ವಿಲನ್ ಟೀಸರ್ ವಿವಾದ ತಣ್ಣಗಾಗಿಸಿದ ಸುದೀಪ್

Kiccha Sudeep ends Villain teaser controversy by tweet
Highlights

ಒಂದೆಡೆ ವಿಲನ್ ಟೀಸರ್ ಕ್ರೇಜ್ ಕನ್ನಡ ಚಿತ್ರರಂಗದಲ್ಲಿ ಧೂಳು ಎಬ್ಬಿಸುತ್ತಾ ಇದೆ. ಶಿವಣ್ಣ ಮತ್ತು ಸುದೀಪ್ ಗಾಗಿ ಪ್ರತ್ಯೇಕ ಟೀಸರ್ ಬಿಡುಗಡೆ ಮಾಡಿದ್ದು ಅಭಿಮಾನಿಗಳಿಂದ ಬಂದ ಕೆಲ ಕಮೆಂಟ್ ಗಳಿಗೆ ಸುದೀಪ್ ಸಮಾಧಾನದ ಮಾತು ಹೇಳಿದ್ದಾರೆ. ಏನಿದು ಸುದ್ದಿ ...

ವಿಲನ್ ಟೀಸರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದ ನಿರ್ದೇಶಕ ರಿಶಬ್ ಶೆಟ್ಟಿ, ಟೀಸರ್ ಯು ಟ್ಯೂಬ್ ನಲ್ಲಿ ಮುನ್ನುಗ್ಗುವ ವೇಗ ನೋಡಿದರೆ ಎಲ್ಲ ದಾಖಲೆಗಳನ್ನು ಮರಿಯಬಹುದು ಎಂದಿದ್ದರು. ಆದರೆ ಟ್ವೀಟ್ ನಲ್ಲಿ ಕೇವಲ ಸುದೀಪ್ ಕಾಣಿಸಿಕೊಳ್ಳುವ ಟೀಸರ್ ಮಾತ್ರ ಶೇರ್ ಮಾಡಿದ್ದರು. ಇದರಿಂದ ಅಭಿಮಾನಿಗಳ ಕೆಂಗಣ್ಣಿಗೂ ರಿಶಬ್ ಗುರಿಯಾಗಿದ್ದರು.

ಆದರೆ ಇದೆಲ್ಲದಕ್ಕೆ ಉತ್ತರ ನೀಡಿರುವ ಸುದೀಪ್, ಶಿವಣ್ಣ ಹಿರಿಯರು, ಅವರ ಮೇಲೆ ನಮ್ಮೆಲ್ಲರಿಗೂ ಪ್ರೀತಿ ಮತ್ತು ಗೌರವ ಇದೆ. ಈ ರೀತಿಯಲ್ಲಿ ನಡೆದುಕೊಳ್ಳುವುದು ತಪ್ಪು ಎಂದು ಸ್ಪಷ್ಟನೆ ನೀಡಿದ್ದಾರೆ. ಇರುವೆ ಅಟ್ಟಿಸಿಕೊಂಡು ಹೋಗುವ ಸುದೀಪ್, ಅಬ್ಬರಿಸುವ ಶಿವಣ್ಣ ಇಬ್ಬರನ್ನು ಅಭಿಮಾನಿಗಳು ಬರಮಾಡಿಕೊಂಡಿದ್ದು ಸಾಮಾಜಿಕ ತಾಣದಲ್ಲಿ ಟೀಸರ್ ರೀತಿಯದ್ದೇ ವಿಡಿಯೋ ಮಾಡಿ ಅಪ್ ಲೋಡ್ ಮಾಡುತ್ತ ವಿಲನ್ ಕ್ರೇಜ್ ಮತ್ತಷ್ಟು ಹೆಚ್ಚಾಗುವಂತೆ ಮಾಡುತ್ತಿದ್ದಾರೆ.

ಹ್ಯಾಟ್ರಿಕ್ ಹೀರೊ ಶಿವಣ್ಣನ ಹಿಂದಿಕ್ಕಿದ ಕಿಚ್ಚ ಸುದೀಪ್!

ಜೋಗಿ ಪ್ರೇಮ್ ನಿರ್ದೇಶನ್ ವಿಲನ್ ಚಿತ್ರದಲ್ಲಿ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಮತ್ತು ಸುದೀಪ್ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಹೆರ್ ಸ್ಟೈಲ್ ಮತ್ತು ಎಂಟ್ರಿ ಕೂಡಾ ಭಿನ್ನವಾಗಿದ್ದು ಕನ್ನಡ ಚಿತ್ರರಂಗದ ಮಟ್ಟಿಗೆ ಇಬ್ಬರು ದೊಡ್ಡ ಸ್ಟಾರ್ ಗಳು ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಚಿತ್ರ ದಾಖಲೆ ಬರೆಯುವ ನಿರೀಕ್ಷೆಯಿದೆ.

 

 

loader