ತಂದೆಯ ಪಾರ್ಥಿವ ಶರೀರಕ್ಕೆ ಸುಮಾರು 18 ಗಂಟೆಯಷ್ಟು ಸುದೀರ್ಘ ಅಂತಿಮ ನಮನ ಸಲ್ಲಿಸಿದ ಮಂಡ್ಯದ ಜನರಿಗೆ ಅಂಬರೀಷ್ ಪುತ್ರ ಅಭಿಷೇಕ್‌ ಕೈಮುಗಿದು ನಮಸ್ಕರಿಸುವ ಮೂಲಕ ಕೃತಜ್ಞತೆ ಸಲ್ಲಿಸಿದರು.

ಬೆಂಗಳೂರು : ತಮ್ಮ ತಂದೆಯ ಪಾರ್ಥಿವ ಶರೀರಕ್ಕೆ ಸುಮಾರು 18 ಗಂಟೆಯಷ್ಟು ಸುದೀರ್ಘ ಅಂತಿಮ ನಮನ ಸಲ್ಲಿಸಿದ ಮಂಡ್ಯದ ಜನರಿಗೆ ಪುತ್ರ ಅಭಿಷೇಕ್‌ ಕೈಮುಗಿದು ನಮಸ್ಕರಿಸುವ ಮೂಲಕ ಕೃತಜ್ಞತೆ ಸಲ್ಲಿಸಿದರು.

ಅಂಬರೀಷ್‌ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ವಾಪಸ್‌ ಕರೆದೊಯ್ಯುವುದಕ್ಕೂ ಮೊದಲು ಕ್ರೀಡಾಂಗಣಕ್ಕೆ ಒಂದು ಸುತ್ತು ಹಾಕಿದ ಪುತ್ರ ಅಭಿಷೇಕ್‌ ಒತ್ತರಿಸಿ ಬರುತ್ತಿದ್ದ ಕಣ್ಣೀರಿನ ನಡುವೆಯೇ ಕೈಮುಗಿದು ನಮಸ್ಕರಿಸುವ ಮೂಲಕ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. 

ಈ ವೇಳೆ ಅಭಿಮಾನಿಗಳು ಅಂಬರೀಷ್‌ಗೆ ಜೈಕಾರ ಹಾಕುವ ಮೂಲಕ ತಮ್ಮ ಪ್ರೀತಿ ಪ್ರದರ್ಶಿಸಿದರು. ಸುಮಲತಾ ಕೂಡ ಇದೇ ರೀತಿ ಅಭಿಮಾನಿಗಳಿಗೆ ಕೈಮುಗಿದು ನಮಸ್ಕರಿಸಿ ವಿಮಾನ ಏರಿದರು.