ರಣಬೀರ್ ಕಪೂರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ 'ರಾಮಾಯಣ' ಸಿನಿಮಾ ಒಟಿಟಿಗೆ ಬರೋದು ಯಾವಾಗ? ಒಟಿಟಿ ರಿಲೀಸ್ ದಿನಾಂಕ ಹಾಗೂ ಸ್ಟ್ರೀಮಿಂಗ್ ವಿವರಗಳ ಕುರಿತು ನಿರ್ಮಾಪಕ ನಮಿತ್ ಮಲ್ಹೋತ್ರಾ ನೀಡಿದ ಬಿಗ್ ಅಪ್ಡೇಟ್ ಸಂಪೂರ್ಣ ವಿವರ ಇಲ್ಲಿದೆ.
ಯಶ್, ರಣಬೀರ್ ಕಪೂರ್, ಸಾಯಿ ಪಲ್ಲವಿ ಅಭಿನಯದ 'ರಾಮಾಯಣ ಭಾಗ 1' ಬಾಕ್ಸ್ ಆಫೀಸ್ನಲ್ಲಿ 24 ದಿನಗಳಿಂದ ಸೌಂಡ್ ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ, ಈ ಚಿತ್ರವು ಅನೇಕ ದಾಖಲೆ ಸಹ ಮುರಿದಿದೆ. ಅಲ್ಲದೇ ಶೀಘ್ರದಲ್ಲೇ ಇನ್ನೂ ಹಲವು ದಾಖಲೆ ಮುರಿಯಲು ಸಜ್ಜಾಗಿದೆ. ಈ ಚಿತ್ರ ಭಾರತದಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ಎರಡನೇ ಚಿತ್ರವಾಗಿದೆ. ಅಲ್ಲದೆ, ಇನ್ನು ವಿಶ್ವಾದ್ಯಂತ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಲು ಕೆಲ ಹೆಜ್ಜೆ ಮಾತ್ರ ದೂರದಲ್ಲಿದೆ. ಈ ನಿಟ್ಟಿನಲ್ಲಿ ಈ ಚಿತ್ರ ಯಾವಾಗ ಓಟಿಟಿಯಲ್ಲಿ ರಿಲೀಸ್ ಆಗುತ್ತೆ ಎನ್ನುವುದರ ಕುರಿತು ನಮಿತ್ ಮಲ್ಹೋತ್ರಾ ಬಿಗ್ ಅಪ್ಡೇಟ್ ಕೊಟ್ಟಿದ್ದಾರೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
1800 ಕೋಟೆ ಗಳಿಕೆ ದಾಖೆಲೆಯಲ್ಲಿ!
ರಾಮಾಯಣ ನವೆಂಬರ್ 5, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಕೇವಲ 24 ದಿನಗಳಲ್ಲಿ, ಚಿತ್ರವು 1800 ಕೋಟಿ ರೂ., ಗಡಿ ದಾಟಿದೆ. ಕೆಲ ವರದಿಯ ಪ್ರಕಾರ, ರಾಮಾಯಣ ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಐದು ಚಿತ್ರಗಳಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಅಲ್ಲದೇ ಬಾಲಿವುಡ್ ಚಿತ್ರಗಳಲ್ಲಿ ಎರಡನೇ ಸ್ಥಾನದಲ್ಲಿದೆ. ನಿವ್ವಳ ಆದಾಯದ ದೃಷ್ಟಿಯಿಂದ, 'ರಾಮಾಯಣ' ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಎರಡನೇ ಚಿತ್ರವಾಗಿದೆ. ಈ ರಾಮಾಯಣ ಚಿತ್ರ 2000 ಕೋಟಿ ರೂ.ಗಳ ಗಡಿ ದಾಟಿದರೆ, ಅದು ಭಾರತೀಯ ಸಿನಿಮಾ ಉದ್ಯಮದಲ್ಲಿ ಇತಿಹಾಸ ಸೃಷ್ಟಿಸುತ್ತದೆ.
ಒಟಿಟಿ ಕುರಿತು ಮೌನ ಮುರಿದ ನಮಿತ್!
ಇದರೊಂದಿಗೆ, ಪ್ರೇಕ್ಷಕರು ರಾಮಾಯಣ ಚಿತ್ರ ಯಾವಾಗ OTT ಬಿಡುಗಡೆಗೆ ಆಗುತ್ತೆ ಎಂದು ಕಾಯುವಿಕೆಗೆ ಈಗ ಅಧಿಕೃತ ಮಾಹಿತಿಯನ್ನು ನಮಿತ್ ಬಿಷ್ಷಿಟ್ಟಿದ್ದಾರೆ. "ಸಂಗೀತ ಮತ್ತು ಚಿತ್ರವನ್ನು ಅನುಭವಿಸಲು ನಾನು ಚಿತ್ರವನ್ನು ದೊಡ್ಡ ಪರದೆಯ ಮೇಲೆ ಬಿಡುಗಡೆ ಮಾಡಬೇಕೆಂದು ಬಯಸಿದ್ದೆ. ಕೆಲವು ತಿಂಗಳುಗಳ ನಂತರ ಅದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಸದ್ಯಕ್ಕೆ ಅದಕ್ಕಾಗಿ ಯಾವುದೇ ತಕ್ಷಣದ ಯೋಜನೆಗಳಿಲ್ಲ. ನಮ್ಮ ಸಾಮಾನ್ಯ ಅಭ್ಯಾಸದ ಪ್ರಕಾರ ಈ ದಿನಾಂಕದಂದು ನಾವು ಚಿತ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡುತ್ತಿಲ್ಲ ಎಂದು ಡಿಡಿ ನ್ಯೂಸ್ ಜೊತೆಗಿನ ಇತ್ತೀಚಿನ ಸಂಭಾಷಣೆಯಲ್ಲಿ ಮಲ್ಹೋತ್ರಾ ಹೇಳಿದ್ದಾರೆ.
ಇನ್ನು ಯಾರಿಗೂ ಮಾರಾಟವಾಗಿಲ್ಲ!
ನಾನು ಇನ್ನೂ ಯಾರಿಗೂ OTTಗೆ ಮಾರಾಟ ಮಾಡಿಲ್ಲ. ಚಿತ್ರ ಲಭ್ಯವಿರುವವರೆಗೆ, ನಾನು ಅದನ್ನು ಚಿತ್ರಮಂದಿರಗಳಲ್ಲಿ ನೋಡುವ ಉದ್ದೇಶ ಹೊಂದಿದ್ದೇನೆ. OTT ಪ್ರಶ್ನೆ ಬಂದಾಗ, ಅದು ಬರುತ್ತದೆ. ಆದರೆ ಇಂದಿನಂತೆ, ನನಗೆ ಅಂತಹ ಯಾವುದೇ ಯೋಜನೆಗಳಿಲ್ಲ. ನಾನು ಯಾರೊಂದಿಗೂ ಯಾವುದೇ ಒಪ್ಪಂದಕ್ಕೆ ಸಹಿ ಹಾಕಿಲ್ಲ, ಮತ್ತು ಇಂದು, ನಾಳೆ ಅಥವಾ ಮರುದಿನ ಯಾರೊಂದಿಗೂ ಯಾವುದೇ ಒಪ್ಪಂದಕ್ಕೆ ಸಹಿ ಹಾಕುವ ಉದ್ದೇಶ ನನಗಿಲ್ಲ ಎಂದು ನಮೀತ್ ಹೇಳಿದ್ದಾರೆ.


