- Home
- Entertainment
- TV Talk
- ಹೆಣ್ಣು ಹುಲಿ ಸುಷ್ಮಾ ರಾಜ್ ಹೊಟ್ಟೆ ಮೇಲೆ ಮರಿ ಹುಲಿ, ಭಿನ್ನವಾಗಿ ನಡೆದ ಪ್ರೆಗ್ನೆನ್ಸಿ ಫೋಟೋ ಶೂಟ್
ಹೆಣ್ಣು ಹುಲಿ ಸುಷ್ಮಾ ರಾಜ್ ಹೊಟ್ಟೆ ಮೇಲೆ ಮರಿ ಹುಲಿ, ಭಿನ್ನವಾಗಿ ನಡೆದ ಪ್ರೆಗ್ನೆನ್ಸಿ ಫೋಟೋ ಶೂಟ್
ಕರಾವಳಿಯ ಹೆಣ್ಣು ಹುಲಿ ಸುಷ್ಮಾ ರಾಜ್ ಅಮ್ಮನಾಗ್ತಿದ್ದಾರೆ. ಅವರು ಭಿನ್ನವಾಗಿ ಪ್ರೆಗ್ನೆನ್ಸಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಹುಲಿ ಮತ್ತು ಹುಲಿ ಮರಿ ಥೀಮ್ ಫ್ಯಾನ್ಸ್ ಗಮನ ಸೆಳೆದಿದೆ.

ಅಮ್ಮನಾಗ್ತಿದ್ದಾರೆ ನಟಿ ಸುಷ್ಮಾ ರಾಜ್
ಮಂಗಳೂರಿನ ಹೆಣ್ಣು ಹುಲಿ ಎಂದೇ ಪ್ರಸಿದ್ಧಿ ಪಡೆದಿರುವ ನಟಿ ಸುಷ್ಮಾ ರಾಜ್ ಮನೆಗೆ ಹೊಸ ಅತಿಥಿಯ ಆಗಮನವಾಗ್ತಿದೆ. ಸುಷ್ಮಾ ರಾಜ್ ಶೀಘ್ರವೇ ಅಮ್ಮನಾಗಿ ಬಡ್ತಿ ಪಡೆಯಲಿದ್ದಾರೆ. ಈ ಖುಷಿಯನ್ನು ಸುಷ್ಮಾ ತಮ್ಮ ಫ್ಯಾನ್ಸ್ ಮುಂದೆ ಹಂಚಿಕೊಂಡಾಗಿದೆ.
ಸುಷ್ಮಾ ಬಯಸಿದಂತೆ ನಡೆದ ಸೀಮಂತ
ಸುಷ್ಮಾ ರಾಜ್, ಉಡುಪಿಯಲ್ಲಿ ಸರಳವಾಗಿ ಸೀಮಂತ ಮಾಡಿಕೊಳ್ಳಲು ಬಯಸಿದ್ದರಂತೆ. ಅದರಂತೆ ಅವರ ಪತಿ ನಿಶಾನ್ ನರೇಂದ್ರ ಸೀಮಂತಕ್ಕೆ ಏರ್ಪಾಡು ಮಾಡಿದ್ರು. ಸರಳವಾಗಿ, ಸುಂದರವಾಗಿ ಅವರ ಸೀಮಂತ ನಡೆದಿದೆ. ಕುಟುಂಬಸ್ಥರು, ಸಂಬಂಧಿಕರ ಮಧ್ಯೆ ಸುಷ್ಮಾ ಸೀಮಂತ ಮಾಡ್ಕೊಂಡಿದ್ದಾರೆ.
ಹುಲಿ – ಮರಿ ಥೀಮ್
ಸುಷ್ಮಾ ಅವರನ್ನು ಕರಾವಳಿ ಹೆಣ್ಣು ಹುಲಿ ಎಂದೇ ಕರೆಯಲಾಗುತ್ತದೆ. ಸೀರಿಯಲ್, ರಿಯಾಲಿಟಿ ಶೋಗಳಲ್ಲಿ ಮಿಂಚಿದ್ರೂ ಸುಷ್ಮಾ, ಹುಲಿ ಕುಣಿತದ ಮೂಲಕವೇ ಪ್ರಸಿದ್ಧಿ ಪಡೆದವರು. ಅವರ ಸೀಮಂತದ ಥೀಮ್ ಕೂಡ ಇದೇ ಆಗಿತ್ತು. ಹುಲಿ ಮತ್ತು ಮರಿ ಥೀಮ್ ನಲ್ಲಿ ಸೀಮಂತ ನಡೆದಿದೆ. ಸೀಮಂತ ನಡೆದ ಹಾಲ್ ನಲ್ಲಿ ಹುಲಿ, ಹುಲಿ ಮರಿ ಹಾಗೂ ಹುಲಿ ವೇಷದ ಚಿತ್ರಗಳು ಗಮನ ಸೆಳೆದಿವೆ.
ಸುಷ್ಮಾ ಹೊಟ್ಟೆ ಮೇಲೆ ಹುಲಿ ಮರಿ
ಸುಷ್ಮಾ ಭಿನ್ನವಾಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಹೊಟ್ಟೆ ಮೇಲೆ ಹುಲಿ ಮರಿ ಚಿತ್ರ ಬಿಡಿಸಲಾಗಿದೆ. ಅಚ್ಚು ಎನ್ನುವವರು ಹುಲಿ ಚಿತ್ರವನ್ನು ಸುಷ್ಮಾ ಹೊಟ್ಟೆಯ ಮೇಲೆ ಬಿಡಿಸಿದ್ದಾರೆ. ಹುಲಿ ಚಿತ್ರ ಅಧ್ಬುತವಾಗಿ ಮೂಡಿ ಬಂದಿದೆ.
