ಬಾಲಿವುಡ್ ನಟ ಶಾರುಖ್ ಖಾನ್ ಪತ್ನಿ ಹಾಗೂ ಇಂಟೀರಿಯರ್ ಡಿಸೈನರ್ ಗೌರಿ ಖಾನ್, ತಮ್ಮ ಮನೆಯ ದುಬಾರಿ ಅಲಂಕಾರಿಕ ವಸ್ತುಗಳಿಂದಾಗಿ ಟ್ರೋಲ್ ಆಗಿದ್ದಾರೆ. ನೋಡಲು ಸಾಮಾನ್ಯ ಎನಿಸುವ ಡಸ್ಟ್ಬಿನ್ಗೆ 15 ಸಾವಿರ ರೂಪಾಯಿ ಬೆಲೆ ಇರುವುದೇ ಈ ಟ್ರೋಲ್‌ಗೆ ಕಾರಣವಾಗಿದೆ.
ಬಾಲಿವುಡ್‌ನ ಕಿಂಗ್ ಎಂದೇ ಫೇಮಸ್ ಆಗಿರೋ ನಟ ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ಅನೇಕ ಎ-ಲಿಸ್ಟ್ ತಾರೆಯರ ಮನೆಗಳನ್ನು ಅಲಂಕರಿಸಿದ್ದಾರೆ. ಬಾಂದ್ರಾದಲ್ಲಿರುವ ಮೆಕ್ಸಿಕನ್ ರೆಸ್ಟೋರೆಂಟ್, ಗೋವಾದ ಹೋಟೆಲ್ ಮತ್ತು ದೆಹಲಿಯ ಐಷಾರಾಮಿ ಬಾರ್‌ನಂತಹ ಸ್ಥಳಗಳಲ್ಲಿ ಗೌರಿ ತಮ್ಮ ಕೌಶಲಗಳನ್ನು ಪ್ರದರ್ಶಿಸಿದ್ದಾರೆ. ಗೌರಿ ಖಾನ್ ಈಗ ತಮ್ಮ ಪ್ರಮುಖ ಐಷಾರಾಮಿ ಜೀವನಶೈಲಿ ಬ್ರ್ಯಾಂಡ್ "ಗೌರಿ ಖಾನ್ ಡಿಸೈನ್ಸ್" ನೊಂದಿಗೆ ಇ-ಕಾಮರ್ಸ್ ಕ್ಷೇತ್ರವನ್ನು ಪ್ರವೇಶಿಸಿ, ವ್ಯಾಪಕ ಶ್ರೇಣಿಯ ಉನ್ನತ-ಮಟ್ಟದ ಕಚೇರಿ ಮತ್ತು ಗೃಹ ಉತ್ಪನ್ನಗಳನ್ನು ನೀಡುತ್ತಾರೆ.
ಆಘಾತಕಾರಿ ಬೆಲೆ
ತಮ್ಮ ಇ-ಕಾಮರ್ಸ್ ವೆಬ್‌ಸೈಟ್ ಮೂಲಕ, ಗೌರಿ ಖಾನ್ ಐಷಾರಾಮಿ ಪೀಠೋಪಕರಣಗಳಿಂದ ದಿಂಬಿನ ಕವರ್‌ಗಳವರೆಗೆ ಎಲ್ಲವನ್ನೂ ಲಭ್ಯವಾಗುವಂತೆ ಮಾಡಿ ಆಲಂಕಾರಿಕ ಮತ್ತು ಉನ್ನತ-ಮಟ್ಟದ ಸ್ಥಳವನ್ನು ಸೃಷ್ಟಿಸುತ್ತಾರೆ ಎಂಬುದು ಗಮನಿಸಬೇಕಾದ ಸಂಗತಿ. ಈ ವಿನ್ಯಾಸಗಳು ಕ್ರಮೇಣ ನೆಚ್ಚಿನದಾಗುತ್ತಿವೆ, ಆದರೆ ಅವುಗಳ ಬೆಲೆಗಳು ಎಲ್ಲರನ್ನೂ ಆಘಾತಗೊಳಿಸುತ್ತಿವೆ. ವಿಶೇಷವಾಗಿ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದ ಉತ್ಪನ್ನಗಳು ಈ ಉತ್ಪನ್ನಗಳ ಬೆಲೆಗಳನ್ನು ಕೈಗೆಟುಕುವಂತಿಲ್ಲ.
