ಮಲಯಾಳಂನ ಪ್ರಸಿದ್ಧ ಸಾಹಿತಿ ಎಂ.ಟಿ. ವಾಸುದೇವ ನಾಯರ್‌ ಅವರ ಕಾದಂಬರಿ ಆಧರಿತ ‘ರಂಡಮೂಳಂ’ ಸಿನಿಮಾಕ್ಕೆ ಮರುಜೀವ ನೀಡಲು ‘ಕಾಂತಾರ’ ಖ್ಯಾತಿಯ ರಿಷಬ್‌ ಶೆಟ್ಟಿ ಮುಂದಾಗಿದ್ದಾರೆ ಎನ್ನಲಾಗಿದೆ. ಅವರು ಈ ಸಿನಿಮಾವನ್ನು ನಿರ್ದೇಶಿಸುವ ಜೊತೆಗೆ ನಾಯಕನಾಗಿ ನಟನೆಯನ್ನೂ ಮಾಡಲಿದ್ದಾರಂತೆ.

ಸಿನಿವಾರ್ತೆ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಲಯಾಳಂನ ಪ್ರಸಿದ್ಧ ಸಾಹಿತಿ ಎಂ.ಟಿ. ವಾಸುದೇವ ನಾಯರ್‌ ಅವರ ಕಾದಂಬರಿ ಆಧರಿತ ‘ರಂಡಮೂಳಂ’ ಸಿನಿಮಾಕ್ಕೆ ಮರುಜೀವ ನೀಡಲು ‘ಕಾಂತಾರ’ ಖ್ಯಾತಿಯ ರಿಷಬ್‌ ಶೆಟ್ಟಿ ಮುಂದಾಗಿದ್ದಾರೆ ಎನ್ನಲಾಗಿದೆ. ಅವರು ಈ ಸಿನಿಮಾವನ್ನು ನಿರ್ದೇಶಿಸುವ ಜೊತೆಗೆ ನಾಯಕನಾಗಿ ನಟನೆಯನ್ನೂ ಮಾಡಲಿದ್ದಾರಂತೆ.

ವಾಸುದೇವ ನಾಯರ್‌ ಕುಟುಂಬದವರು ಪ್ರತಿಕ್ರಿಯೆ

ಈ ಬಗ್ಗೆ ಎಂ.ಟಿ. ವಾಸುದೇವ ನಾಯರ್‌ ಕುಟುಂಬದವರು ಪ್ರತಿಕ್ರಿಯೆ ನೀಡಿದ್ದು ಆರಂಭಿಕ ಹಂತದ ಮಾತುಕತೆ ನಡೆದಿರುವುದನ್ನು ದೃಢಪಡಿಸಿದ್ದಾರೆ.

ಒಂದೂವರೆ ವರ್ಷದ ಕೆಳಗೆ ಸಾಹಿತಿ ಎಂ.ಟಿ.ವಿ ಅವರೇ ಈ ವಿಚಾರದಲ್ಲಿ ಮುಂದಡಿ ಇಟ್ಟಿದ್ದು, ಅವರೇ ರಿಷಬ್‌ ಜೊತೆಗೂ ಮಾತುಕತೆ ನಡೆಸಿದ್ದರು ಎನ್ನಲಾಗಿದೆ. ಎಂ.ಟಿ ವಾಸುದೇವ ನಾಯರ್‌ ಗತಿಸಿದ ಬಳಿಕ ಅವರ ಪುತ್ರಿ ಅಶ್ವಥಿ ಈ ಪ್ರಾಜೆಕ್ಟ್‌ ಅನ್ನು ಮುಂದಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಕೆಲವು ದಿನಗಳ ಹಿಂದೆ ಅವರು ಏಷ್ಯಾನೆಟ್‌ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿ, ‘ವಿಶ್ವಮಟ್ಟದಲ್ಲಿ ಈ ಪ್ರಾಜೆಕ್ಟ್‌ನ ಕೆಲಸಗಳು ನಡೆಯುತ್ತಿವೆ’ ಎಂದಿದ್ದರು.

ಶ್ರೀಕುಮಾರ್‌ ಮೆನನ್‌ ಈ ಕಾದಂಬರಿಯನ್ನು ಆಧರಿಸಿ ಸಿನಿಮಾ

ಮೊದಲು ನಿರ್ದೇಶಕ ಶ್ರೀಕುಮಾರ್‌ ಮೆನನ್‌ ಈ ಕಾದಂಬರಿಯನ್ನು ಆಧರಿಸಿ ಸಿನಿಮಾ ಮಾಡಲು ಮುಂದಾಗಿದ್ದರು. ಆದರೆ ಸರಿಯಾದ ಸಮಯಕ್ಕೆ ಪ್ರಾಜೆಕ್ಟ್‌ ಟೇಕಾಫ್‌ ಆಗಿರಲಿಲ್ಲ. ಅದೀಗ ರಿಷಬ್‌ ಕೈಯಲ್ಲಿ ಅರಳಲು ಸಮಯ ಕೂಡಿಬಂದಂತಿದೆ.

‘ರಂಡಮೂಳಂ’ ಕಾದಂಬರಿ ಮಹಾಭಾರತವನ್ನು ಆಧರಿಸಿದ್ದು, ಭೀಮನ ನಿರೂಪಣೆಯಲ್ಲಿದೆ. ಆತನ ಬದುಕಿನ ನೋಟವೇ ಈ ಕಾದಂಬರಿಯ ಮುಖ್ಯ ತಿರುಳು.