ಹ್ಯಾಟ್ರಿಕ್ ಹೀರೊ ಶಿವಣ್ಣನ ಹಿಂದಿಕ್ಕಿದ ಕಿಚ್ಚ ಸುದೀಪ್!

Kiccha Sudeep and Shivraaj Kumar's The Villain Teaser Out: Here is fans Reaction
Highlights

ವಿಲನ್ ಟೀಸರ್ ಗೆ ಅಭಿಮಾನಿಗಳಿಂದ ಭರ್ಜರಿ ರಿಯಾಕ್ಷನ್ ಸಿಕ್ಕಿದೆ. ಎರಡು ವಿಭಿನ್ನ ಟೀಸರ್ ಗಳಲ್ಲಿ ರಾವಣನ ಹೆಸರು ಕಾಮನ್ ಆಗಿದ್ದು ನಿಜವಾದ ವಿಲನ್ ಯಾರು? ಉತ್ತರ ಪ್ರೇಮ್ ಅವರೇ ಹೇಳಬೇಕು.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ನಡುವೆ ಪೈಪೋಟಿ ಆರಂಭವಾಗಿದೆ. ಶಿವಣ್ಣನಿಗಿಂತ ಕಿಚ್ಚ ಸುದೀಪ್ ಮುಂದಿದ್ದಾರೆ. ಅರೆ ಇವರೇನು ಹೇಳ್ತಾ ಇದ್ದಾರೆ ಚಿತ್ರರಂಗದಲ್ಲಿ ಮತ್ತಿನ್ನೇನಾದ್ರೂ ಆಯ್ತಾ ? ಎಂದು ಯೋಚನೆ ಮಾಡಬೇಡಿ. ಇದೆಲ್ಲಾ ವಿಲನ್ ಟೀಸರ್ ಎಫೆಕ್ಟ್.

ಬಹು ನಿರೀಕ್ಷಿತ ಕನ್ನಡ ಚಿತ್ರ ವಿಲನ್ ಟೀಸರ್ ನಿನ್ನೆ ಲಾಂಚ್ ಆಗಿದೆ. ಇಷ್ಟು ಮಾತ್ರ ಸುದ್ದಿ ಅಲ್ಲ.. ಲಾಂಚ್ ಆದ ಮೇಲೆ ಅಭಿಮಾನಿಗಳ ಪ್ರತಿಕ್ರಿಯೆ ಹೇಗಿದೆ ಎನ್ನುವುದು ಸುದ್ದಿಯೇ... ಸುದೀಪ್ ಮತ್ತು ಶಿವಣ್ಣ ಕಾಣಿಸಿಕೊಳ್ಳುವ ಎರಡು ಪ್ರತ್ಯೇಕ ಟೀಸರ್ ಗಳನ್ನು ಚಿತ್ರ ತಂಡ ಬಿಡುಗಡೆ ಮಾಡಿತ್ತು.

ಇದೀಗ ಇರುವೆ ಅಟ್ಟಿಸಿಕೊಂಡು ಹೋಗುವ ಸುದೀಪ್ ಟೀಸರ್ ಗೆ ಒಂದು ಮಿಲಿಯನ್ ಅಂದರೆ ಬರೋಬ್ಬರಿ ಹತ್ತು ಲಕ್ಷಕ್ಕೂ ಅಧಿಕ ವೀವ್ಸ್ ಲಭ್ಯವಾಗಿದೆ. ಇನ್ನು ಶಿವಣ್ಣರ ಟೀಸರ್ ಒಂದು ಚೂರು ಹಿಂದಿದ್ದು ೮ ಲಕ್ಷ ಜನರಿಂದ ವೀಕ್ಷಣೆಗೆ ಒಳಗಾಗಿದೆ. ಇಬ್ಬರು ನಾಯಕರು ಢಿಫರೆಂಟ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದು ಜೋಗಿ ಪ್ರೇಮ್ ನಿರ್ದೇಶನದ ಚಿತ್ರದ ಆಡಿಯೋ ಕೂಡ ಸದ್ಯದಲ್ಲೇ ರಿಲೀಸ್ ಆಗಲಿದೆ.

loader