ಸರ್ಬಿಯಾದಲ್ಲಿ ಕಾರು ಹಾಯಿಸಿದ ಕಿಚ್ಚ : ಬೆರಗಾದ ನಿರ್ದೇಶಕ

10th day of the Chase sequence for Kotigobba 3 at Belgrade.
Highlights

  • ಸರ್ಬಿಯಾದ ಬೆಲ್'ಗ್ರೇಡ್'ನಲ್ಲಿ ನಡೆಯುತ್ತಿರುವ ಕೋಟಿಗೊಬ್ಬ -3 ಚಿತ್ರದ ಚೇಸಿಂಗ್ ದೃಶ್ಯ
  • ಅದ್ಭುತ ಕಾರ್ ಚೇಸಿಂಗ್ ಸ್ಟಂಟ್ ಮಾಡಿದ ಕಿಚ್ಚ ಸುದೀಪ್ 

ಬೆಲ್'ಗ್ರೇಡ್(ಜು.03): ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಕೋಟಿಗೊಬ್ಬ -3 ಚಿತ್ರದ ಸಾಹಸ ದೃಶ್ಯದ ಶೂಟಿಂಗ್ ಸರ್ಬಿಯಾ ದೇಶದ ರಾಜಧಾನಿ ಬೆಲ್'ಗ್ರೇಡ್'ನಲ್ಲಿ ನಡೆಯುತ್ತಿದೆ.

ಕಾರಿನ ಚೇಸಿಂಗ್ ದೃಶ್ಯಗಳನ್ನು ಸಾಹಸ ನಿರ್ದೇಶಕ ಅನಲರಸು ಅದ್ಭುತವಾಗಿ ಚಿತ್ರೀಕರಿಸುತ್ತಿದ್ದಾರೆ. ಸ್ಟಂಟ್ ದೃಶ್ಯದಲ್ಲಿ ಸ್ವತಃ ಸುದೀಪ್ ಅವರೆ  ವೇಗವಾಗಿ ಚಲಿಸಿಕೊಂಡು ಹತ್ತಾರು ಅಡಿ ಮೇಲಿಂದ ಹಾರುವ ದೃಶ್ಯ ಮಾತ್ರ ಕಣ್ಮನ ಸೆಳೆಯುವಂತಿದೆ. ಕಿಚ್ಚನ ಸಾಹಸಕ್ಕೆ ಸ್ಟಂಟ್ ಮಾಸ್ಟರ್ ಕೂಡ ಬೆರಗಾಗಿದ್ದಾರೆ.  

ಸಿನಿಮಾ ದೃಶ್ಯಗಳನ್ನು ಟ್ವಿಟರ್ ನಲ್ಲಿ ಶೇರ್ ಮಾಡಿರುವ ಸುದೀಪ್ ತಮಗಾದ ಅನುಭವ ಹಾಗೂ ಸಾಹಸ ನಿರ್ದೇಶಕ ಅನಲರಸು ಅವರ ಕಾರ್ಯವನ್ನು ಮೆಚ್ಚಿ ಶ್ಲಾಘಿಸಿದ್ದಾರೆ. 

ಸೂರಪ್ಪ ಬಾಬು ನಿರ್ಮಿಸುತ್ತಿರುವ  ಕೋಟಿಗೊಬ್ಬ- 3 ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವುದು ಶಿವ ಕಾರ್ತಿಕ್. ಸಿನಿಮಾಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದು ಸುದೀಪ್, ಮಡ್ಡೋನ ಸೆಬಾಸ್ಟಿಯನ್‌ , ಶ್ರದ್ಧಾ ದಾಸ್, ಬಾಲಿವುಡ್ ನಟ ಅಪ್ತಾಬ್ ಶಿವದಾಸಿನಿ ಪ್ರಮುಖ ತಾರಾ ಬಳಗದಲ್ಲಿದ್ದಾರೆ. ಈ ವರ್ಷದ ಡಿಸೆಂಬರ್'ನಲ್ಲಿ ರಾಜ್ಯಾದ್ಯಂತ ಸಿನಿಮಾ ತೆರೆ ಕಾಣಲಿದೆ.

 

loader