MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ಆತನಿಂದ 14 ತಿಂಗಳ ನರಕ ಯಾತನೆ: ಸುದೀಪ್​, ಶಿವಣ್ಣ ನಾಯಕಿಯ ಬದುಕಿನ ಕರಾಳ ಸ್ಟೋರಿ

ಆತನಿಂದ 14 ತಿಂಗಳ ನರಕ ಯಾತನೆ: ಸುದೀಪ್​, ಶಿವಣ್ಣ ನಾಯಕಿಯ ಬದುಕಿನ ಕರಾಳ ಸ್ಟೋರಿ

ಕನ್ನಡಕ್ಕೂ ಚಿರಪರಿಚಿತರಾದ ಖ್ಯಾತ ನಟಿ ಫ್ಲೋರಾ ಸೈನಿ, ತಮ್ಮ ನಿರ್ಮಾಪಕ ಬಾಯ್‌ಫ್ರೆಂಡ್‌ನಿಂದ ಅನುಭವಿಸಿದ ದೈಹಿಕ ಮತ್ತು ಮಾನಸಿಕ ದೌರ್ಜನ್ಯದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 14 ತಿಂಗಳ ಕಾಲ ಚಿತ್ರಹಿಂಸೆ ಅನುಭವಿಸಿ,  ತಪ್ಪಿಸಿಕೊಂಡು ಬದುಕನ್ನು ಮತ್ತೆ ಕಟ್ಟಿಕೊಂಡ ಕಥೆ ವಿವರಿಸಿದ್ದಾರೆ

2 Min read
Author : Suchethana D
Published : Apr 30 2026, 08:53 PM IST
Share this Photo Gallery
  • FB
  • TW
  • Linkdin
  • Whatsapp
16
ಹಲವು ಚಿತ್ರಗಳಲ್ಲಿ ನಟನೆ
Image Credit : Asianet News

ಹಲವು ಚಿತ್ರಗಳಲ್ಲಿ ನಟನೆ

ಕಾಲಿವುಡ್​, ಟಾಲಿವುಡ್​ನ ಸೂಪರ್​ಸ್ಟಾರ್​ಗಳ ಜೊತೆ ಅಭಿನಯಿಸಿ ಖ್ಯಾತಿ ಗಳಿಸಿರುವ ಫ್ಲೋರಾ ಸೈನಿ (Flora Saini) ಅಲಿಯಾಸ್ ಆಶಾ ಸೈನಿ. ಕನ್ನಡಿಗರಿಗೂ ಚಿರಪರಿಚಿತರು. ಸುದೀಪ್ ನಟನೆಯ 'ನಮ್ಮಣ್ಣ' , ಶಿವರಾಜ್ ಕುಮಾರ್ ನಟನೆಯ 'ಕೋದಂಡರಾಮ'ದಲ್ಲಿ ಅವರು ನಟಿಸಿದ್ದಾರೆ. ಇದಷ್ಟೇ ಅಲ್ಲದೇ, 'ಸ್ತ್ರೀ', 'ಪ್ರೇಮ ಕೋಸಂ', 'ನರಸಿಂಹ ನಾಯ್ಡು'ನಂಥ ತಮಿಳು, ತೆಲಗು ಹಲವು ಬ್ಲಾಕ್​ಬಸ್ಟರ್​ ಸಿನಿಮಾಗಳನ್ನೂ ನೀಡಿದ್ದಾರೆ.

26
ಕರಾಳ ಘಟನೆ
Image Credit : instagram/flora saini

ಕರಾಳ ಘಟನೆ

ಇಂಥ ನಟಿಯ ಜೀವನದಲ್ಲಿ ನಡೆದ ಭಯಾನಕ ಘಟನೆಯೀಗ ವೈರಲ್​ ಆಗುತ್ತಿದೆ. ಇವರು ಖ್ಯಾತ ನಿರ್ಮಾಪಕರಿಂದ ಅನುಭವಿಸಿದ್ದ ಕರಾಳ ಘಟನೆಯನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದು ಅದು ಮತ್ತೊಮ್ಮೆ ವೈರಲ್​ ಆಗುತ್ತಿದೆ. ತಮ್ಮ ಬಾಯ್​ಫ್ರೆಂಡ್​ ಕೂಡ ಆಗಿರುವ ನಿರ್ಮಾಪಕ ಗೌರಂಗ್ ದೋಷಿಯಿಂದ ಅನುಭವಿಸಿರುವ ಘಟನೆ ವಿವರಿಸಿದ್ದಾರೆ.