ಹುಲಿ ಹೊಟ್ಟೆಯಲ್ಲಿ ಹುಲಿ ಮರಿ
ಹೆಣ್ಣು ಹುಲಿ ಹೊಟ್ಟೆಯಲ್ಲಿ ಹುಲಿಯೇ ಬರೋದು ಎನ್ನುವ ನಿರೀಕ್ಷೆ ಮನೆಯವರಿಗಿದೆ. ಹಾಗಾಗಿಯೇ ಸುಷ್ಮಾ ಹೊಟ್ಟೆ ಮೇಲೆ ಹುಲಿ ಮರಿ ಮಲಗುವ ಚಿತ್ರ ಬಿಡಿಸಲಾಗಿದೆ. ಸುಷ್ಮಾ ತಂದೆ ಕೂಡ ಹುಲಿವೇಷಧಾರಿಯಾಗಿದ್ರು. ತಮ್ಮನ್ನು ಗುರುತಿಸಿದ ಕಲೆಯನ್ನು ಮರೆಯಬಾರದು, ಅದಕ್ಕೆ ಗೌರವ ನೀಡ್ಬೇಕು ಎನ್ನುವ ಉದ್ದೇಶದಿಂದ ಈ ರೀತಿ ಫೋಟೋ ಶೂಟ್ ಮಾಡಲಾಗಿದೆ.
ಫೆಬ್ರವರಿಯಲ್ಲಿ ಹೆರಿಗೆ
ಸುಷ್ಮಾಗೆ ಫೆಬ್ರವರಿಯಲ್ಲಿ ಹೆರಿಗೆ ಆಗಲಿದೆ. ಅವ್ರ ತಂದೆ ತೀರಿಹೋಗಿದ್ದು ಫೆಬ್ರವರಿಯಲ್ಲಿ. ಸುಷ್ಮಾ ಡೆಲಿವರಿ ಆಗ್ತಿರೋದು ಫೆಬ್ರವರಿಯಲ್ಲಿ. ಹಾಗಾಗಿ ಅವ್ರ ತಂದೆಯೇ ಮಲಿ ಹುಲಿಯಾಗಿ ಹುಟ್ಟಿಬರ್ತಾರೆ ಎನ್ನುವ ಆಸೆ ಕುಟುಂಬಸ್ಥರಲ್ಲಿದೆ.
ಪ್ರೀತಿಸಿ ಮದುವೆ ಆಗಿರುವ ಸುಷ್ಮಾ ರಾಜ್
ಸುಷ್ಮಾ ರಾಜ್ ಹಾಗೂ ನಿಶಾನ್ ಪ್ರೀತಿಸಿ ಮದುವೆ ಆಗಿದ್ದಾರೆ. 10 ವರ್ಷಗಳ ಕಾಲ ಪ್ರೀತಿಯಲ್ಲಿದ್ದ ಅವರು, ಕೆಲ ವರ್ಷಗಳ ಹಿಂದೆಯೇ ತಮ್ಮ ಪ್ರೀತಿಯನ್ನು ಫ್ಯಾನ್ಸ್ ಮುಂದೆ ಇಟ್ಟಿದ್ದರು. 2024ರಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸುಷ್ಮಾ ರಾಜ್ ತಮ್ಮ ಮದುವೆ, ಮಹೆಂದಿ, ಅರಿಶಿನ ಸೇರಿದಂತೆ ಎಲ್ಲ ಫೋಟೋ, ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಈಗ ಸೀಮಂತದ ಎಲ್ಲ ವಿಡಿಯೋ, ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಸುಷ್ಮಾ ರಾಜ್ ವೃತ್ತಿ ಜೀವನ
ಸುಷ್ಮಾ ರಾಜ್ ಹುಬ್ಬಳ್ಳಿ ಹುಡುಗ, ಮಂಗಳೂರು ಹುಡುಗಿ ಸೀರಿಯಲ್, ಮಾಸ್ತಿಗುಡಿ ಸಿನಿಮಾದಲ್ಲಿ ನಟಿಸಿದ್ದಾರೆ. ಇದಲ್ಲದೆ ಇಂಡಿಯನ್ ರಿಯಾಲಿಟಿ ಶೋನಲ್ಲಿ ಟಾಪ್ 4 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ಸುಷ್ಮಾ ರಾಜ್, ಮಾಡೆಲ್ ಕೂಡ ಹೌದು. ಅನೇಕ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಅವರು, ಫಿಟ್ನೆಸ್ ತರಬೇತಿ ನೀಡ್ತಾರೆ. ಸಾಕಷ್ಟು ಕಡೆ ಹುಲಿ ಕುಣಿತ ಪ್ರದರ್ಶನ ಮಾಡಿರುವ ಅವರು, ಹುಲಿ ಕುಣಿತದಿಂದಲೇ ಹೆಚ್ಚು ಪ್ರಸಿದ್ಧಿ ಪಡೆದಿದ್ದಾರೆ. ಇನ್ನು ಅವರ ಪತಿ ನಿಶಾನ್ ಕೂಡ ಫಿಟ್ನೆಸ್ ತರಬೇತುದಾರರಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

