'ಇಡೀ ಕರ್ನಾಟಕ ಕಮಲ್ ಹಾಸನ್ ವಿರುದ್ಧ ಕೆರಳಿದೆ. ಚಿತ್ರಮಂದಿರದವರೇ ಈಗ ಸಿನಿಮಾ ರಿಲೀಸ್ ಮಾಡಲ್ಲ ಅಂತಾ ಹೇಳಿದ್ದಾರೆ. ವಿತರಕರು ಕೂಡ ಇದೇ ನಿರ್ಧಾರಕ್ಕೆ ಬಂದಿದ್ದಾರೆ. ಈಗ ಮತ್ತೆ ಕ್ಷಮೆ ಕೇಳಲ್ಲ ಅಂತ ಹೇಳಿದ್ದಾರೆ.
ಇತ್ತೀಚೆಗೆ ಕನ್ನಡಕ್ಕೆ ಅವಮಾನ ಮಾಡಿದ್ದ ತಮಿಳು ನಟ ಕಮಲ್ ಹಾಸನ್ (Kamal Haasan) , ಮತ್ತೆ ತಾವು 'ಕ್ಷಮೆ ಕೇಳೋದಿಲ್ಲ' ಎಂದಿದ್ದಾರೆ. ಅಷ್ಟೇ ಅಲ್ಲ, ನಾನೇನೂ ತಪ್ಪು ಮಾಡಿಲ್ಲ, ಆದರೆ ನ್ಯಾಯದ ಮೇಲೆ ನಂಬಿಕೆ ಇದೆ, ನಾನ್ ಹೇಳಿದ್ದೇ ಸರಿ ಎಂದಿದ್ದಾರೆ ನಟ ಕಮಲ್ ಹಾಸನ್. ನಟ ಕಮಲ್ ಹಾಸನ್ ಕನ್ನಡಪರ ಹೋರಾಟಗಾರರ ಪ್ರತಿಭಟನೆಗೆ ಬಗ್ಗದೇ ಮತ್ತೆ ತಮ್ಮ ಮೊಂಡಾಟ ಮುಂದುವರಿಸಿದ್ದಾರೆ. ತಮ್ಮ ಮೊದಲಿನ ಹೇಳಿಕೆಗೇ ಸ್ಟಿಕ್ ಆಗಿರುವ ನಟ ಕಮಲ್ ಹಾಸನ್ ಅವರು ಇದೀಗ ಇನ್ನೂ ಹೆಚ್ಚು ತಮ್ಮ ಮಾತಿಗೆ ಅಂಟಿಕೊಂಡಿದ್ದು, ತಮ್ಮ ವರಸೆ ಮುಂದುವರಿಸಿದ್ದಾರೆ.
"ಇದು ಪ್ರಜಾಪ್ರಭುತ್ವ ನಾನು ಕಾನೂನು ಮತ್ತು ನ್ಯಾಯವನ್ನು ನಂಬುತ್ತೇನೆ... ಕರ್ನಾಟಕ, ಆಂಧ್ರಪ್ರದೇಶ ಮತ್ತು ಕೇರಳದ ಮೇಲಿನ ನನ್ನ ಪ್ರೀತಿಯೂ ನಿಜ... ಯಾರೂ ಇದನ್ನು ಅನುಮಾನಿಸುವುದಿಲ್ಲ... ನನಗೆ ಈ ಹಿಂದೆಯೂ ಬೆದರಿಕೆ ಹಾಕಲಾಗಿತ್ತು... ತಪ್ಪಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ.. ತಪ್ಪೇ ಮಾಡಿಲ್ಲ ಎಂದಮೇಲೆ ಕ್ಷಮೆ ಕೇಳಬೇಕಿಲ್ಲ... ನನ್ನನಿರ್ಧಾರಕ್ಕೆ ಬದ್ಧವಾಗಿದ್ದೇನೆ" ಎಂದಿದ್ದಾರೆ.