Related Articles

Related image1
ಸೀರೆ ಏನೋ ಬದಲಾಯ್ತು, ಆ ಸಿಂಗಲ್​ ಲೈನ್​ ಕೂದ್ಲು ಬದಲಾಯಿಸಿ ಪ್ಲೀಸ್​: Amruthadhaare ಫ್ಯಾನ್ಸ್​ ಮನವಿ
Related image2
ಅವಕಾಶ ಇದ್ರೆ ಹೇಳಿ ಪ್ಲೀಸ್​: ಬಾಡಿಗೆ ಹಣ ನಂಬಿ ಬದುಕುತ್ತಿರುವೆ- ನೋವು ತೋಡಿಕೊಂಡ ನಟ ದಿಗಂತ್​
36
ಆತನ ಕ್ರೂರತನ
Image Credit : instagram/flora saini

ಆತನ ಕ್ರೂರತನ

ಅಷ್ಟಕ್ಕೂ ನಟಿ ಹೇಳಿದ್ದೇನೆಂದರೆ, ಆತನ ಪ್ರೀತಿಗೆ ಬಿದ್ದ ಕೆಲವೇ ದಿನಗಳಲ್ಲಿ ಆತ ಕ್ರೂರಿಯೆಂಬುದರ ಅರಿವಾಯಿತು. ಆದರೆ ಕಾಲ ಮಿಂಚಿ ಹೋಗಿತ್ತು. ಆತ ನನ್ನ ಖಾಸಗಿ ಅಂಗಗಳಿಗೆ ಒದೆಯುತ್ತಿದ್ದ, ಮುಖವನ್ನು ಬಾಕ್ಸಿಂಗ್ ಬ್ಯಾಗ್‌ನಂತೆ ಬಳಸುತ್ತಿದ್ದ. ಯಾರಿಗೂ ಫೋನ್​ ಮಾಡದಂತೆ ತಡೆಯುತ್ತಿದ್ದ. ಸಿನಿಮಾಗಳಲ್ಲಿ ನಟಿಸದಂತೆ ತಾಕೀತು ಮಾಡುತ್ತಿದ್ದ. ಇದನ್ನು ಯಾರೊಂದಿಗೂ ಹೇಳಿಕೊಳ್ಳಲು ಆಗಲೇ ಇಲ್ಲ. ಅವನಿಗಾಗಿ ಎಲ್ಲರನ್ನು ಬಿಟ್ಟು ಹೋದರೆ ಹೀಗೆಲ್ಲಾ ದೌರ್ಜನ್ಯ ಮಾಡಿದ. ಯಾಕೆ ಆತ ಹೀಗೆ ಹೊಡೆಯುತ್ತಿದ್ದಾನೆ ಎಂದು ಗೊತ್ತಾಗಲಿಲ್ಲ. ಆದರೂ ಆತ ಒಳ್ಳೆಯವನು ಎಂದು ನಂಬಿದ್ದೆ. ಕೊನೆಗೂ ಅವನ ಸಮಸ್ಯೆ ಅರ್ಥವಾಗಲಿಲ್ಲ. ಎಲ್ಲಾದರೂ ಹೋಗಿಬಿಡುತ್ತೇನೆ ಎಂದೆ. ಹಾಗೆ ಮಾಡಿದರೆ ನನ್ನನ್ನು, ನನ್ನ ಪೋಷಕರನ್ನು ಕೊಂದುಬಿಡುತ್ತೇನೆ ಎಂದು ಬೆದರಿಸಿದ್ದ. ಹದಿನಾಲ್ಕು ತಿಂಗಳು ಕತ್ತಲೆಯಲ್ಲಿಯೇ ಬದುಕಿದೆ. ಯಾರನ್ನೂ ಭೇಟಿಯಾಗಲು, ಮಾತನಾಡಲು ಆಗಲೇ ಇಲ್ಲ. ಒಂದು ದಿನ ಚಿತ್ರಹಿಂಸೆ ಹೆಚ್ಚಾಯಿತು. ಆತ ನನ್ನ ಹೊಟ್ಟೆಗೆ ಒದ್ದ. ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಮನೆ ಬಿಟ್ಟು ಓಡಿಹೋದೆ' ಎಂದು ಫ್ಲೋರಾ ಬರೆದುಕೊಂಡಿದ್ದಾರೆ. ಜೊತೆಗೆ ತಮ್ಮ ಹೊಡೆತ ತಿಂದ ಫೋಟೋಗಳನ್ನೂ ಶೇರ್​ ಮಾಡಿಕೊಂಡಿದ್ದಾರೆ.

