ನಿರ್ದೇಶಕ ಜೋಗಿ ಪ್ರೇಮ್ ಹಾಗೂ ಕಿಚ್ಚ ಸುದೀಪ್ ಮತ್ತೆ ಒಂದಾಗುತ್ತಿದ್ದಾರೆ. ವಿಲನ್ ಬಳಿಕ ಇದೀಗ ಮತ್ತೊಂದು ಸುಂದರ ಕತೆ ಮೂಲಕ ಬಿಗ್ ಸರ್ಪ್ರೈಸ್ ನೀಡಲು ಮುಂದಾಗಿದ್ದಾರೆ. ಸುದೀಪ್ ಹುಟ್ಟು ಹಬ್ಬ ದಿನವೇ ಸಿನಿಮಾದ ಮಹತ್ವದ ಅಪ್‌ಡೇಟ್ ಹೊರಬಿದ್ದಿದೆ.

ಬೆಂಗಳೂರು (ಸೆ.02) ಕಿಚ್ಚ ಸುದೀಪ್‌ ಹುಟ್ಟು ಹಬ್ಬದ ದಿನ ಅಭಿಮಾನಿಗಳಿಗೆ ಹಲವು ಸರ್ಪ್ರೈಸ್ ಬರುತ್ತಲೇ ಇದೆ. ದೇವರಾಯ, ಬಿಲ್ಲ ರಂಗ ಬಾಷಾ ಸಿನಿಮಾ ಟೀಸರ್ ಬೆನ್ನಲ್ಲೇ ಇದೀಗ ನಿರ್ದೇಶಕ ಜೋಗಿ ಪ್ರೇಮ್ ನಿರ್ದೇಶನ ಸಿನಿಮಾದ ಮಹತ್ವದ ಅಪ್‌ಡೇಟ್ ಹೊರಬಿದ್ದಿದೆ. ಪ್ರೇಮ್ ಹಾಗೂ ಕಿಚ್ಚ ಸುದೀಪ್ ಜೋಡಿ ಮತ್ತೆ ಒಂದಾಗಿ ಸಿನಿ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಲು ಸಜ್ಜಾಗಿದ್ದಾರೆ. ಪ್ರೇಮ್ 10 ಸಿನಿಮಾ ಇದಾಗಿದ್ದು, ಅಭಿನಯ ಚಕ್ರವರ್ತಿ ಕಿಚ್ಚು ಸುದೀಪ್ ನಾಯಕನಾಗಿದ್ದಾರೆ.

ದಿ ವಿಲನ್ ಸಿನಿಮಾ ಬಳಿಕ ಸುದೀಪ್ ಪ್ರೇಮ್ ಜೋಡಿ

ದಿ ವಿಲನ್ ಸಿನಿಮಾ ಮೂಲಕ ಜೋಗಿ ಪ್ರೇಮ್ ಹಾಗೂ ಕಿಚ್ಚ ಸುದೀಪ್ ಜೋಡಿ ಹೊಸ ಅಲೆ ಸೃಷ್ಟಿಸಿತ್ತು. ಇದೀಗ ಮತ್ತೆ ಒಂದಾಗುತ್ತಿದೆ. ದಿ ವಿಲನ್ ಸಿನಿಮಾ ಮೊದಲ ವಾರ 32 ಕೋಟಿ ರೂಪಾಯಿ ಬಾಚಿಕೊಳ್ಳುವ ಮೂಲಕ ಹೊಸ ದಾಖಲೆ ಬರೆದಿತ್ತು. ದಿ ವಿಲನ್ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಈ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಧ್ಯಾಯ ಆರಂಭಗೊಂಡಿತ್ತು. ಇದೀಗ ದಿ ವಿಲನ್ ಜೋಡಿ ಮತ್ತೆ ಹೊಸ ಸಿನಿಮಾ ಮೂಲಕ ಬರಲು ಸಜ್ಜಾಗಿದ್ದಾರೆ.

ಜೆನ್‌ಝಿ ಕತೆಯನ್ನು ಹಿಡಿದು ಬಂದ ಪ್ರೇಮ್

ಹೊಸ ಸಿನಿಮಾಗೆ ಟೈಟಲ್ ಫೈನಲ್ ಆಗಿಲ್ಲ. ಜೆನ್‌ಝಿ, ಈಗಿನ ಜನರೇಶನ್ ಕತೆಯನ್ನೇ ಹಿಡಿದು ರಸವತ್ತಾಗಿ ನೀಡಲು ಪ್ರೇಮ್ ಮುಂದಾಗಿದ್ದಾರೆ. ಸಿನಿಮಾ ಅಪ್‌ಡೇಟ್ ಕುರಿತು ಪೋಸ್ಟರ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದೀಗ ಸುದೀಪ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಹೀಗಾಗಿ ಇಂದು ಅಭಿಮಾನಿಗಳ ಜೊತೆ ಹುಟ್ಟು ಹಬ್ಬ ಆಚರಿಸಿಕೊಳ್ಳಲು ಸಾಧ್ಯವಾಗಿಲ್ಲ.

ಅಕ್ಟೋಬರ್ 20 ರಂದು ಸಿನಿಮಾ ಮುಹೂರ್ತ

ಕಿಚ್ಚ ಸುದೀಪ್ ಜೋಗಿ ಪ್ರೇಮ್ ಸಿನಿಮಾಗೆ ಅಕ್ಟೋಬರ್ 20ಕ್ಕೆ ಮುಹೂರ್ತ ನಡೆಯಲಿದೆ. ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ಪ್ರಯುಕ್ತ ಈ ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದೆ. ಟೀಸರ್‌ನಲ್ಲಿ ಕಿಚ್ಚ ಸುದೀಪ್ ಅವರ ಕ್ಲಾಸಿ ಲುಕ್ ಮತ್ತು ಸಿನಿಮಾದ ಸಂಗೀತದ ಸೆಳೆತ ಕುತೂಹಲ ಹುಟ್ಟಿಸಿದೆ