ಕಮಲ್ ಹಾಸನ್ ಸೃಷ್ಟಿಸಿದ ಭಾಷಾ ವಿವಾದಕ್ಕೆ ನಟಿ ರಮ್ಯಾ ಇದೀಗ ಎಂಟ್ರಿ ಕೊಟ್ಟಿದ್ದಾರೆ. ಕಮಲ್ ಪರ ಬ್ಯಾಟ್ ಬೀಸಿದ ಸ್ಯಾಂಡಲ್​ವುಡ್ ಕ್ವೀನ್ ಈ ಬಗ್ಗೆ ಮಾತನ್ನಾಡಿದ್ದಾರೆ. 'ಬಹುಶಃ ಕಮಲ್ ಕನ್ನಡ, ತಮಿಳು, ತೆಲುಗು ಎಲ್ಲವೂ ಒಂದೇ ಮೂಲದಿಂದ ಬಂದಿವೆ ಅಂತ ಹೇಳಿದ್ದಾರೆ.ಎಲ್ಲಾ ದ್ರಾವಿಡ ಭಾಷೆಗಳಿಗೆ..

ತಮಿಳು ಖ್ಯಾತ ನಟ ಕಮಲ್ ಹಾಸನ್ (Kamal Haasan) ಅವರು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದು ಗೊತ್ತೇ ಇದೆ. ಚೆನ್ನೈನಲ್ಲಿ ನಡೆದ ಇವೆಂಟ್​​ನಲ್ಲಿ ತಮಿಳು ಭಾಷೆಯಿಂದ ಕನ್ನಡ ಹುಟ್ಟಿದ್ದು, ಕನ್ನಡ ಭಾಷೆ ಹುಟ್ಟಿದ್ದೇ ತಮಿಳಿನಿಂದ ಎಂದಿದ್ದರು ಕಮಲ್ ಹಾಸನ್. ಈ ಮಾತಿಗೆ ಕನ್ನಡಿಗರು ಕೆರಳಿ ಕೆಂಡವಾಗಿದ್ದಾರೆ. ಭಾಷೆಗಳ ಬಗ್ಗೆ ಸಾಮಾನ್ಯ ಜ್ಞಾನವೂ ಇಲ್ಲದ ನಟ ಕಮಲ್ ಹಾಸನ್ ಅವರು ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಕನ್ನಡಪರ ಸಂಘಟನೆಗಳು ಆಗ್ರಹಿಸಿದ್ದಾರೆ.

Add Asianetnews Kannada as a Preferred SourcegooglePreferred

ಕಮಲ್ ಹಾಸನ್ ಸೃಷ್ಟಿಸಿದ ಭಾಷಾ ವಿವಾದಕ್ಕೆ ನಟಿ ರಮ್ಯಾ ಇದೀಗ ಎಂಟ್ರಿ ಕೊಟ್ಟಿದ್ದಾರೆ. ಕಮಲ್ ಪರ ಬ್ಯಾಟ್ ಬೀಸಿದ ಸ್ಯಾಂಡಲ್​ವುಡ್ ಕ್ವೀನ್ ಈ ಬಗ್ಗೆ ಮಾತನ್ನಾಡಿದ್ದಾರೆ. 'ಬಹುಶಃ ಕಮಲ್ ಕನ್ನಡ, ತಮಿಳು, ತೆಲುಗು ಎಲ್ಲವೂ ಒಂದೇ ಮೂಲದಿಂದ ಬಂದಿವೆ ಅಂತ ಹೇಳಿದ್ದಾರೆ.