ಗೌರಿ ಖಾನ್ ಟ್ರೊಲ್
ಇದು ನಡೆಯುತ್ತಿರುವ ನಡುವೆಯೇ ಈಗ ಗೌರಿ ಖಾನ್ ಮತ್ತೊಮ್ಮೆ ಟ್ರೋಲ್‌ಗೆ ಒಳಗಾಗಿದ್ದಾರೆ. ಅದೇನೆಂದರೆ ಇಂಟೀರಿಯರ್ ಡಿಸೈನರ್ ಆಗಿರುವ ಗೌರಿ ಖಾನ್ ಅವರ ಮನೆಯ ದುಬಾರಿ ಹೋಂ ಡೆಕೋರೇಷನ್ ಕಂಡು ನೆಟ್ಟಿಗರು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ರೆಡ್ಡಿಟ್ ಪೇಜ್ನಲ್ಲಿ ಫೋಟೋಗಳನ್ನು ಶೇರ್ ಮಾಡಲಾಗಿದ್ದು ಅದರಲ್ಲಿ ಶಾರುಖ್ ಅವರ ಮನೆಯ ಡಸ್ಟ್ಬಿನ್ ಬೆಲೆ 15 ಸಾವಿರ ರೂಪಾಯಿ ಎಂದು ತೋರಿಸುತ್ತಿದೆ. ಗೌರಿ ಖಾನ್ ಅವರು ತಮ್ಮ ಮನೆಯ ಅಲಂಕಾರವನ್ನು ತಾವೇ ಮಾಡಿದ್ದಾರೆ. ಹಾಗೆಯೇ ಬಾಲಿವುಡ್‌ನ ಪ್ರಮುಖ ಸೆಲೆಬ್ರಿಟಿಗಳ ಮನೆಯನ್ನು ಕೂಡಾ ಅಲಂಕರಿಸಿದ್ದಾರೆ.
ಸೀದಾ ಸಾದಾ ಡಸ್ಟ್ಬಿನ್
ನೋಡಲು ಸೀದಾ ಸಾದಾ ಇರೋ ಈ ಡಸ್ಟ್ಬಿನ್ಗೆ ಇಷ್ಟೊಂದು ಬೆಲೆ ಕೊಟ್ಟಿದ್ದು ಏಕೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. 15 ಸಾವಿರ ರೂಪಾಯಿಯ ಡಸ್ಟ್ಬಿನ್ ಬಳಸ್ತೀರಾ? ನೋಡಲು 100 ರೂಪಾಯಿ ಅಂತಿರೋ ಡಸ್ಟ್ಬಿನ್ಗೆ ಇಷ್ಟೊಂದು ಕೊಡಬೇಕಾ ಎಂದು ಪ್ರಶ್ನಿಸುತ್ತಿದ್ದಾರೆ. ಅಂದಹಾಗೆ, ಶಾರುಖ್ ಖಾನ್ ಅವರ ದುಬಾರಿ ಬಂಗಲೆ ಇತ್ತೀಚೆಗೆ ಸುದ್ದಿಯಾಗಿತ್ತು. ಅವರು ಬರೋಬ್ಬರಿ 13 ಕೋಟಿಗೆ ಖರೀದಿಸಿದ ಅವರ ಮನೆಯ ಬಗ್ಗೆ ಸುದ್ದಿಯಾಗಿತ್ತು.


