ಪತಿಯ ಅನಿರೀಕ್ಷಿತ ಸಾವಿನ ದುಃಖದಲ್ಲಿಯೂ ಮಂಡ್ಯದಿಂದ ಪಾರ್ಥಿವ ಶರೀರವನ್ನು ಸಾಗಿಸುವಾಗ ಸುಮಲತಾ ನಡುವೆ ನಿಲ್ಲಿಸಿ, ಮಂಡ್ಯದ ಗಂಡಿನ ಹಣೆಗೆ ಹುಟ್ಟೂರಿನ ಮಣ್ಣಿನ ತಿಲಕವನ್ನಿಟ್ಟಿದ್ದರು. ಇಷ್ಟು ಸಾಕು, ಪತಿ ಇಚ್ಛೆಯನ್ನು ಮಡದಿಯಾಗಿ ಹೇಗೆ ಅರ್ಥಮಾಡಿಕೊಂಡಿದ್ದರೆಂದು ಅರಿತುಕೊಳ್ಳಲು. ಅಂಬಿ ಪತ್ನಿಯನ್ನು ಹೇಗೆ ನೋಡುತ್ತಿದ್ದರು ಎನ್ನುವುದಕ್ಕೆ ಇದೀಗ ಸಿಕ್ಕಿದೆ ಪ್ರೂಫ್.

ಅಂಬರೀಷ್-ಸುಮಲತಾ ಅವರದ್ದು ಸ್ಯಾಂಡಲ್‌ವುಡ್‌ನಲ್ಲಿ ಅಪರೂಪದ ಅನುರೂಪ ದಾಂಪತ್ಯ. ಇಬ್ಬರೂ ಚಿತ್ರರಂಗದವರೇ ಆಗಿದ್ದು, ಅತ್ಯಂತ ವಿರುದ್ಧ ವ್ಯಕ್ತಿತ್ವದ್ದವರಾಗಿದ್ದರಿಂದಲೇ ಬಹುಶಃ ಒಬ್ಬರಿಗೊಬ್ಬರು ಹೆಚ್ಚು ಆಕರ್ಷಿತರಾಗಿದ್ದರು. 'ಮದುವೆಯೇ ಆಗೋಲ್ಲ...' ಎಂದು ಕೂತಿದ್ದ ಅಂಬರೀಷ್ ತಮ್ಮ 39ನೇ ವರ್ಷದಲ್ಲಿ ಸುಮಲತಾರನ್ನು ವರಿಸಿದ್ದು, ನಂತರ ಮಾದರಿಯಾಗಿ ಬಾಳಿದ್ದು ಎಲ್ಲರಿಗೂ ಗೊತ್ತಿರೋ ವಿಷಯವೇ.

ಅಂಬಿ ಹೃದಯಲ್ಲಿದ್ದ ಆ ರಹಸ್ಯವೇನು?

ಪತಿಯ ಅನಿರೀಕ್ಷಿತ ಸಾವಿನಿಂದ ಸುಮಲತಾ ಬಹಳ ನೊಂದಿದ್ದರು. ಪತಿ ಸಾವಿನ ಸುದ್ದಿ ಕೇಳಿದಾಗಿನಿಂದ ಅಂತ್ಯ ಸಂಸ್ಕಾರದವರೆಗೂ ತಮ್ಮ ದುಃಖವನ್ನು ತಡೆದುಕೊಳ್ಳಲು ಹೆಣಗಾಡಿದರು. ಪತ್ನಿಯೊಂದಿಗೆ ಅಂಬರೀಷ್ ಹಾಡೊಂದಕ್ಕೆ ಹೆಜ್ಜಿ ಹಾಕಿದ್ದು, ಅವರ ದಾಂಪತ್ಯ ಹೇಗಿತ್ತು ಎಂಬುದಕ್ಕೆ ಹಿಡಿದ ಕನ್ನಡಿ. 

ಜೀವನದ ಎಲ್ಲ ಜಂಜಾಟಗಳಿಗೂ ಜಗ್ಗದೇ, ಸದಾ ಖುಷಿಯಾಗಿಯೇ ಕಳೆಯುತ್ತಿದ್ದ ಅಂಬರೀಷ್ ವ್ಯಕ್ತಿತ್ವ ವಿಭಿನ್ನ. ಅದರಲ್ಲಿಯೂ ಅಭಿಮಾನಿಗಳೆಂದರೆ ಕಲಿಯುಗದ ಕರ್ಣನಿಗೆ ಎಲ್ಲಿಲ್ಲದ ಪ್ರೀತಿ, ವಿಶ್ವಾಸ. ವೈರಿಯನ್ನೂ ಸ್ನೇಹಿತನಂತೆ ಕಾಣುತ್ತಿದ್ದ ಅಂಬಿ ಪತ್ನಿಯನ್ನಂತೂ ದೇವತೆ ಎಂದೇ ಭಾವಿಸಿದ್ದರಂತೆ!

"

ಇದಕ್ಕೀಗ ಪ್ರೂಫ್ ಸಿಕ್ಕಿದೆ. ತಮ್ಮ ಮೊಬೈಲ್‌ನಲ್ಲಿ ಮಡದಿ ಸುಮಲತಾ ನಂಬರ್ ಅನ್ನು 'ಅಂತ' ಖ್ಯಾತಿಯ ಕನ್ವರ್‌ಲಾಲ್ 'Goddess'ಎಂದೇ ಸೇವ್ ಮಾಡಿ ಕೊಂಡಿದ್ರಂತೆ. ಎಂಥದ್ದೇ ತುರ್ತು ಕಾರ್ಯದಲ್ಲಿ ಮಗ್ನರಾಗಿದ್ದರೂ, ಮಡದಿ ಫೋನ್ ಅನ್ನು ರಿಸೀವ್ ಮಾಡುತ್ತಿದ್ದರಂತೆ ಜಲೀಲಾ. ಸುಮಲತಾ ಹತ್ತಿರ ಮಾತನಾಡಿಯೇ ತಮ್ಮ ಕಾರ್ಯವನ್ನು ಮುಂದುವರಿಸುತ್ತಿದ್ದರಂತೆ. ಇದನ್ನು ಖುದ್ದು ಅಂಬರೀಷ್ ಪಿಎ ಸುವರ್ಣನ್ಯೂಸ್.ಕಾಮ್‌ಗೆ ಖಚಿತಪಡಿಸಿದ್ದಾರೆ. 

ಅಂಬಿ ಬಾಳಿಗೆ ಲಕ್ಷ್ಮಿಯಾಗಿದ್ದ ಸುಮಲತಾ:
ಮಾತು ಕಠಿಣ. ಆದರೆ, ಮೃದು ಹೃದಯಿ ಅಂಬರೀಷ್ ಅವರು ದಾಂಪತ್ಯಕ್ಕೆ ಕಾಲಿರಿಸಿದ ನಂತರವೇ ಸಾಕಷ್ಟು ಬದಲಾವಣೆಗಳಾದವಂತೆ. ಸುಮಲತಾ ಲಕ್ಷ್ಮಿಯಂತೆ ಬಾಳಿಗೆ ಎಂಟ್ರಿ ಕೊಟ್ಟ ನಂತರವೇ ಮಾಡಿದ ಚಿತ್ರಗಳೆಲ್ಲವೂ ಯಶಸ್ವಿಯಾದವಂತೆ. ಅದಕ್ಕೆ ಪತ್ನಿಯನ್ನು ದೇವತೆಯಂದೇ ಭಾವಿಸಿದ ಅಂಬಿ, ಬಾಳಸಂಗಾತಿಗೆ ವಿಶೇಷ ಸ್ಥಾನ ಕಲ್ಪಿಸಿದ್ದರಂತೆ. ಪತಿಯ ಅಂತರಂಗವನ್ನು ಅರಿತುಕೊಂಡಿದ್ದ ಸುಮಲತಾ ಅತೀವ ದುಃಖದಲ್ಲಿದಲ್ಲಿದ್ದರೂ ಮಂಡ್ಯ ಮಣ್ಣಿನ ತಿಲಕವನ್ನು ಪತಿಯ ಪಾರ್ಥಿವ ಶರೀರಕ್ಕೆ ಹಚ್ಚುವಂಥ ಕಾರ್ಯಕ್ಕೆ ಮುಂದಾಗಿದ್ದು ಎನಿಸುತ್ತದೆ.

ಸುಮಲತಾ ಅಂಬರೀಷ್ ಪ್ರೇಮ್ ಕಹಾನಿ

ಸಾಂಗತ್ಯಕ್ಕೆ ಅನ್ವರ್ಥವೆಂಬಂತೆ ಇದ್ದ ಅಂಬಿಯಂಥ ಪತಿ ಕಳೆದುಕೊಂಡ ಸುಮಲತಾ ದುಃಖವನ್ನು ಭರಿಸುವ ಶಕ್ತಿ ದೇವರು ನೀಡಲಿ. ಈ ಜೋಡಿ ಡಿ.8ಕ್ಕೆ 27ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುವ ಸಂಭ್ರಮದಲ್ಲಿತ್ತು.