46
ಹಲವು ಚಿತ್ರಗಳಲ್ಲಿ ನಟನೆ
Image Credit : instagram/flora saini

ಹಲವು ಚಿತ್ರಗಳಲ್ಲಿ ನಟನೆ

ನಂತರ ಓಡಿ ಬಂದ ಫ್ಲೋರಾ ಪಾಲಕರ ಜತೆ ವಾಸಮಾಡುತ್ತಿದ್ದಾರೆ. ಹಲವು ತಿಂಗಳು ಚೇತರಿಸಿಕೊಂಡ ಬಳಿಕ ನಟನೆ ಆರಂಭಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಬಾಲಿವುಡ್‌ನ 'ಬೇಡಿಯಾ' ಚಿತ್ರದಲ್ಲೂ ಬಣ್ಣ ಹಚ್ಚಿದ್ದಾರೆ. 'ನಾನು ಈಗ ಖುಷಿಯಾಗಿದ್ದೇನೆ. ನನಗೆ ಪ್ರೀತಿಯೂ ಸಿಕ್ಕಿದೆ' ಎಂದು ಹೇಳಿಕೊಂಡಿದ್ದಾರೆ. ಈ ಕುರಿತು ಹೇಳಿಕೊಂಡಿರುವ ಅವರು, 'ಇನ್ನೆಂದೂ ಆತನ ಬಳಿಗೆ ಹೋಗಲಿಲ್ಲ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲು ಹೋದರೂ ಅವರು ನನ್ನ ಮಾತು ನಂಬಲಿಲ್ಲ. ಕೊನೆಗೆ ಲಿಖಿತ ರೂಪದಲ್ಲಿ ದೂರು ದಾಖಲಿಸಿದೆ. ಎಷ್ಟೇ ಕತ್ತಲು ನಿಮ್ಮನ್ನು ಆವರಿಸಿದರೂ, ಕೊನೆಯಲ್ಲಿ ಬೆಳಕು ಸಿಕ್ಕೇ ಸಿಗುತ್ತದೆ' ಎಂದಿದ್ದಾರೆ ನಟಿ ಫ್ಲೋರಾ ಸೈನಿ.

56
ಯಾರಿ ನಟಿ?
Image Credit : Instagram

ಯಾರಿ ನಟಿ?

ಇನ್ನು ನಟಿಯ ಕುರಿತು ಹೇಳುವುದಾದರೆ, ಇವರು, ಚಂಢೀಗಢ ಮೂಲದವರು. 1999ರಲ್ಲಿ 'ಪ್ರೇಮಕೋಸಂ' ತೆಲುಗು ಚಿತ್ರದ ಮೂಲಕ ಬಣ್ಣದಲೋಕಕ್ಕೆ ಎಂಟ್ರಿ ಕೊಟ್ಟವರು. ಹಲವು ತೆಲುಗು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಆ ಬಳಿಕ ಹಿಂದಿ, ಕನ್ನಡ, ಪಂಜಾಬಿ ಚಿತ್ರಗಳಲ್ಲಿ ಅವರು ನಟಿಸಿದರು. ಗೌರಂಗ್ ದೋಶಿ (Gaurang Doshi) ಅವರಿಂದ ಬದುಕು ನರಕವಾಗಿತ್ತು ಎಂದು ಈ ಮೊದಲು ಅವರ ಆರೋಪ ಮಾಡಿದ್ದರು.

