ಜೀ ಕನ್ನಡದಲ್ಲಿ ಶೀಘ್ರದಲ್ಲಿ ರಾಘವೇಂದ್ರ ಮಹಿಮೆ ಸೀರಿಯಲ್ ಶುರುವಾಗಲಿದೆ. ಅದರ ಜೊತೆಗೆ ಅತಿ ದೊಡ್ಡ ರಿಯಾಲಿಟಿ ಷೋ ಒಂದು ಬರಲಿದೆ. ಇವೆರಡರ ಆಡಿಷನ್ನಲ್ಲಿ ಭಾಗವಹಿಸಲು ವಾಹಿನಿ ತಿಳಿಸಿದೆ. ಡಿಟೇಲ್ಸ್ ಇಲ್ಲಿದೆ ನೋಡಿ..
ಇದಾಗಲೇ ಜೀ ಕನ್ನಡ ವಾಹಿನಿ ವಿವಿಧ ರೀತಿಯ ರಿಯಾಲಿಟಿ ಷೋಗಳ ಮೂಲಕ ಮನರಂಜನೆ ನೀಡುತ್ತಿದೆ. ವಿಭಿನ್ನ ರೀತಿಯ ಪ್ರಯೋಗಗಳನ್ನು ಮಾಡುತ್ತಲೇ ಬಂದಿದೆ. ಈ ರಿಯಾಲಿಟಿ ಷೋಗಳಿಂದ ಇದಾಗಲೇ ಹಲವಾರು ಕಲಾವಿದರು ಬೆಳಕಿಗೆ ಬಂದಿದ್ದಾರೆ. ಗ್ರಾಮೀಣ ಪ್ರತಿಭೆಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಸಿಕ್ಕಿದೆ. ಇದೀಗ, ಜೀ ಕನ್ನಡ ವಾಹಿನಿಯಲ್ಲಿ ಸುಖಧರೆ ಸಂಸ್ಥೆಯಿಂದ ಶ್ರೀರಾಘವೇಂದ್ರ ಮಹಾತ್ಮೆ ಸೀರಿಯಲ್ ನಿರ್ಮಾಣವಾಗುತ್ತಿದೆ. ಇದರಲ್ಲಿ ಶ್ರೀ ರಾಘವೇಂದ್ರ ಯತಿಗಳ ಪಾತ್ರಕ್ಕೆ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತಿದೆ. ಆಸಕ್ತ ಕಲಾವಿದರು ಆಡಿಷನ್ನಲ್ಲಿ ಭಾಗವಹಿಸುವಂತೆ ಜೀ ವಾಹಿನಿ ತಿಳಿಸಿದೆ. ಅದಕ್ಕೆಕೆಲವೊಂದು ಅರ್ಹತೆಗಳನ್ನು ನೀಡಲಾಗಿದೆ.
ಅಭ್ಯರ್ಥಿಗಳು 18ರಿಂದ 40 ವರ್ಷ ವಯಸ್ಸಿನ ಒಳಗೆ ಇರಬೇಕು. ಆಸಕ್ತರು ಸ್ವ ವಿವರಗಳೊಂದಿಗೆ ಇತ್ತೀಚಿನ ಸಾಂಪ್ರದಾಯಿಕ ಉಡುಗೆಯ ಎರಡು ಫೋಟೋ ಮಾತ್ರ ವಾಟ್ಸ್ಆ್ಯಪ್ ಇಲ್ಲವೇ ಇ-ಮೇಲ್ ವಿಳಾಸಕ್ಕೆ ಕಳುಹಿಸಬೇಕು. ರೀಲ್ಸ್ಗಳಿಗೆ ಅವಕಾಶವಿಲ್ಲ ಎಂದು ವಾಹಿನಿ ಹೇಳಿದೆ. ಇದರ ಜೊತೆಗೆ ನಟನೆ ಬಲ್ಲವರಾಗಿರಬೇಕು, ಸ್ಪಷ್ಟವಾಗಿ ಕನ್ನಡ ಮಾತನಾಡಲು ತಿಳಿದಿರಬೇಕು. ರಂಗಭೂಮಿ, ಸಂಗೀತದ ಜ್ಞಾನ ಉಳ್ಳವರಿಗೆ ಮೊದಲ ಆದ್ಯತೆ ಆಗಿದೆ ಂದು ವಾಹಿನಿ ತಿಳಿಸಿದೆ.
ವಾಟ್ಸ್ಆ್ಯಪ್ ಸಂಖ್ಯೆ +91- 9513888050 ಹಾಗೂ ಇ-ಮೇಲ್ ಐಡಿ srigururaghavendra70@gmail.com
ರಿಯಾಲಿಟಿ ಷೋಗೆ ಆಹ್ವಾನ:
ಅದೇ ರೀತಿ, ಹಳ್ಳಿ ಬದುಕಿನ ಬವಣೆಗಳನ್ನು ತೆರೆ ಮೇಲೆ ತರೋ ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಷೋ ಆರಂಭವಾಗಲಿದ್ದು, ಅದರ ಆಡಿಷನ್ಗೆ ವಾಹಿನಿ ಕರೆದಿದೆ. ಆಡಿಷನ್ ಇದೇ 19ರಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ. 18ರಿಂದ 28 ವರ್ಷ ವಯಸ್ಸಿನ City Modern ಯುವತಿಯರು ಭಾಗವಹಿಸಬಹುದು! ಇದು ಹೆಣ್ಣುಮಕ್ಕಳಿಗಷ್ಟೇ ಇರುವ ಷೋ ಆಗಿದೆ.
