Asianet Suvarna News Asianet Suvarna News

ಪ್ರಭಾಸ್ ಕಲ್ಕಿ ಚಿತ್ರದ ಬುಜ್ಜಿ ಡ್ರೈವ್ ಮಾಡಿದ ನಾಗ ಚೈತನ್ಯ, 6 ಟನ್ ತೂಕದ ಕಾರಿನ ವಿಶೇಷತೆ ಏನು?

ಬುಜ್ಜಿ ಕಾರು ನೋಡಲು ಜನಸಾಗರವೇ ಸೇರುತ್ತಿದೆ. ಪ್ರಭಾಸ್ ಅಭಿನಯದ ಕಲ್ಕಿ ಚಿತ್ರದ ಈ ಕಾರನ್ನು ಇದೀಗ ನಾಗ ಚೈತನ್ಯ ಡ್ರೈವ್ ಮಾಡಿದ್ದಾರೆ. ಬರೋಬ್ಬರಿ 6 ಟನ್ ತೂಕದ ಈ ಕಾರು ರಸ್ತೆಯಲ್ಲಿ ಸಾಗಿದರೆ ಎಲ್ಲರ ಕಣ್ಣೂ ಈ ಕಾರಿನ ಮೇಲಿತ್ತು.
 

Actor Naga chaitanya drive Bujji special Car which built for Prabhas kalki Movie ckm
Author
First Published Jun 3, 2024, 4:47 PM IST

ಹೈದರಾಬಾದ್(ಜೂನ್ 03) ನಟ ನಾಗ ಚೈತನ್ಯ ಕಾರುಗಳ ಮೇಲೆ ಎಲ್ಲಿದ ಪ್ರೀತಿ. ಇತ್ತೀಚೆಗಷ್ಟೇ ನಾಗ್ ದುಬಾರಿ ಪೊರ್ಶೆ ಕಾರು ಖರೀದಿಸಿದ್ದರು. ಇದೀಗ ನಾಗ ಚೈತನ್ಯ ಬುಜ್ಜಿ ಕಾರು ಡ್ರೈವ್ ಮಾಡಿದ್ದಾರೆ. ಪ್ರಭಾಸ್ ಅಭಿನಯ ಕಲ್ಕಿ ಚಿತ್ರಕ್ಕಾಗಿ ವಿಶೇಷವಾಗಿ ತಯಾರಿಸಲಾದ ಈ ಕಾರು 6 ಟನ್ ತೂಕವಿದೆ. ಈ ಬುಜ್ಜಿ ಕಾರು ಡ್ರೈವ್ ಮಾಡಿದ ನಾಗಚೈತನ್ಯ ಸಂಭ್ರಮ ಹೇಳತೀರದು. ಊಹೆಗೂ ನಿಲುಕದ ಎಂಜಿನೀಯರ್ಸ್ ಪರಿಶ್ರಮಕ್ಕೆ ನಾಗ ಚೈತನ್ಯ ಶಹಬ್ಬಾಷ್ ಎಂದಿದ್ದಾರೆ. ವಿಶೇಷ ಡಿಸೈನ್‌ನಲ್ಲಿ ಈ ಕಾರನ್ನು ನಾಗ ಚೈತನ್ಯ ಡ್ರೈವ್ ಮಾಡುತ್ತಿದ್ದಾರೆ ಎಂದು ತಿಳಿದ ಕೂಡಲೇ ರಸ್ತೆಗಳಲ್ಲಿ ಜನ ಸಾಗರವೇ ಸೇರಿದೆ.

ಪ್ರಭಾಸ್ ಅಭಿನಯದ ಕಲ್ಕಿ 2898AD ಚಿತ್ರ ತೆರೆ ಕಾಣಲು ಸಜ್ಜಾಗಿದೆ. ಈ ಚಿತ್ರಕ್ಕಾಗಿ ಎಂಜಿನೀಯರ್ಸ್ ತಂಡ ಫ್ಯೂಚರಿಸ್ಟಿಕ್ ಕಾರು ತಯಾರಿಸಿದೆ. ಇದು ಕಲ್ಪನೆಗೂ ಮೀರಿದ ಎಂಜಿನಿಯರ್ಸ್ ಮಾರ್ವೆಲ್. ಗಾತ್ರದಲ್ಲಿ ಜೆಸಿಬಿ ರೀತಿ ದೊಡ್ಡದಾಗಿದೆ. ಅತೀ ದೊಡ್ಡ ಟೈಯರ್ ಬಳಸಲಾಗಿದೆ.  ಈ ಕಾರನ್ನು ನಾಗ ಚೈತನ್ಯ ಡ್ರೈವ್ ಮಾಡಿದ್ದಾರೆ.