66
ಕಹಿ ಘಟನೆ
Image Credit : Instagram

ಕಹಿ ಘಟನೆ

ಈಗ ಹೆಸರನ್ನು ಉಲ್ಲೇಖ ಮಾಡದೆ ಅವರು ತಾವು ಅನುಭವಿಸಿರುವ ಕಹಿ ಘಟನೆ ಕುರಿತು ಹೇಳಿಕೊಂಡಿದ್ದಾರೆ. 'ನಾನು ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಯಶಸ್ಸನ್ನು ಕಂಡವಳು. 20 ರ ಹರೆಯದಲ್ಲಿಯೇ ಸಿನಿ ರಂಗಕ್ಕೆ ಪ್ರವೇಶಿಸಿದೆ. 20 ಕ್ಕೂ ಹೆಚ್ಚು ಟಾಪ್ ಡಿಸೈನರ್‌ಗಳಿಗಾಗಿ ಮಾಡೆಲಿಂಗ್ (Modelling) ಮಾಡಿದ್ದೆ. ಅಲ್ಲಿಯವರೆಗೆ ಎಲ್ಲವೂ ಚೆನ್ನಾಗಿತ್ತು. ಆ ನಂತರ ನಿರ್ಮಾಪಕನೊಬ್ಬನ ಬಲೆಗೆ ಬಿದ್ದೆ. ಅಲ್ಲಿಂದ ನನ್ನ ಬದುಕೇ ನರಕವಾಗೋಯ್ತು' ಎಂದು ಫ್ಲೋರಾ ಬರೆದುಕೊಂಡಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಮನರಂಜನಾ ಸುದ್ದಿ
ಸ್ಯಾಂಡಲ್‌ವುಡ್
ಮಹಿಳೆಯರು
ಸಂಬಂಧಗಳು

Latest Videos
Recommended Stories
Recommended image1
ಬ್ರೇಕಪ್ ಬೆನ್ನಲ್ಲೇ ಹ್ಯಾಂಡ್‌ಸಮ್ ಹುಡ್ಗ ರೋಹನ್ ಜೊತೆ ಹೊಸ ಲವ್ ಸ್ಟೋರಿ ಶುರುಮಾಡಿಕೊಂಡ ಪೂಜಾ ಹೆಗ್ಡೆ!
Recommended image2
ಅಮ್ಮಂಗೆ ಸುಳ್ಳು ಹೇಳಿ ಬೆಂಗಳೂರು ಎಂಟ್ರಿ: ಕದ್ದುಮುಚ್ಚಿ ಸೀರಿಯಲ್​ನಲ್ಲಿ ನಟನೆ- ಅಣ್ಣಯ್ಯ'ರಾಣಿ' ರೋಚಕ ಸ್ಟೋರಿ
Recommended image3
ಸ್ಮಶಾನದಲ್ಲಿ ಭರ್ಜರಿ ಮದುವೆಯಾಗಿ ಸದ್ದು ಮಾಡಿದ ಜೋಡಿ: ಆದ್ರೆ ಕೊನೆಗೆ ಆಗಿದ್ದೇ ಬೇರೆ
Related Stories
Recommended image1
ಸೀರೆ ಏನೋ ಬದಲಾಯ್ತು, ಆ ಸಿಂಗಲ್​ ಲೈನ್​ ಕೂದ್ಲು ಬದಲಾಯಿಸಿ ಪ್ಲೀಸ್​: Amruthadhaare ಫ್ಯಾನ್ಸ್​ ಮನವಿ
Recommended image2
ಅವಕಾಶ ಇದ್ರೆ ಹೇಳಿ ಪ್ಲೀಸ್​: ಬಾಡಿಗೆ ಹಣ ನಂಬಿ ಬದುಕುತ್ತಿರುವೆ- ನೋವು ತೋಡಿಕೊಂಡ ನಟ ದಿಗಂತ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved