Asianet Suvarna News Asianet Suvarna News

ಕಲ್ಕಿ ಸಿನಿಮಾ ಟೀಂನಿಂದ ಯಶ್-ರಾಧಿಕಾ ಮಕ್ಕಳಿಗೆ ಬಂತು ಕ್ಯೂಟ್ ಗಿಫ್ಟ್

Kalki Cinema ತಂಡ ಕಳುಹಿಸಿರುವ ಗಿಫ್ಟ್ ಫೋಟೋವನ್ನು ರಾಧಿಕಾ ಪಂಡಿತ್ (Actress Radhika Pandit) ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

Kalki cinema team send gift to Yash Radhika s children mrq
Author
First Published Jun 5, 2024, 5:08 PM IST

ಬೆಂಗಳೂರು: ಕೆಜಿಎಫ್‌ ಸಿನಿಮಾ ಮೂಲಕ ರಾಕಿಂಗ್ ಸ್ಟಾರ್ ಯಶ್ (Rocking Star Yash) ಪ್ಯಾನ್ ಇಂಡಿಯಾ ನಾಯಕನಾಗಿ ಹೊರ ಹೊಮ್ಮಿದ್ದಾರೆ. ಇದೀಗ ಯಶ್ ಅವರ ಮುದ್ದಾದ ಮಕ್ಕಳಿಗೆ ಟಾಲಿವುಡ್ ಡಾರ್ಲಿಂಗ್ ಪ್ರಭಾಸ್ ನಟನೆಯ ಕಲ್ಕಿ (Kalki 2989 AD) ಸಿನಿಮಾ ತಂಡದಿಂದ  ವಿಶೇಷ ಗಿಫ್ಟ್ ಬಂದಿದೆ. ಕಲ್ಕಿ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಸಿನಿಮಾ ತಂಡ ಪ್ರಮೋಷನ್ ಕೆಲಸಗಳನ್ನು ಆರಂಭಿಸಿದೆ. ಚಿತ್ರದ ಪ್ರಮೋಷನ್ ಭಾಗವಾಗಿ ಯಶ್-ರಾಧಿಕಾ ದಂಪತಿಯ (Yash And Radhika) ಮಕ್ಕಳಿಗೆ ಕಲ್ಕಿ ಟೀಂ ಕೆಲವು ಗಿಫ್ಟ್‌ಗಳನ್ನು ಕಳುಹಿಸಿದೆ. 

ಕಲ್ಕಿ ಸಿನಿಮಾ ತಂಡ ಕಳುಹಿಸಿರುವ ಗಿಫ್ಟ್ ಫೋಟೋವನ್ನು ರಾಧಿಕಾ ಪಂಡಿತ್ (Actress Radhika Pandit) ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡು ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಐರಾ ಮತ್ತು ಯಥರ್ವ್‌ಗೆ ಕಲ್ಕಿ ಟಾಯ್ ಬಂದು ಸೇರಿದೆ. ಇಬ್ಬರು ಮಕ್ಕಳು ಥ್ಯಾಂಕ್‌ ಯು ಬುಜ್ಜಿ ಎಂದು ಬರೆದಿರುವ ನೋಟ್ ಸಹ ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ.

ರಾಮ್‌ಚರಣ್ ಮಕ್ಕಳಿಗೂ ಕಲ್ಕಿ ಟಾಯ್

ಯಶ್ ಅವರಿಗೆ ಕಳುಹಿಸಿದಂತೆ ರಾಮ್‌ಚರಣ್ ಮತ್ತು ಉಪಸಾನಾ ಮಗುವಿಗೂ ಕಲ್ಕಿ ಟಾಯ್ ಕಳುಹಿಸಿ ಕೊಡಲಾಗಿತ್ತು. ರಾಮ್‌ಚರಣ್ ಮತ್ತು ಉಪಸಾನಾ ಮಗಳಿಗೆ ಸ್ಕೆಚಸ್, ಸ್ಟಿಕ್ಕರ್ಸ್, ಡಾಲ್​​ ಗಳನ್ನು ಚಿತ್ರಂಡ ಕಳುಹಿಸಿತ್ತು. ಉಪಸಾನಾ ಕಲ್ಕಿ ಟೀಂ ಕಳುಹಿಸಿದ ಗಿಫ್ಟ್‌ಗಳ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದರು. 

ಪ್ರಭಾಸ್ ಕಲ್ಕಿ ಚಿತ್ರದ ಬುಜ್ಜಿ ಡ್ರೈವ್ ಮಾಡಿದ ನಾಗ ಚೈತನ್ಯ, 6 ಟನ್ ತೂಕದ ಕಾರಿನ ವಿಶೇಷತೆ ಏನು?