ಎಲ್ಲಾ ದ್ರಾವಿಡ ಭಾಷೆಗಳಿಗೆ ಒಂದೇ ಬೇರು ಅನ್ನೋದು ಅವರ ಮಾತಿನ ಅರ್ಥ. ಇದಕ್ಕಾಗಿ ಅವರ ಸಿನಿಮಾ ಥಗ್ ಲೈಫ್ ಬ್ಯಾನ್ ಮಾಡೋದು ತಪ್ಪು..' ಎಂದಿದ್ದಾರೆ. ಆದರೆ, ರಮ್ಯಾ ಬಳಸಿದ 'ಬಹುಶಃ' ಪದದ ಅರ್ಥವೇನು ಎಂಬುದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ನಟ ಕಮಲ್ ಹಾಸನ್ ಮಾತಿಗೆ ಕನ್ನಡದ ಹಿರಿಯ ನಟಿ ಹಾಗೂ ಮಾಜಿ ಸಂಸದೆ ಸುಮಲತಾ ಅಂಬರೀಷ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಕನ್ನಡದ ಬಗ್ಗೆ ಕಮಲ್ ಹಾಸನ್ ಹೇಳಿಕೆ ತಪ್ಪು ಎಂದ ಸುಮಲತಾ 'ಭಾಷೆಯ ಬಗ್ಗೆ ಮಾತನಾಡೋವಾಗ ಯೋಚಿಸಿ ಮಾತನಾಡಬೇಕು. ನಾವ್ಯಾರು ಪಂಡಿತರಲ್ಲ, ಯಾವ ಭಾಷೆಯಿಂದ ಯಾವ ಭಾಷೆ ಅಂತ ಹೇಳೋಕೆ ಬರಲ್ಲ. ಸೀನಿಯರ್‌ ನಟರಾಗಿ ಯೋಚಿಸಿ ಮಾತನಾಡಬೇಕು.

ಯಾರೊಬ್ಬರ ಹೇಳಿಕೆಯಿಂದ ಕನ್ನಡದ ಘನತೆ ಕಡಿಮೆ ಆಗಲ್ಲ' ಎಂದಿದ್ದಾರೆ.

ಜೊತೆಗೆ, 'ಕನ್ನಡದ ಭಾಷೆಗೆ ಅದರದ್ದೆ ಆದ ಘನತೆ ಇದೆ. ಅಪಮಾನ ಮಾಡೋದು ಸರಿಯಲ್ಲ. ಹೇಳಿಕೆ‌ ನೀಡೋವಾಗ ಎಚ್ಚರಿಕೆ‌ಯಿಂದ ನೀಡಬೇಕು. ಯಾವ ಭಾಷೆಯಿಂದ ಯಾವ ಭಾಷೆ ಬಂದಿದೆ ಅನ್ನೊದು ಯಾರಿಗು ತಿಳಿದಿಲ್ಲ. ಕನ್ನಡಕ್ಕೆ‌ ಅಪಮಾನವಾದರೆ ಕನ್ನಡಿಗರು ಸಹಿಸಲ್ಲ. ರಾಜಕಾರಣಿಗಳು‌ ಈ ಬಗ್ಗೆ ಮಾತನಾಡಬಾರದು ಅನ್ನೋದು ಅವರವರ ಅಭಿಪ್ರಾಯ' ಎಂದು ಹೇಳಿಕೆ ನೀಡುವ ಮೂಲಕ ನಟ ಕಮಲ್ ಹಾಸನ್ ಕನ್ನಡ ಭಾಷೆ ಬಗ್ಗೆ ಅವಮಾನ ಮಾಡಿದ್ದು ತಪ್ಪು ಎಂದಿದ್ದಾರೆ.

ಇನ್ಜು ಈ ಬಗ್ಗೆ ನಿನ್ನೆ ಕನ್ನಡದ ಹಿರಿಯ ನಟ ಶ್ರೀನಾಥ್ ಅವರು ರಿಯಾಕ್ಟ್ ಮಾಡಿದ್ದಾರೆ. ಕಮಲ್ ಹಾಸನ್ ಗೆ ತಿರುಗೇಟು ಕೊಟ್ಟು ಹಿರಿಯ ನಟ ಶ್ರೀನಾಥ್ ಮಾತನ್ನಾಡಿದ್ದಾರೆ. 'ಕನ್ನಡ ಎಲ್ಲಿಂದಲೂ ಹುಟ್ ಬೇಕಾಗಿಲ್ಲ, ಅದು ಎಲ್ಲಿಂದ ಹುಟ್ಟಬೇಕೋ ಅಲ್ಲಿಂದ ಹುಟ್ಟಿದೆ. ಬೇಕಾದಷ್ಟು ಭಾಷೆನ ಬೆಳಸಿದೆ ಕನ್ನಡ.

