ತಮಿಳುನಾಡು ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ನಟ ದಳಪತಿ ವಿಜಯ್ ಅವರ ಟಿವಿಕೆ ಪಕ್ಷ ಮತ್ತು ಬಿಜೆಪಿ ನಡುವೆ ಮೈತ್ರಿ ಮಾತುಕತೆ ನಡೆದಿದೆ. ಈ ಮೈತ್ರಿಕೂಟ ಗೆದ್ದರೆ ವಿಜಯ್‌ಗೆ ಉಪಮುಖ್ಯಮಂತ್ರಿ (ಡಿಸಿಎಂ) ಹುದ್ದೆಯ ಆಫರ್ ನೀಡಲಾಗಿದೆಯಂತೆ.

ಬೆಂಗಳೂರು: ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆಗೆ ದಿನಾಂಕ ಫಿಕ್ಸ್ ಆಗಿದೆ. ಅಷ್ಟೇ ಅಲ್ಲ ಚುನಾವಣೆ ಡೇಟ್ ಫೈನಲ್ ಆಗೋ ಮುನ್ನವೇ ಬಿಜೆಪಿ ಮತ್ತು ದಳಪತಿ ವಿಜಯ್ ಟಿವಿಕೆ ಪಾರ್ಟಿ ನಡುವೆ ಮೈತ್ರಿ ಕೂಡ ಫಿಕ್ಸ್ ಆಗಿದೆ ಅನ್ನೋ ಮಾತು ಕೇಳಿ ಬರ್ತಾ ಇವೆ. ಬಿಜೆಪಿ ವಿಜಯ್​ಗೆ ಡಿಸಿಎಂ ಆಫರ್ ಕೂಡ ಕೊಟ್ಟಿದ್ದು, ಪವನ್ ಕಲ್ಯಾಣ್ ಹಾದಿಯಲ್ಲೇ ವಿಜಯ್ ಕೂಡ ಸಾಗೋ ಸೂಚನೆ ಕಾಣ್ತಾ ಇದೆ.

ತಮಿಳುನಾಡು ವಿಧಾನಸಭಾ ಚುನಾವಣೆಗೆ ದಿನಾಂಕ ಫಿಕ್ಸ್..!

ಯೆಸ್ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿ ಆಗಿದೆ. ಏಪ್ರಿಲ್ 23ರಂದು ತಮಿಳುನಾಡಿನಲ್ಲಿ ಚುನಾವಣೆ ನಡೆದರೇ ಮೇ 4 ರಂದು ರಿಸಲ್ಟ್ ಬರಲಿದೆ. ಈ ಡೇಟ್ ಫೈನಲ್ ಆಗೋ ಮುನ್ನವೇ ತಮಿಳುನಾಡು ರಾಜಕೀಯದ ದಿಕ್ಕನ್ನೇ ಬದಲಿಸೋ ಮೈತ್ರಿ ಮಾತುಕತೆಯೊಂದು ಫೈನಲ್ ಆಗಿದೆಯಂತೆ. ಅದುವೇ ಟಿವಿಕೆ + ಬಿಜೆಪಿ ಮೈತ್ರಿ.

ಸದ್ಯ ತಮಿಳುನಾಡಿನಲ್ಲಿ ಆಡಳಿತ ಮಾಡ್ತಾ ಇರೋ ಡಿಎಂಕೆಗೆ ಪ್ರಬಲ ಸವಾಲು ಒಡ್ತಾ ಇರೋದು ಅಣ್ಣಾಡಿಎಂಕೆ ಮತ್ತು ಬಿಜೆಪಿ ಮೈತ್ರಿಕೂಟ. ಸದ್ಯ ಈ ಮೈತ್ರಿಕೂಟಕ್ಕೆ ವಿಜಯ್‌ರ ಟಿವಿಕೆ ಪಾರ್ಟಿ ಕೂಡ ಸೇರುವ ಕುರಿತು ಮಾತುಕಥೆ ಫೈನಲ್ ಆಗಿದೆಯಂತೆ. ಇದರ ಅನುಸಾರ ವಿಜಯ್‌ನ ಡಿಸಿಎಂ ಮಾಡೋ ಭರವಸೆ ಕೂಡ ನೀಡಲಾಗಿದೆಯಂತೆ.

ಪವರ್ ಸ್ಟಾರ್ ಪವನ್ ಕಲ್ಯಾಣ್ ಮೂಲಕ ಗಾಳ!

ಯೆಸ್ ವಿಜಯ್​ ತಮಿಳುನಾಡಿನಲ್ಲಿ ಮಾಸ್ ಇಮೇಜ್ ಇರೋ ಅತ್ಯಂತ ಜನಪ್ರಿಯ ಸಿನಿಮಾ ನಾಯಕ. ವಿಜಯ್‌ಗಿರೋ ಫ್ಯಾನ್ ಫಾಲೋವಿಂಗ್ ವೋಟ್ ಆಗಿ ಕನ್ವರ್ಟ್ ಆದ್ರೇ ಎದುರಾಳಿ ಪಕ್ಷಗಳು ಧೂಳಿಪಟ ಆಗೋದು ಖಚಿತ. ಆರಂಭದಲ್ಲಿ ವಿಜಯ್ ಏಕಾಂಗಿ ಆಗೇ ಕಣಕ್ಕಿಳಿತೀನಿ ಅಂತ ಘೋಷಿಸಿದ್ರು. ತಮ್ಮ ಟಿವಿಕೆ ಪಾರ್ಟಿ ತಮಿಳುನಾಡಿನ ಸಕಲ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತೆ ಅಂತ ಅನೌನ್ಸ್ ಮಾಡಿದ್ರು. ಆದ್ರೆ ಆ ಬಳಿಕ ವಿಜಯ್‌ಗೆ ನಾನಾ ಸವಾಲು ಎದುರಾದವು. ಈ ನಡುವೆ ಸಮೀಕ್ಷೆಗಳನ್ನ ನೋಡ್ತಾ ಇದ್ರೆ ವಿಜಯ್ ಪಾರ್ಟಿ ಪ್ರತ್ಯೇಕ ಸ್ಪರ್ಧೆ ಮಾಡಿದ್ರೆ ಮತ್ತೆ ಡಿಎಂಕೆ ಅಧಿಕಾರಕ್ಕೆ ಬರುತ್ತೆ ಅಂತ ಹೇಳಲಾಗ್ತಾ ಇದೆ. ಸೋ ಆಂಧ್ರ ಡಿಸಿಎಂ, ಚಿತ್ರನಟ ಮತ್ತು ವಿಜಯ್ ಆಪ್ತನೂ ಆಗಿರೋ ಪವನ್ ಕಲ್ಯಾಣ್ ಮೂಲಕ ವಿಜಯ್‌ಗೆ ಬಿಜೆಪಿ ಗಾಳ ಹಾಕಿದೆಯಂತೆ.

ಆಂಧ್ರದಲ್ಲಿ ಜನಸೇನಾ ಅನ್ನೋ ಪಾರ್ಟಿ ಕಟ್ಟಿದ್ದ ಪವನ್ ಕಳೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ತೆಲುಗು ದೇಶಂ ಪಕ್ಷಗಳ ಜೊತೆಗೆ ಮೈತ್ರಿ ಮಾಡಿಕೊಂಡಿದ್ರು. ಸದ್ಯ ಆಂಧ್ರದ ಡಿಸಿಎಂ ಆಗಿದ್ದಾರೆ.

ಟಿವಿಕೆಗೆ 80 ಸೀಟ್ ಕೊಡ್ತೀವಿ ಮೈತ್ರಿಕೂಟ ಗೆದ್ದರೆ, ಡಿಸಿಎಂ ಮಾಡ್ತಿವಿ ಅಂತ ಎನ್‌ಡಿಎ ಬಳಗ ವಿಜಯ್‌ಗೆ ಆಫರ್ ಕೊಟ್ಟಿದೆಯಂತೆ. ಸದ್ಯದ ಪರಿಸ್ಥಿತಿಯಲ್ಲಿ ಏಕಾಂಗಿಯಾಗಿ ಹೊರಾಡಿ ಸೋಲೋ ಬದಲು ಮೈತ್ರಿ ಕೂಟ ಸೇರಿ ಡಿಸಿಎಂ ಆಗೋದು ಒಳ್ಳೆ ಆಫರ್ ಅಂತ ವಿಜಯ್‌ಗೂ ಅನ್ನಿಸಿದೆಯಂತೆ.

ಈ ಮೈತ್ರಿ ಮಾತುಕತೆ ಬಹುತೇಕ ಫೈನಲ್ ಆಗಿದೆ ಅಂತ ಹೇಳಲಾಗ್ತಾ ಇದೆ. ಒಂದು ವೇಳೆ ವಿಜಯ್​ ಎನ್.ಡಿ.ಎ ಜೊತೆ ಕೈ ಜೋಡಿಸಿದ್ರೆ ಖಂಡಿತ ಡಿಎಂಕೆ ಪರಾಭವ ಆಗಲಿದೆ. ವಿಜಯ್ ಡಿಸಿಎಂ ಆಗೋದು ಕೂಡ ಖಚಿತ ಅಂತಿದ್ದಾರೆ ರಾಜಕೀಯ ಪಂಡಿತರು.

ಫಿಲ್ಮ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್.