ಜೂನ್ 10ರಂದು ಬರಲಿದೆ ಟ್ರೈಲರ್ 

ಕಲ್ಕಿ 2898 ಎಡಿ ಸಿನಿಮಾದ ಟ್ರೈಲರ್ ಜೂನ್ 10ರಂದು ರಿಲೀಸ್ ಆಗಲಿದೆ ಎಂದು ಚಿತ್ರತಂಡ ಅನೌನ್ಸ್ ಮಾಡಿದೆ. ಚಿತ್ರದಲ್ಲಿ ಮೊದಲ  ಬಾರಿಗೆ ದೀಪಿಕಾ ಪಡುಕೋಣೆ ಜೊತೆ ಪ್ರಭಾಸ್ ತೆರೆ ಹಂಚಿಕೊಳ್ಳುತ್ತಿದ್ದಾರೆ. ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದಿಶಾ ಪಠಾಣಿ ಸೇರಿದಂತೆ ದೊಡ್ಡ ತಾರಾ ಬಳಗವನ್ನು ಚಿತ್ರ ತಂಡ ಹೊಂದಿದೆ. ನಾಗ್ ಅಶ್ವಿನ್ ಬರೆದು ನಿರ್ದೇಶಿಸಿರುವ ಕಲ್ಕಿ ಭಾರತೀಯ ಸಿನಿ ಅಂಗಳದ ಬಹುನಿರೀಕ್ಷಿತ ಚಿತ್ರವಾಗಿದೆ. ಚಿತ್ರಕ್ಕೆ ಸಿ ಅಶ್ವಿನ್ ದತ್ 600 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಿದ್ದಾರೆ.  ಚಿತ್ರ ಜೂನ್ 27ರಂದು ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ನಟಿ ದೀಪಿಕಾ ಪಡುಕೋಣೆ ಗರ್ಭಿಣಿಯಾಗಿರುವ ಹಿನ್ನೆಲೆ ಚಿತ್ರದ ಪ್ರಮೋಷನ್ ಕೆಲಸಗಳಲ್ಲಿ ಭಾಗಿಯಾಗಲ್ಲ ಎಂದು ವರದಿಯಾಗಿದೆ. 

ಕಮ್ ಬ್ಯಾಕ್ ಮಾಡ್ತಾರಾ ಪ್ರಭಾಸ್?

ಬಾಹುಬಲಿ ಬಳಿಕ ಪ್ರಭಾಸ್ ನಟನೆಯ ಸಿನಿಮಾಗಳು ಬಾಕ್ಸ್ ಆಫಿಸ್‌ನಲ್ಲಿ ಸೋಲು ಕಾಣುತ್ತಿವೆ. ಕಳೆದ ವರ್ಷ 22ನೇ ಡಿಸೆಂಬರ್ 2023ರಂದು ಬಿಡುಗಡೆಯಾಗಿದ್ದ ಸಲಾರ್, ವೀಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಸಲಾರ್ ಕನ್ನಡದ ಉಗ್ರಂ ಸಿನಿಮಾದ ರಿಮೇಕ್ ಆಗಿತ್ತು. ಸಾಹೋ, ರಾಧೆ ಶ್ಯಾಮ್ ಮತ್ತು ಆದಿಪುರುಷ್ ಸಿನಿಮಾಗಳು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದವು.

ಡಾರ್ಲಿಂಗ್ ಪ್ರಭಾಸ್ ಬುದುಕಿಗೆ ಬಂದ 'ಬುಜ್ಜಿ': ಕಲ್ಕಿ 2898 AD ಚಿತ್ರದಲ್ಲಿ ಭೈರವನ ಆಪ್ತ ಗೆಳೆಯ ಈತ!

ಹಾಲಿವುಡ್‌ನ ‘ಡ್ಯೂನ್’, ‘ಐ ರೋಬಾಟ್’ ಸಿನಿಮಾಗಳನ್ನು ನೆನಪಿಸುವಂತಿರುವ ‘ಕಲ್ಕಿ’ ಕತೆ, ನಿರ್ಮಾಣ, ಬಹುತಾರಾಗಣ ಇನ್ನೂ ಹಲವಾರು ಕಾರಣಗಳಿಗೆ ಗಮನ ಸೆಳೆದಿದೆ. ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು, ಹಾಲಿವುಡ್ ಸಿನಿಮಾಗಳನ್ನು ಮೀರಿಸುವಂತಿದೆ ದೃಶ್ಯಗಳು ‘ಕಲ್ಕಿ 2898 ಎಡಿ’ ಸಿನಿಮಾದ ಡಿಜಿಟಲ್ ಹಕ್ಕು ಸುಮಾರು 100 ಕೋಟಿಗೆ ಮಾರಾಟವಾಗಿದೆ ಎನ್ನಲಾಗುತ್ತಿದೆ.

Kalki cinema team send gift to Yash Radhika s children mrq

Latest Videos
Follow Us:
Download App:
  • android
  • ios