ದುಬಾರಿ ಪೊರ್ಶೆ 911 GT3 ಕಾರು ಖರೀಸಿದ ನಟ ನಾಗಚೈತನ್ಯ, ಇದರ ಬೆಲೆ ಎಷ್ಟು?

ಈ ಕಾರಿಗೆ ಬುಜ್ಜಿ ಎಂದು ಹೆಸರಿಡಲಾಗಿದೆ. ಅತೀ ಹೆಚ್ಚಿನ ಪವರ್ ಹಾಗೂ ಗಾತ್ರದಲ್ಲೂ ದೊಡ್ಡದಾಗಿರುವ ಕಾರಣ ಬುಜ್ಜಿ ಕಾರನ್ನು ಡ್ರೈವ್ ಮಾಡಲು ನಾಗ ಚೈತನ್ಯ ಟ್ರಾಕ್‌ಗೆ ಆಗಮಿಸಿದ್ದಾರೆ. ಕಾರಿನ ಕುರಿತು ಫೋಟೋಗಳು, ವಿಡಿಯೋಗಳು ನೋಡಿದ್ದ ನಾಗ ಚೈತನ್ಯ, ಹತ್ತಿರದಿಂದ ಕಾರು ನೋಡಿ ಅಚ್ಚರಿಪಟ್ಟಿದ್ದಾರೆ. ಈ ವಿಶೇಷ ಕಾರನ್ನು ಫೀಚರ್ಸ್, ಪವರ್ ಕುರಿತು ನಾಗ ಚೈತನ್ಯಗೆ ವಿವರಣೆ ನೀಡಲಾಗಿದೆ. ಮುಂಭಾಗದಲ್ಲಿ 2 ದೊಡ್ಡ ಚಕ್ರಗಳನ್ನು ಬಳಸಿದ್ದರೆ, ಹಿಂಭಾಗದಲ್ಲಿ ಒಂದೇ ಚಕ್ರ ಬಳಸಲಾಗಿದೆ. 

ಟ್ರ್ಯಾಕ್‌ನಲ್ಲಿ ನಾಗ ಚೈತನ್ಯ ಬುಜ್ಜಿ ಕಾರು ಡ್ರೈವ್ ಮಾಡಿದ್ದಾರೆ. ಪವರ್‌ಫುಲ್ ಎಂಜಿನ್ ಬಳಸಿರುವ ಕಾರಣ ರೇಸ್ ಕಾರಿನ ರೀತಿ ನಾಗ ಚೈತನ್ಯ ಈ ಕಾರು ಡ್ರೈವ್ ಮಾಡಿದ್ದಾರೆ. ಎಲ್ಲಾ ನಿಯಮಗಳನ್ನು ಮುರಿದು ಎಂಜಿನೀಯರ್ಸ ಈ ಕಾರು ತಯಾರಿಸಿದ್ದಾರೆ. ಅದ್ಭುತ ಎಂದು ಡ್ರೈವ್ ಮಾಡಿದ ನಾಗ ಚೈತನ್ಯ ಹೇಳಿದ್ದಾರೆ.

 

 

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲೂ ನಾಗ ಚೈತನ್ಯ ಸಂತಸ ಹಂಚಿಕೊಂಡಿದ್ದಾರೆ. ನನ್ನ ಕಲ್ಪನೆಗೂ ಮೀರಿದ ಕಾರು ಇದು. ನಿರೀಕ್ಷೆ ಹಾಗೂ ಊಹೆಗೂ ಮೀರಿದ ಕಾರನ್ನು ನಿರ್ಮಾಣ ಮಾಡಿದ ಎಂಜಿನೀಯರ್ಸ್‌ ಹ್ಯಾಟ್ಸ್ ಆಫ್, ಇದು ಎಂಜಿನೀಯರ್ಸ್ ನಿರ್ಮಿಸಿದ ಮಾರ್ವೆಲ್. ನಿಜಕ್ಕೂ ಬುಜ್ಜಿ ಕಾರುು ಡ್ರೈವ್ ಅತೀ ಸಂತಸ ಕ್ಷಣಗಳನ್ನು ನೀಡಿದೆ ಎಂದು ನಾಗ ಚೈತನ್ಯ ಹೇಳಿದ್ದಾರೆ.

ಕಾಲೇಜ್‌ ಗರ್ಲ್ಸ್‌ಗೆ ಸಮಂತಾ ಹೇಳಿದ ಟಿಪ್ಸ್ ಕೇಳಿ 'ಬಾಯ್ಸ್‌' ಕಂಗಾಲು; ನಾವೇನು ಮಾಡ್ಲಿ ಅಂತಿದಾರಲ್ರೀ!
 

Latest Videos
Follow Us:
Download App:
  • android
  • ios