ಕರ್ನಾಟಕ ಪೊಲೀಸ್ರ ಮೇಲೆ ಡೈರೆಕ್ಟುಗಳಿಗೆ ನಂಬಿಕೆ ಇಲ್ವಾ ಎಂದು ಪ್ರಶ್ನಿಸುತ್ತಿದ್ದಾರೆ ಸೀರಿಯಲ್ ಪ್ರೇಮಿಗಳು. ಅಷ್ಟಕ್ಕೂ ಆಗಿದ್ದೇನು ನೋಡಿ!
ಶ್ರೀರಸ್ತು ಶುಭಮಸ್ತು ಸೀರಿಯಲ್ ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ ಎಂದೇ ಅಂದುಕೊಳ್ಳಲಾಗಿತ್ತು. ಇದಕ್ಕೆ ಕಾರಣ, ಶಾರ್ವರಿಯೇ ಕೊಲೆಗಾತಿ ಎನ್ನುವ ವಿಷಯ ಒಬ್ಬೊಬ್ಬರಾಗಿ ಎಲ್ಲರಿಗೂ ತಿಳಿದಿದೆ. ವಿಷಯ ಗೊತ್ತಾಗುತ್ತಿದ್ದಂತೆಯೇ ಶಾರ್ವರಿ ತಪ್ಪಿಸಿಕೊಂಡಿದ್ದಾಳೆ. ಅವಳ ಹುಡುಕಾಟದಲ್ಲಿ ಕುಟುಂಬದವರು ಮುಂದಾಗಿದ್ದಾರೆ. ಅದೇ ಇನ್ನೊಂದೆಡೆ, ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ಕೋರ್ಟ್ ಸಮರ್ಥ್ನನ್ನು ನಿರಪರಾಧಿ ಎಂದು ತೀರ್ಪು ನೀಡಿದೆ. ತಪ್ಪಿಸಿಕೊಂಡಿರುವ ಶಾರ್ವರಿಯನ್ನು ಹುಡುಕುವಂತೆ ಕೋರ್ಟ್ ಪೊಲೀಸರಿಗೆ ಆದೇಶಿಸಿದೆ. ಅಬ್ಬಾ, ಅಂತೂ ಒಂದು ಸೀರಿಯಲ್ ಮುಗಿಸುತ್ತಾರೆ ಎಂದುಕೊಂಡಿದ್ದರು ಬಹುತೇಕ ವೀಕ್ಷಕರು. ಆದರೆ ಆದದ್ದೇ ಬೇರೆ. ಶಾರ್ವರಿ ಏನೋ ಸಿಕ್ಕಿಬಿಟ್ಟು, ಅವಳನ್ನು ಪೊಲೀಸರು ಅರೆಸ್ಟ್ ಮಾಡಿ ಜೈಲಿಗೆ ತಳ್ಳಿದರೆ ಅಲ್ಲಿಗೆ ಸೀರಿಯಲ್ ಮುಗಿಯತ್ತೆ ಎಂದುಕೊಂಡ ವೀಕ್ಷಕರ ಲೆಕ್ಕಾಚಾರ ತಲೆಕೆಳಗಾಗಿದೆ. ಏಕೆಂದ್ರೆ ಒಬ್ಬಳು ವಿಲನ್ ತಪ್ಪಿಸಿಕೊಂಡ ನಡುವೆಯೇ ಸೀರಿಯಲ್ಗೆ ಬೇರೆಯದ್ದೇ ರೀತಿ ಟ್ವಿಸ್ಟ್ ಕೊಡಲಾಗಿದೆ.
ಶಾರ್ವರಿ ಮಗಳು ನಿಧಿಯನ್ನು ವಿಲನ್ ರೂಪದಲ್ಲಿ ತೋರಿಸಲಾಗಿತ್ತು. ಇವಳು ಅಮ್ಮನಿಗೆ ಸಹಾಯ ಮಾಡುತ್ತಿರುವಂತೆ ತೋರಿಸಲಾಗಿತ್ತು. ಆದರೆ ಕೊನೆಗೆ ಆಕೆ ತುಳಸಿಯ ಮಾತಿನಂತೆ ಅಮ್ಮನ ಜೊತೆ ಶಾಮೀಲಾಗಿರುವಂತೆ ತೋರಿಸಲಾಗುತ್ತಿದೆ. ಇದೀಗ ಶಾರ್ವರಿ ಎಲ್ಲಿ ಇದ್ದಾಳೆ ಎಂದು ಹುಡುಕಲು ನಿಧಿಯ ಸಹಾಯ ಪಡೆಯಲಾಗುತ್ತಿದೆ. ಇದರ ಹೊರತಾಗಿಯೂ ನಿಧಿ ಡಬಲ್ ಗೇಮ್ ಆಡುತ್ತಿದ್ದಾಳಾ ಎಂದೂ ಕೆಲವರು ಅಂದುಕೊಳ್ಳುವುದು ಇದೆ. ಅದೇನೇ ಇದ್ದರೂ ಸೀರಿಯಲ್ ಎಳೆಯಲು ಏನೆಲ್ಲಾ ಬೇಕೋ ಅದನ್ನೆಲ್ಲಾ ಮಾಡುವುದು ತಿಳಿದೇ ಇದೆ. ಆದರೆ ಇದರ ನಡುವೆಯೇ ಇದೀಗ ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗ್ತಿರೋ ಸುದ್ದಿ ಏನಪ್ಪಾ ಎಂದ್ರೆ, ಶಾರ್ವರಿಯನ್ನು ಹುಡುಕುವ ಸಲುವಾಗಿ ಮನೆಮಂದಿಯೆಲ್ಲಾ ಪೊಲೀಸರಾಗಿರೋದು!
ಶಾರ್ವರಿ ಫೋನ್ ಟ್ಯಾಪ್ ಮಾಡಿದ್ರೆ ಅಲ್ಲಿಗೆ ಕಥೆ ಮುಗಿಯತ್ತೆ. ಪೊಲೀಸರಿಗೆ ಕಂಪ್ಲೇಂಟ್ ಕೊಟ್ರೆ ಸಾಕು, ಅವರು ಆಕೆಯನ್ನು ಆರಾಮಾಗಿ ಹಿಡಿಯಬಹುದು. ಆದರೆ ಪೊಲೀಸ್ ಕಂಪ್ಲೇಂಟ್ ಕೊಡೋದು ಬಿಟ್ಟು ತುಳಸಿ ಸೇರಿದಂತೆ ಮನೆಮಂದಿಯೆಲ್ಲಾ ಅವಳ ಹುಡುಕಾಟದ ಹಿಂದೆ ಬಿದ್ದಿರೋದು ಎಲ್ಲರಿಗೂ ತಮಾಷೆಯಾಗಿ ಕಾಣಿಸುತ್ತಿದೆ. ಮನೆಯವರು ಚಾಪೆ ಕೆಳಗೆ ನೂಕಿದರೆ, ಶಾರ್ವರಿ ರಂಗೋಲಿ ಕೆಳಗೆ ನುಸುಳುತ್ತಿದ್ದಾಳೆ. ಇದರ ಮಧ್ಯೆ ನಿಧಿ ಯಾರ ಪರ ಎನ್ನುವುದು ಕೂಡ ಸಂದೇಹವೇ ಇದೆ. ಆದರೆ ಸದ್ಯ ಮನೆಯವರಿಗೆ ನಿಧಿಯ ಮೇಲೆ ಎಲ್ಲಾ ಭರವಸೆ ಇದ್ದು, ಅವಳು ಅಮ್ಮ ಎಲ್ಲಿ ಎಂದು ಹುಡುಕುವ ಪ್ರಯತ್ನ ಮಾಡುತ್ತಿದ್ದಾಳೆ.
ಇದೀಗ ದುಡ್ಡು ತೆಗೆದುಕೊಂಡು ಒಂದು ಜಾಗದಲ್ಲಿ ಬರಲು ಹೇಳಿದ್ದಾಳೆ. ಪೊಲೀಸ್ ಕಂಪ್ಲೇಂಟ್ ಕೊಟ್ಟರೆ ಅಲ್ಲಿಗೆ ಸೀರಿಯಲ್ ದಿ ಎಂಡ್ ಆಗುತ್ತದೆ. ಅಷ್ಟಕ್ಕೂ ಶಾರ್ವರಿ ಯಾರನ್ನೂ ಒತ್ತೆಯಾಗಿ ಇಟ್ಟುಕೊಳ್ಳದ ಕಾರಣ, ಯಾರಿಗೂ ಪ್ರಾಣ ಬೆದರಿಕೆಯಂತೂ ಇಲ್ಲ. ಹಾಗಿದ್ದರೂ ಪೊಲೀಸರಿಗೆ ದೂರು ನೀಡುವ ಬದಲು ಅವಿ, ಅಭಿ ಸೇರಿ ಎಲ್ಲರೂ ನಿಧಿಯ ಹಿಂದೆ ಬೇರೆ ಬೇರೆ ವೇಷದಲ್ಲಿ ಹೋಗಿದ್ದು, ಶಾರ್ವರಿಯನ್ನು ಹಿಡಿಯಲು ನೋಡುತ್ತಿದ್ದಾರೆ. ಅದೇ ಇನ್ನೊಂದೆಡೆ ಶಾರ್ವರಿಗೂ ಮಗಳ ಮೇಲೆ ಡೌಟ್ ಬಂದಿರುವ ಹಾಗಿದೆ. ಇಷ್ಟೆಲ್ಲಾ ಸರ್ಕಸ್ ಮಾಡುತ್ತಲೇ ಸೀರಿಯಲ್ ಅನ್ನು ಚ್ಯೂಯಿಂಗ್ ಗಮ್ನಂತೆ ಎಳೆಯಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಲೇ ವೀಕ್ಷಕರು, ಕರ್ನಾಟಕದ ಪೊಲೀಸರ ಮೇಲೆ ಸೀರಿಯಲ್ ಡೈರೆಕ್ಟರ್ಗೆ ನಂಬಿಕೆಯೇ ಇಲ್ವಾ, ಪೊಲೀಸ್ ದೂರು ಕೊಡುವ ಬದಲು ಇವರೇ ಪೊಲೀಸರಾಗ್ತಿರೋದ್ರಿಂದ ಇದು ಹಾಸ್ಯಾಸ್ಪದ ಆಗಿದೆ ಎನ್ನುತ್ತಿದ್ದಾರೆ! ಬೈಯುತ್ತಲೇ ಸೀರಿಯಲ್ ಎಂಜಾಯ್ ಮಾಡುತ್ತಿರುವ ಕಾರಣ, ಅದರ ಟಿಆರ್ಪಿಯೂ ಏರಿದೆ. ಟಿಆರ್ಪಿ ಏರಿದರೆ ಸೀರಿಯಲ್ ಮತ್ತೊಂದಿಷ್ಟು ತಿಂಗಳು ಎಳೆಯುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ.
