ದಳಪತಿ ವಿಜಯ್ ಈಗ ಸೂಪರ್ ಪವರ್ ಪಡೆದುಕೊಂಡಿರೋ ತಮಿಳುನಾಡು ಮುಖ್ಯಮಂತ್ರಿ. ತಮಿಳುನಾಡು ಸಿನಿಮಾ ರಂಗದ ರಾಜ್ಯಭಾರ ಮಾಡಿರೋ ವಿಜಯ್ ಈಗ ಇಡೀ ದ್ರಾವಿಡರ ನಾಡಿಗೆ ನ್ಯಾಯ ಕೊಡಬೇಕಿದೆ.
ಆ ಒಂದು ಹೇಳಿಕೆ.. ಅದೊಂದು ಹೇಳಿಕೆಯೇ ಇವತ್ತು ತಮಿಳುನಾಡಿನ ರಾಜಕೀಯದ ಬಗ್ಗೆ ದೊಡ್ಡ ಕುತೂಹಲ ಮೂಡಿಸಿದೆ. ನಟ ದಳಪತಿ ವಿಜಯ್ ರಾಜಕೀಯ ಭವಿಷ್ಯಕ್ಕೆ ಆಯಸ್ಸು ಇಷ್ಟೇನಾ..? ಅಂತ ಪ್ರಶ್ನೆ ಹುಟ್ಟುಹಾಕಿದೆ. ಆ ಸ್ಟೇಟ್ಮೆಂಟ್ ಕೊಟ್ಟವರು ಮತ್ಯಾರು ಅಲ್ಲ.. ಭಾರತೀಯ ಚಿತ್ರರಂಗದ ಸೆಲೆಬ್ರಿಟಿಗಳ ಭವಿಷ್ಯ ಹೇಳೋ ಜೋತಿಷಿ ವೇಣುಸ್ವಾಮಿ.. ಹಾಗಾದ್ರೆ ದಳಪತಿಯ ರಾಜಕೀಯ ಭವಿಷ್ಯ ಹೇಗಿದೆ..?

ತಮಿಳುನಾಡು ಸೂಪರ್ ಸ್ಟಾರ್ ದಳಪತಿ ವಿಜಯ್ ಈಗ ಸೂಪರ್ ಪವರ್ ಪಡೆದುಕೊಂಡಿರೋ ತಮಿಳುನಾಡು ಮುಖ್ಯಮಂತ್ರಿ. ತಮಿಳುನಾಡು ಸಿನಿಮಾ ರಂಗದ ರಾಜ್ಯಭಾರ ಮಾಡಿರೋ ವಿಜಯ್ ಈಗ ಇಡೀ ದ್ರಾವಿಡರ ನಾಡಿಗೆ ನ್ಯಾಯ ಕೊಡಬೇಕಿದೆ. ಹತ್ತು ಹಲವು ಸವಾಲುಗಳು ಸಿಎಂ ವಿಜಯ್ ಸುತ್ತ ಇರುವಾಗ್ಲೆ, ದಳಪತಿ ರಾಜಕೀಯದ ಆಘಾತಕಾರಿ ಭವಿಷ್ಯವಾಣಿ ಒಂದು ಹೊರ ಬಂದಿದೆ. ತಮಿಳುನಾಡು ಎಲೆಕ್ಷನ್ ರಿಸಲ್ಟ್ ಅಕ್ಷರಶಃ ಒಂದು ಬಿಗ್ ಬಜೆಟ್ ಸಿನೆಮಾದ ಕ್ಲೈಮ್ಯಾಕ್ಸ್ ತರಾನೇ ಇತ್ತು.
ವಿಜಯ್ ತಮಿಳಗ ವೆಟ್ರಿ ಕಳಗಂ ಬರೋಬ್ಬರಿ 108 ಸೀಟ್ ಗೆದ್ದು ಬಹುಮನ ಪಡೆಯೋಕೆ ಹಣಗಾಡಿದ್ರು. ಈ ಪ್ರೊಸೆಸ್ ಹೇಗಿತ್ತು ಅಂದ್ರೆ ಒಂದ್ ತರ ವಿಜಯ್ರ ಸರ್ಕಾರ್ ಸಿನಿಮಾದ ಹಾಗೇ ಇತ್ತು. ಇನ್ಮುಂದೆ ವಿಜಯ್ ರಾಜಕೀಯ ಹೊಸ ಹೊಸ ರೋಚಕ ತಿರುವುಗಳನ್ನ ಪಡೆಯಲಿದೆ. ಆ ತಿರುವುಗಳಲ್ಲೊಂದು, ವಿಜಯ್ ರಾಜಕೀಯಕ್ಕೆ ಕೇವಲ ಒಂದು ವರ್ಷ ಅಷ್ಟೇ ಆಯಸ್ಸು ಅನ್ನೋ ಮಾತು. ಇದನ್ನ ಕೇಳೋಕೆ ಸುಳ್ಳು ಅನ್ನಿಸಿದ್ರೂ, ಇಲ್ಲ ಇಲ್ಲ ಇದೇ ಸತ್ಯ ಎನ್ನುತ್ತಿದೆ ಜ್ಯೋತಿಷ್ಯ ಶಾಸ್ತ್ರ.. ವೇಣು ಸ್ವಾಮಿ ಗೊತ್ತಲ್ಲವಾ..? ಪಕ್ಕದ ಮನೆ ಆಂಧ್ರದ ಸ್ಟಾರ್ ಜ್ಯೋತಿಷಿ.
ಕಲಾವಿದರಿಂದ ಹಿಡಿದು ರಾಜಕಾರಣಿಗಳವರೆಗೆ ಮುಂದಿನ ಜೀವನ ಹೀಗೀಗೇ ಅಂತ ನಿಖರವಾಗಿ ನಾನು ಹೇಳಬಲ್ಲೆ ಎಂದು ಹೇಳಿಕೊಳ್ಳುವ ವ್ಯಕ್ತಿ. ರಕ್ಷಿತ್ ಶೆಟ್ಟಿ ಅವರಿಂದ ದೂರವಾಗುವಂತೆ ರಶ್ಮಿಕಾಗೆ ಸಲಹೆಯನ್ನೂ ನೀಡಿ ರಶ್ಮಿಕಾ ಅವರ ಗಜಕೇಸರಿ ಯೋಗಕ್ಕೆ ಕಾರಣವಾದವರು ಕೂಡ ಇವರೇ. ವೇಣು ಸ್ವಾಮಿ ಸದ್ಯ ತಮಿಳುನಾಡಿನ ರಾಜಕಾರಣದ ಕುರಿತು ಭವಿಷ್ಯ ಹೇಳಿದ್ಧಾರೆ. ವೇಣು ಸ್ವಾಮಿ ವಿಜಯ್ ಸಿಎಂ ಆದರೂ ಸರ್ಕಾರ ಉಳಿಯುವುದು ಕಷ್ಟ ಎಂದಿದ್ದಾರೆ.
ವಿಜಯ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರೂ, ಆ ಅಧಿಕಾರ ಅವರಿಗೆ ದೀರ್ಘಕಾಲ ಉಳಿಯುವುದಿಲ್ಲ, ವಿಜಯ್ ಸಿಎಂ ಆದ ಒಂದು ತಿಂಗಳು, ಆರು ತಿಂಗಳು ಅಥವಾ ಅಬ್ಬಬ್ಬಾ ಅಂದರೆ ಒಂದು ವರ್ಷದೊಳಗೆ ತಮಿಳುನಾಡಿನಲ್ಲಿ ಮತ್ತೆ ಚುನಾವಣೆ ಎದುರಾಗುವ ಸಾಧ್ಯತೆ ಶೇಕಡ 100 ರಷ್ಟಿದೆ ಎಂದಿದ್ದಾರೆ. ಮತ್ತೊಂದು ಇಂಟ್ರೆಸ್ಟಿಂಗ್ ವಿಷ್ಯಾ ಏನ್ ಗೊತ್ತಾ..? ವಿಜಯ್ ಇಂದು ಸಿಎಂ ಆಗೋಕೆ ನಟಿ ತ್ರಿಷಾನೇ ಕಾರಣ ಅಂತ ವೇಣುಸ್ವಾಮಿ ಹೇಳಿದ್ದಾರೆ. ವಿಜಯ್ ಪಕ್ಕದಲ್ಲಿ ತ್ರಿಶಾ ಇಲ್ಲದಿದ್ದರೆ ಕಥೆ ಬೇರೆಯದ್ದೇ ಇರುತ್ತಿತ್ತು ಎಂದಿದ್ದಾರೆ.
ರಾಜಕೀಯ ವಲಯದಲ್ಲಿ ಚರ್ಚೆ
ಇಷ್ಟೊಂದು ದೊಡ್ಡ ಮಟ್ಟದ ರಾಜಕೀಯ ಯಶಸ್ಸು ಪಡೆಯೋಕೆ ವಿಜಯ್ ಮತ್ತು ತ್ರಿಶಾ ಇಬ್ಬರ ಜಾತಕ ಚಕ್ರಗಳ ಗ್ರಹಗತಿಗಳ ಮಿಲನ. ತ್ರಿಶಾ ಜಾತಕದ ಪ್ರಭಾವ ವಿಜಯ್ ಗೆ ಅದೃಷ್ಟ ಹೆಚ್ಚಿಸಿದೆ ಎಂದಿದ್ದಾರೆ. ವೇಣು ಸ್ವಾಮಿಯ ಈ ಭವಿಷ್ಯ ವಿಜಯ್ ಅಭಿಮಾನಿಗಳನ್ನು ಕೆರಳಿಸಿದೆ. ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟುಹಾಕಿದೆ. ಯಾಕಂದ್ರೆ ವಿಜಯ್ ರಾಜಕೀಯದ ಬಗ್ಗೆ ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ ಮೇ 7ರಂದು ಒಂದು ಸ್ಟೇಟ್ಮೆಂಟ್ ಕೊಟ್ಟಿದ್ರು.
ನಾವು ಮುಂದಿನ ಆರು ತಿಂಗಳ ಕಾಲ ಹೊಸ ಸರ್ಕಾರಕ್ಕೆ ಯಾವುದೇ ತೊಂದರೆ ಕೊಡಲ್ಲ, ಸುಮ್ಮನೆ ಕೂತು ವಾಚ್ ಮಾಡ್ತೀವಿ ಅಂತ ಘೋಷಿಸಿದ್ರು. ಈ ಸ್ಟೇಟ್ಮೆಂಟ್ಗೂ ಸೆಲೆಬ್ರಿಟಿ ಜ್ಯೋತಿಷಿ ವೇಣುಸ್ವಾಮಿ ಹೇಳಿಕೆಗೂ ಈಗ ಡೀಕೋಡ್ ಮಾಡಲಾಗ್ತಿದೆ. ಇನ್ನೊಂದು ಕಡೆ, ಹೊಸ ಮುಖ್ಯಮಂತ್ರಿ ವಿಜಯ್ ಎಲೆಕ್ಷನ್ ಕ್ಯಾಂಪೇನ್ ಸಮಯದಲ್ಲಿ ಹೆಣ್ಣುಮಕ್ಕಳಿಗೆ ತಿಂಗಳಿಗೆ 2,500 ರೂಪಾಯಿ, ಆರು ಗ್ಯಾಸ್ ಸಿಲಿಂಡರ್ ಫ್ರೀ, ಅಂತ ದೊಡ್ಡ ಮಟ್ಟದ ಭರವಸೆ ನೀಡಿದ್ದಾರೆ.
ಆದ್ರೆ ಈಗಿನ ಪರಿಸ್ಥಿತಿ ನೋಡಿದ್ರೆ ಇದನ್ನ ಜಾರಿ ಮಾಡೋದು ಕಷ್ಟಸಾಧ್ಯ. ಒಂದು ವೇಳೆ ವಿಜಯ್ ಕೊಟ್ಟ ಭರವಸೆ ಈಡೇರಿಸುವಲ್ಲಿ ಸೋತರೆ ಆಗ ಡಿಎಂಕೆ ಅಖಾಡಕ್ಕೆ ಇಳಿಯೋದು ಗ್ಯಾರಂಟಿ. ಅಂದ್ಹಾಗೇ ಸೆಲೆಬ್ರಿಟಿ ಜ್ಯೋತಿಷಿ ವೇಣುಸ್ವಾಮಿ ಹೇಳಿದ್ದೆಲ್ಲವೂ ನಡೆದಿದೆ ಅಂತಲ್ಲ. ಜಗನ್ ವಿಚಾರದಲ್ಲಿ ವೇಣುಸ್ವಾಮಿ ನುಡಿದಿದ್ದ ಭವಿಷ್ಯ ಸುಳ್ಳಾಗಿತ್ತು. ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿ ಪಕ್ಷದ ಜಗನ್ ಮೋಹನ್ ರೆಡ್ಡಿ ಗೆದ್ದೇ ಗೆಲ್ಲುತ್ತಾರೆ, ಮತ್ತೆ ಸಿಎಂ ಆಗುತ್ತಾರೆ ಎಂದಿದ್ರು. ಆದ್ರೆ ಅದು ನಿಜವಾಗಲಿಲ್ಲ. ಹೀಗಾಗಿ ವಿಜಯ್ ವಿಷಯದಲ್ಲಿ ನುಡಿದ ಈ ಭವಿಷ್ಯ ನಿಜವಾಗುತ್ತಾ,..? ಎನ್ನುವುದನ್ನು ಈಗ ಕಾದು ನೋಡಬೇಕಿದೆ.


