MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • Lady Superstar's Legacy: ಸ್ಟಾರ್ ನಟರೇ ಮೆರೆಯುತ್ತಿದ್ದ ಕಾಲದಲ್ಲಿ ಲೇಡಿ ಸೂಪರ್ ಸ್ಟಾರ್ ಆಗಿ ಮಿಂಚಿದ ನಯನತಾರ

Lady Superstar's Legacy: ಸ್ಟಾರ್ ನಟರೇ ಮೆರೆಯುತ್ತಿದ್ದ ಕಾಲದಲ್ಲಿ ಲೇಡಿ ಸೂಪರ್ ಸ್ಟಾರ್ ಆಗಿ ಮಿಂಚಿದ ನಯನತಾರ

ಕೇರಳದ ಸಾಂಪ್ರದಾಯಿಕ ಕುಟುಂಬದಲ್ಲಿ ಜನಿಸಿದ ಹುಡುಗಿ ಡಯಾನ ಮರಿಯಮ್ ಲೇಡಿ ಸೂಪರ್ ಸ್ಟಾರ್ ನಯನತಾರ ಆಗಿದ್ದು ಹೇಗೆ? ಇಲ್ಲಿದೆ ಕಥೆ.

2 Min read
Pavna Das
Published : Jun 23 2025, 03:13 PM IST| Updated : Jun 23 2025, 03:21 PM IST
Share this Photo Gallery
  • FB
  • TW
  • Linkdin
  • Whatsapp
18
Image Credit : Asianet News

ಸ್ಟಾರ್ ನಟರೇ ಮೆರೆಯುತ್ತಿದ್ದ ಸಮಯದಲ್ಲಿ ಯಾವುದೇ ಸಿನಿಮಾ ಬ್ಯಾಕ್ ಗ್ರೌಂಡ್ ಇಲ್ಲದೇ ಸಿನಿಮಾಗೆ ಎಂಟ್ರಿ ಕೊಟ್ಟು, ಆರಂಭದಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿ, ಇದೀಗ ಲೇಡಿ ಸೂಪರ್ ಸ್ಟಾರ್ (lady super star) ಆಗಿ ಮೆರೆಯುತ್ತಿರುವ ನಟಿ ನಯನ್ ತಾರಾ.

28
Image Credit : our own

ನಯನತಾರಾ ನವೆಂಬರ್ 18 , 1984 ರಂದು ಬೆಂಗಳೂರಿನಲ್ಲಿ ಸಾಂಪ್ರದಾಯಿಕ ಮಲಯಾಳಿ ಸಿರಿಯನ್ ಕ್ರಿಶ್ಚಿಯನ್ (christian family) ಪೋಷಕರಾದ ಕುರಿಯನ್ ಕೋಡಿಯತ್ತ ಮತ್ತು ಓಮನ ಕುರಿಯನ್ ಅವರ ಮಗಳು ಡಯಾನಾ ಮರಿಯಮ್ ಕುರಿಯನ್ ಆಗಿ ಜನಿಸಿದರು. ಅವರು ಕೇರಳದ ಮಾರ್ಥೋಮ ಕಾಲೇಜಿನಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದಿದ್ದಾರೆ.

Related Articles

Related image1
Now Playing
Nayanthara: ಯಶ್ ಸಿನಿಮಾ ಬಗ್ಗೆ ಸಿಕ್ತು ಬಿಗ್ ಅಪ್‌ಡೇಟ್..! ಟಾಕ್ಸಿಕ್ ಟೀಂ ಸೇರಿದ ಲೇಡಿ ಸೂಪರ್ ಸ್ಟಾರ್!
Related image2
Now Playing
Nayanthara: ನಯನತಾರಾ ಮೆಚ್ಚಿಕೊಂಡ ಕನ್ನಡದ ನಟ ಯಾರು ಗೊತ್ತಾ?
38
Image Credit : Nayanthara

ನಯನತಾರಾ ವೃತ್ತಿಪರ ನಟಿಯಾಗುವ ಮೊದಲು ಅರೆಕಾಲಿಕ ಮಾಡೆಲ್ ಆಗಿದ್ದರು. ಅವರ ಮಾಡೆಲಿಂಗ್ ಕಾರ್ಯಗಳನ್ನು ನೋಡಿದ ನಂತರ ಚಲನಚಿತ್ರ ನಿರ್ಮಾಪಕ ಸತ್ಯನ್ ಅಂತಿಕಾಡ್ ಅವರು ಅವರನ್ನು ಗುರುತಿಸಿ 'ಮನಸ್ಸಿನಕ್ಕರೆ' (Manasinakkare)ಗಾಗಿ ಅವರನ್ನು ಸಂಪರ್ಕಿಸಿದರು. ನಯನತಾರಾ ಸಿಎ ಆಗಬೇಕೆಂದು ಬಯಸಿದ್ದರು ಆದರೆ ಸಿನಿಮಾಗಳ ಮೇಲಿನ ಬದ್ಧತೆಯಿಂದಾಗಿ ಆ ಯೋಜನೆಯನ್ನು ಕೈಬಿಡಬೇಕಾಯಿತು.

48
Image Credit : our own

2011 ರಲ್ಲಿ, ನಯನತಾರಾ (Nayanthara) ಚೆನ್ನೈನ ಆರ್ಯ ಸಮಾಜ ದೇವಸ್ಥಾನದಲ್ಲಿ ಹಿಂದೂ ಧರ್ಮಕ್ಕೆ ಮತಾಂತರಗೊಂಡರು. ಈ ಸಮಾರಂಭದ ನಂತರ ಅವರು ತಮ್ಮ ಹೆಸರನ್ನು ನಯನತಾರಾ ಎಂದು ಅಧಿಕೃತಗೊಳಿಸಿದರು. ಹಿಂದೂ ಧರ್ಮಕ್ಕೆ ಮತಾಂತರಗೊಂಡ ನಂತರ, ನಯನ ನಿಯಮಿತವಾಗಿ ತಿರುಪತಿ, ಋಷಿಕೇಶ, ಹರಿದ್ವಾರ ಮುಂತಾದ ಹಲವಾರು ಹಿಂದೂ ಪವಿತ್ರ ಸ್ಥಳಗಳಿಗೆ ಭೇಟಿ ನೀಡಿದರು. ನಟಿ ಆಧ್ಯಾತ್ಮಿಕತೆಯನ್ನು ತುಂಬಾನೆ ನಂಬುತ್ತಾರೆ.

58
Image Credit : Google

ನಯನತಾರಾ ಅವರ ತಂದೆ ಭಾರತೀಯ ವಾಯುಪಡೆಯ ಅಧಿಕಾರಿಯಾಗಿದ್ದರು. ಅವರ ಹಿರಿಯ ಸಹೋದರ ಲೆನೊ ಯುನೈಟೆಡ್ ಅರಬ್ ಎಮಿರೇಟ್ಸ್‌ನ ದುಬೈನಲ್ಲಿ ವಾಸಿಸುತ್ತಿದ್ದಾರೆ. ನಯನತಾರಾ ಜೂನ್ 9, 2022 ರಂದು ಚಲನಚಿತ್ರ ನಿರ್ಮಾಪಕ-ಗೀತರಚನೆಕಾರ ವಿಘ್ನೇಶ್ ಶಿವನ್ (Vignes Sivan)ಅವರನ್ನು ವಿವಾಹವಾದರು. ದಂಪತಿಗಳು ಸರೊಗಸಿ ಮೂಲಕ ಉಯಿರ್ ಮತ್ತು ಉಲಗಮ್ ಎಂಬ ಅವಳಿ ಮಕ್ಕಳನ್ನು ಪಡೆದರು. ಅವರ ಅವಳಿ ಗಂಡು ಮಕ್ಕಳ ಪೂರ್ಣ ಹೆಸರು ಉಯಿರ್ ರುದ್ರೋನೀಲ್ ಎನ್ ಶಿವನ್ ಮತ್ತು ಉಲಗ್ ದೈವಿಕ್ ಎನ್ ಶಿವನ್ ಎಂಬುದಾಗಿದ್ದು, ಇದರಲ್ಲಿ ಎನ್ ಎಂದರೆ ನಯನತಾರಾ ಎಂದಾಗಿದೆ.

