ಕನ್ನಡ ಹಾಗೂ ತೆಲುಗಿನ ಈ ಮಹಾನ್ ನಟರನ್ನು ಒಟ್ಟಿಗೆ ನೋಡುವ ಆಸೆ ಚಿತ್ರರಸಿಕರಿಗಿತ್ತು. ಇದನ್ನು ಈ ನಟರು ಮನಸ್ಸು ಮಾಡಿದ್ದರೆ, ಯಾವತ್ತೋ ಈಡೇರಿಸಬಹುದಾಗಿತ್ತು. ಆದರೆ, ಅದೀಗ ಕೈ ಗೂಡುತ್ತಿದೆ. ಕಿಚ್ಚ ಸುದೀಪ್ ಅವರು ಚಿರಂಜೀವಿ ಅವರೊಂದಿಗೆ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಸ್ಕ್ರೀನ್ ಹಂಚಿ ಕೊಳ್ಳುತ್ತಿದ್ದಾರೆ.

ಬೆಂಗಳೂರು: ಚಲನಚಿತ್ರ ಅಭಿಮಾನಿಗಳಿಗೆ ಸುದೀಪ್ ಹಾಗೂ ಚಿರಂಜೀವಿ ಅವರನ್ನು ಒಟ್ಟಿಗೆ ಸ್ಕ್ರೀನ್ ನೋಡುವ ಆಸೆ ಇತ್ತು. 'ರನ್ನ' ಚಿತ್ರದಲ್ಲಿಯೇ ಈ ಜೋಡಿ ಒಟ್ಟಾಗಿ ಕಾಣಿಸಿ ಕೊಳ್ಳಬೇಕಿತ್ತು. ಆದರೆ, ಆಗ ಈಡೇರದ ಆಸೆಯನ್ನು ಇದೀಗ ಸುದೀಪ್ ಈಡೇರಿಸುತ್ತಿದ್ದಾರೆ.

'ಎಸ್. ಎಕ್ಸೈಟೆಡ್' ಎಂದೇ ಈ ಸುದ್ದಿಯನ್ನು ಟ್ವೀಟ್ ಮಾಡಿ, ಕಿಚ್ಚ ಹಂಚಿಕೊಂಡಿದ್ದಾರೆ. 'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ಮೆಗಾ ಸ್ಟಾರ್ ಚಿರಂಜೀವಿಯೊಂದಿಗೆ ನಟಿಸುತ್ತಿರುವುದಾಗಿ ಸುದೀಪ್ ಬಹಿರಂಗಗೊಳಿಸಿದ್ದಾರೆ.

Scroll to load tweet…

'ಎಸ್, ವರಿಡ್..' ಎಂದೂ ಹೇಳಿರುವ ಸುದೀಪ್, ಸುರೇಂದರ್ ರೆಡ್ಡಿ ನಿರ್ದೇಶನದಲ್ಲಿ 'ಸೈರಾ ನರಸಿಂಹ ರೆಡ್ಡಿ' ಸಿನಿಮಾ ಸಿದ್ಧವಾಗಲಿದೆ. ಇದು ನನ್ನ ಮೊದಲ ಐತಿಹಾಸಿಕ ಸಿನಿಮಾವೆಂದೂ ಸಂತೋಷ, ಭಯ ಎಲ್ಲವನ್ನೂ ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದಾರೆ.

ಕಿಚ್ಚನಿಗೆ ಇಂದಿಗೂ ಕಾಡುವ ಆ ನೋವು ಯಾವುದು ಗೊತ್ತಾ?
ಎಲ್ಲೆಲ್ಲೂ ಕಿಚ್ಚನದೆ ಸುದ್ದಿ ; ದಾಖಲೆ ಬರೆದ ಸುದೀಪ್
ಕಿಚ್ಚ-ದರ್ಶನ್ ಅಭಿಮಾನಗಳಿಗೆ ಗುಡ್ ನ್ಯೂಸ್; ಮತ್ತೆ ಒಂದಾದ ಸ್ಟಾರ್ ನಟರು?
ಸರ್ಬಿಯಾದಲ್ಲಿ ಕಾರು ಹಾಯಿಸಿದ ಕಿಚ್ಚ : ಬೆರಗಾದ ನಿರ್ದೇಶಕ
ವಿಲನ್ ಟೀಸರ್ ವಿವಾದ ತಣ್ಣಗಾಗಿಸಿದ ಸುದೀಪ್