ಸುಮಲತಾ ಅಂಬರೀಷ್ ನೆನಪಿಸಿಕೊಂಡ ಲವ್ ಸ್ಟೋರಿ
ಅಂಬರೀಷ್‌ಗೆ ವಿಪರೀತ ಶಾರ್ಟ್ ಟೆಂಪರ್. ಆದರೆ ಅವರ ಹೃದಯವಂತಿಕೆಯ ವಿರುದ್ಧ ಇದುವರೆಗೂ ಯಾರೂ ಮಾತನಾಡಿಯೇ ಇಲ್ಲ. ಕಠಿಣ ಮಾತು, ಮೃದು ಹೃದಯಿ ಅಂಬರೀಷ್ ಅವರನ್ನು ಕೇರಳ ನಟಿ ಸುಮಲತಾ ವರಿಸಿದರು. ಹೇಗೆ ಆರಂಭವಾಯಿತು ಪ್ರೇಮ, ಮದುವೆ, ಪತಿ ಬಗ್ಗೆ ಹೇಳಿದ್ದಾರೆ ಪತ್ನಿ ಸುಮಲತಾ.
ಮೊದಲ ಭೇಟಿ
ಅವರನ್ನು ಫಸ್ಟ್ ಟೈಮ್ ಮೀಟ್ ಮಾಡಿದ್ದು ಆಹುತಿ ಚಿತ್ರದ ಶೂಟಿಂಗ್ ಟೈಮಲ್ಲಿ. ಅದಕ್ಕಿಂತ ಮುಂಚೆ ನೋಡಿದ್ದೆ ಒಂದು ಫಂಕ್ಷನ್‌ನಲ್ಲಿ. ಅಲ್ಲಿ ಮೀಟ್ ಮಾಡಿರಲ್ಲ. ಪರಿಚಯಾನೂ ಮಾಡ್ಕೊಳ್ಳಿಲ್ಲ. ದೂರದಿಂದ ನೋಡಿದ್ದೆ. ತುಂಬಾನೇ ಭಯ ಇತ್ತು ನಂಗೆ, ಇವರ ಜೊತೆ ಆ್ಯಕ್ಟ್ ಮಾಡೋಕೆ. ಆವಾಗ ಅದು ಇದು ಏನೇನೋ ರೂಮರ್ಸು, ಗಾಸಿಫ್ಸ್. ಫಿಲ್ಮ್ ಇಂಡಸ್ಟ್ರಿಯಲ್ಲಿ ಇರುವ ಎಲ್ಲರ ಬಗೆಗೂ ಇರುತ್ತೆ. ಆದ್ರೆ ನಾನು ಆ ಸಮಯದಲ್ಲಿ ಕನ್ನಡ ಚಿತ್ರರಂಗಕ್ಕೆ ತುಂಬಾ ಹೊಸಬಳಾಗಿದ್ದೆ. ಹಾಗಾಗಿ ಭಯ ಇತ್ತು. ಸ್ವಲ್ಪ ದಿನದ ಶೂಟಿಂಗ್ ಟೈಮಲ್ಲಿ ನಂಗೆ ಸ್ಪಷ್ಟವಾಗಿದ್ದೇನಂದ್ರೆ ಅವರ ಬಗೆಗೆ ಭಯ ಪಡಬೇಕಾಗಿಲ್ಲ ಅನ್ನೋದು.
ಪ್ರೊಪೋಸ್ ಮಾಡಿದ್ದು
ಆ್ಯಕ್ಚುವಲೀ ನಮ್ಮದು ಅಂತಹ ಫಾರ್ಮಲ್ ಪ್ರೊಪೋಸಲ್ ಏನೂ ಆಗಿರಲಿಲ್ಲ. ಫಸ್ಟ್ ಟೈಮ್ ಮೀಟ್ ಮಾಡಿದ್ದು 1984ರಲ್ಲಿರಬಹುದು. ನಮ್ ಮದ್ವೆ ಆಗಿದ್ದು 1991ರಲ್ಲಿ. ಅದರ ಮಧ್ಯ ಎರಡು ಮೂರು ವರ್ಷಗಳಲ್ಲಿ ನಾವು ಯಾವುದೇ ಸಿನಿಮಾ ಮಾಡಿರಲಿಲ್ಲ. ಆವಾಗ ನಾನು ಚೆನ್ನೈನಲ್ಲಿದ್ದೆ. ಅವರು ಬೆಂಗಳೂರಲ್ಲಿದ್ರು. ಆವಾಗ ಮೊಬೈಲ್ ಫೋನ್ಸ್ ಇರಲಿಲ್ಲ. ಹಾಗಾಗಿ ನಮಗೆ ಟಚ್ ಅಂತ ಏನೂ ಇರ್ಲಿಲ್ಲ. ಯಾವಾಗ್ಲಾದ್ರೂ ಇವ್ರು ಬೆಂಗಳೂರಿಂದ ಚೆನ್ನೈಗೆ ಬಂದಾಗ ಫೋನ್ ಮಾಡೋರು, ಹೌ ಆರ್ ಯೂ ಅಂತ. ಅಷ್ಟೇ. ನಾನು ಬೆಂಗಳೂರು ಬಂದಾಗ ಎಲ್ಲಾದ್ರೂ ಇದ್ದಾಗ, ಪಾರ್ಟಿ ಇದ್ದಾಗ, ಅಥವಾ ಪಕ್ಕದಲ್ಲಿ ಶೂಟಿಂಗ್ ಇದ್ದಾಗ ಹೋಗಿ ಹಲೋ ಹೇಳಿ ಬರುತ್ತಿದ್ದೆ. ಈ ಥರ ಎಲ್ಲಾ ಇತ್ತು.
ಆರಂಭದಲ್ಲಿ ನಾವು ಅಷ್ಟುಕ್ಲೋಸ್ ಆಗಿರ್ಲಿಲ್ಲ. ನಿಧಾನಕ್ಕೆ ಸ್ವಲ್ಪ ಕ್ಲೋಸ್ ಆಗ್ತಾ ಬಂದ್ವಿ. ನನಗೆ ಅರ್ಥವಾಗಿತ್ತಲ್ಲ, ಇವ್ರು ಫ್ರೆಂಡ್ಲಿ ಪರ್ಸನಾಲಿಟಿ, ಓಪನ್ ಹಾರ್ಟೆಡ್ ಪರ್ಸನ್ ಅಂತ. ಇಂಥವರು ತುಂಬಾ ಅಪರೂಪ. ಅದರಲ್ಲೂ ಚಿತ್ರರಂಗದಲ್ಲಿ ಇಂತಹ ವ್ಯಕ್ತಿತ್ವವನ್ನು ನೋಡುವುದು ತುಂಬಾ ತುಂಬಾನೇ ಅಪರೂಪದ ವಿಷಯ. ಹಂಗಾಗಿ ನಾನು ಅವರನ್ನು ಇಷ್ಟಪಡತೊಡಗಿದೆ. ಅವರೂ ನನ್ನನ್ನು ತುಂಬಾ ಇಷ್ಟಪಡ್ತಿದ್ರು ಯಾಕೆಂದ್ರೆ ಫಿಲ್ಮ್ ಪರ್ಸನಾಲಿಟಿಗಳ ಜೊತೆ ಇರುವಾಗ ಅವರದೇ ಒಂದು ನಡತೆ, ಸ್ವಭಾವ, ಹವ್ಯಾಸಗಳಿರತ್ತೆ. ನಾನು ಅವರೆಲ್ಲರಿಗಿಂತ ಭಿನ್ನವಾಗಿದ್ದೆ, ತುಂಬಾ ಸೈಲೆಂಟ್.
