ಬಹುಕೋಟಿ ಬೆಲೆ ಬಾಳೋ ಕಾರುಗಳು, ಕೈಗೆ ಕಾಲಿಗೆ ಆಳು ಕಾಳು ಜೈಕಾರಕ್ಕೆ ಕೋಂಟ್ಯಾಂತರ ಅಭಿಮಾನಿಗಳು, ಐಶಾರಾಮಿ ಬದುಕು ಎಲ್ಲವೂ ಇದ್ದು ವಿಜಯ್​​ ರಾಜಕೀಯಕ್ಕೆ ಬಂದಿದ್ದಾರೆ. ರಾಜಕೀಯ ಅಂದ್ಮೇಲೆ ಗೊತ್ತಲ್ವಾ..?

ನಟ ದಳಪತಿ ವಿಜಯ್​ ತಮಿಳುನಾಡಿನ ಶ್ರೀಮಂತ ನಟ.. ಬರೋಬ್ಬರಿ 600 ಕೋಟಿಗೂ ಹೆಚ್ಚು ಆಸ್ತಿ ಪಾಸ್ತಿ ಹೊಂದಿರೋ ಸ್ಟಾರ್​​ ವಿಜಯ್. ಆದ್ರೆ ಇದನ್ನೆಲ್ಲಾ ವಿಜಯ್​ ಸಂಪಾದಿಸಿದ್ದು, ಸಿನಿಮಾ ರಂಗದಿಂದ. ಈಗ ವಿಜಯ್​ ಬಣ್ಣಕ್ಕೆ ಗುಡ್​​​ಬೈ ಹೇಳಿ​​​​​​​​ ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದಾರೆ. ಹಾಗಾದ್ರೆ ವಿಜಯ್​ ಈಗ ಎಷ್ಟು ದುಡಿತಾರೆ..? ಸಿಎಂ ವಿಜಯ್​​ಗೆ ಸಂಬಳ ಎಷ್ಟು..? ದಳಪತಿ ವಿಜಯ್​.. ತಮಿಳು ಸಿನಿಮಾ ರಂಗದ ಶಕ್ತಿಯಾಗಿ ಮೆರೆದ ಹೀರೋ.. ರಜನಿಕಾಂತ್​​, ಕಮಲ್​​ ಹಾಸನ್​ರನ್ನೇ ಹಿಂದಿಕ್ಕಿ ಅತಿ ಹೆಚ್ಚು ಅಭಿಮಾನಿ ಬಳಗ ಹೊಂದಿರೋ ಸ್ಟಾರ್​ ವಿಜಯ್. ತಮಿಳು ಚಿತ್ರರಂಗದಲ್ಲಷ್ಟೇ ಅಲ್ಲ ಭಾರತೀಯ ಚಿತ್ರರಂಗದಲ್ಲೇ ಒಂದು ಸಿನಿಮಾಗೆ ಅತಿ ಹೆಚ್ಚು ಸಂಭಾವನೆ ಪಡೆದ ಹೆಗ್ಗಳಿಕೆ ವಿಜಯ್ ಹೆಸರದಲ್ಲಿದೆ.

Add Asianetnews Kannada as a Preferred SourcegooglePreferred

ಬಹುಕೋಟಿ ಬೆಲೆ ಬಾಳೋ ಕಾರುಗಳು, ಕೈಗೆ ಕಾಲಿಗೆ ಆಳು ಕಾಳು ಜೈಕಾರಕ್ಕೆ ಕೋಂಟ್ಯಾಂತರ ಅಭಿಮಾನಿಗಳು, ಐಶಾರಾಮಿ ಬದುಕು ಎಲ್ಲವೂ ಇದ್ದು ವಿಜಯ್​​ ರಾಜಕೀಯಕ್ಕೆ ಬಂದಿದ್ದಾರೆ. ರಾಜಕೀಯ ಅಂದ್ಮೇಲೆ ಗೊತ್ತಲ್ವಾ..? ಆರೋಪ ಪ್ರತ್ಯಾರೋಪ ಇದ್ದೇ ಇರುತ್ತೆ. ಅದೆಲ್ಲವನ್ನ ಸಹಿಸಿಕೊಂಡು ಜನ ಸೇವೆ ಮಾಡುತ್ತಿದ್ದಾರೆ ವಿಜಯ್.. ಹಾಗಾದ್ರೆ ಸಿನಿಮಾ ಒಂದಕ್ಕೆ 200 ಕೋಟಿ ಸಂಭಾವನೆ ಪಡೆಯುತ್ತಿದ್ದ ವಿಜಯ್​​​​​ಗೆ ರಾಜಕಾರಣಿ ಆಗಿ ಎಷ್ಟು ಸಂಬಳ ಪಡೀತಾರೆ ಅಂತ ನೋಡಿದ್ರೆ ಆಶ್ಚರ್ಯ ಆಗುತ್ತೆ. ವಿಜಯ್ ಒಟ್ಟು ಆಸ್ತಿ ಬರೋಬ್ಬರಿ 624 ಕೋಟಿಗೂ ಹೆಚ್ಚು.. ಐಶಾರಾಮಿ ಕಾರುಗಳು, ಬಾಡಿಗೆ ಬರೋ ದೊಡ್ಡ ಬಂಗಲೆಗಳು, ಬ್ಯುಸಿನೆಸ್​​, ಎಲ್ಲವೂ ವಿಜಯ್ ಬಳಿ ಇದೆ. ವಿಜಯ್​ ಒಂದು ವರ್ಷಕ್ಕೆ ಬರೋಬ್ಬರಿ 183.5 ಕೋಟಿಯಷ್ಟು ಆದಾಯ ಬರುತ್ತೆ.. ಇದನ್ನ ವಿಜಯ್ ಚುನಾವಣೆಗು ಮೊದ್ಲೇ ಘೋಷಿಸಿಕೊಂಡಿದ್ದಾರೆ.