ಅದು ಎಲ್ಲಿಂದ ಹುಟ್ಟಿತ್ತು ಎಂಬುದು ಕನ್ನಡಿಗರಿಗೆ ಗೊತ್ತಿದೆ, ಅದನ್ನು ಬೆರೆಯವರಿಂದ ತಿಳ್ಕೊಬೇಕಾಗಿಲ್ಲ . ಯಾವ ವ್ಯಕ್ತಿನೂ 'ನಾನು ಗ್ರೇಟ್' ಅಂದ್ಕೋಬಾರ್ದು, 'ನಾವು' ಅಂತ ಅಂದ್ಕೋಬೇಕು. ನನ್ನ ಭಾಷೆ ಬಗ್ಗೆ ನನಗೆ ಹೆಮ್ಮೆ ಇದೆ, ನಮ್ಮ ಭಾಷೆ ಬಗ್ಗೆ ಯಾರೋ ಬೇರೆಯವರು ಬಂದು ಹೇಳ್ಬೇಕಾಗಿಲ್ಲ, ನಮ್ಮ ಭಾಷೆ ಬಗ್ಗೆ ನಮಗೆ ಗೊತ್ತಿದೆ' ಎಂದಿದ್ದಾರೆ ನಟ ಶ್ರೀನಾಥ್.

ಈ ಬೆನ್ನಲ್ಲೇ, ನಟ ಕಮಲ್ ಹಾಸನ್ ಅವರು ಕೇರಳದ ತಿರುವನಂತಪುರಂ ನಲ್ಲಿ ನಡೆಯುತ್ತಿರುವ ಥಗ್ ಲೈಫ್ ಚಿತ್ರದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತ 'ನಾನು ಕ್ಷಮೆ ಕೇಳೋದಿಲ್ಲ' ಎಂದಿದ್ದಾರೆ. ಕರ್ನಾಟಕದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಕಮಲ್​ ಹಾಸನ್ ಅವರಿಗೆ ಅಲ್ಲಿ ಪ್ರಶ್ನೆ ಎದುರಾಗಿದೆ. ಆ ಬಗ್ಗೆ ಮಾತನಾಡುತ್ತ ನಟ ಕಮಲ್ ಹಾಸನ್ 'ಕ್ಷಮೆ ಕೇಳುವಂಥದ್ದು ನಾನೇನು ಹೇಳಿಲ್ಲ' ಎಂದಿದ್ದಾರೆ ಕಮಲ್ ಹಾಸನ್..!

ಚೆನ್ನೈನಲ್ಲಿ ನಡೆದ ಇವೆಂಟ್​​ನಲ್ಲಿ ಕನ್ನಡ ಭಾಷೆ ಹುಟ್ಟಿದ್ದು ತಮಿಳಿನಿಂದ ಎಂದಿದ್ದರು ಕಮಲ್ ಹಾಸನ್. ಕರ್ನಾಟಕದಲ್ಲಿ ಕಮಲ್ ಹಾಸನ್ ವಿರುದ್ದ ಕನ್ನಡ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಅಷ್ಟೆ ಅಲ್ಲ, ಕ್ಷಮೆ ಕೇಳದೇ ಹೋದರೇ ಥಗ್ ಲೈಫ್ ಚಿತ್ರದ ಬಿಡುಗಡೆಗೆ ಅನುಮತಿ ಇಲ್ಲ ಎಂದು ಕೂಡ ಸಂಘಟನೆಗಳು ಹೇಳಿವೆ. ಆದರೆ, ಈ ಬೆನ್ನಲ್ಲೇ ನಟ ಕಮಲ್ ಹಾಸನ್ ಇದೀಗ ಹೇಳಿರುವ ಹೇಳಿಕೆ ಭಾರೀ ಮುಖ್ಯವಾಗಿದೆ.