ಕೆಜಿಎಫ್‌ನಲ್ಲಿ ನಟಿಸಿದ ಆ ಬಾಲಿವುಡ್ ನಟಿ ಆನ್‌ಸ್ಕ್ರೀನ್ ಕಿಸ್ ದೃಶ್ಯಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಒಮ್ಮೆ ಆಕಸ್ಮಿಕವಾಗಿ ಚುಂಬನ ದೃಶ್ಯ ಚಿತ್ರೀಕರಣದ ವೇಳೆ ಅವರಿಗೆ ವಾಕರಿಕೆ ಉಂಟಾಗಿ ವಾಂತಿ ಮಾಡಿಕೊಂಡಿದ್ದರು ಎಂದು ಹೇಳಿಕೊಂಡಿದ್ದಾರೆ. 

ಆಕೆ ಕೆಜಿಎಫ್‌ ಎರಡನೇ ಭಾಗದಲ್ಲಿ ಕಾಣಿಸಿಕೊಂಡ ನಟಿ. ಬಾಲಿವುಡ್‌ನ ಹೆಸರಾಂತ ನಟಿ ಕೂಡ. ಈಕೆಗೆ ಆನ್‌ಸ್ಕ್ರೀನ್‌ ಕಿಸ್‌ ಎಂದರೆ ಆಗದು. ಆಫ್‌ಸ್ಕ್ರೀನ್‌ ಕತೆ ಏನು ಎಂಬುದು ನಮಗೆ ಗೊತ್ತಿಲ್ಲ. ಯಾಕೆಂದರೆ ಆಕೆ ಹೇಳಿಲ್ಲ. ಆದರೆ ಸಿನಿಮಾಗಾಗಿ ಹಸಿಹಸಿ ರೊಮ್ಯಾಂಟಿಕ್‌ ದೃಶ್ಯಗಳಲ್ಲಿ ನಟಿಸುವುದು ಆಕೆಗೆ ಆಗದು. ಚುಂಬನ ಅಂದರೆ ನೋ ನೋ ನೋ. ಸಾಧ್ಯವೇ ಇಲ್ಲ. ಅಂಥ ದೃಶ್ಯಗಳಿದ್ದರೆ ನನ್ನನ್ನು ಹಾಕಿಕೊಳ್ಳಲೇಬೇಡಿ ಎಂಬುದು ಆಕೆಯ ಕಟ್ಟುನಿಟ್ಟಾದ ಮಾತು.

ಆಕೆ ಬೇರೆ ಯಾರೂ ಅಲ್ಲ, ರವೀನಾ ಟಂಡನ್‌. ಕೆಜಿಎಫ್‌ 2ನಲ್ಲಿ ಆಕೆ ಕನ್ನಡಿಗರ ಮನ ಗೆದ್ದಿದ್ದಾರೆ. ಬಹಳ ಹಿಂದೆಯೇ ಬಾಲಿವುಡ್‌ನ ಹೀರೋಯಿನ್‌ ಆಗಿ ಅನೇಕ ಫಿಲಂಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದರು. ಆದರೆ ತುಂಬಾ ಇಂಟಿಮಸಿ ದೃಶ್ಯಗಳನ್ನು ಆಕೆಯಿಂದ ನಿರೀಕ್ಷಿಸುವಂತಿಲ್ಲ. ʼಟಿಪ್‌ ಟಿಪ್‌ ಬರ್‌ಸಾ ಪಾನಿ...ʼ ನೆನಪಿದೆಯಾ? ಆ ಹಳದಿ ಚಿಫೋನ್ ಸೀರೆಯಲ್ಲಿ ರವೀನಾ ಬಲು ಚೆಲುವೆಯಾಗಿ ಕಾಣಿಸಿದ್ದರು. 90ರ ದಶಕದಲ್ಲಿ ತಮ್ಮ ಹೊಳೆಯುವ ಕಣ್ಣುಗಳು, ಶಕ್ತಿಯುತ ಅಭಿನಯ ಮತ್ತು ಮರೆಯಲಾಗದ ಚಲನಚಿತ್ರಗಳೊಂದಿಗೆ ಬೆಳ್ಳಿ ಪರದೆಯನ್ನು ಆಳಿದರು.

ರವೀನಾ ಟಂಡನ್ ಪರದೆಯ ಮೇಲೆ ಸಾಕಷ್ಟು ಧೈರ್ಯವನ್ನು ತೋರಿಸಿದರೂ, ಅದೊಂದು ವಿಷಯದಲ್ಲಿ ಮಾತ್ರ ಧೈರ್ಯ ತೋರಲೇ ಇಲ್ಲ. ಆಕೆ ನಟಿಸಿದ ಯಾವುದೇ ಫಿಲಂನಲ್ಲಿ ಕಿಸ್ಸಿಂಗ್‌ ದೃಶ್ಯಗಳಿಲ್ಲ. ಆದರೆ ಆಕೆಯ ಕರಿಯರ್‌ನಲ್ಲೂಅಂಥದೊಂದು ಕ್ಷಣ ಬಂದಿತ್ತು. ಅದಕ್ಕೆ ತುತ್ತಾದಾಗ ನಟಿ ವಿಲಕ್ಷಣ ಅನುಭವಕ್ಕೆ ತುತ್ತಾಗಿದ್ದರು. ಅದನ್ನು ಆಕೆ ಆಮೇಲೆ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು. ಆ ಸೀನ್‌ ಅವರಿಗೆ ವಾಕರಿಕೆ ತರಿಸಿತಂತೆ. ಭಾವನಾತ್ಮಕವಾಗಿ ಅಲುಗಾಡಿಸಿತಂತೆ.

ʼಮುತ್ತು ನೀಡುವುದಿಲ್ಲʼ ಎಂದು ಕಾಂಟ್ರಾಕ್ಟ್‌ ಥರ ಏನೂ ಮಾಡದಿದ್ದರೂ, ಆಕೆಯ ನಿಲುವು ಬಾಲಿವುಡ್‌ನಲ್ಲಿ ಎಲ್ಲರಿಗೂ ಚಿರಪರಿಚಿತವಾಗಿತ್ತು. ಆದರೆ ಒಂದು ಸಲ ಮಾತ್ರ, ಒಂದು ಸಿನಿಮಾ ಶೂಟಿಂಗ್‌ನಲ್ಲಿ, ಹೀರೋ ಜೊತೆಗಿನ ದೃಶ್ಯದ ಸ್ವಲ್ಪ ಗಡಿ ಮೀರಿತು. ಅದು ಸ್ವಲ್ಪ ಒರಟು ದೃಶ್ಯವಾಗಿತ್ತು, ತಳ್ಳಾಡುವ ಕ್ಷಣ. ʼಆ ಗೊಂದಲದಲ್ಲಿ, ಅವನ ತುಟಿಗಳು ಆಕಸ್ಮಿಕವಾಗಿ ನನ್ನ ತುಟಿಗಳನ್ನು ಸವರಿದವು. ಅದು ಸ್ಕ್ರಿಪ್ಟ್‌ನ ಭಾಗವಾಗಿರಲಿಲ್ಲ. ಅದರ ಅಗತ್ಯವಿರಲಿಲ್ಲ. ಆದರೆ ಹಾಗೆ ಆಯಿತು. ನನಗೆ ಅಸಹ್ಯ ಅನಿಸಿತು. ನನಗೆ ಅದನ್ನು ಸಹಿಸಲಾಗಲಿಲ್ಲ."

ರವೀನಾ ಕೂಡಲೇ ಶೂಟಿಂಗ್‌ ನಿಲ್ಲಿಸಿ ಸೆಟ್‌ನಿಂದ ಹೊರಟು, ತನ್ನ ಕೋಣೆಗೆ ಧಾವಿಸಿದರು ಮತ್ತು ಅಲ್ಲಿ ವಾಂತಿ ಮಾಡಿಕೊಂಡರು. "ನಾನು ನೇರವಾಗಿ ಸ್ನಾನಗೃಹಕ್ಕೆ ಹೋಗಿ ಹಲ್ಲುಜ್ಜಲು ಪ್ರಾರಂಭಿಸಿದೆ, ಮತ್ತೆ ಮತ್ತೆ. ನಾನು ನೂರು ಬಾರಿ ಬಾಯಿ ತೊಳೆದೆ. ನನಗೆ ಆ ಅಸಹ್ಯದ ಭಾವನೆಯನ್ನು ಮೀರಲು ಸಾಧ್ಯವಾಗಲಿಲ್ಲ. ನನಗೆ ಸಂಪೂರ್ಣ ಅನಾರೋಗ್ಯ ಅನಿಸಿತ್ತು"

ಇದಾದ ಬಳಿಕ ಆ ಹೀರೋ ಆಕೆಯ ಬಳಿ ಕ್ಷಮೆ ಯಾಚಿಸಿದರು. ಘಟನೆ ಸಂಪೂರ್ಣವಾಗಿ ಆಕಸ್ಮಿಕ ಎಂದು ಹೇಳಿದದರು. "ಅವರು ಅದನ್ನು ಉದ್ದೇಶಪೂರ್ವಕವಾಗಿ ಮಾಡಿರಲಿಲ್ಲ. ದೃಶ್ಯದ ಫ್ಲೋನಲ್ಲಿ ಅದು ಸಂಭವಿಸಿತ್ತು. ಚಿತ್ರೀಕರಣದ ನಂತರ ಅವರು ಕ್ಷಮಿಸಿ ಎಂದು ಕೇಳಿಕೊಂಡರು"

ಹಾಲಿ ಪತ್ನಿ-ಮಕ್ಕಳು ಇರುವಾಗಲೇ ಸಂಜಯ್ ಕಪೂರ್ ಅಂತ್ಯಕ್ರಿಯೆಯನ್ನು ಕರಿಷ್ಮಾ ಕಪೂರ್ ಮಾಡಿದ್ದೇಕೆ?

ಈ ಘಟನೆ ಕಾಲಾನಂತರದಲ್ಲಿ ಮರೆಯಾಗಿದೆ. ಆದರೆ ರವೀನಾ ಅವರ ಪ್ರತಿಕ್ರಿಯೆ, ಅಂತಹ ಘಟನೆಗಳು ಉಂಟುಮಾಡಬಹುದಾದ ಭಾವನಾತ್ಮಕ ಪರಿಣಾಮವನ್ನು ಬಹಿರಂಗಪಡಿಸುತ್ತದೆ. ಇದು ಆ ಕಾಲದ ಅನೇಕ ನಟಿಯರು ಎದುರಿಸಬೇಕಾಗಿ ಬಂದ ಹೋರಾಟಗಳನ್ನು ಸಹ ನೆನಪಿಸುತ್ತದೆ. ಪುರುಷ ಪ್ರಾಬಲ್ಯದ ಉದ್ಯಮದಲ್ಲಿ, ಗಡಿಗಳನ್ನು ನಿಗದಿಪಡಿಸುವಾಗಲೂ ಸಹ ತಮ್ಮ ಹಿಡಿತವನ್ನು ಕಾಯ್ದುಕೊಳ್ಳುವುದು ಕಷ್ಟವಾಗಿತ್ತು.

ಒಂದೆರಡು ವರ್ಷ ಹಿಂದೆ ರವೀನಾ ಅರಣ್ಯ ಇಲಾಖೆಯ ಕಾನೂನು ಕುಣಿಕೆಯೊಂದರಲ್ಲಿ ಸಿಕ್ಕಿಕೊಂಡಿದ್ದರು. ಮಧ್ಯಪ್ರದೇಶದ ನರ್ಮದಾಪುರಂ ಜಿಲ್ಲೆಯಲ್ಲಿರುವ ಮೀಸಲು ಅರಣ್ಯ ಪ್ರದೇಶದಲ್ಲಿ ಅವರು ಸಫಾರಿಗೆ ತೆರಳಿದ್ದರು. ಅಂದು ಸಿಬ್ಬಂದಿ ಜೊತೆ ವಾಹನದಲ್ಲಿ ತೆರಳುತ್ತಾ ಹುಲಿಯ ತೀರಾ ಹತ್ತಿರ ಹೋಗಿ ವಿಡಿಯೋ ಮಾಡಿದ್ದರು. ಆ ವಿಡಿಯೋ ವೈರಲ್​ ಆದ ಬಳಿಕ ಅರಣ್ಯಾಧಿಕಾರಿಗಳು ತನಿಖೆಗೆ ಆದೇಶ ನೀಡಿದ್ದರು.

Lady Superstar's Legacy: ಸ್ಟಾರ್ ನಟರೇ ಮೆರೆಯುತ್ತಿದ್ದ ಕಾಲದಲ್ಲಿ ಲೇಡಿ ಸೂಪರ್ ಸ್ಟಾರ್ ಆಗಿ ಮಿಂಚಿದ ನಯನತಾರ