ಸಿಎಂ ವಿಜಯ್​​ಗೆ ವರ್ಷಕ್ಕೆ ಸಿಗುತ್ತೆ 34 ಲಕ್ಷ ಭತ್ಯೆ..!

ಸಿನಿಮಾ ಒಂದಕ್ಕೆ 200 ಕೋಟಿ ಸಂಭಾವನೆ ಪಡೆಯುತ್ತಿದ್ದ ವಿಜಯ್ ಈಗ ನಾಯಕ ಅಲ್ಲ. ಜನನಾಯಕ. ಹೀಗಾಗಿ ದಳಪತಿ ತಿಂಗಳಿಗೆ ₹2.85 ಲಕ್ಷದಿಂದ 3 ಲಕ್ಷದವರೆಗೆ ಸಂಬಳವನ್ನು ಮುಖ್ಯಮಂತ್ರಿಯಾಗಿ ಪಡೆಯಲಿದ್ದಾರೆ. ಆ ಪೈಕಿ ₹1.05 ಲಕ್ಷ ಮೂಲ ವೇತನ ಆದರೆ , ₹87,000 ಕ್ಷೇತ್ರ ಭತ್ಯೆ ಮತ್ತು ₹75,000 ಕಚೇರಿ ಭತ್ಯೆ ಸೇರಿದೆ. ಅಲ್ಲಿಗೆ ವರ್ಷಕ್ಕೆ 34 ಲಕ್ಷ ಹಣವನ್ನು ವಿಜಯ್ ಸಿಎಂ ಆಗಿ ದುಡಿಯಲಿದ್ದಾರೆ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವ ವಿಜಯ್‌ಗೆ ಚೆನ್ನೈನಲ್ಲಿ ಸುಸಜ್ಜಿತ ಸರ್ಕಾರಿ ಬಂಗಲೆಯನ್ನು ನೀಡಲಾಗುತ್ತೆ. Z+ ಶ್ರೇಣಿಯ ಭದ್ರತೆ ಒದಗಿಸಲಾಗುತ್ತೆ.

ವಿಜಯ್ ಸುತ್ತ ಮುತ್ತ ಖಾಸಗಿ ಬಾಡಿಗಾರ್ಡ್‌ಗಳ ಜಾಗದಲ್ಲಿ ಶಸ್ತ್ರ ಸಜ್ಜಿತ ಪಡೆ ಇರಲಿದೆ. ಹೋದಲ್ಲಿ..ಬಂದಲ್ಲಿ.. ಬೆಂಗಾವಲು ವಾಹನಗಳು ಇವರನ್ನು ಹಿಂಬಾಲಿಸಲಿವೆ. ಇದರ ಜೊತೆ ಬುಲೆಟ್ ಪ್ರೂಫ್ ಎಸ್‌ಯುವಿಯನ್ನು ಕೂಡ ನೀಡಲಾಗುತ್ತೆ. ಇವರ ಭದ್ರತೆಯ ಜವಾಬ್ಧಾರಿ ಪೊಲೀಸ್ ಮತ್ತು ಗುಪ್ತಚರ ಇಲಾಖೆಗಳದ್ದು. ವಿಜಯ್ ಪ್ರಯಾಣದ ಎಲ್ಲಾ ಖರ್ಚು ವೆಚ್ಚವನ್ನ ಸರ್ಕಾರವೇ ಬರಿಸುತ್ತೆ. ಒಟ್ನಲ್ಲಿ ಚಿತ್ರರಂಗದಲ್ಲಿ ಕೋಟಿ ಕೋಟಿ ದುಡಿಯುತ್ತಿದ್ದ ದಳಪತಿ ವಿಜಯ್ ಈಗ ಜನ ಸೇವಕ ಆಗಿದ್ದಾರೆ. ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ತಿಂಗಳಿಗೆ 3 ಲಕ್ಷ ಭತ್ಯೆ ಪಡೆದು ಜೀವನ ನಡೆಸಬೇಕಿದೆ.