68
Image Credit : our own

ಉದ್ಯಮದ ಒಳ ಮಾಹಿತಿ ಪ್ರಕಾರ, ನಯನತಾರಾ ತಮಿಳು ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಮಹಿಳಾ ನಟಿ. ತಮ್ಮ ಆಕ್ಷನ್ ಸಿನಿಮಾಗಳಿಂದಲೇ, ಹಾಗೂ ಮಹಿಳಾ ಪ್ರಧಾನ ಸಿನಿಮಾಗಳಿಂದಲೇ ಲೇಡಿ ಸೂಪರ್ ಸ್ಟಾರ್ ಎಂದೆನಿಸಿದ ನಯನತಾರಾ ಪ್ರತಿ ಚಿತ್ರಕ್ಕೆ 12-15 ಕೋಟಿ ಸಂಭಾವನೆ ಪಡೆಯುತ್ತಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ ನಯನತಾರಾ ತಮ್ಮ ಚೊಚ್ಚಲ ಬಾಲಿವುಡ್ ಚಿತ್ರ (Bollywood film) 'ಜವಾನ್' ಗಾಗಿ ಬರೋಬ್ಬರಿ 35 ಕೋಟಿ ಸಂಭಾವನೆ ಪಡೆದಿದ್ದಾರೆ.

78
Image Credit : Nayanthara

ನಯನತಾರಾ ಐಷಾರಾಮಿ ಜೀವನ (luxury life) ಸಾಗಿಸುತ್ತಿದ್ದು, ಇವರಿಗೆ ಕೇರಳದಲ್ಲಿ, ಚೆನ್ನೈನಲ್ಲಿ ದೊಡ್ಡದಾದ ಬಂಗಲೆ ಇದೆ, ಹಾಗೂ ಮುಂಬೈನಲ್ಲೂ ಕೂಡ ಐಷಾರಾಮಿ ಬಂಗಲೆಯನ್ನು ಹೊಂದಿದ್ದಾರೆ, ಜೊತೆಗೆ ಹಲವು ಲಕ್ಸುರಿ ಕಾರುಗಳ ಒಡತಿ ಕೂಡ ಹೌದು. ಇವರ ನೆಟ್ ವರ್ತ್ ಸುಮಾರು 200 ಕೋಟಿಗೂ ಅಧಿಕವಾಗಿದೆ. ಅಲ್ಲದೇ ಇವರಿಗೆ ಪ್ರೈವೆಟ್ ಜೆಟ್ ಕೂಡ ಇದೆ. ಕೆಲವೇ ನಟಿಯರು ಮಾತ್ರ ಪ್ರೈವೆಟ್ ಜೆಟ್ ಹೊಂದಿದ್ದು, ಅವರಲ್ಲಿ ಇವರೂ ಒಬ್ಬರು. ಅದಕ್ಕೇ ಹೇಳೋದು ನೋಡಿ ಲೇಡಿ ಸೂಪರ್ ಸ್ಟಾರ್ ಎಂದು.

88
Image Credit : our own

ಎರಡು ದಶಕಗಳಿಗೂ ಹೆಚ್ಚಿನ ವೃತ್ತಿಜೀವನದಲ್ಲಿ, ನಯನತಾರಾ 80 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ನಟಿಯಾಗಿರುವುದರ ಹೊರತಾಗಿ ನಯನತಾರಾ ಉದ್ಯಮಿಯೂ ಹೌದು. ಅವರು ವಿಘ್ನೇಶ್ ಶಿವನ್ ಜೊತೆಗೂಡಿ ‘ರೌಡಿ ಪಿಕ್ಚರ್ಸ್’ ಎಂಬ ಪ್ರೊಡಕ್ಷನ್ ಹೌಸ್ (production house) ಅನ್ನು ಹೊಂದಿದ್ದಾರೆ. ಸದ್ಯ ಮೂಗುತ್ತಿ ಅಮ್ಮನ್ 2 ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ನಯನತಾರ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved