ನಟಿ ಸಾಯಿ ಪಲ್ಲವಿ 'ರಾಮಾಯಣ'ದಲ್ಲಿ ಸೀತೆಯಾಗಿ ನಟಿಸುತ್ತಿದ್ದು, ಇತ್ತೀಚೆಗೆ ಅಮಿತಾಭ್ ಬಚ್ಚನ್ ಅವರ 'ಕೆಬಿಸಿ' ಕಾರ್ಯಕ್ರಮದಲ್ಲಿ ತಮ್ಮ ಎಂಬಿಬಿಎಸ್ ಪದವಿಯ ಬಗ್ಗೆ ಮಾತನಾಡಿದ್ದಾರೆ. ವೈದ್ಯಕೀಯ ವೃತ್ತಿಯ ಮೇಲಿನ ಒಲವಿನಿಂದ ಅವರು ನಟನೆಗೆ ವಿದಾಯ ಹೇಳಿ ಆಸ್ಪತ್ರೆ ತೆರೆಯಲಿದ್ದಾರೆ ಎಂಬ ವದಂತಿಗಳು ಮತ್ತೆ ಮುನ್ನೆಲೆಗೆ ಬಂದಿವೆ. ಇದರಿಂದ ಅಭಿಮಾನಿಗಳು ಆತಂಕಗೊಂಡಿದ್ದಾರೆ.
ಮುಂಬೈ: ನಟಿ ಸಾಯಿ ಪಲ್ಲವಿ ಇದೀಗ ಯಶ್, ರಣಬೀರ್ ಕಪೂರ್ ಅವರ ರಾಮಾಯಣ ಸೀರಿಯಲ್ನಲ್ಲಿ ಸೀತೆ ಆಗುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಸರಳ ಸೌಂದರ್ಯದ ಮೂಲಕವೇಗಮನ ಸೆಳೆಯುವ ಸಾಯಿ ಪಲ್ಲವಿ ಅವರು ಸೀತೆ ಆಗಬಾರದು ಎಂದು ಅಲ್ಲಲ್ಲಿ ಕೆಲವರು ಮೂತಿ ಸೊಟ್ಟಗೆ ಮಾಡಿದ್ದೂ ಇದೆ. ಆದರೆ, ಸಾಯಿ ಪಲ್ಲವಿ ಈ ಪಾತ್ರಕ್ಕೆ ಯಾವ ರೀತಿ ನ್ಯಾಯ ಒದಗಿಸಿದ್ದಾರೆ ಎನ್ನುವುದು ಕೆಲವೇ ದಿನಗಳಲ್ಲಿ ತಿಳಿಯಲಿದೆ. ಇದಾಗಲೇ ರಾಮಾಯಣ ಟೀಂ ವಿವಿಧೆಡೆಗಳಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಅಮಿತಾಭ್ ಬಚ್ಚನ್ ಅವರ ಕೌನ್ ಬನೇಗಾ ಕರೋರ್ಪತಿಯಲ್ಲಿಯೂ ಕಾಣಿಸಿಕೊಂಡಿದೆ.
ಎಂಬಿಬಿಎಸ್ ಪದವಿ
ಈ ಸಂದರ್ಭದಲ್ಲಿ ನಟಿಸಾಯಿ ಪಲ್ಲವಿ, ಕೆಲವೇ ಜನರಿಗೆ ತಿಳಿದಿರುವ ಸತ್ಯವೊಂದನ್ನು ರಿವೀಲ್ ಮಾಡಿದ್ದಾರೆ. ಅದೇನೆಂದ್ರೆ ಸಾಯಿ ಪಲ್ಲವಿ (Sai Pallavi) ಅವರು, ನಟಿಯಾಗುವ ಮೊದಲು ವೈದ್ಯೆಯಾಗಿದ್ದವರು. ಈ ವಿಷಯವನ್ನು ನಟ ಅಮಿತಾಭ್ ಬಚ್ಚನ್ ಅವರ ಜೊತೆ ರಿವೀಲ್ ಮಾಡಿದ್ದಾರೆ ನಟಿ. ನಾನು ಎಂಬಿಬಿಎಸ್ ಓದಿದ್ದೇನೆ. ಆದರೆ ವೈದ್ಯಕೀಯ ಪ್ರಾಕ್ಟೀಸ್ಮಾಡಲಿಲ್ಲ. ಅಷ್ಟರಲ್ಲಿಯೇ ಸಿನಿಮಾ ಲೋಕಕ್ಕೆ ಬಂದೆ ಎಂದಿದ್ದಾರೆ. ಅಷ್ಟಕ್ಕೂ ಸಾಯಿ ಪಲ್ಲವಿ ಅವರು, ಜಾರ್ಜಿಯಾದಲ್ಲಿ MBBS ಓದಿದ್ದಾರೆ. ನಂತರ ಭಾರತಕ್ಕೆ ಬಂದು ನೃತ್ಯ ಮತ್ತು ನಟನೆಯಲ್ಲಿ ಆಸಕ್ತಿ ಹೊಂದಿ ಕಡಿಮೆ ಅವಧಿಯಲ್ಲೇ ಸ್ಟಾರ್ ನಟಿ ಆದರು. 2-3 ವರ್ಷಗಳ ಹಿಂದೆ ಅವರು ನಟನೆ ಬಿಟ್ಟು ಮತ್ತೆ ವೈದ್ಯಕೀಯಕ್ಕೆ ಹೋಗುವೆ, ತಮ್ಮ ವೃತ್ತಿಗೆ ನ್ಯಾಯ ಒದಗಿಸುವೆ ಎಂದಿದ್ದರು. ನಟಿಯಾಗಿ ಸ್ಟಾರ್ಡಮ್ ಗಳಿಸಿದಂತೆ ವೈದ್ಯೆಯಾಗಿಯೂ ಯಶಸ್ಸು ಗಳಿಸಬೇಕು ಅಂದು ಹೇಳಿದ್ದರು.
ನಟನೆಗೆ ವಿದಾಯ?
ಇದಕ್ಕಾಗಿ ಸಾಯಿ ಪಲ್ಲವಿ ಅವರು, ನಟನೆಗೆ ವಿದಾಯ ಹೇಳಿ ವೈದ್ಯೆಯಾಗಿ ನೆಲೆ ನಿಲ್ಲುತ್ತಾರೆ ಎನ್ನಲಾಗಿತ್ತು. ಕೊಯಮತ್ತೂರಿನಲ್ಲಿ ಆಸ್ಪತ್ರೆ ಕಟ್ಟಲಿರುವುದಾಗಿ ಹೇಳಿದ್ದರು. ಸಿನಿಮಾ ಮಾಡುವವರೆಗೂ ಮಾಡಿ ನಂತರ ವೈದ್ಯೆಯಾಗುವ ಯೋಜನೆ ಅವರದ್ದಾಗಿದೆ ಎನ್ನುವ ಮಾತು ಕೇಳಿಬಂದಿತ್ತು. ಆದರೆ ಸದ್ಯ ನಟಿ ರಾಮಾಯಣದಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಅವರು ನಟನೆಗೆ ಇಷ್ಟು ಬೇಗ ಗುಡ್ಬೈ ಹೇಳಲ್ಲ ಎನ್ನಲಾಗುತ್ತಿದೆ.
ಆದರೂ ಅಮಿತಾಭ್ ಎದುರಿಗೆ ಮತ್ತೊಮ್ಮೆ ನಟಿ ಈ ವಿಷಯವನ್ನು ಪ್ರಸ್ತಾಪ ಮಾಡಿರುವ ಹಿನ್ನೆಲೆಯಲ್ಲಿ ಹಾಗೂ ನಟಿಗೆ ವೈದ್ಯಕೀಯ ವೃತ್ತಿಯ ಮೇಲೆ ಅಪಾರ ಪ್ರೀತಿ ಇರುವ ಕಾರಣದಿಂದಾಗಿ ನಟನೆಗೆ ಗುಡ್ಬೈ ಹೇಳಿ ವೈದ್ಯಕೀಯ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲಿದ್ದಾರಾ ಎನ್ನುವ ಬಗ್ಗೆ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಹೀಗೆ ಮಾಡದಂತೆ ನ್ಯಾಚುರಲ್ ಬ್ಯೂಟಿಗೆ ಫ್ಯಾನ್ಸ್ ಕಳಕಳಿಯ ಮನವಿಮಾಡಿಕೊಳ್ಳುತ್ತಿದ್ದಾರೆ.






