ನಿತೀಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದ ಪ್ರಚಾರ ಲಾಸ್ ಏಂಜಲೀಸ್‌ನಲ್ಲಿ ಆರಂಭವಾಗಿದ್ದು, ರಾಮನ ಪಾತ್ರಧಾರಿ ರಣಬೀರ್ ಕಪೂರ್ ಭಾಗವಹಿಸಿದ್ದಾರೆ. ಆದರೆ, ರಾವಣನ ಪಾತ್ರದಲ್ಲಿರುವ ಯಶ್ ಗೈರಾಗಿದ್ದು, ತಮ್ಮ 'ಟಾಕ್ಸಿಕ್' ಸಿನಿಮಾದ ರೀ-ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವುದರಿಂದ ಪ್ರಚಾರದಿಂದ ದೂರ ಉಳಿದಿದ್ದಾರೆ ಎಂದು ವರದಿಯಾಗಿದೆ.

ಬೆಂಗಳೂರು: ಬಾಲಿವುಡ್‌ನ ಮೆಗಾ ಪ್ರಾಜೆಕ್ಟ್ ‘ರಾಮಾಯಣ’ ದೇಶದಾದ್ಯಂತ ಹೈಪ್ ಕ್ರಿಯೇಟ್ ಮಾಡಿದೆ. ಅದಕ್ಕೆ ಕಾರಣ ರಾಕಿಂಗ್ ಸ್ಟಾರ್ ಯಶ್ ರಾವಣ ಆಗಿದ್ದು-ರಣಬೀರ್​ ಕಪೂರ್​ ರಾಮ ಆಗಿರೋದು. ಇದೀಗ ರಾಮಾಯಣ ಪ್ರಮೋಷನ್ ಶುರುವಾಗಿದೆ. ಆದ್ರೆ ಅಲ್ಲೆಲ್ಲೂ ನಮ್ಮ ರಾಕಿ ಭಾಯ್​ ಸುಳಿವೇ ಇಲ್ಲ. ಅರೆ ಯಶ್ ಇಲ್ಲದೇ ರಾಮಾಯಣ ತೆರೆಗೆ ಬರೋದಕ್ಕೆ ಸಾಧ್ಯಾನೆ ಇಲ್ಲ. ಹಾಗಾದ್ರೆ ರಾಮಾಯಣ ಟೀಮ್​ ಜೊತೆ ಏನಾದ್ರು ರಾಮಾಯಣ ಆಗಿದ್ಯಾ? ನೋಡೋಣ ಈ ಸ್ಟೋರಿಯಲ್ಲಿ.

ರಾಕಿಯ 'ರಾಮಾಯಣ' ರಿಲೀಸ್‌ಗೆ ಕಿಕ್​ ಸ್ಟಾರ್ಟ್​​..!

ರಾಕಿಂಗ್ ಸ್ಟಾರ್ ಯಶ್ ಫುಲ್ ಬ್ಯುಸಿಯಾಗಿದ್ದಾರೆ. ಟಾಕ್ಸಿಕ್​ ಸಿನಿಮಾವನ್ನ ಹೇಳಿದ ಡೇಟ್​​ಗೆ ಬಿಡುಗಡೆ ಮಾಡಿಲ್ಲವಲ್ಲ ಅನ್ನೋ ಟೆನ್ಷನ್ ಒಂದು ಕಡೆ ಆದ್ರೆ, ಅದೇ ಟಾಕ್ಸಿಕ್‌ನ ಕೆಲವು ದೃಶ್ಯಗಳನ್ನ ರೀ ಶೂಟ್​ ಮಾಡೋ ಕೆಲಸಕ್ಕೆ ಕೈ ಇಟ್ಟಿದ್ದಾರೆ ಯಶ್. ಇದೇ ಟೈಮ್​​ನಲ್ಲಿ ನಮ್ಮ ರಾಕಿ ನಟಿಸಿರೋ ಬಹು ದೊಡ್ಡ ಮತ್ತೊಂದು ಪ್ಯಾನ್ ವರ್ಲ್ಡ್​ ಸಿನಿಮಾ ರಾಮಾಯಣ ಬೇರೆ ಸೌಂಡ್​ ಮಾಡ್ತಾ ಇದೆ.

ಹೌದು, ರಾಮಾಯಣದ ಬಗ್ಗೆ ಹಲವು ಸಿನಿಮಾಗಳು ಧಾರವಾಹಿಗಳು ಬಂದು ಹೋಗಿವೆ. ಆದ್ರೆ ಈಗ ಬರ್ತಾ ಇರೋ ರಾಮಾಯಣ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದೆ. ಅದಕ್ಕೆ ಕಾರಣ ಯಶ್​ ಈ ಸಿನಿಮಾದಲ್ಲಿ ರಾವಣ ಆಗಿರೋದು, ಬಾಲಿವುಡ್ ನಟ ರಣಬೀರ್ ಕಪೂರ್ ರಾಮ ಆಗಿರೋದು. ಸೀತೆಯಾಗಿ ಸಾಯಿ ಪಲ್ಲವಿ ನಟಿಸಿರೋದು. ಅಷ್ಟೆ ಅಲ್ಲ ಈ ಸಿನಿಮಾ ಎರಡು ಪಾರ್ಟ್​ನಲ್ಲಿ ತೆರೆ ಕಾಣುತ್ತಿದ್ದು, ಬರೋಬ್ಬರಿ 2 ಸಾವಿರ ಕೋಟಿ ಬಜೆಟ್​​ನಲ್ಲಿ ತಯಾರಾಗುತ್ತಿದೆ.

ರಾವಣನೇ ಇಲ್ಲದೇ ರಾಮಾಯಣ ಪ್ರಮೋಷನ್​ ಯಾಕೆ..?

ನಿರ್ದೇಶಕ ನಿತೀಶ್ ತಿವಾರಿ ಕಲ್ಪನೆಯ ರಾಮಾಯಣ ಇಂಡಿಯನ್ ಸಿನೆಮಾದ ಇತಿಹಾಸವನ್ನೇ ಬದಲಾಯಿಸೋ ಮಟ್ಟಕ್ಕೆ ಪ್ಲ್ಯಾನ್ ಆಗಿದೆ. ಹೀಗಾಗಿ ಸಿನಿಮಾದ ಪ್ರಚಾರದ ಮೊದಲ ಹೆಜ್ಜೆ ಇಟ್ಟಿದ್ದು, ಅಮೇರಿಕಾದ ಲಾಸ್ ಏಂಜಲೀಸ್​ ನಲ್ಲಿ ಮೊದಲ ಪ್ರಮೋಷನ್​​ ಟೀಸರ್​​ ಪ್ರದರ್ಶಿಸಿದ್ದಾರೆ. ಆದ್ರೆ ಆ ಶೋನಲ್ಲಿ ನಟ ಯಶ್ ಇರಲಿಲ್ಲ ಅನ್ನೋದೇ ಈಗ ದೊಡ್ಡ ಚರ್ಚೆ ಆಗ್ತಿದೆ.

ಲಾಸ್​ ಏಂಜಲೀಸ್​​ನಲ್ಲಿ ರಾಮಾಯಣ ಪ್ರಮೋಷನ್​ ಶುರು ಮಾಡಿರೋ ನಿರ್ದೇಶಕ ನಿತೀಶ್ ತಿವಾರಿ, ಆ ಟೀಸರ್​ ಪ್ರದರ್ಶನಕ್ಕೆ ರಾಮಧಾರಿ ರಣಬೀರ್ ಕಪೂರ್​ರನ್ನ ಮಾತ್ರ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಟೀಸರ್​​​ ನೋಡಿದವರು ಸಿನಿಮಾದ ಗ್ರಾಪಿಕ್ಸ್​​ ಕೆಲಸವನ್ನ ಕೊಂಡಾಡಿದ್ದಾರೆ. ಅಷ್ಟೆ ಅಲ್ಲ ರಾಮಾಯಣ ಸಿನಿಮಾ ಬಗ್ಗೆ ರಣಬೀರ್​ ಮಾತನಾಡಿದ್ದು, ಆ ವಿಡಿಯೋ ವೈರಲ್ ಆಗುತ್ತಿದೆ.

"ಕಷ್ಟದ ಸಮಯದಲ್ಲಿ ಮನುಷ್ಯನ ಮನೋಬಲ ಹೇಗಿರಬೇಕು ಎಂಬುದನ್ನು ರಾಮನು ಕಲಿಸಿಕೊಡುತ್ತಾರೆ. ರಾಮ ಕರುಣೆ, ಧೈರ್ಯ, ಧರ್ಮ ಮತ್ತು ಕ್ಷಮಾ ಗುಣದ ಸಂಕೇತ. ಅದಕ್ಕಾಗಿಯೇ ಅವರನ್ನು 'ಮರ್ಯಾದಾ ಪುರುಷೋತ್ತಮ' ಎಂದು ಕರೆಯಲಾಗುತ್ತದೆ" ಎಂದು ರಣಬೀರ್ ಕಪೂರ್ ಹೇಳಿದ್ದಾರೆ.

ರಾಮಾಯಣದಿಂದ ರಾಕಿ ದೂರ ಇರಲು ಕಾರಣ ಟಾಕ್ಸಿಕ್

ಯೆಸ್, ರಾಕಿಂಗ್ ಸ್ಟಾರ್ ಯಶ್​ ರಾಮಾಯಣದಿಂದ ಅಂತರ ಕಾಯ್ದುಕೊಳ್ತಿದ್ದಾರೆ. ಅದಕ್ಕೆ ಕಾರಣ ಯಶ್​ ಹೆಗಲ ಮೇಲಿರೋ ಟಾಕ್ಸಿಕ್ ಸಿನಿಮಾ. ತಾನೇ ಬಂಡವಾಳ ಹೂಡಿ ಸಾವಿರಾರ ಕೋಟಿ ಕಲೆಕ್ಷನ್ ಮಾಡೋ ಟಾಕ್ಸಿಕ್​ ಸಿನಿಮಾ ಬಿಡುಗಡೆಯನ್ನ ಯಶ್ ಮುಂದೆ ತಳ್ಳಿದ್ದಾರೆ. ಜೂನ್ 4ಕ್ಕೆ ಈ ಸಿನಿಮಾ ತೆರೆ ಕಾಣುತ್ತೆ. ಅಷ್ಟೆ ಅಲ್ಲ ಟಾಕ್ಸಿಕ್‌ನ ಕೆಲ ದೃಶ್ಯಗಳನ್ನ ರೀ ಶೂಟ್ ಕೂಡ ಮಾಡಲಾಗುತ್ತಿದೆ. ಈ ಎಲ್ಲಾ ಕೆಲಸಗಳಿಂದ ಯಶ್ ರಾಮಾಯಣ ಚಿತ್ರದ ಪ್ರಮೋಷನ್​​ನಿಂದ ದೂರ ಉಳಿದಿದ್ದಾರೆ.

ನಾಳೆ ರಾಮಾಯಣ ಮೊದಲ ಟೀಸರ್​ ಬಿಡುಗಡೆ..!

ಲಾಸ್ ಏಂಜಲೀಸ್​ನಲ್ಲಿ ರಾಮಾಯಣ ಟೀಸರ್​ ನೋಡಿದವರು ಸಿಕ್ಕಾಪಟ್ಟೆ ಇಷ್ಟ ಪಟ್ಟಿದ್ದಾರೆ. ಈಗ ನಮ್ಮ ದೇಶದಲ್ಲಿ ಈ ಟೀಸರ್​ ಏಪ್ರಿಲ್​ 2ನೇ ತಾರೀಖು ಬಿಡುಗಡೆ ಆಗುತ್ತಿದೆ. 2ರಂದು ಹನುಮ ಜಯಂತಿಯ ಪವಿತ್ರ ದಿನದಂದು ರಾಮಾಯಣ ಚಿತ್ರದ ‘ರಾಮ’ನ ಸ್ಪೆಷಲ್ ಝಲಕ್ ರಿಲೀಸ್ ಆಗಲಿದೆ. ಈ ಟೀಸರ್​ನಲ್ಲಿ ಯಶ್​ ಇರ್ತಾರಾ ಅನ್ನೋ ಕುತೂಹಲವೂ ಇದೆ. ಹಾಗೆ ಇದೇ ವರ್ಷ ದೀಪಾವಳಿ ಹಬ್ಬಕ್ಕೆ ರಾಮಾಯಣ ವಿಶ್ವದಾದ್ಯಂತ ತೆರೆಗೆ ಬರಲಿದೆ.

ವಿಜಯ್ ಪಟೆದಾರ್, ಏಷ್ಯಾನೆಟ್ ಸುವರ್ಣ ನ್ಯೂಸ್