Malaika Arora Harsh Mehta dating: ಮಲೈಕಾ ಅರೋರಾ ಮತ್ತು ಹರ್ಷ್ ಮೆಹ್ತಾ ನಡುವೆ ಏನೋ ನಡೀತಿದೆ ಅನ್ನೋ ಅನುಮಾನಕ್ಕೆ ಈಗ ಮತ್ತಷ್ಟು ಪುಷ್ಟಿ ಸಿಕ್ಕಿದೆ! ಕೃತಿಕಾ ಕಮ್ರಾ ರಿಸೆಪ್ಷನ್ ಪಾರ್ಟಿಯಲ್ಲಿ ಹರ್ಷ್ ಕ್ಯಾಮೆರಾ ಕಣ್ಣಿಂದ ತಪ್ಪಿಸಿಕೊಂಡು ಓಡಿದ್ದೇಕೆ? ಮಲೈಕಾ ಮಾತ್ರ ಮಿಂಚುತ್ತಿದ್ದರೆ, ಹರ್ಷ್ ಹಿಂಬಾಗಿಲಿನಿಂದ ಎಂಟ್ರಿ ಕೊಟ್ಟಿದ್ದು ಯಾಕೆ?.
ಕೃತಿಕಾ ಕಮ್ರಾ ಮತ್ತು ಗೌರವ್ ಕಪೂರ್ ಈಗ ಅಧಿಕೃತವಾಗಿ ದಂಪತಿಗಳಾಗಿದ್ದಾರೆ. ಕಿರುತೆರೆ ನಟಿ ಕೃತಿಕಾ ಕಮ್ರಾ ಮಾರ್ಚ್ 11, 2026 ರಂದು ಕ್ರೀಡಾ ನಿರೂಪಕ ಗೌರವ್ ಕಪೂರ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮುಂಬೈನ ಬಾಂದ್ರಾದಲ್ಲಿರುವ ತಮ್ಮ ನಿವಾಸದಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬದ ಸಮ್ಮುಖದಲ್ಲಿ ಈ ಜೋಡಿ ಸರಳವಾಗಿ ವಿವಾಹವಾದರು. ರಿಜಿಸ್ಟರ್ ಮ್ಯಾರೇಜ್ ನಂತರ ಸಣ್ಣದೊಂದು ಪೂಜೆಯನ್ನು ಇಟ್ಟುಕೊಳ್ಳಲಾಗಿತ್ತು. ಇವರ ಮದುವೆಯ ಫೋಟೋಗಳು ವೈರಲ್ ಆದ ಬೆನ್ನಲ್ಲೇ ರಿಸೆಪ್ಷನ್ ಪಾರ್ಟಿ ಕೂಡ ಸುದ್ದಿಯಲ್ಲಿದೆ. ಈ ಸಮಾರಂಭದಲ್ಲಿ ಹಲವು ಕ್ರಿಕೆಟಿಗರು ಮತ್ತು ಬಾಲಿವುಡ್ ತಾರೆಯರು ಭಾಗವಹಿಸಿದ್ದರು, ಅವರಲ್ಲಿ ಮಲೈಕಾ ಅರೋರಾ ಪ್ರಮುಖರಾಗಿದ್ದರು. ಆದರೆ ಎಲ್ಲರ ಗಮನ ಸೆಳೆದಿದ್ದು ಮಾತ್ರ ಮಲೈಕಾ ಅವರ ಆಪ್ತ ಗೆಳೆಯ ಎನ್ನಲಾದ ಹರ್ಷ್ ಮೆಹ್ತಾ.
ಗೌರವ್ ಮತ್ತು ಕೃತಿಕಾ ರಿಸೆಪ್ಷನ್‌ನಲ್ಲಿ ಕ್ಯಾಮೆರಾಗೆ ಸಿಗದ ಹರ್ಷ್ ಮೆಹ್ತಾ
ಮಲೈಕಾ ಅರೋರಾ ಅವರ ಗೆಳೆಯ ಎಂದು ಹೇಳಲಾಗುತ್ತಿರುವ ಹರ್ಷ್ ಮೆಹ್ತಾ, ಮಾರ್ಚ್ 12ರ ರಾತ್ರಿ ನಡೆದ ಈ ಪಾರ್ಟಿಯಲ್ಲಿ ಪಾಪರಾಜಿಗಳಿಂದ (Paparazzi) ದೂರ ಉಳಿಯಲು ಪ್ರಯತ್ನಿಸಿದರು. ಮಲೈಕಾ ಅರೋರಾ ಸಿಲ್ವರ್ ಗೌನ್ ಧರಿಸಿ ಫೋಟೋಗಳಿಗೆ ಪೋಸ್ ನೀಡಿದರೆ, ಹರ್ಷ್ ಮಾತ್ರ ಲೋ-ಪ್ರೊಫೈಲ್ ಕಾಯ್ದುಕೊಂಡರು. ಅವರು ಮುಖ್ಯ ರೆಡ್ ಕಾರ್ಪೆಟ್ ಮೂಲಕ ಬರದೇ, ಕ್ಯಾಮೆರಾಗಳಿಗೆ ಸಿಗದಂತೆ ಹಿಂಬಾಗಿಲಿನಿಂದ ಪ್ರವೇಶಿಸಿದರು ಎಂದು ವರದಿಯಾಗಿದೆ. ಅಷ್ಟೆಲ್ಲಾ ಪ್ರಯತ್ನಗಳ ನಡುವೆಯೂ ಪಾಪರಾಜಿಗಳು ಹರ್ಷ್ ಪಾರ್ಟಿಯೊಳಗೆ ಹೋಗುವ ದೃಶ್ಯವನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾದರು. ಈ ಜೋಡಿ ತಮ್ಮ ಸಂಬಂಧವನ್ನು ಇನ್ನೂ ಅಧಿಕೃತವಾಗಿ ಒಪ್ಪಿಕೊಳ್ಳದ ಕಾರಣ ಹರ್ಷ್ ಈ ರೀತಿ ವರ್ತಿಸಿರಬಹುದು ಎಂದು ಹೇಳಲಾಗುತ್ತಿದೆ.
ಮಲೈಕಾ ಮತ್ತು ಹರ್ಷ್ ಈ ಹಿಂದೆ ಎಲ್ಲೆಲ್ಲಿ ಕಾಣಿಸಿಕೊಂಡಿದ್ದರು?
ನವೆಂಬರ್ 26, 2025 ರಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಈ ಜೋಡಿ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿತ್ತು. ಆಗಲೂ ಅವರು ಜೊತೆಯಾಗಿ ಫೋಟೋಗಳಿಗೆ ಸಿಗಬಾರದೆಂಬ ಕಾರಣಕ್ಕೆ ದೂರ ದೂರವೇ ನಡೆದು ಬಂದಿದ್ದರು. ಆದರೆ ಪಾರ್ಕಿಂಗ್ ಏರಿಯಾದಲ್ಲಿ ಅವರಿಬ್ಬರೂ ಒಂದೇ ಕಾರಿನಲ್ಲಿ ಹೊರಟ ದೃಶ್ಯ ಸೆರೆಯಾಗಿತ್ತು. ಇದಕ್ಕೂ ಮುನ್ನ ಮುಂಬೈನಲ್ಲಿ ನಡೆದ ಎನ್ರಿಕ್ ಇಗ್ಲೇಷಿಯಸ್ ಸಂಗೀತ ಕಚೇರಿಯ ವಿಐಪಿ ವಿಭಾಗದಲ್ಲಿ ಇವರಿಬ್ಬರೂ ಒಟ್ಟಿಗೆ ಡ್ಯಾನ್ಸ್ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಅಷ್ಟೇ ಅಲ್ಲದೆ, ಫೆಬ್ರವರಿ 2026 ರಲ್ಲಿ ಇಟಲಿಗೆ ಇವರು ಪ್ರವಾಸ ಹೋಗಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ರೋಮ್‌ನ ಪ್ರಸಿದ್ಧ ಟ್ರೆವಿ ಫೌಂಟೇನ್ ಬಳಿ ಇವರು ಪ್ರೇಮಿಗಳ ವಾರವನ್ನು ಆಚರಿಸಿದ್ದರು ಎಂದು ವರದಿಗಳು ತಿಳಿಸಿವೆ.
ಯಾರು ಈ ಹರ್ಷ್ ಮೆಹ್ತಾ?
ಹರ್ಷ್ ಮೆಹ್ತಾ ಮುಂಬೈ ಮೂಲದವರು. 33 ವರ್ಷ. 50 ವರ್ಷದ ನಟಿ ಮಲೈಕಾ ಅರೋರಾ ಮತ್ತು ಹರ್ಷ್ ನಡುವಿನ 17 ವರ್ಷಗಳ ವಯಸ್ಸಿನ ಅಂತರ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಹರ್ಷ್ ಮೆಹ್ತಾ ಅವರು ಶ್ರೀಮಂತ ಕುಟುಂಬದವರಾಗಿದ್ದು, ವೃತ್ತಿಯಲ್ಲಿ ವಜ್ರದ ವ್ಯಾಪಾರಿ (Diamond Merchant) ಎಂದು ತಿಳಿದುಬಂದಿದೆ.
ಆದರೆ, ರೆಡ್ಡಿಟ್‌ನಂತಹ ವೇದಿಕೆಗಳಲ್ಲಿ ಅಭಿಮಾನಿಗಳು ಇವರ ಸಂಬಂಧದ ಬಗ್ಗೆ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹರ್ಷ್ ಮೆಹ್ತಾ ಮಲೈಕಾ ಅವರ ಮ್ಯಾನೇಜರ್ ಇರಬಹುದು, ಅದಕ್ಕಾಗಿಯೇ ಅವರು ಎಲ್ಲಾ ಕಡೆ ಜೊತೆಯಲ್ಲಿ ಹೋಗುತ್ತಾರೆ ಎಂದು ಕೆಲವರು ಕಮೆಂಟ್ ಮಾಡಿದರೆ, "ಅವರು ಈ ಹಿಂದೆಯೂ ಮಲೈಕಾ ಅವರ ಶೂಟಿಂಗ್ ಸೆಟ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ" ಎಂದು ಮತ್ತೆ ಕೆಲವರು ಹೇಳಿದ್ದಾರೆ. ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಗಳು ಇದುವರೆಗೆ ಹೊರಬಂದಿಲ್ಲ.