ಇವರು ಎಷ್ಟುಗಲಾಟೆ ಮಾಡ್ತಾರೋ ಸೆಟ್ಟಲ್ಲಿ, ನಾನು ಅಷ್ಟೇ ಸೈಲೆಂಟಾಗಿರುತ್ತಿದ್ದೆ. ನನ್ ಪಾಡಿಗೆ ನಾನು ಒಂದು ಕಡೆ ಕೂತು ಬುಕ್ ಓದ್ತಿದ್ದೆ. ಯಾರ ಹತ್ರಾನೂ ಅಷ್ಟೊಂದು ಮಿಂಗಲ್ ಆಗ್ತಿರಲಿಲ್ಲ. ಬಟ್ ಇವರು ಸೆಟ್‌ಗೆ ಬಂದ್ಬಿಟ್ರೆ ಅದೆಲ್ಲಾ ಬದಲಾಗ್ತಿತ್ತು. ಎಲ್ಲರ ಜೊತೆ ಮಾತಾಡಬೇಕು ಅನ್ನೋ ಸ್ವಭಾವ ಇವರದು. ಸೋ ಅಪೋಸಿಟ್ ಅಟ್ರಾಕ್ಟ್$್ಸ ಅಂತಾರೆ. ಅದೇ ನಮ್ಮ ಬದುಕಲ್ಲಿ ಆಗಿದ್ದು ಅಂತ ನಂಗನ್ಸತ್ತೆ. ಬಿಕಾಸ್ ವಿ ಆರ್ ರಾರಯಡಿಕಲೀ ಅಪೋಸಿಟ್ ಪರ್ಸನಾಲಿಟೀಸ್. ಅವರು ಎಷ್ಟುಎಕ್ಸಾ$್ಟ್ರವರ್ಟೋ ನಾನು ಅಷ್ಟೇ ಇಂಟ್ರಾವರ್ಟು. ಎಲ್ಲಾ ವಿಷಯದಲ್ಲೂ ಅಷ್ಟೇ. ನಂಗೆ ಬುಕ್ಸ್ ಓದೋದು ತುಂಬಾ ಇಷ್ಟ. ಅವರು ಬುಕ್ಸ್ ಓದೋದೇ ಇಲ್ಲ. ಅವರು ತುಂಬಾ ಆ್ಯಕ್ಟಿವ್ ಪರ್ಸನ್. ನಾನು ಸ್ವಲ್ಪ ರಿಸವ್‌ರ್‍ಡ್.
ಫ್ರೆಂಡ್‌ಗಳ ಜೊತೆ ನಾನು ಓಪನ್ ಆಗ್ತೀನೇ ಹೊರತು ಹೊರಗಡೆ ಜನರಿಗೆ ನನ್ನ ರಿಯಲ್ ನೇಚರ್ ಗೊತ್ತಾಗೋ ಚಾನ್ಸೇ ಇಲ್ಲ. ಬಿಕಾಸ್ ಐ ಡೋಂಟ್ ಓಪನ್. ಆ ವಿಷಯದಲ್ಲಿ ಐ ಯಾಮ್ ವೆರಿ ಕಂಫರ್ಟೆಬಲ್ ವಿತ್ ಹಿಮ್. ನಾನು ನೋಡಿರೋದರಲ್ಲಿ ಸ್ವಲ್ಪ ಡಿಫರೆಂಟ್ ಪರ್ಸನಾಲಿಟಿ ಅಂತ ನನ್ನ ನೋಡಿ ಅವರಿಗನ್ನಿಸಿರಬಹುದು. ಗ್ರ್ಯಾಜುವಲಿ ವಿ ಬಿಕೇಮ್ ಕ್ಲೋಸರ್.
ಪ್ರೀತಿ ಏನು ಇಷ್ಟುದಿನದ್ದು ಅಂತ ಪರ್ಟಿಕ್ಯುಲರ್ ಆಗಿ ಹೇಳಲು ಆಗುವುದಿಲ್ಲ. ಎಂಟ್ಹತ್ತು ಪಿಚ್ಚರ್ ಮಾಡಿದ್ವಿ ಜೊತೇಲಿ, ನ್ಯೂಡೆಲ್ಲಿ ಆದ್ಮೇಲೆ ಕ್ಲೋಸ್ ಆದ್ವಿ. ಆಗಾಗ ಮಾತಾಡ್ಕೋತಿದ್ವಿ. ಈಗಲ್ಲ ಒಂದೆರಡು ವರ್ಷ ಬಿಟ್ಟು ಮದ್ವೆ ಮಾಡ್ಕೊಳೋಣ ಅಂತ ಮಾತಾಡ್ತಿದ್ವಿ. ಈ ಥರ ಒಬ್ಬರು ಫಾರ್ಮಲ್ ಪ್ರೊಪೋಸಲ್ ಮಾಡಿದ್ದು ಅಂತ ಇಲ್ಲ ಅಥವಾ ನನಗೆ ಜ್ಞಾಪಕ ಇಲ್ಲ.
ಅವರ ಮನೆಯವ್ರು ರಿಸೀವ್ ಮಾಡ್ಕೊಂಡಿದ್ದು ಹೇಗೆ
ನಮ್ ಮದ್ವೆಯಾದಾಗ ಅವರಿಗೆ 39 ವರ್ಷ. ಅವರ ಮನೆಯವರು ಕಾಯ್ತಾ ಇದ್ರು. ಒಮ್ಮೆ ಮದ್ವೆ ಆಗ್ಬಿಡ್ಲಿ ಅಂತ. ಮದ್ವೆಯಾದ್ರೆ ಸಾಕು ಅಂತ ಅವರಮ್ಮ ಹೇಳುತ್ತಿದ್ದರು. ಪಾಪ ಅವರಮ್ಮ ತುಂಬಾ ಆಸೆ ಇಟ್ಕೊಂಡಿದ್ರು. ಅಂಬರೀಷ್ ಮದ್ವೆ ಆಗ್ಬೇಕು. ನಮ್ಗೆ ಗಂಡು ಮಗು ಆಗುತ್ತೆ ಅನ್ನೋದು ಹೇಳುತ್ತಿದ್ದರು. ಅಂಬರೀಷ್ ಮಗು ಆಗಿ, ಆ ಮಗೂನ ನೋಡಿದ ಮೇಲೇನೆ ಈ ಜಗತ್ತನ್ನು ತೊರೆಯಬೇಕು ಅನ್ನೋ ಆಸೆ ಇತ್ತು ಅವರಿಗೆ. ಹಂಗೇ ಆಯ್ತು.
ತುಂಬಾ ಇಷ್ಟವಾದ ಗುಣ
ನಾನ್ ಜಡ್ಜ್‌ಮೆಂಟಲ್ ಬಿಹೇವಿಯರ್. ಯಾರೇ ಆಗ್ಲಿ, ಇವರ ಬಗ್ಗೆ ಕೆಟ್ಟದಾಗಿ ಮಾತಾಡಿರಬಹುದು. ಇವರ ಬೆನ್ನ ಹಿಂದೆ ದ್ರೋಹ ಮಾಡಿರಬಹುದು. ಇವರಿಗೆ ಗೊತ್ತಿರುತ್ತೆ ಅದು. ಆದ್ರೂ ಅವರೇ ಬಂದು ನಾನು ಕಷ್ಟದಲ್ಲಿದೀನಿ ಹೆಲ್ಪ್ ಬೇಕು ಅಂದ್ರೆ ಅದು ಹಣ ಆಗ್ಲಿ, ಇನ್ನೊಂದಾಗ್ಲಿ ಇನ್ನೊಬ್ಬರಿಗೆ ಮಾತಾಡಿ ಇನ್‌ಪ್ಲುಯೆನ್ಸ್ ಮಾಡ್ಸೋದಾಗ್ಲಿ ವಿದೌಟ್ ಸೆಕೆಂಡ್ ಥಾಟ್ ಹಿ ವಿಲ್ ಗೋ ಅಹೆಡ್ ಆ್ಯಂಡ್ ಮಾಡ್ತಾರೆ.
ಅದು ನಂಗೆ ತುಂಬಾ ಇಷ್ಟವಾದ ಗುಣ ಅವರ ಬಗ್ಗೆ. ಬಟ್ ಅಟ್ ದ ಸೇಮ್ ಟೈಮ್ ಒಂದೊಂದ್ಸಲ ಕೋಪಾನೂ ಬರತ್ತೆ, ನಮ್ ಬಗ್ಗೆ ಇಷ್ಟೊಂದು ಕೆಟ್ದಾಗಿ ಮಾತಾಡಿರೋರು ನಾವು ಯಾಕೆ ಹೆಲ್ಪ್ ಮಾಡ್ಬೇಕು ಅಂತ. ಜನರಲೀ ಎಲ್ರಿಗೂ ಅನ್ಸತ್ತೆ. ನ್ಯಾಚುರಲ್ ಹ್ಯೂಮನ್ ಟೆಂಡೆನ್ಸಿ ಅದು. ಬಟ್ ಇವರಲ್ಲಿ ಅದಿಲ್ಲ. ಅದು ಏನೋ ದೇವ್ರು ಇವರಿಗೆ ಸ್ಪೆಷಲ್ ನೇಚರ್ ಕೊಟ್ಟಿದಾನೆ ಅಂತನ್ಸತ್ತೆ ನಂಗೆ ಒಂದೊಂದ್ಸಲ ಸಲ. ಯಾಕಂದ್ರೆ ಹಾಗಿರೋದು ಕಷ್ಟ. ಎಲ್ಲರಿಗೂ ಹಾಗೆ ಇರೋದು ಸಾಧ್ಯವೇ ಇಲ್ಲ.
ಇಷ್ಟಆಗ್ದೇ ಇದ್ದದ್ದು
ಇದೇ ಕಾರಣಕ್ಕೆ. ಅವರು ಯಾರನ್ನು ಡೀಪಾಗಿ ಜಡ್ಜ್ ಮಾಡಲ್ಲ ಅನ್ನೋದರಿಂದ ನಾವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಹೆಲ್ಪ್ ಮಾಡ್ಬೇಕು ನಿಜ. ಆದ್ರೆ ದುಷ್ಟರಿಂದ ದೂರವಿರು ಅನ್ನೋ ಗಾದೆ ಹಳೇದಾದ್ರು ಅದು ತುಂಬಾ ನಿಜ. ಅದರಿಂದ ಎಷ್ಟೋ ತೊಂದ್ರೆಗಳಾಗ್ಬಹುದು. ಆದರೆ ಅವರು ಅದರ ಬಗ್ಗೆ ಡೀಪಾಗಿ ಯೋಚ್ನೆ ಮಾಡಲ್ಲ. ಯಾರ್ಯಾರನ್ನೋ ಎನ್‌ಕರೇಜ್ ಮಾಡ್ತಾರೆ, ಅವರ ಜೊತೆಗಿರ್ತಾರೆ, ಮನೆಗ್ ಕರೀತಾರೆ, ಊಟ ಮಾಡಿಸ್ತಾರೆ, ಸಮ್ ಟೈಮ್ಸ್ ಅದು ಬ್ಯಾಕ್ ಫೈರ್ ಆಗತ್ತೆ. ಕೆಲವು ಸಲ ಆಗಿದೆ ಕೂಡ. ಯಾರನ್ನೇ ಆದ್ರು ಜಡ್ಜ್ ಮಾಡ್ಕೊಳ್ಳಿ. ನಾನು ಅಥವಾ ಇನ್ಯಾರೋ ವೆಲ್‌ವಿಷರ್ ಹೇಳೋ ಮಾತನ್ನು ಕೇಳ್ಬಿಟ್ಟು ಅದಾದ್ಮೇಲೆ ಡಿಸೈಡ್ ಮಾಡಿ ಅಂದ್ರೆ ಕೇಳಲ್ಲ.
ಯಾರ ಮಾತೂ ಕೇಳಲ್ಲ. ಈ ಪ್ರಪಂಚದಲ್ಲಿ ಯಾರೇ ಆಗ್ಲಿ ಇಂತಹ ವಿಷ್ಯ ನೀನು ಮಾಡ್ಲೇಬೇಕು ಅಂತ ಹೇಳಿದ್ರೆ ಕೇಳೋದೇ ಇಲ್ಲ. ಅವರ ಮೈಂಡಲ್ಲಿ ಬರ್ಬೇಕಷ್ಟೇ. ಆ ಥರ ಎಷ್ಟೋ ಸಲ ನಾನು ಹೇಳಿದ ವಿಷಯ ಸರಿ ಆಗಿದೆ. ಹೇಳಿದಂತೆ ನಡೆದಿದೆ. ಏನ್ ನಡೀಬೇಕಿತ್ತೋ ಅದೇ ನಡೆದಿದೆ. ನಡೆದ ಮೇಲೆ ಒಪ್ಕೊಳ್ತಾರೆ. ಹೌದು ನೀನ್ ಹೇಳಿದ್ದು ಕರೆಕ್ಟ್. ನೀ ಹೇಳಿದ್ದನ್ನ ಕೇಳ್ಬೇಕಾಗಿತ್ತು ಅಂತ. ಈ ಥರ ಒಪ್ಕೊಂಡಿದ್ದ ಸಂದರ್ಭ ಬೇಕಾದಷ್ಟಿದೆ. ಆದರೆ ವಿಶೇಷ ಅಂದ್ರೆ ಅಷ್ಟೆಲ್ಲಾ ಆದ್ರೂ ತಿರ್ಗಾ ಅದೇ ಸಿಚುವೇಷನ್ ಬಂದ್ರೆ ಮತ್ತೆ ಹೆಲ್‌್ರ ಮಾಡೋ ಮಾಡ್ತಾರೆ ಅವರು. ಅದರಲ್ಲಿ ಚೇಂಜ್ ಮಾತ್ರ ಇಲ್ಲ. ಸೋ ಇದೊಂದು ಕಂಟಿನ್ಯೂಯಸ್ ಪ್ರೊಸೆಸ್ ನಮ್ಮಲ್ಲಿ.
ಚರ್ಚೆ ಮಾಡ್ತಿರಲಿಲ್ಲ
ಇಲ್ಲ. ಆ ಹ್ಯಾಬಿಟ್ ಅವರಿಗೆ ಇಲ್ವೇ ಇಲ್ಲ. ಅವರು ಅನೌನ್ಸ್ ಮಾಡಿದ್ಮೇಲೆನೇ ಹೇಳೋದು. ಆ ಡಿಸ್ಕಷನ್ ಏನು ಅಂತ. ಬಟ್ ನನ್ ಒಪಿನೀಯನ್ ನಾನ್ಯಾವತ್ತೂ ಮುಚ್ಚಿಡಲ್ಲ. ಅವರಿಗೆ ನೋವಾಗ್ಬಹುದು ಅಂತ ಹೈಡ್ ಮಾಡಲ್ಲ. ಫ್ರಾಂಕಾಗಿ ನನ್ನ ಜಡ್ಜ್‌ಮೆಂಟ್ ಹೇಳೇ ಹೇಳ್ತೀನಿ. ಇದು ನೀವು ಮಾಡಿದ್ದು ತಪ್ಪು, ನಿಮ್ ಜಡ್ಜ್‌ಮೆಂಟ್ ಸರಿ ಇಲ್ಲ. ಅದರಿಂದ ಹೀಗಾಗಿದೆ ಅಂತ. ಬಟ್ ಅವರಿಗೆ ಅದು ಗೊತ್ತು. ಹೀ ರೆಸ್ಪೆಕ್ಟ್$್ಸ ಮೈ ಜಡ್ಜ್‌ಮೆಂಟ್. ತಗೋಳೋದು ಬಿಡೋದು ಬೇರೆ ವಿಷ್ಯ. ಆದ್ರೆ ಅವರಿಗ್ಗೊತ್ತು ನಾನೇನ್ ಯೋಚ್ನೆ ಮಾಡ್ತೀನಿ, ನಾನೇನ್ ಅಂದ್ಕೋತಿರ್ತೀನಿ ಅಂತ.
ಅವರಿಗೆ ಕೋಪ ಬಂದಾಗ..
ಅವರಿಗೆ ಬೇಸಿಕಲಿ ಶಾರ್ಟ್ ಟೆಂಪರ್ ಇದೆ. ಐದ್ ನಿಮಿಷ, ಹತ್ತು ನಿಮಿಷ ಕೋಪ ಇರುತ್ತೆ. ಆಮೇಲೆ ಪಶ್ಚಾತ್ತಾಪ ಪಡ್ತಾರೆ. ಅವರು ಲೈಫಲ್ಲಿ ಯಾರಿಗೂನು ಸಾರಿ ಕೇಳಲ್ಲ. ತಪ್ಪು ಮಾಡಿದೆ ಅಂತ ಗೊತ್ತಾದ್ರೂ ಸಾರಿ ಕೇಳಲ್ಲ. ಆದ್ರೆ ಅವರು ಬೇರೆ ಥರ ನಮಗೆ ಗೊತ್ತಾಗೋ ಥರ ಮಾಡ್ತಾ ಇದ್ರು.
ಕನ್ನಡಿಗರನ್ನು ಅಗಲಿದ ರೆಬೆಲ್ ಸ್ಟಾರ್