ಇನ್ನು, ಕಮಲ್ ಹಾಸನ್ ಮತ್ತೆ ಮೊಂಡಾಟದ ಹೇಳಿಕೆ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿ (Karnataka Film Chamber) ಖಂಡನೆ ವ್ಯಕ್ತಪಡಿಸಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, 'ಇಡೀ ಕರ್ನಾಟಕ ಕಮಲ್ ಹಾಸನ್ ವಿರುದ್ಧ ಕೆರಳಿದೆ. ಚಿತ್ರಮಂದಿರದವರೇ ಈಗ ಸಿನಿಮಾ ರಿಲೀಸ್ ಮಾಡಲ್ಲ ಅಂತಾ ಹೇಳಿದ್ದಾರೆ. ವಿತರಕರು ಕೂಡ ಇದೇ ನಿರ್ಧಾರಕ್ಕೆ ಬಂದಿದ್ದಾರೆ. ಈಗ ಮತ್ತೆ ಕ್ಷಮೆ ಕೇಳಲ್ಲ ಅಂತ ಹೇಳಿದ್ದಾರೆ.
ನಟ ಕಮಲ್ ಹಾಸನ್ ಅವರಿಗೆ ರಾಜಕೀಯ ಕಾರಣ ಇರಬಹುದು. ಏನಾದ್ರೂ ಕಾರಣ ಇರುತ್ತೆ. ಈ ತರ ಹಿಂದೆ ಘಟನೆಗಳು ಆದಾಗ ಅನೇಕರು ಕ್ಷಮೆಯಾಚನೆ ಮಾಡಿದ್ದಾರೆ. ರಜನೀಕಾಂತ್ ಸೇರಿದಂತೆ ಸೋನು ನಿಗಮ್ ಕೂಡ ಕ್ಷಮೆಯಾಚನೆ ಮಾಡಿದ್ದಾರೆ. ಆದರೆ, ಕಮಲ್ ಹಾಸನ್ ಈಗ್ಲೂ ಕೂಡ ನಾನು ಕ್ಷಮೆ ಕೇಳಲ್ಲ ಅಂತ ಹೇಳುತ್ತಿದ್ದಾರೆ. ಯಾಕೆ ಇಂತಹ ನಿರ್ಧಾರ ಅಂತ ಗೊತ್ತಿಲ್ಲ!
ಅಂದೊಮ್ಮೆ ನಮ್ಮ ರಜನಿಕಾಂತ್ ಕೂಡ ಕ್ಷಮೆ ಕೇಳಿದ್ರು. ಆದ್ರೆ ಕಮಲ್ ಹಾಸನ್ ನಾನು ತಪ್ಪೆ ಮಾಡಲ್ಲ ಕ್ಷಮೆ ಕೇಳಲ್ಲ ಅಂತಾರೆ. ಕಮಲ್ ಹಾಸನ್ ನಟನೆಯ 'ಥಗ್ ಲೈಫ್' ಸಿನಿಮಾ ರಿಲೀಸ್ ಮಾಡಲ್ಲ ಅಂತ ಹೇಳುತ್ತಿಲ್ಲ, ಕನ್ನಡಪರ ಹೋರಾಟಗಾರರ ಜೊತೆ ನಮ್ಮ ಕನ್ನಡ ಸಿನಿಮಾ ರಂಗ ಇರುತ್ತೆ. ನಾವು ಕಾನೂನು ಪರವಾಗಿ ಏನು ಹೇಳ್ತಾ ಇಲ್ಲ
'ಇಲ್ಲಿ ಗಲಾಟೆ ಆಗ್ತಾ ಇದೆ. ನಾವು ಸಿನಿಮಾ ರಿಲೀಸ್ ಮಾಡಲ್ಲ ಅಂತ ವಿತರಕರು ಪ್ರದರ್ಶಕರು ಹೇಳ್ತಾ ಇದ್ದಾರೆ. ನಮ್ಮ ಕನ್ನಡ ಪರ ಹೋರಾಟಗಾರರು ರಾಜಕಾರಣಿಗಳು ಕಮಲ್ ಹಾಸನ್ ವಿರುದ್ಧ ಸಿಟ್ಟಾಗಿದ್ದಾರೆ..' ಎಂದು ಫಿಲ್ಮ್ ಛೇಂಬರ್ ಅಧ್ಯಕ್ಷ ನರಸಹುಲು ಹೇಳಿಕೆ ನೀಡಿದ್ದಾರೆ.
