ಹಂಚಿಕೊಳ್ಳುವುದಾದರೆ ತಮಗೆ ಬಹಳ ನಂಬಿಕೆಯ ವ್ಯಕ್ತಿಗಳ ಮುಂದೆ ಮಾತ್ರ ಹೇಳುತ್ತಾರೆ. ಅಲ್ಲದೇ ಅವರಲ್ಲಿ ಯಾವುದೇ ಮುಚ್ಚು ಮರೆ ಇಲ್ಲದೇ ಸಂಪೂರ್ಣವಾಗಿ ಎಲ್ಲವನ್ನೂ ಹೇಳಿಬಿಡುತ್ತಾರೆ. ಬಹಳ ಪ್ರಾಮಾಣಿಕ ಹಾಗೂ ನಂಬಿಕೆಯಿಂದ ಕೂಡಿರುವ ವ್ಯಕ್ತಿಗಳು. ಜೀವನದಲ್ಲಿ ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಿರುತ್ತಾರೆ. ಮದುವೆಯ ನಂತರ ಮನೆಯ ಸಂಪೂರ್ಣ ಜವಾಬ್ದಾರಿಯನ್ನು ತಾವೇ ವಹಿಸಿಕೊಳ್ಳುತ್ತಾರೆ ಹಾಗೂ ನಿರ್ವಹಿಸುತ್ತಾರೆ. ನಕಾರಾತ್ಮಕ ಸಂದರ್ಭದಲ್ಲಿಯೂ ಸಕಾರಾತ್ಮಕವಾಗಿ ಯೋಚಿಸುತ್ತಾರೆ. ಅದರಲ್ಲಿ ಸಫಲತೆಯನ್ನು ಸಹ ಪಡೆಯುತ್ತಾರೆ.

ಎಲ್ ಅಕ್ಷರದಿಂದ ಶುರುವಾಗೋ ಹೆಸರಿನವರು ಬೆಸ್ಟ್ ಲವರ್ಸ್! ...

ಬಹಳ ವಿನೀತ ಭಾವದವರು ಹಾಗೂ ಇನ್ನೊಬ್ಬರು ಮಾತಾಡುವುದನ್ನು ಪೂರ್ತಿಯಾಗಿ ಕೇಳಿಸಿಕೊಳ್ಳುತ್ತಾರೆ. ಎಲ್ಲಿಯೂ ಅಪಾರ್ಥಕ್ಕೆ ಎಡೆ ಮಾಡಿಕೊಡುವುದಿಲ್ಲ. ಹಾಗೆಯೇ ತಾವು ಆಡಿದ ಮಾತುಗಳ ಹಾಗೂ ಇನ್ನೊಬ್ಬರು ತಮ್ಮೊಡನೆ ಆಡಿದ ಮಾತುಗಳ ನಿಖರ ದಾಖಲೆ ಇಟ್ಟಿರುತ್ತಾರೆ. ಇವರೊಂದಿಗೆ ಉಡಾಫೆಯಿಂದ ಮಾತನಾಡಿ ನೀವು ಜಯಿಸಿಕೊಳ್ಳಲಾರಿರಿ. ಹಾಗೆಯೇ ಇವರನ್ನು ಹಣದ ವಿಷಯದಲ್ಲಿ ಮೋಸಗೊಳಿಸಲು ಆಗುವುದಿಲ್ಲ. ಎಲ್ಲದಕ್ಕೂ ನಿಖರವಾದ ಲೆಕ್ಕಾಚಾರ ಇಟ್ಟಿರುತ್ತಾರೆ. ಹಾಗಂತ ಇವರೇನೂ ಜುಗ್ಗರಲ್ಲ. ಸಾಕಷ್ಟು ಖರ್ಚು ಮಾಡುತ್ತಾರೆ. ಆದರೆ ಅದರಲ್ಲಿ ಆನಂದವನ್ನು ಹೊಂದುವ ಸ್ವಭಾವ ಇವರದು. ಆನಂದವಿಲ್ಲದ ಯಾವುದೇ ಕೆಲಸವನ್ನು ಮಾಡಲು ಇಷ್ಟಪಡುವುದಿಲ್ಲ. ತಮ್ಮ ಕಚೇರಿ ಕೆಲಸಗಳನ್ನು ಕೂಡ ಆನಂದದಿಂದಲೇ ಮಾಡುತ್ತಾ ಇರುತ್ತಾರೆ. ಇವರನ್ನು ಯಾವುದೇ ಬಗೆಯಲ್ಲಿ ವಿಚಲಿತಗೊಳಿಸಲು ಆಗುವುದಿಲ್ಲ. ಇವರು ಕೆಲವೊಮ್ಮೆ ಕಚೇರಿಯಲ್ಲೂ ತಮ್ಮ ಆಹ್ಲಾದವನ್ನು ಇತರರಿಗೆ ಹಂಚುತ್ತ ಇರುತ್ತಾರೆ.

ಮೀನ ರಾಶಿಗೆ ಬುಧನ ಸಂಚಾರ, ನಿಮ್ಮ ರಾಶಿಗೆ ಕಂಟಕ ಇದೆಯಾ? ...